ಪ್ರೀತಿಯ ಗೋಪುರವ  ಬೀಳಿಸಿ ಹೋಗುತ್ತಿದ್ದೇನೆ, ಕ್ಷಮಿಸು…  


Team Udayavani, Apr 25, 2017, 3:45 AM IST

preetiya-gopura1.jpg

ನನ್ನ ಚಾಕ್ಲೇಟ್‌ ಹೀರೋ…
ಎರಡು ವಾರಗಳಿಂದ ಕಾಲೇಜಿನಲ್ಲಿ ನಿನ್ನ ಕಣ್ಣು ತಪ್ಪಿಸಿ, ಮಾತಿಗೂ ಸಿಗದೆ, ಹುಡುಗೀರ ಹಿಂಡಿನಲ್ಲಿಯೇ ಸದಾ ನಾನೇಕೆ ಓಡಾಡ್ತಿದೀನಿ ಗೊತ್ತಾ? ನಾನು ನಿಂಗೆ ಮೋಸ ಮಾಡೆª ಎಂಬ ಭಾವನೆ ನಿನ್ನ ಕಣ್ಣ ತುಂಬ ಸುಳಿ ತಿರುಗುತ್ತಿದೆ ಎಂಬುದು ಅರಿತರೂ, ನಿನ್ನೆದುರು ಬಂದು ಎಲ್ಲವನ್ನೂ ಹೇಳುವ ಪರಿಸ್ಥಿತೀಲಿ ನಾನಿಲ್ಲ. ಅದಕ್ಕೇ ಈ ಲೆಟರ್‌ ಬರೀತಿದೀನಿ. ಕಾಲೇಜು ಮೆಟ್ಟಿಲು ಹತ್ತಿದಾಕ್ಷಣ ಮೊಟ್ಟಮೊದಲಿಗೆ ಅಪ್ಪ, “ಹುಡುಗ್ರ ಜೊತೆ ಮಾತಾಡ್ಬೇಡ’ ಎಂಬ ಲಕ್ಷ್ಮಣರೇಖೆ ಎಳೆದಿದ್ದ. ಅಮ್ಮ “ನೀನಾಯ್ತು, ನಿನ್ನ ಓದಾಯ್ತು. ಚೆಲ್ಲುಚೆಲ್ಲಾಗಿ ಆಡ್ಬೇಡ’ ಎಂಬ ಕಟ್ಟಪ್ಪಣೆ ವಿಧಿಸಿದ್ದಳು. 

ಬೊಗಸೆ ಕಂಗಳಲ್ಲಿ ಅಸಂಖ್ಯ ಕನಸುಗಳನ್ನು ತುಂಬಿಕೊಂಡು ಕಾಲೇಜು ಪ್ರವೇಶಿಸಿದ ನನಗೆ ಮೊದಲು ಪರಿಚಯವಾದವನೇ ನೀನು. ಇಡೀ ಕಾಲೇಜಿನಲ್ಲಿ ಚಾಕ್ಲೇಟ್‌ ಹೀರೋ ಎನಿಸಿಕೊಂಡಿದ್ದ ನೀನು, ನನ್ನನ್ನೇ ಯಾಕೆ ಪ್ರಪೋಸ್‌ ಮಾಡೆª ಎಂದು ನನಗೀಗಲೂ ಗೊತ್ತಿಲ್ಲ. ನಿನ್ನ ಮುದ್ದು ಮುದ್ದಾದ ಮಾತುಗಳು, ಬೇಸರದ ಘಳಿಗೆಗಳಲ್ಲಿ ಜೇನ ದನಿಯಿಂದ ಹೇಳುವ ಉರ್ದು ಗಜಲ್ಲುಗಳು, ನಕ್ಕಾಗ ಉಂಟಾಗುವ ಕೆನ್ನೆ ಮೇಲಿನ ಗುಳಿ ತುಂಬಾ ತುಂಬಾ ಇಷ್ಟವಾದವು. ನನ್ನೆಲ್ಲ ವೇದನೆಗಳಿಗೆ ನೀನು ಮಡಿಲಾಗುತ್ತಿದ್ದೆ, ನಾನು ನಿನ್ನ ಮಡಿಲ ಮಗು. “ಪ್ರೀತೀನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ…’ ಎಂಬ ಹಳೆಯ ಚಿತ್ರದ ಗೀತೆ ಬರುತ್ತಲ್ಲ ಹಾಗಿತ್ತು ನಮ್ಮಿಬ್ಬರ ಕಾಲೇಜಿನ ದಿನಗಳು.     

ಹುಡ್ಗಿàರಿಗೆ ಸ್ವಾಂತಂತ್ರ್ಯ ಎಲ್ಲಿದೆ ಕಣೋ? ನಾವು ಹುಟ್ಟಿನಿಂದ ಸಾವಿನವರೆಗೂ ಅವಲಂಬಿಗಳಾಗೇ ಬದುಕ್ತೀವಿ. ತಂದೆ- ತಾಯಿಗಳ, ಕಟ್ಟಿಕೊಂಡ ಗಂಡನ, ಹುಟ್ಟಿದ ಮಕ್ಕಳ ಕನಸು, ಹಂಬಲ, ಏಳಿಗೆಗಳಿಗೆ ಬೆಂಬಲವಾಗಿರುವದಷ್ಟೇ ನಮಗೆ ಗೊತ್ತು. ಮೊನ್ನೆ ಕಾಲೇಜು ಬಿಟ್ಟಿದ್ನಲ್ಲ, ಅಂದು ನನ್ನನ್ನ ನೋಡೋಕೆ ಗಂಡಿನ ಕಡೆಯೋರು ಬಂದಿದ್ರು. ನನ್ನನ್ನ ಒಂದ್ಮಾತು ಕೇಳದೆ ತಂದೆ ಒಪ್ಪಿಕೊಂಡೂ ಬಿಟ್ರಾ. ಅಮ್ಮನನ್ನ ಎಷ್ಟು ಗೋಗರೆದು ಮದುವೆ ಬೇಡಾ ಅಂದ್ರೂ ನನ್ನ ಹಠ ಏನೂ ನಡೀಲಿಲ್ಲ. ಅಪ್ಪ- ಅಮ್ಮನ ಕಣ್ಣೀರು ನನ್ನ ಸಮ್ಮತಿಗೆ ನಾಂದಿ ಹಾಡಿತು. ಅಂದಿನಿಂದ ಇಂದಿನವರೆಗೆ ನಿನಗೆ ಹ್ಯಾಗೆ ಹೇಳ್ಳೋದು, ಜೀವಕ್ಕೆ ಜೀವವಾದ ನಿನ್ನ ಬಿಟ್ಟಿರಲಿ ಹೇಗೆ, ನಾವಿಬ್ರೂ ಸೇರೋಕೆ ಆಗಲ್ಲ ಅನ್ನೋ ಸತ್ಯ ನಿನಗೆ ಅರ್ಥ ಮಾಡಿಸೋದು ಹೇಗೆ ಎಂಬ ಸಂಕಟದಲ್ಲಿಯೇ ನರಳಿದ್ದೇನೆ.   

ನಾನು ಕೇಳಿದ ಪ್ರತಿಯೊಂದನ್ನು ನನ್ನಿಷ್ಟದ ಪ್ರಕಾರವೇ ಕೊಡಿಸಿದ ನನ್ನ ತಂದೆ ಬದುಕಿನ ಅತಿ ದೊಡ್ಡ ಘಟ್ಟದಲ್ಲಿ ನನ್ನ ಇಷ್ಟವನ್ನೇ ಕೇಳಲಿಲ್ಲ. ಅವರಿಗೂ ತಲೆಯ ಹೊರೆ ಇಳಿದರೆ ಸಾಕಪ್ಪಾ ಅಂತನಿಸಿರಬೇಕು. ಗೆಳೆಯಾ… ಈ ಪತ್ರ ಬದುಕಿನಲ್ಲಿ ನಿನಗೆ ಬರೆಯುವ ಕೊನೆಯ ಪತ್ರವಾಗಿರಬಹುದು. ಇನ್ನು ನನ್ನ ಕಾಲೇಜಿಗೂ ವಿದಾಯ ಹೇಳುವ ಘಳಿಗೆ ಬಂದಿದೆ. ನಾನು ನೀಡುವ ಹಾರೈಕೆಗಳು, ಸಲಹೆಗಳು ನಿನಗೆ ಹಾಸ್ಯಾಸ್ಪದ ಅನ್ನಿಸಬಹುದು. ನಾನೇ ನಿರ್ಮಿಸಿದ ಪ್ರೀತಿಯ ಗೋಪುರವನ್ನು ಬೀಳಿಸಿ ಹೋಗುತ್ತಿದ್ದೇನೆ. ನನ್ನ ಅನಿವಾರ್ಯತೆ ನಿನಗೆ ಅರ್ಥವಾಗಬಹುದು ಎಂದುಕೊಂಡಿದ್ದೇನೆ. ದಯವಿಟ್ಟು ನನ್ನನ್ನು “ಮೋಸದ ಹುಡುಗಿ’ ಎಂದುಕೊಳ್ಳಬೇಡ. ಕ್ಷಮೆ ಇರಲಿ…

– ನಾಗೇಶ್‌ ಜೆ. ನಾಯಕ, ಬೈಲಹೊಂಗಲ 
 

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.