ನಾನೇನು ಚಿಕ್ಕ ಮಗುನಾ!?


Team Udayavani, Feb 27, 2018, 3:20 PM IST

magu.jpg

ಯಾವ ಹೆತ್ತವರೂ ಮಕ್ಕಳಿಗೆ ನೋವಾಗಲಿ ಎಂದು ನಿಯಂತ್ರಣಕ್ಕೆ ನಿಲ್ಲುವುದಿಲ್ಲ. ಭೂಮಿಯ ಮೇಲಿನ ಪ್ರತಿಜೀವಿಯೂ ತನ್ನ ಸಂತಾನದ ಚಂದದ ಬಾಳಿಗೆ ಶ್ರಮಿಸುತ್ತದೆ. ಅಂತೆಯೇ ಪೋಷಕರು ಕೂಡ. ಎಲ್ಲವನ್ನೂ ಅರ್ಥಮಾಡಿಕೊಂಡರೆ ತಿರುಗಿ ಬೀಳುವ ಯೋಚನೆಯನ್ನು ಮಕ್ಕಳು ಮಾಡುವುದಿಲ್ಲ.

ನಿಮ್ಮೊಳಗೆ, ನಿಮಗೆ ಗೊತ್ತಿಲ್ಲದ ಹಾಗೆ ಬದಲಾವಣೆಗಳಾಗುತ್ತವೆ. ಧ್ವನಿಯಿಂದ ಹಿಡಿದು ಭಾವನೆಗಳವರೆಗೂ ಬದಲಾಗುತ್ತೀರಿ. ಅಪ್ಪನೇ ನನ್ನ ಹೀರೋ ಅಂದುಕೊಂಡಿದ್ದ ನೀವೇ, ಅಪ್ಪನೆಂದರೆ ಒಂದು ಸವಾಲಿನ ರೀತಿ ನೋಡುತ್ತೀರಿ. ಅಮ್ಮನ ಹತ್ತಾರು ಪ್ರಶ್ನೆಗಳು ಕೋಪ ತರಿಸುತ್ತವೆ. ಅಷ್ಟೂ ದಿನ ಒಗ್ಗಿದ್ದ ಅಮ್ಮನ ಕೈರುಚಿ, ಅಂದಿನಿಂದ ಯಾಕೋ “ಟೇಸ್ಟ್‌ಲೆಸ್‌’ ಅನ್ನಿಸಿಬಿಡುತ್ತದೆ. ಮುನಿಸು ಹೆಗಲೇರಿ, ಅಮ್ಮನ ಕೈರುಚಿಗಿಂತ ಹೋಟೆಲ್‌ ರುಚಿಯೇ ಅದ್ಭುತವೆಂದು ಹೊಗಳಲು ಶುರುಮಾಡಿರುತ್ತೀರಿ. ಮನೆಯ ಎಲ್ಲರಿಂದಲೂ ದೂರವಿದ್ದುಬಿಡಬೇಕು, ಅವರೆಲ್ಲ ನನ್ನ ಪಾಲಿಗೆ ದುಶ್ಮನ್‌ ಅಂತ ನಿಮ್ಮೊಳಗೆ ಅನ್ನಿಸಲು ಶುರುವಾಗಿದೆ.

