ಭಾವೋದ್ದೀಪನದಲ್ಲಿ ಬೆಚ್ಚಗಿನ ವರ್ಣಗಳ ಬೆಳಕಿನ ಪಾತ್ರ
Team Udayavani, Feb 25, 2020, 6:00 AM IST
ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ ವರ್ಣಗಳ ಛಾಯೆಯನ್ನು ಹೊಮ್ಮಿಸುವಂತಿದ್ದರೆ, ಅದು ವಾರ್ಮ್ ಕಲರ್ಸ್. ಫೋಟೋಗ್ರಫಿಗೆ ಇದು ಬೇಕೇಬೇಕು.
ಕ್ಯಾಮೆರಾ ಕೈಯಲ್ಲಿ ಬಂದ ಹೊಸತರಲ್ಲಿ ಇದ್ಯಾವುದರ ಪರಿವೇ ಇರುವುದಿಲ್ಲ. ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹುಮ್ಮಸ್ಸಿನಿಂದ ಸೆರೆಹಿಡಿಯುತ್ತಾ ಸಾಗಿದಾಗ, ತಿಳಿದೋ, ತಿಳಿಯದೆಯೋ ಹಲವಾರು ಪ್ರೇಮ್‌ಗಳು ಶಹಭಾಶ್ ಗಿರಿ ಪಡೆಯುವುದು ಸಹಜವೇ. ಅಚಾನಕ್ ಆಗಿ ಅವುಗಳಲ್ಲೊಂದು ತರುಣಿಯ ಸುಂದರ ಚಿತ್ರನೋಡಿ ಪ್ರಭಾವಿತಳಾದ, ದೂರದ ಊರಿಗೆ ನಡು ಹಗಲು ಹೊರಟು ನಿಂತ ಪರಿಚಯದ ಯವ್ವನೆಯೊಬ್ಬಳಿಗೆ ನಿಮ್ಮ ಬಗ್ಗೆ ಅಭಿಮಾನ ಉಕ್ಕಿ ಬಂತು ಅನ್ನಿ. “ನಂದೂ ಒಂದು ಫೋಟೋ ಈ ಥರಾನೇ ತೆಗೀರೀ’ ಅಂತ ಗಂಟು ಬಿದ್ದರೆ, ಓಹ್, ಅದಾ…ಸೂರ್ಯಾಸ್ತದ ಸಂಜೆ ತೆಗೆದದ್ದು ಎನ್ನುವ ಸಮಜಾಯಿಶಿಯನ್ನು ಕೊಟ್ಟು ಜಾರಿಕೊಳ್ಳಬಹುದು. ಅದರ ಬದಲು ಆ ಬಗೆಯ ವಾರ್ಮ್ ಕಲರ್ಸ್ ಬಣ್ಣಗಳ ಬೆಳಕನ್ನು ಹೇಗಾದರೂ ದೊರಕಿಸಿಕೊಂಡು, ಅದಕ್ಕೊಂದು ಹಿನ್ನೆಲೆ ಹೊಂದಿಸಿಕೊಂಡು ಆಕೆಯ ಭಾವಪೂರ್ಣ ಭಂಗಿಯೊಂದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲಿ ನಿಮ್ಮ ಕೈ ಚಳಕ ತೋರಿಸಬಲ್ಲಿರಾದರೆ, ಸಾಧನೆಯ ಮೆಟ್ಟಲೊಂದನ್ನು ಏರಿ ನಿಂತಿದ್ದೀರಿ ಅಂತಲೇ ಅರ್ಥ.
ನಾವೆಲ್ಲಾ ತಿಳಿದಂತೆ, ವರ್ಣಗಳಲ್ಲಿ ಹಲವು ವಿಧ, ಮೂಲ (Primary), ಒಂದಕ್ಕೊಂದು ಪೂರಕ (Supplementary), ಅವಲಂಬಿತ (Dependent), ವೈದೃಶ್ಯ (Contrast) ಇತ್ಯಾದಿ. ಒಂದೊಂದು ಬಣ್ಣವೂ, ಕಣ್ಣಿಗೆ ಹೇಗೆ ಬೇರೆ ಬೇರೆ ರಂಗಿನಲ್ಲಿ ಗೋಚರಿಸುವುದೋ, ಹಾಗೆಯೇ ಬೇರೆ ಬೇರೆ ಭಾವನೆಯನ್ನೂ ನೋಡುಗನ ಮನಸ್ಸಿನಮೇಲೆ ಉಂಟುಮಾಡಬಲ್ಲದು. ವಾರ್ಮ್ ಕಲರ್‌ಗಳು ಪ್ರಭಾವಿಸುವ ಭಾವನೆಗಳು ಸಾಮಾನ್ಯವಾಗಿ, ಮುನ್ನುಗ್ಗುವ ಧೈರ್ಯ, ಅತಿಶಯ ಲಾವಣ್ಯ, ಗಾಂಭೀರ್ಯ, ರೌದ್ರ, ಭಯ, ತಳಮಳ, ಕೂಡಲೇ ತನ್ನೆಡೆ ಸೆಳೆಯುವ ಮತ್ತು ಭಾವ ಪ್ರಚೋದಿತ ಇಲ್ಲಿ ಇಬ್ಬರು ತರುಣಿಯರ ಮುಖಭಾವವನ್ನು ವಸ್ತುವಾಗಿಟ್ಟು ಕೊಳ್ಳೋಣ. ಮೊದಲನೆಯದು, ಸ್ಯಾಟಿನ್ ಟಚ್ ಎಂದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಹುಮಾನಗಳಿಸಿರುವ ಭಾವಚಿತ್ರ. ಇದನ್ನು ತೆಗೆದವರು ಮೊಹಮ್ಮದ್ ಆರ್ಫಾನ್ ಆಸಿಫ್. ಇಳಿ ಸಂಜೆಯ ಸೂರ್ಯನ ಬೆಳಕನ್ನೇ ತರುಣಿಯ ತಲೆಯ ಹಿಂಬದಿಯಿಂದ ಬೀಳುವಂತೆ ಆಕೆಯನ್ನು ಕುಳ್ಳರಿಸಿ. ನಂತರ, ಹಿನ್ನೆಲೆಯಲ್ಲಿ ಕಡು ಕೆಂಪು ಮಿಶ್ರಿತ ಕಂದು ಸೀರೆಯನ್ನು ಮೇಲಿನಿಂದ ಇಳಿ ಬಿಟ್ಟು, ಅದು ಪಾರದರ್ಶಿಕವಾಗದಂತೆ ದಪ್ಪದಾದ ಕಂದು ಉಣ್ಣೆಯ ಹಾಸನ್ನು ಅದಕ್ಕೆ ಜೋಡಿಸಿ ಜೊತೆಗೇ ಇಳಿಬಿಟ್ಟು, ಅದರ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ಎಚ್ಚರವಹಿಸಿರುವುದು. ಕೊನೆಯದಾಗಿ, ತರುಣಿಯ ಮುಖಾರವಿಂದಾರ , ಮುಂದಿನ ನೀಳ ಕೇಶರಾಶಿ ಮತ್ತು ಹಿನ್ನೆಲೆಯನ್ನೂ ತೆಳುವಾಗಿ ಸ್ಪರ್ಷಿಸುವಂತೆ ಆಕೆಯ ಮುಖದೆದುರು, ಆರು ಅಡಿ ದೂರ ತುಸು ಎತ್ತರದಲ್ಲಿ ಹಿಡಿದ ಪ್ರತಿಫಲಕ ಇಟ್ಟಿದ್ದಾರೆ. (Crumped Aluminium
Foil Refl ector ) ಅದರ ಸಹಾಯದಿಂದ ತಲೆಯ ಬದಿಯಿಂದ ಮುಂದುವರಿದ ಅದೇ ಕೆಂಪು ಸೂರ್ಯಕಿರಣಗಳನ್ನು ಪ್ರತಿಫಲನಗೊಳಿಸಿರುವುದು ಆಸಿಫ್ ಅವರ ಬೆಳಕಿನ ಮೇಲಿನ ಹಿಡಿತ ಮತ್ತು ತಾಂತ್ರಿಕ ಪರಿಣಿತಿಗೆ ಕನ್ನಡಿ ಹಿಡಿದಂತಿದೆ.
ಇನ್ನೊಂದು, ನಾನು ಸೆರೆಹಿಡಿದ ಪರಿಚಿತ ತರುಣಿಯದ್ದು. ಮಹಡಿ ಮನೆಯ ತೆರೆದ ಬಾಲ್ಕನಿಯಲ್ಲಿ ಬೆಳಗ್ಗೆ ಹತ್ತರ ಆಸು ಪಾಸು. ಆಕೆಯ ಲಾವಣ್ಯಪೂರಿತ, ಮನೋಧೃಡತೆಯುಳ್ಳ ಮುಖಭಾವದ ಜೊತೆಗೆ, ಪೂರಕ ನೀಳ ಬಾಹು- ಕೈನ ಭಾಗಗಳು ಕೆಂಚುಬಣ್ಣದ ಗುಂಗುರು ಕೇಶರಾಶಿ ಮತ್ತು ಸ್ವಲ್ಪ ಕೆಂಪು ತ್ವಚೆಯುಳ್ಳ ಮೈಬಣ್ಣ . ಅವೆಲ್ಲಾ ಸಹಜವಾಗಿಯೇ ವಾರ್ಮ್ ಕಲರ್ಸ್ ಚಿತ್ರಣಕ್ಕೆ ಹೇಳಿಮಾಡಿಸಿದಂತಿತ್ತು. ಆಕಾಶದಿಂದ ಮಂದವಾದ (Overcast & Diff used) ಬೆಳಗಿನ ಬೆಳಕು ತರುಣಿಯ ಹಿಂಬದಿಯಿಂದ ಬರುವಂತೆ ನೋಡಿಕೊಂಡು ಆಕೆಯನ್ನು ಕುಳ್ಳರಿಸಿ, ಆಕೆಯ ಮುಖದೆದುರು ಐದಡಿ ಅಂತರದಿಂದ ದೊಡ್ಡ ಥರ್ಮೋಕೋಲ್ ಶೀಟ್ ಹಿಡಿದು, ಪೂರಕ ಬೆಳಕನ್ನು ಪ್ರತಿಫಲಿಸಿ ಈ ಭಂಗಿಯನ್ನು ಸೆರೆಹಿಡಿದದ್ದು.
ಸ್ಯಾಟಿನ್ ಟಚ್ ; 200 ಎಂ.ಎಂ., f 5.6 ; 1/60 ಸೆಕೆಂಡ್, 100 ಐ.ಎಸ್.ಒ. ಟ್ರೈಪಾಡ್ ಬಳಸಿದೆ.
ಭಾವಲಹರಿಯ ಧೀಮಂತೆ ; 90 ಎಂ.ಎಂ. f 5.6 1/80 ಸೆಕೆಂಡ್, 200 ಐ.ಎಸ್.ಒ; ಟ್ರೈಪಾಡ್ ಬಳಸಿದೆ
ಕೆ.ಎಸ್.ರಾಜಾರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.