ನಿನ್ನ ನೆನಪುಗಳೊಂದಿಗೇ ಬದುಕಿದ್ದೀನಿ, ನೀನು ಹೇಗಿದ್ದೀ?
Team Udayavani, Mar 6, 2018, 3:54 PM IST
ನನಗೆ ಚೆನ್ನಾಗಿ ಗೊತ್ತು. ಕೊನೆ ಉಸಿರು ಇರುವವರೆಗೂ ನೀನು ನನ್ನನ್ನು ಮರೆಯಲ್ಲ ಅಂತ. ಆವತ್ತು ನೀನು ಮುಂಗೋಪದಲ್ಲಿ ಮಾಡಿಕೊಂಡ ಎಡವಟ್ಟು, ಮೌನ, ಹಠ ನನ್ನನ್ನ ಕಳೆದುಕೊಳ್ಳುವ ಹಾಗೆ ಮಾಡಿತು.
ಧನು, ನನಗಿನ್ನೂ ನೆನಪಿದೆ. ಆವತ್ತು ನಿನ್ನ ತಂದೆಯ ಜೊತೆ ಹಾಸ್ಟೆಲ್‌ಗೆ ಬಂದಿದ್ದೆ. ಸೂಪರ್‌ವೈಸರ್ ಆಗಿದ್ದ ನನ್ನನ್ನು ನೋಡಿ ನಕ್ಕ ಆ ನಿನ್ನ ನಗು ಎಂದಿಗೂ ಮರೆಯಾಗದು. ಮೊದಲ ಕ್ಷಣವೇ ನಿನ್ನನ್ನು ಪ್ರೀತಿಸಬೇಕು ಅನಿಸಿದ್ದು ಸುಳ್ಳಲ್ಲ. ಆದರೆ ಅದನ್ನ ಹೇಗೆ ಹೇಳ್ಳೋದು?
ಆಗ ತಾನೇ ಡಿಗ್ರಿ ಮುಗಿಸಿ ಸಣ್ಣ ಕೆಲಸದ ಜೊತೆಯಲ್ಲೇ ಓದುವಾಸೆಯಿಂದ ನಾನು ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಹಾಸ್ಟೆಲ್‌ನಲ್ಲಿ ಸೂಪರ್ ವೈಸರ್ ಆಗಿದ್ದೆ. ನೀನು ಅಲ್ಲಿಗೆ ಸ್ಟೂಡೆಂಟ್ ಆಗಿ ಬಂದವಳು, ನನ್ನ ಹೃದಯ ಸೇರಿದೆ. ಕೆಲಸದ ಜೊತೆಗೆ ಬಾಯ್ಸ ಹಾಸ್ಟೆಲ್‌ನಲ್ಲೇ ವಾಸ್ತವ್ಯ ಹೂಡಿದ್ದ ನಾನು, ಇನ್ಸ್‌ಪೆಕ್ಷನ್ ನೆಪದಲ್ಲಿ ಎರಡು ದಿನಗಳಿಗೊಮ್ಮೆ ಅಲ್ಲಿಗೆ ಬರಿದ್ದೆ. ನಿನ್ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ.
ಅದು ಹೇಗೆ ಸರಳಾಗೆ ಸಂದೇಹ ಬಂತೋ ಗೊತ್ತಿಲ್ಲ; ಆಕೆ ನೇರವಾಗಿ ನನಗೆ ಕೇಳೇ ಬಿಟು, “ಅಣ್ಣಾ , ನೀನು ಧನುಗೆ ಲೈನ್ ಹೊಡೀತಿದೀಯಾ ತಾನೇ?’ ಅಂತ. ಮೊದಲು ನಿರಾಕರಿಸಿದ ನಾನು ಆಮೇಲೆ ಆಕೆಯಿಂದ ಸಹಾಯ ಆಗಬಹುದೇನೋ ಅಂದುಕೊಂಡು ಆಕೆ ಹತ್ತಿರ ಸತ್ಯ ಹೇಳಿಬಿಟ್ಟೆ.
ಅವಳು ನಿನಗೆ ಹೇಳಿದಾಳ್ಳೋ ಇಲ್ಲವೋ ಗೊತ್ತಿಲ್ಲ. ಕೊನೆಗೊಂದು ದಿನ ನಾನೇ ನಿನಗೆ ಕ್ಲಾಸ್ ಹತ್ತಿರ ಇರೋ ಬಸ್ ಸ್ಟಾಪ್‌ನಲ್ಲಿ ಪ್ರಪೋಸ್ ಮಾಡೆª. ಆಗ ನಿನ್ನ ನಿರುತ್ತರದ ಪ್ರತಿಕ್ರಿಯೆ ಕಂಡು ಗಾಬರಿಯಾಗಿತ್ತು. ನಿರಾಸೆಯಿಂದ ಗೂಡು ಸೇರಿದೆ. ವಾರವಾದರೂ ಲೇಡೀಸ್ ಹಾಸ್ಟೆಲ್ ಕಡೆ ತಲೆ ಹಾಕ್ಲಿಲ್ಲ.
ಯಾಕೆಂದರೆ ಚಳಿಜ್ವರದಿಂದ ಮಲಗಿಬಿಟ್ಟಿದ್ದೆ. ಆನಂತರ ನೀನೇ ಹಾಸ್ಟೆಲ್ ಹತ್ತಿರ ಬಂದು “ಬಸು ಇದಾರಾ?’ ಅಂದೆಯಲ್ಲ? ನಿನ್ನ ಧ್ವನಿ ಕೇಳಿದಾಕ್ಷಣ ಎಚ್ಚರವಾಯ್ತು. ನನ್ನನ್ನು ಕಂಡವಳೇ- “ಇವತ್ತು ಭಾನುವಾರ. ಕ್ಲಾಸ್‌ಗೆ ರಜೆ. ಫ್ರೆಂಡ್ಸ್ ಜೊತೆ ಸಿನಿಮಾಗೆ ಹೊರಟಿದೀವಿ.
