ಬೆಳಗೆದ್ದು ಅವನ ಮುಖವ ನಾನು ನೋಡಿದೆ… 


Team Udayavani, Oct 24, 2017, 10:41 AM IST

24-31.jpg

ನಾನಾಗ ಫ‌ಸ್ಟ್‌ ಪಿಯುಸಿಗೆ ಕಾಲಿಟ್ಟಿದ್ದೆ. ಅವು, ಕಾಲೇಜು ಜೀವನದ ಆರಂಭದ ದಿನಗಳು. ಜಿಟಿಜಿಟಿ ಮಳೆಯಲ್ಲೂ ಪುಟ್ಟದೊಂದು ಬ್ಯಾಗ್‌ ನೇತಾಡಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಎಂಟ್ರೆನ್ಸ್‌ ತಲುಪುತ್ತಿದ್ದ ಹಾಗೆ ಕೊಡೆ ಮಡಚಿ ಕ್ಲಾಸ್‌ ಹುಡುಕುವಲ್ಲಿ ಕೊನೆಗೂ ಸಫ‌ಲಳಾಗಿದ್ದೆ. ಕಾಲೇಜ್‌ ಯಾಕೋ ಬೋರು ಎಂಬ ಭಾವ ಜೊತೆಯಾಗುತ್ತಿದ್ದ ಸಂದರ್ಭದಲ್ಲೇ, ವಾರದ ಬಳಿಕ ಕಾಣಿಸಿ ಬಿಟ್ಟಿದ್ದ ಆ ಕ್ಯೂಟ್‌ ಹುಡುಗ! ಅವನ ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದರೂ ಅವನು ತುಂಬಾ ಇಷ್ಟ ಆಗಿಬಿಟ್ಟ. ದಿನವೂ ಅವನನ್ನ ನೋಡೋಕೆ ಚಾತಕ ಪಕ್ಷಿಯಂತೆ ಕಾಯ್ತಿದ್ದೆ. 

ಅಂತೂ ಇಂತೂ ತುಂಬಾ ಸಂಶೋಧನೆ ಮಾಡಿ ಅವನ ಹೆಸರು, ಕ್ಲಾಸ್‌ ತಿಳಿದುಕೊಂಡೆ. ಸೀನಿಯರ್‌ ಬೇರೆ! ಹೋಗಿ ಮಾತಾಡೊಕಂತೂ ಧಂ ಇರ್ಲಿಲ್ಲ. ತಾನಾಯ್ತು ,ತನ್ನ ಗ್ರೂಪ್‌ ಆಯ್ತು ಅಂತಿದ್ದ “ಅವನ’ನ್ನ ಗೊತ್ತಿಲೆªàನೆ ಪ್ರೀತಿಸೋಕೆ ಶುರು ಮಾಡಿದೆ. “ಅವನು’ ಕೂತ ಜಾಗಗಳಿಗೆ ಹೋಗಿ ಕುಳಿತುಕೊಳ್ಳೋದು , ಯಾದ್ದೇ ಕಪಲ್ಸ್‌, ಮೂವೀಸ್‌ ನೋಡಿದ್ರೂ “ಅವನ’ ನೆನಪುಗಳಿಗೆ ಜೀವ ತುಂಬೋದು ಇಷ್ಟದ ಹವ್ಯಾಸವಾಯ್ತು. ಒಂದು ವರ್ಷ ಹೇಗೆ ಕಳೀತೋ ಗೊತ್ತಿಲ್ಲ. ಕೊನೆಗೂ “ಅವನು’ ಕಾಲೇಜಿಗೆ ವಿದಾಯ ಹೇಳ್ಳೋ ದಿನ ಬಂದು ಬಿಡು¤. “ಅವನು’ ಇಲ್ಲದ ಕಾಲೇಜ್‌ ಬೋರ್‌ ಅನ್ನಿಸೋದಿಕ್ಕೆ ಸ್ಟಾರ್ಟ್‌ ಆಯ್ತು. ಛೇ! ಅವನಿಗೆ ಮೊದ್ಲೆ ಮಾತಾಡಿಸಿ ಅಟ್ಲೀಸ್ಟ್‌ ಮೊಬೈಲ್‌ ನಂಬರ್‌ ಆದ್ರೂ ತಗೋಬೇಕಿತ್ತು ಅನ್ನೋ ಸ್ಯಾಡ್‌ ಫೀಲಿಂಗ್‌ ಬೇರೆ… 

