ಇನ್ನೆಷ್ಟ್ ದಿನ ಕಾಯಬೇಕು ನಾನು?


Team Udayavani, Dec 25, 2018, 6:15 AM IST

josh-page-2.jpg

ಅದ್ಯಾವಾಗ ಈ ಮನಸ್ಸು ನಿನಗೆ ಶರಣಾಯಿತೋ ತಿಳಿಯದು. ನಿನ್ನ ಕೇರಿಂಗ್‌ ನೇಚರ್‌, ಮಾತು, ನಡವಳಿಕೆ ನೋಡಿ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೇನು ಮಾಡಲಿ, ಹೇಳಿಕೊಳ್ಳಲು ಅಂಜಿಕೆ.

ಹೇ ಹುಡುಗ
ಕಾದೂ ಕಾದೂ ಸಾಕಾಗಿದೆ. ಪ್ಲೀಸ್‌ ಹೇಳಿಬಿಡು, ನೀನು ನನ್ನನ್ನು ಪ್ರೀತಿಸ್ತಿದೀಯ ತಾನೆ? ನಿನ್ನ ಮನದೊಳಗೆ ನನ್ನ ಚಿತ್ರವಿದೆ ತಾನೆ? ಅದನ್ನೇ ನನ್ನ ಮುಂದೆ ಹೇಳಿ ಬಿಡು. ಅವಳನ್ನು ಪ್ರೀತಿಸುತ್ತಿದ್ದೇನೆ ಅಂತ ಊರಿಗೆಲ್ಲಾ ಹೇಳಿದ್ದೀಯಾ, ನನ್ನೊಬ್ಬಳನ್ನು ಬಿಟ್ಟು! ಹಾಗೆ ಹೇಳಿ ಏನು ಪ್ರಯೋಜನ? ನಿನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕಾದವಳು ನಾನೇ ಹೊರತು ಬೇರೆಯವರಲ್ಲ.

ನಿಂಗೊಂದು ವಿಷಯ ಗೊತ್ತಾ? ನೀನು ನನ್ನ ಹಿಂದೆ ಬಿದ್ದಿದೀಯ. ಒಳಗೊಳಗೇ ನನ್ನ ಪ್ರೀತಿಸ್ತಿದೀಯ ಎಂಬ ವಿಷಯ ಪದವಿಯ ಮೊದಲ ವರ್ಷದಲ್ಲೇ ನಂಗೆ ಗೊತ್ತಿತ್ತು. ಆದರೂ ಏನೂ ತಿಳಿದೇ ಇಲ್ಲ ಅನ್ನುವಂತೆ ಸುಮ್ಮನಿದ್ದೆ. ಅಲ್ಲಾ, ಆಗ ನಮ್ಮಿಬ್ಬರ ನಡುವೆ ಮಾತುಕತೆಯೇ ಶುರುವಾಗಿರಲಿಲ್ಲ .ಅದು ಹೇಗೆ ಮತ್ತು ಯಾಕೆ ನನ್ನನ್ನು ಇಷ್ಟಪಟ್ಟೆಯೋ ನಾಕಾಣೆ! 

ನಮ್ಮ ನಡುವೆ  ಮಾತು ಅಂತ ಶುರುವಾಗಿದ್ದೇ ಜಗಳದಿಂದ. ಕಾಲೇಜಿನ ವಾಟ್ಸಾéಪ್‌ ಗ್ರೂಪ್‌ನಲ್ಲಿ ಜಗಳ ನಡೆದಾಗ, ನೀನು ನನಗೆ ಸಮಾಧಾನ ಮಾಡಲು ಪರ್ಸನಲ್‌ ಮೆಸೇಜ್‌ ಮಾಡಿದ್ದೆ. ಅದು ನಡೆದು ಎರಡು ವರ್ಷಗಳಾಯ್ತು. ಈಗೀಗ ನಿನ್ನನ್ನು ಎಷ್ಟು ಹಚ್ಚಿಕೊಂಡು ಬಿಟ್ಟಿದ್ದೇನೆಂದರೆ, ನಿನ್ನಿಂದ ಒಂದು ದಿನ ಮೆಸೇಜ್‌ ಬರದಿದ್ದರೆ ಏನೋ ಕಳವಳ, ಕಸಿವಿಸಿ. 

ಅದ್ಯಾವಾಗ ಈ ಮನಸ್ಸು  ನಿನಗೆ ಶರಣಾಯಿತೋ ತಿಳಿಯದು. ನಿನ್ನ ಕೇರಿಂಗ್‌ ನೇಚರ್‌, ಮಾತು, ನಡವಳಿಕೆ ನೋಡಿ ನಿನ್ನ ಮೇಲೆ ಪ್ರೀತಿಯಾಗಿದೆ. ಆದರೇನು ಮಾಡಲಿ, ಹೇಳಿಕೊಳ್ಳಲು ಅಂಜಿಕೆ. ಇವತ್ತಲ್ಲ ನಾಳೆ, ನೀನು ಬಾಯ್ಬಿಟ್ಟು ಹೇಳುತ್ತೀಯಾ, ನಾನದನ್ನು ಒಪ್ಪಿಕೊಳ್ಳುತ್ತೇನೆ ಅಂತ ಕಾಯುವುದೇ ಆಗಿದೆ… 

ಪ್ಲೀಸ್‌, ಬೇಗ ಹೇಳಿಬಿಡು, ಜಾಸ್ತಿ ಕಾಯಿಸಬೇಡ

– ಅಭಿಸಾರಿಕೆ 

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.