ಫ್ರೀ ಇದ್ರೆ ಬನ್ನಿ’ ಅಂತ ನೀನು ಕೊಟ್ಟ ಆಹ್ವಾನ ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಅಂದುಕೊಂಡು ಸಿನಿಮಾಗೆ ಬಂದೆ. ನನ್ನ ಪಕ್ಕದಲ್ಲೇ ಕುತ್ಕೊಂಡು, ನನ್ನ ತೋಳನ್ನು ಆಸರೆಯಾಗಿ ಮಾಡಿಕೊಂಡು “ಐ ಟೂ ಲವ್ ಯು’ ಎಂದು ಪಿಸುಗುಟ್ಟಿದ ಕ್ಷಣವನ್ನ ನಾನು ಮರೆಯಲು ಸಾಧ್ಯವೇ?
ಲೆಕ್ಚರರ್ ನಿನ್ನ ಮೇಲೆ ಕಣ್ಣು ಹಾಕಿದ್ದನ್ನ ನನಗೆ ಹೇಳಿದಾಗ ನಾನವನಿಗೆ ಆವಾಜ್ ಹಾಕಿದ್ದು, ಸವದತ್ತಿ ಗುಡ್ಡದ ಮೇಲೆ ನಮ್ಮಿಬ್ಬರ ಮದುವೆಗಾಗಿ ಹರಕೆ ಕಟ್ಟಿದ್ದು, ಎಂಥ ಜಗಳ ಬಂದರೂ ನಾನು ಸಾಯುವಾಗ ನಿನ್ನ ತೊಡೆ ಮೇಲೇ ಕಣ್ಣು ಮುಚ್ಚಬೇಕು ಎಂದಾಗ ನಿನ್ನ ಕೆನ್ನೆಗಳು ಕಣ್ಣೀರ ಜಲಪಾತವಾಗಿದ್ದು,
ನಮ್ಮಿಬ್ಬರ ಪ್ರೀತಿಯ ವಿಷಯ ಸಂಸ್ಥೆಯ ಮಾಲೀಕರಿಗೆ ಗೊತ್ತಾಗಿ ಇಬ್ಬರನ್ನೂ ಹೊರಗೆ ಹಾಕಿದಾಗ ಪತ್ರಿಕೆಯೊಂದರ ಪ್ರಮೋಟರ್ ಆಗಿ ನಸುಕಿನ ಜಾವ 4 ರಿಂದ 9ರವರೆಗೆ ಕೆಲಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಂಡದ್ದು ಎಲ್ಲವೂ ಹಚ್ಚಹಸಿರು.
ಸಾಕಷ್ಟು ಪರೀಕ್ಷೆ ಬರೆದರೂ ಒಂದರಲ್ಲೂ ಪಾಸಾಗದೇ ಓದಿಗೆ ಗುಡ್ ಬೈ ಹೇಳಿ, ನಿನ್ನ ಓದಿಗೆ ತೊಂದರೆಯಾಗದಿರಲಿ ಎಂದಷ್ಟೇ ಅಂತರ ಕಾಪಾಡಿಕೊಂಡೆ. ಆದರೆ ನನ್ನ ಪ್ರೀತಿಗೆ ಯಾವತ್ತೂ ಅಂತರವಿರಲಿಲ್ಲ. ಅದೊಂದು ದಿನ ನಮ್ಮ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದಾರೆ ಎಂದು ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ನೀನು ನನ್ನೊಂದಿಗೆ ಮಾತೂ ಆಡದೇ, ಕೈಗೂ ಸಿಗದೇ ಮಾಯವಾದೆ.
ನಿಜ ಹೇಳಬೇಕೆಂದರೆ ಮದುವೆಗೆ ನಾನು ಒಪ್ಪಿರಲೇ ಇಲ್ಲ. ನಿಮ್ಮ ಮನೆ ಬಳಿ ಬಂದು ವಿಚಾರಿಸಿದರೂ ನಿನ್ನ ಸುಳಿವು ಸಿಗಲೇ ಇಲ್ಲ. ಇವತ್ತಿಗೂ ನಿನ್ನೊಂದಿಗೆ ಹಂಚಿಕೊಂಡ ಪ್ರೀತಿಯನ್ನು ಮರೆಯಲು ಅಸಾಧ್ಯ. ಯಾಕೆಂದರೆ ಅದು ನಿಜವಾದ ಪ್ರೀತಿ. ನನಗೆ ಚೆನ್ನಾಗಿ ಗೊತ್ತು.
ಕೊನೆ ಉಸಿರು ಇರುವವರೆಗೂ ನೀನು ನನ್ನನ್ನು ಮರೆಯಲ್ಲ ಅಂತ. ಆವತ್ತು ನೀನು ಮುಂಗೋಪದಲ್ಲಿ ಮಾಡಿಕೊಂಡ ಎಡವಟ್ಟು, ಮೌನ, ಹಠ ನನ್ನನ್ನ ಕಳೆದುಕೊಳ್ಳುವ ಹಾಗೆ ಮಾಡಿತು. ಇರಲಿ. ನಿನ್ನ ನೆನಪುಗಳೊಂದಿಗೇ ನಾನು ಉಸಿರಾಡ್ತಾ ಇದ್ದೀನಿ. ನೀನು ಹೇಗಿದ್ದೀ? ಕುಶಲವಷ್ಟೇ?
* ಬಸವರಾಜ ಕರುಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.