  ಯಾಕೆ ಹೀಗೆ? ಇದು ನಿಮ್ಮ ಪ್ರಾಬ್ಲಿಂ ಅಲ್ಲ. ನಿಮ್ಮ ಯವ್ವನದ ಹಾರ್ಮೋನುಗಳ ಕಿತಾಪತಿ ಇದು. ನಿಮ್ಮ ವ್ಯಕ್ತಿತ್ವದಲ್ಲೊಂದು ವೇಗ, ಬಿರುಸು ಸಿಕ್ಕಿರುವುದು ಅವುಗಳಿಂದಲೇ. “ನಾನೀಗ ಚಿಕ್ಕವನಲ್ಲ, ನಾನೂ ದೊಡ್ಡವನಾಗಿದ್ದೀನಿ, ದೊಡ್ಡವಳಾಗಿದ್ದೀನಿ’ ಅಂದುಕೊಳ್ಳುತ್ತೀರಿ. ಅದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತೀರಿ. ಅದರ ಮೊದಲ ಪ್ರಯತ್ನವೆಂಬಂತೆ ನಿಮ್ಮ ಹೆತ್ತವರ ಮೇಲೆ ತಿರುಗಿ ಬೀಳಲು ಆರಂಭಿಸುತ್ತೀರಿ. ರೇಗುತ್ತೀರಿ. ಕೂಗಾಡುತ್ತೀರಿ. “ನನ್ನ ಹುಟ್ಟಿಸು ಅಂತ ನಾನೇನು ನಿಮ್ಮನ್ನು ಕೇಳಿÉಲ್ಲ’ ಅನ್ನುವವರೆಗೂ ನಿಮ್ಮ ಮಾತುಗಳು ಬಂದು ಬಿಡುತ್ತವೆ. ಅಂಥ ಆವೇಗದಲ್ಲಿ ಅನೇಕ ತಪ್ಪು ನಿರ್ಧಾರಗಳನ್ನು ಕೈಗೊಂಡು ಬಿಡುತ್ತೀರಿ. ಮನೆ ಬಿಟ್ಟು ಹೋಗುತ್ತೀರಿ. ಮತಾöವುದೋ ದುಸ್ಸಾಹಸಕ್ಕೆ ಕೈಹಾಕುತ್ತೀರಿ.
   ನೆನಪಿಡಿ, ನಿಮ್ಮ ಅಪ್ಪ- ಅಮ್ಮ ನಿಮ್ಮ ಹಂತವನ್ನೇ ದಾಟಿ ಬಂದಂಥವರು. ಅವರಿಗೆ ನಿಮ್ಮ ವಯಸ್ಸಿನ ತಳಮಳ ಬಗ್ಗೆ ಸಂಪೂರ್ಣ ಅರಿವಿದೆ. ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲರು. ಹುಚ್ಚೆದ್ದು ಓಡುವ ಮನಸ್ಸಿಗೆ ಎಲ್ಲಿ, ಹೇಗೆ ಕಡಿವಾಣ ಹಾಕಬೇಕು? ಮುಂದಿನ ದಿನಗಳು ಚೆನ್ನಾಗಿರಬೇಕಾದರೆ ಈ ಹಂತದಲ್ಲಿ ತಿದ್ದದಿದ್ದರೆ ನಂತರದ ಪರಿಸ್ಥಿತಿ ಕೈಗೆ ಸಿಗುವುದಿಲ್ಲ ಎಂಬುದೂ ಅವರಿಗೆ ಅರಿವಿದೆ. ನಿಮ್ಮ ಭವಿಷ್ಯದ ಬಗ್ಗೆ ಅವರಿಗೆ ಭಯವಿದೆ, ಕಾಳಜಿ ಇದೆ. ತಡವಾಗಿ ಮನೆಗೆ ಬರುವ ಮಗಳಿಗೆ ಗದರದೇ ಹೋದರೆ, ನಾಳೆ ಇನ್ನೂ ತಡವಾಗಿ ಬರುವುದಿಲ್ಲವೇ? ಓದದೇ ಬೀದಿ ಬೀದಿ ಅಲೆಯುವ ಮಗನಿಗೆ ಭಯಪಡಿಸದಿದ್ದರೆ ನಾಳಿನ ಅವನ ಭವಿಷ್ಯವೇನು? ಆ ಭಯ ಅವರಿಗಿರುತ್ತದೆ. ಆ ಕಾರಣಕ್ಕಾಗಿಯೇ ನಿಮ್ಮನ್ನು ಒಂದು ಹಿಡಿತದಲ್ಲಿಡಲು ಬಯಸುತ್ತಾರೆ.
   “ನಂಗೆ ಅಷ್ಟೂ ಗೊತ್ತಾಗಲ್ವಾ? ನಾನೇನು ಚಿಕ್ಕ ಮಗುನಾ?’ ಅಂತಿರೇನು!!? ಬೀಸುವ ಬಿರುಗಾಳಿ, ಜೋರಾದ ಅಲೆಗಳ ವಯಸ್ಸದು. ಯಾವುದಕ್ಕೂ ಯೋಚಿಸದೇ ಧುಮುಕಿ ಬಿಡುತ್ತದೆ. ಎಲ್ಲಾ ವಿಷಯದಲ್ಲೂ ಪೋಷಕರೇ ಸರಿಯೆಂದು ವಾದಿಸಲಾಗದು! ನೀವು ಎಂಎಸ್ಸಿ ಮಾಡಬೇಕೆಂದು ಕನಸು ಕಂಡಿದ್ದರೆ, “ಇಲ್ಲ ಇಲ್ಲ… ನೀನು ಎಂಜಿನಿಯರಿಂಗೆ ಮಾಡಬೇಕು’ ಎಂದು ಹೆತ್ತವರು ಹಠವಿಡಿದರೆ ಅದು ಅವರ ತಪ್ಪು. ಮಕ್ಕಳು ಬಯಸುವುದನ್ನು ಓದಿಸಬೇಕು. ಅವರ ಗುರಿಗೆ ಕಾವಲಾಗಬೇಕು. ಹಾಗಾದರೆ ನೀವೇನು ಮಾಡಬಹುದು? ಮುಷ್ಕರಕ್ಕೆ ಧಿಕ್ಕಾರ ಕೂಗಿದ್ದಂತೆ ನಿಲ್ಲುವುದಲ್ಲ. ನಿಮ್ಮ ಇಷ್ಟದ ಬಗ್ಗೆ, ಕನಸಿನ ಬಗ್ಗೆ, ಗುರಿಯ ಬಗ್ಗೆ ಸ್ಪಷ್ಟವಾಗಿ ಅವರಿಗೆ ಅರ್ಥಮಾಡಿಸಬೇಕು. ನೀವು ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದು ನಿಮ್ಮ ಹಕ್ಕೇ! ಅವರು ನಿಮ್ಮನ್ನು ಹೆತ್ತವರು ಅದರಲ್ಲೂ ಅವರ ಪಾಲಿದೆ. ನೀವು ಹಾಳಾಗಲಿ ಎಂದು ಯಾರೂ ಬಯಸುವುದಿಲ್ಲ. ನಿಮ್ಮ ಪ್ರೀತಿ ನಿಮ್ಮನ್ನು ಚಂದವಾಗಿಡುತ್ತದೆ ಎಂದು ಗೊತ್ತಾದರೆ, ಅವರೇ ನಿಂತು ನಿಮಗೆ ಆ ಮದುವೆ ಮಾಡಿಬಿಡುತ್ತಾರೆ.
   ಯಾವ ಹೆತ್ತವರೂ ಮಕ್ಕಳಿಗೆ ನೋವಾಗಲಿ ಎಂದು ನಿಯಂತ್ರಣಕ್ಕೆ ನಿಲ್ಲುವುದಿಲ್ಲ. ಭೂಮಿಯ ಮೇಲಿನ ಪ್ರತಿಜೀವಿಯೂ ತನ್ನ ಸಂತಾನದ ಚಂದದ ಬಾಳಿಗೆ ಶ್ರಮಿಸುತ್ತದೆ. ಅಂತೆಯೇ ಪೋಷಕರು ಕೂಡ. ಎಲ್ಲವನ್ನೂ ಅರ್ಥಮಾಡಿಕೊಂಡರೆ ತಿರುಗಿ ಬೀಳುವ ಯೋಚನೆಯನ್ನು ನೀವು ಮಾಡುವುದಿಲ್ಲ.