 ಇವೆಲ್ಲದರ ಮಧ್ಯೆ ನೆನಪಾಗಿದ್ದು ಫೇಸ್‌ಬುಕ್‌! ತಡ ಮಾಡದೆ “ಅವನ’ ಹೆಸರಿನ ಎಲ್ಲ ಅಕೌಂಟ್‌ಗಳಿಗೂ ರಿಕ್ವೆಸ್ಟ್‌ ಕಳಿÕದ್ದಾಯ್ತು. ಕೆಲವು ರಿಕ್ವೆಸ್ಟ್‌ ಅಕ್ಸೆಪ್ಟ್ ಕೂಡ ಆದವು. ಆದರೂ ಅವನನ್ನು ಹೇಗಪ್ಪಾ ಕಂಡುಹಿಡಿಯೋದು ಈ ಅನ್ನೋನ್‌ ಪ್ರೊಫೈಲ್‌ಗ‌ಳಲ್ಲಿ ಅನ್ನೋ ತಲೆಬಿಸಿ. ಪುಣ್ಯಾತ್ಮ ಡಿ.ಪಿ.ನೂ ಹಾಕಿರ್ಲಿಲ್ಲ. ಹೇಗೋ “ಅವನ’ ಫ್ರೆಂಡ್‌ಗಳ ಹೆಸರು ತಿಳ್ಕೊಂಡು, ಅವರ ಪ್ರೊಫೈಲ್‌ಗ‌ಳಲ್ಲಿ ಇವನ ರಿಸರ್ಚ್‌ ಸ್ಟಾರ್ಟ್‌ ಮಾಡಿದೆ. ಫ‚ೈನಲಿ ಪ್ರಯತ್ನಕ್ಕೆ ಸಿಕ್ಕ ಫ‌ಲ ಅನ್ನೋ ಹಾಗೆ ಅವನ ಪ್ರೊಫೈಲ್‌ಗೆ ರಿಕ್ವೆಸ್ಟ್‌ ಕಳಿಸಿದೆ. ಎರಡು ದಿನ ಆದ್ರೂ ರಿಕ್ವೆಸ್ಟ್‌ ಅಕ್ಸೆಪ್ಟ್ ಆಗಿಲ್ವಲ್ಲ ಅನ್ನೋ ಯೋಚನೆಯಲ್ಲಿ ಕಾಫಿ ಮಗ್‌ ಹಿಡಿದು ಕುಳಿತಿದ್ದೆ. ಆಗ್ಲೆà ಬಂತು ಫೇಸ್‌ಬುಕ್‌ ನೋಟಿಫಿಕೇಶನ್‌, ರಿಕ್ವೆಸ್ಟ್‌ ಅಕ್ಸೆಪ್ಟ್ ಆಗಿದೆ ಅಂತ! 

ಅಲ್ಲಿಂದ ಆರಂಭವಾಯ್ತು ಅವನೊಂದಿಗಿನ ಚಾಟ್‌, ನಗು, ಹರಟೆ. ದಿನ ಕಳೆದಂತೆ ಫೋನ್‌ ನಂಬರ್‌ ಕೂಡ ಶೇರ್‌ ಆಯ್ತು. ಹಾಗೇ ನಮ್ಮ ಫ್ರೆಂಡ್‌ಶಿಪ್‌ ಸ್ಟ್ರಾಂಗ್‌ ಆಗ್ತಾ ಇತ್ತು ಕಾಲದೊಂದಿಗೆ. “ಅವನು’ ಎಲ್ಲರಂಥಲ್ಲ. ಎಂದಿಗೂ ಎಲ್ಲೆ ಮೀರಿ ವರ್ತಿಸಲಿಲ್ಲ. ನಮ್ಮ ಸ್ನೇಹ, ಪುಟ್ಟ ಕಂದಮ್ಮಗಳ ಮನಸ್ಸಿನಂತೆ ಸ್ವತ್ಛವಾಗಿ ನಿರ್ಮಲ ಪ್ರೀತಿಯಿಂದ ಬೆಳೆಯೋದಿಕ್ಕೆ ಭದ್ರ ಬುನಾದಿಯನ್ನು ನಮ್ಮಿಬ್ಬರ ಮನಸ್ಸು ನಿರ್ಮಿಸಿತ್ತು. ಐದು ವರ್ಷಗಳು ಹೇಗೆ ಕಳೆದವೋ ಗೊತ್ತಿಲ್ಲ. ಒನ್‌ ಫ‚ೈನ್‌ ಡೇ “ಅವನ’ ಮೇಲಿದ್ದ ಭಾವನೆಗಳನ್ನೆಲ್ಲ ಹೇಳಿ ಪ್ರಪೋಸ್‌ ಕೂಡ ಮಾಡಿºಟ್ಟೆ. ಮುದ್ದು ಅವ, ಏನನ್ನಿಸಿತೋ ಏನೋ ಮರುಮಾತಿಲ್ಲದೆ ಅಕ್ಸೆಪ್ಟ್ ಮಾಡಿºಟ್ಟ. 

“ಅವನ’ ಡೇಟಿಂಗ್‌ ನಿಯಮಗಳಿಗೆ ಬದ್ಧಳಾಗಿ ಹೊಸ ಜೀವನಕ್ಕೆ ಕಾಲಿಟ್ಟ ನನಗೆ ಸಿಕ್ಕಿದ್ದು ಅವನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳೋ ಅವಕಾಶ! ಕಾಲ ಬದಲಾದಂತೆ ಇಬ್ಬರಿಗೂ ಅರಿವಾಗತೊಡಗಿತು ವಿ ಆರ್‌ ಮೇಡ್‌ ಫಾರ್‌ ಈಚ್‌ ಅದರ್‌ ಅಂತ. ಅವನ ನಗುವಲ್ಲಿ ನನ್ನ ಖುಷಿ ಕಾಣೋದು, ಅವನೊಂದಿಗೆ ಕನಸುಗಳನ್ನು ಹೆಣೆಯೋದು, ಅವನ ವಾಯ್ಸ ಕೇಳ್ಳೋದು ದಿನಚರಿಯ ಪ್ರಮುಖ ಭಾಗಗಳಾದವು. 

ಅಪಕ್ವ ಮನದ ಪ್ರೀತಿ ಈಗ ಪಕ್ವವಾಗಿದೆ. ಮೊದಲ ಕ್ರಶ್‌ ಈಗ ಬಾಳ ಗೆಳೆಯ. ಅವನೊಂದಿಗೆ ಇರುವಾಗ ಉಸಿರಾಡೋದಕ್ಕಿಂತಲೂ ಜಾಸ್ತಿ ನಗೋ ನಾನು ನಿಜಕ್ಕೂ ಲಕ್ಕಿ. ಅವ ಮುಗ್ಧ ಮನಸ್ಸಿನ ಕಂದಮ್ಮ. ಏಳುಬೀಳುಗಳಲ್ಲಿ ಕೈ ಹಿಡಿದು ನಿಲ್ಲೋ ಮೆಚೂರ್ಡ್‌ ಹುಡುಗ, ಕೇರ್‌ ಮಾಡೋದ್ರಲ್ಲಿ ಅಮ್ಮನಿಗೆ ಕಾಂಪಿಟೇಟರ್‌, ಬೆನ್ನ ಹಿಂದೆ ನಿಂತು ಸಪೋರ್ಟ್‌ ಮಾಡೋದ್ರಲ್ಲಿ ಅಪ್ಪನ ಜೊತೆಗಾರ, ಪ್ರೀತಿಗೆ ಈ ಮನದೊಡೆಯ… ಈ ಜೀವಕ್ಕೆ ಇಷ್ಟು ಸಾಕು! ಅಂದ ಹಾಗೆ ಇವತ್ತು “ಅವನ’ ಹುಟ್ಟುಹಬ್ಬ. ನೀವೂ ಹರಸಿ, ಹಾರೈಸಿ. 

ಪ್ರೀತಿಯಿಂದ, 
“ಅವನ’ ಸಾನ್ವಿ 

ಟಾಪ್ ನ್ಯೂಸ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

6-sirsi

Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ

15

Parvathy Movie: ಪಾರು ಪಾರ್ವತಿಯ ಕಾರ್‌ಬಾರು 

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.