ಕಾದಿರುವೆ ನಾ ನಿನಗಾಗಿ…
Team Udayavani, Apr 4, 2017, 5:21 PM IST
ಓ… ನನ್ನ ಪ್ರೀತಿಯೇ, ನಿನ್ನ ಜೊತೆ ಮಾತನಾಡಬೇಕು ಎನಿಸಿದಾಗೊಮ್ಮೆ ನನ್ನ ಕೈಯಲ್ಲಿ ಇಂಗ್ಲಿಷ್ ಪುಸ್ತಕವಿರಬೇಕು,
ಏಕೆಂದರೆ ಆಗ ಮಾತ್ರ ನೀನು ನನ್ನನ್ನು ಅತಿಕ್ರಮಿಸುವೆ. ನನಗೆ ನೀನು ಅಂದ್ರೆ ತುಂಬಾ ಇಷ್ಟ, ಆದರೆ ಏನು ಮಾಡೋದು? ಮನದಾಳದ ಮಾತುಗಳನ್ನು ಹೇಳಲು ನನಗೆ ತುಂಬಾ ಕಷ್ಟ. ಯಾಕೆ ಅಂತೀಯಾ? ಈ ಮಾತನ್ನು ಬೇರೆಯವರಿಗೆ ಹೇಳಿದರೆ ಸಾಕು. ನನ್ನನ್ನು ಕುಂಬಕರ್ಣೆ ಎನ್ನುವರು. ಅದಕ್ಕೆ ನಾನು ನಿನ್ನನ್ನು ಪ್ರೀತಿಸಲು ಸಾಧ್ಯವಾಗುತ್ತಿಲ್ಲ.
ಆದರೆ ನಾನು ಪ್ರೀತಿಸುವೆ. ಕೆಲವೊಂದು ಸಲ ಅನಿಸುತ್ತೆ. ನೀನು ಈ ಲೋಕದಲ್ಲೇ ಇರಲಿಲ್ಲ ಅಂದರೆ, ಈ ಜಗತ್ತು ಇಷ್ಟವಾಗುತ್ತಿರಲಿಲ್ಲ ಅಂತ. ಆದರೆ ಕೆಲವರಿಗೆ ನಿನ್ನ ನೋಡಿದರೆ ದ್ವೇಷ. ಹಾಗೆ ದ್ವೇಷ ಮಾಡುವವರಿಗೆ ಬುದ್ಧಿ ಇಲ್ಲ ಅಷ್ಟೆ. ಆದರೆ ನಾನು ಮಾತ್ರ ನಿನ್ನನ್ನು ಎಂದೂ ಬಿಟ್ಟಿರುವುದಿಲ್ಲ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ? ಗೊತ್ತಿಲ್ಲ ತಾನೇ? ಹೇಳುತ್ತೇನೆ ಕೇಳು. ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯೋ, ಅದರ ಎರಡರಷ್ಟು. ನನ್ನ ಪ್ರೀತಿ ಸೂರ್ಯನಷ್ಟು ಪ್ರಕಾಶಮಾನವಾದದ್ದು. ಚಂದ್ರನಂತೆ ತಂಪು ಬೀರುವಂಥದ್ದು. ಈಗ ಅರ್ಥವಾಯಿತಾ? ನಾನು ಜೀವನದಲ್ಲಿ ಹತಾಶಳಾಗಿದ್ದಾಗ ನನಗೆ ಸ್ಫೂರ್ತಿಯನ್ನು ನೀಡಿದ್ದೀಯ. ಗುರಿ ಎಂಬ ಸಸ್ಯಕ್ಕೆ ನೀರು ಹಾಕಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿದ್ದೀಯ. ಇಂದು ಆ ಮರ ಹಸಿರಾಗಿ ಬೇರೆ ಸಸ್ಯಗಳಿಗೆ ಬೆಳೆಯಲು ನೆರಳನ್ನು ನೀಡುತ್ತಿದೆ. ಇಷ್ಟೆಲ್ಲ ಆಗಿದ್ದು ನಿನ್ನಿಂದ. ನೀನು ಇರದೆ ಹೋಗಿದ್ದರೆ ನಾನು ಇವತ್ತಿನ ಸ್ಥಿತಿಯನ್ನು ಮುಟ್ಟಲು ಆಗುತ್ತಿರಲಿಲ್ಲ. ನೀನು ಯಾವಾಗಲೂ ನನ್ನ ಜೊತೆ ಇರಬೇಕು.
ನೀನು ನನ್ನಲ್ಲಿ ಹೊಸ ಹೊಸ ಕನಸುಗಳನ್ನು ಹುಟ್ಟಿಸುತ್ತಿರಬೇಕು. ನನ್ನ ದಿನ ಪ್ರಾರಂಭವಾಗುವುದು ನಿನ್ನನ್ನು ನೆನೆಯುತ್ತ,
ಕೊನೆಯಾಗುವುದೂ ನಿನ್ನಿಂದಲೇ. ದಿನಾ ರಾತ್ರಿಯಾದರೆ ಸಾಕು ನೀನು ಬಂದೇ ಬರುತ್ತೀಯಾ. ನೀ ಬರುವ ಆ ಗಳಿಗೆ ಮೈಯೆಲ್ಲ
ರೋಮಾಂಚನ. ನೀ ಬಂದ ಮೇಲೆ ನಾ ಈ ಜಗವನ್ನೇ ಮರೆಯುವೆ. ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ ನಾ ಮಲಗುವೆ. ಮತ್ತೆ ಬಾ ನೀನು
ಕನಸೆಂಬ ಪಲ್ಲಕ್ಕಿಯೆನ್ನೇರಿ. ಓ.. ನನ್ನ ಒಲವಿನ ನಿದ್ರಾ ದೇವತೆಯೇ… ನೀನು ಮತ್ತೆ ಬರುವೆ ಎಂಬ ನಂಬಿಕೆಯಿಂದ ಕಾದಿರುವೆ. ಹೋಗಿ ಬಾ ಎನ್ನ ಕನಸಿನ ದೇವತೆ… ನಿನಗಾಗಿ ಕಾದಿರುವೆ… ನಾ ಕಾದಿರುವೆ… ಇಂತಿ ನಿನ್ನ ಗೆಳತಿ ಸುಜ್ಞಾನಿ
ಸುನಂದಾ ಎಂ. ಬಡಿಗೇರ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.