ಬಾಕ್ಸ್‌
ಪೋಷಕರಿಗೆ ಎದುರಾಡುವ ಮುನ್ನ…
– ನಿಮ್ಮನ್ನು ಹೊತ್ತು ಹೆತ್ತು, ಸಾಕಲು ಪೋಷಕರು ಎಷ್ಟು ಶ್ರಮವಹಿಸಿದ್ದಾರೆಂಬುದು ತಿಳಿದಿರಲಿ.
– ಪೋಷಕರ್ಯಾರೂ ಮಕ್ಕಳಿಗೆ ನೋವಾಗಲಿ ಎಂದು ಬಯಸುವುದಿಲ್ಲ. ಅವರ ಮಾತಿನಲ್ಲಿ ಒಳಿತೇ ಇರುತ್ತೆ ಎಂಬುದನ್ನು ನೆನಪಿಟ್ಟುಕೊಳ್ಳಿ.
– ನಿಮ್ಮ ಯೋಗ್ಯ ಆಸಕ್ತಿಗೆ ಪೋಷಕರು ಅಡ್ಡಿಯಾಗುತ್ತಿದ್ದಾರೆ ಎಂದರಷ್ಟೇ, ಅವರ ನಿರ್ಧಾರಗಳನ್ನು ಪರಿಷ್ಕರಿಸಿ.
– ಯವ್ವನದಲ್ಲಿ ಸಿಟ್ಟು ಜಾಸ್ತಿ, ಅನೇಕರಿಗೆ ಆತುರವೇ ಆಸ್ತಿ. ಅದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
– ನಿಮ್ಮೊಳಗಿನ ತಳಮಳವನ್ನು ಪೋಷಕರಲ್ಲಿ ಒಮ್ಮೆ ಚರ್ಚಿಸಿ.

ಟಾಪ್ ನ್ಯೂಸ್

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

13

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.