ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ…
Team Udayavani, Mar 20, 2018, 5:37 PM IST
ಒಂದ್ ಕೆಲ್ಸ ಮಾಡೋಣ. ಜೊತೇಲಿ ಬೇಡ. ಪ್ರತ್ಯೇಕವಾಗಿಯೇ ದೇವಸ್ಥಾನಕ್ಕೆ ಹೋಗೋಣ. ದೂರದೂರ ನಿಂತೇ ಇಬ್ಬರ ಒಂದೇ ಪ್ರಾರ್ಥನೆಯನ್ನೂ ದೇವರಿಗೆ ಒಪ್ಪಿಸೋಣ.
ಇವಳೇ,
ಮತ್ತೂಂದು ಹೊಚ್ಚ ಹೊಸ ಮಾಡೆಲ್‌ನ ಕೂಲಿಂಗ್ ಗ್ಲಾಸ್ ಹಬ್ಬದ ನೆಪದಲ್ಲಿ ಮಾರುಕಟ್ಟೆಗೆ ಬಂದಿದೆ. ಅದನ್ನ ಖರೀದಿಸೋ ನೆಪದಲ್ಲಿ, ಮುಂದಿನ ಶನಿವಾರ ಅದೇ ಪಿಪಿ ಜನರಲ್ ಸ್ಟೋರ್ ಮುಂದೆ ನಿನಗಾಗಿಯೇ ಕಾಯ್ತಾ ಇರಿನಿ.
ಕಳೆದ ಎರಡು ವರ್ಷಕ್ಕಿಂತ ಈ ವರ್ಷ ಜಾಸ್ತಿ ಬದಲಾವಣೆ ಆಗಿದ್ದೀಯಾ. ಮೂಗಿನ ಮೇಲೊಂದು ಪುಟ್ಟ ಮೊಡವೆ ಬಂದಿದೆ! ಕಣ್ಣಲ್ಲಿ ತುಳುಕಿಸುವ ಎಷ್ಟೋ ಭಾವದಲ್ಲಿ ಮುಳುಗಿ ಹೋಗುವ ಭಯದಲ್ಲೇ ಥರಗುಡುತ್ತಾ ಈ ಪತ್ರ ಬರೆಯುತ್ತಿದ್ದೀನಿ.
ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಅನ್ನೋ ಕಾಲದಲ್ಲಿ ಪತ್ರ ಬರೆಯುವ ರೋಮಾಂಚನ ಎಂಥ ಚೆಂದ ಗೊತ್ತಾ? ಬಿಳಿ ಹಾಳೆಯ ಮೇಲಿನ ಅಕ್ಷರಗಳ ನೀಲಿ ಶಾಯಿ ಕೈ ಬೆವರ ಹನಿಗೆ ಅಲ್ಲಲ್ಲಿ ಹರಡಿಕೊಂಡಿರುತ್ತದೆ. ಸಂತೋಷಕ್ಕೋ ದುಃಖಕ್ಕೋ ಗೊತ್ತಿಲ್ಲದೆ ಬೀಳುವ ಕಣ್ಣ ಹನಿಯೂ ಕಾಗದದ ಜೊತೆಯಾಗುತ್ತದೆ. ಎಲ್ಲಕ್ಕೂ ಆದಷ್ಟು ಬೇಗ ನಿನ್ನನ್ನು ಸೇರುವ ತವಕ!
ಈ ಪತ್ರವನ್ನು ಪುಸ್ತಕದ ಮಧ್ಯೆ ಇಟ್ಟುಕೊಂಡು ಮನೆಗೆ ಹೋದ ಮೇಲೆ, ಮಹಡಿಯ ಮೇಲೆ ಹೋಗಿ ಒಬ್ಬಳೇ ಓದಲು ಕೂತ್ಕೊಳ್ತೀಯಲ್ಲ…ಆಗ ಅದೆಷ್ಟು ಸಲ ನನ್ನ ನೆನಪು ನಿನಗಾಗುತ್ತದೆ ಅಂತ ಕೇಳಿದ್ರೆ, ಇನ್ನೊಂದ್ಸಲ ಹೇಳ್ತೀನಿ ಅಂತ ಅವಸರದಲ್ಲಿ ಹೇಳಿ, ಫೋನ್‌ಗೂ ಸಿಗದೆ ತಪ್ಪಿಸಿಕೊಂಡು ಓಡಿ ಹೋಗ್ತಿàಯಲ್ಲಾ, ಇದು ಸರಿಯಾ?
ನಾನು ಫೈನಾನ್ಸ್ ಆಫೀಸಿಗೆ, ಬ್ಯಾಂಕ್‌ಗೆ ಹಣ ಕಟ್ಟಲು ಹೋಗುವಾಗ, ಯಾವುದೋ ಚೆಕ್ ಬರೆಯುವಾಗ ಅದೆಷ್ಟು ಸಲ ನಿನ್ನ ಹೆಸರೇ ಬರೆದಿದ್ದೀನಿ ಗೊತ್ತಾ? ಹೇಳು. ನಮ್ಮಿಬ್ಬರ ಹೆಸರನ್ನು ಪಕ್ಕಪಕ್ಕ ನೋಡುವುದು ಯಾವಾಗ? ದೇವಸ್ಥಾನಕ್ಕೆ ಹೋಗಿಬರೋಣ ಅಂದ್ರೆ, ಅಯ್ಯಯ್ಯೋ, ಬೇಡಪ್ಪಾ ಬೇಡ.
ಹಾಗೆಲ್ಲ ಹೋದ್ರೆ ಪರಿಚಯಸ್ಥರು ಯಾರಾದರೂ ನೋಡಿಬಿಡ್ತಾರೆ ಅಂತ ನೀ ಹೆದರುತ್ತೀಯಾ. ಒಂದ್ ಕೆಲ್ಸ ಮಾಡೋಣ. ಪ್ರತ್ಯೇಕವಾಗಿಯೇ ಗುಡಿಗೆ ಹೋಗೋಣ. ಕಡೇ ಪಕ್ಷ ದೂರ ದೂರ ನಿಂತಾದರೂ ನಮ್ಮಿಬ್ಬರ ಒಂದೇ ಪ್ರಾರ್ಥನೆಯನ್ನು ದೇವರ ಮುಂದೆ ಒಪ್ಪಿಸಿ ಬರೋಣ ಆಗಬಹುದಾ?
* ಪರಶುರಾಮ (ಗೌಡ್ರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.