ಕಂಗಳೇ ಕರಗಿ ನೀರಾದಾಗ ಬಾಳುವುದುಂಟೇನೋ… 


Team Udayavani, Sep 19, 2017, 3:07 PM IST

19-JOSH-8.jpg

ನಿನ್ನನ್ನು ಹುಚ್ಚಿಯಂತೆ ಹಚ್ಚಿಕೊಳ್ಳುವ ಮೊದಲು ನಾನು ಕೂಡ ಎಲ್ಲರಂತೆಯೇ ಇದ್ದೆ. ಹನಿ ಹನಿ ಮಳೆಗೆ ಮುಖವೊಡ್ಡಿ ಖುಷಿ ಪಡುತ್ತಿದ್ದೆ. ಎಲ್ಲರೊಂದಿಗೆ ಬೆರೆಯುತ್ತ, ತಮಾಷೆ ಮಾಡುತ್ತ ನಗುನಗುತ್ತಿದ್ದೆ. ನನ್ನ ಸಂತೋಷ ಎಂದೂ ಬರಗಾಲವನ್ನೇ ಕಂಡಿರಲಿಲ್ಲ. ಆದರೆ ಈಗ..

ಸೂರ್ಯನ ಸಮಕ್ಷಮದಲ್ಲಿ ಸಾಗರದಾಚೆ ನಿಂತು ಕಡಲಿಗೆ ಮುತ್ತಿಕ್ಕುತ್ತಿರುವ ಅಲೆಗಳನ್ನು ಹಾಗೇ ನೋಡುತ್ತಲಿದ್ದೆ. ಅದೇಕೊ ಗಂಟಲುಬ್ಬಿ ಬಂತು. ಹೃದಯ ಭಾರವಾಯಿತು. ಕಣ್ಣಂಚು ತೇವವಾಯಿತು. ಎಲ್ಲಿ ಹೋದರೂ ಬಿಡದ ನೆನಪುಗಳಿಂದ ಆಯತಪ್ಪಿ ಮರಳು ದಿಬ್ಬದ ಮೇಲೆ ಕುಸಿದು ಬಿಟ್ಟೆ. ನಿನ್ನ ನೆನಪುಗಳ ಸಂತೆಯಿಂದ ಹೇಗೆ ಆಚೆ ಬರಲಿ ನಾನು? ಎಲ್ಲೆಲ್ಲೂ ನೀನೇ.. ನಿನ್ನ ನೆನಪುಗಳೇ..

ಇಲ್ಲಿ ನಾನು ಗೀಚುತ್ತಿರುವುದು ಬರೀ ಶಬ್ದಗಳನ್ನಲ್ಲ. ನನ್ನ ಕಣ್ಣೀರ ಸಾಲುಗಳನ್ನ. ಇಲ್ಲಿರುವುದು ಬರೀ ಅಕ್ಷರಗಳಲ್ಲ ನನ್ನ ಹೃದಯದ ಮಿಡಿತಗಳು. ಇಲ್ಲಿ ವಾಕ್ಯ ಪೂರ್ತಿಯಾಗುತ್ತಿರುವುದು ಪೂರ್ಣವಿರಾಮದಿಂದಲ್ಲ, ನನ್ನ ನಿಟ್ಟುಸಿರಿನಿಂದ.

     ಗೆಳೆಯಾ, ಮೊದಲೆಲ್ಲಾ ನಿನ್ನನ್ನು ನೆನಪಿಸಿಕೊಂಡರೆ ಸಾಕು, ಮನೆ ತುಂಬ ಪ್ರೇಮನಾದವೇ ಕೇಳಿಸುತ್ತಿತ್ತು. ಮನಸ್ಸು ತುಂಬಿ ಬರುತ್ತಿತ್ತು. ಆದರೆ ಈಗ ಎಲ್ಲೆಲ್ಲೂ ಮರಣ ಮೃದಂಗದ ಸದ್ದು ಕೇಳಿಸುತ್ತಿದೆ. ಹೃದಯಕ್ಕೆ ಬೆಂಕಿ ಬಿದ್ದಂತಾಗುತ್ತದೆ. ನಿನ್ನ ಮಾತೆಂಬ ಅಮೃತ ಸಿಂಚನ ಮಾತ್ರ ಇದನ್ನು ಆಲಿಸಬಲ್ಲದು.

      ಈ ಮೂರು ವರ್ಷಗಳ ಏಕಾಂಗಿತನ, ಅಸಹನೆಗಳನ್ನೆಲ್ಲ ಶಬ್ದ ಶಬ್ದಗಳಲ್ಲಿ ತುಂಬಿಸಿ ಸಾವಿರಾರು ಪತ್ರಗಳೊಂದಿಗೆ ನಿನಗಾಗಿ ಕಾದಿರುವೆ. ಓದುವ ತಾಳ್ಮೆ ಇಲ್ಲದಿದ್ದರೂ ಪರವಾಗಿಲ್ಲ. ಕೊನೇಪಕ್ಷ ಅವುಗಳನ್ನೆಲ್ಲ ನಿನ್ನ ಕೈಯಿಂದಲಾದರೂ ನೇವರಿಸು. ನೀನು ