ನಾನು ಗೆದ್ದೇ ಗೆಲ್ತೀನಿ, ನೀನು ಜೊತೆಗಿದ್ರೆ ಮಾತ್ರ!
Team Udayavani, Nov 6, 2018, 4:00 AM IST
“ಪ್ರೀತಿ’ ಎಂಬ ಭಾವವೇ ಹಾಗೆ, ಎಲ್ಲವನ್ನೂ, ಎಲ್ಲರನ್ನೂ ಮರೆಸಿ ಹೊಸದೊಂದು ಬಾಂಧವ್ಯವನ್ನು ಬೆಸೆದು, ಬದುಕು ಬದಲಿಸುತ್ತದೆ. ನೀನು ಸಿಕ್ಕ ಮೇಲೆ ಜೀವನ ಬದಲಾಗಿದೆ. ನಾನು ಬದುಕುವ ಶೈಲಿ ಬದಲಾಗಿದೆ. ಭವಿಷ್ಯದ ಬಗ್ಗೆ ಕಂಡ ಕನಸುಗಳ ಬೆನ್ನೇರಿ ಬದುಕು ನಡೆಸುವ ಕಾಲ ಬಂದಾಗಿದೆ. ತಿಳಿ ಹೇಳುವ ಜೀವವೊಂದು ಜೊತೆಯಾಗಿದೆ.
ನನ್ನ ನಿನ್ನ ಪರಿಚಯ ಹೇಗಾಯ್ತು, ಯಾವಾಗಾಯ್ತು, ಅವೆಲ್ಲವೂ ಈಗ ಬೇಡವಾದ ಪ್ರಶ್ನೆಗಳು. ನನ್ನ ಬಾಳ ಪಯಣ ನಿಜವಾಗಿ ಶುರುವಾಗಿದ್ದೇ ನೀನು ಬದುಕಿಗೆ ಬಂದಾಗಿನಿಂದ. ಯಾವ ಆಸೆ, ಆಕಾಂಕ್ಷೆಗಳಿಲ್ಲದೆ ಬದುಕುತ್ತಿದ್ದ ನನಗೆ, ನೀನು ಭಾವನೆಗಳ ಲೋಕವನ್ನು ಪರಿಚಯಿಸಿದೆ, ಜೀವನದ ಸತ್ವ ಏನೆಂದು ತಿಳಿ ಹೇಳಿದೆ. ಸಮಯ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುತ್ತದೆ ಅಂತಾರೆ.
ಆದರೆ, ನನ್ನ-ನಿನ್ನ ಪ್ರೀತಿ ಮಾತ್ರ ಎಂದೆಂದಿಗೂ ಬದಲಾಗಬಾರದು, ಬದಲಾಗುವ ಅನಿವಾರ್ಯ ಕೂಡ ಬರಬಾರದು. ಕಣ್ಣಿಗೆ ಕಾವಲಿರುವ ರೆಪ್ಪೆಯಂತೆ, ಹೃದಯದ ಬಡಿತಕ್ಕೆ ನೀ ಕಾರಣ. ಮನ ಕುಣಿಯಲು, ನೆನಪುಗಳು ತಣಿಯಲು ನಿನ್ನ ಪ್ರೀತಿಯೇ ಸಾಕ್ಷಿ. ದೇವರ ವರವೋ, ಪುಣ್ಯದ ಫಲವೋ ನಾ ಕಾಣೆ, ನಿನ್ನ ಪಡೆದಾಯ್ತು.
ನಡು ನೀರಲ್ಲಿ ಕೈ ಕೋಟ್ಟು ಬಿಟ್ಟು ಹೋಗೊ ಕೆಟಗರಿ ಹುಡುಗ ನಾನಲ್ಲ. ಕೊನೆವರೆಗೂ ಜೊತೆಯಾಗ್ತಿàನಿ, ಏಳು ಬೀಳುಗಳ ಮಧ್ಯೆ ಸಿಹಿಕಹಿ ಘಟನೆಗಳನ್ನು ಎದುರಿಸುತ್ತಾ, ಆಗು ಹೋಗುಗಳ ಜೊತೆಯಲ್ಲಿ ನಿನ್ನ ರಾಣಿಯಂತೆ ನೋಡಿಕೊಳ್ತೀನಿ. ನಾನು ಧೈರ್ಯವಂತನಿದ್ದರೂ, ನನಗೆ ಧೈರ್ಯದಂತೆ ಬೆನ್ನ ಹಿಂದೆ ನೀನಿರು. ಬರ್ತೀಯಾ ತಾನೆ ನನ್ನ ಬಾಳಲ್ಲಿ? ಇರ್ತೀಯಾ ಕೊನೆವರೆಗೂ ಜೊತೆಯಲ್ಲಿ?
* ವೀರೇಶ್ ದೊಡ್ಡಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.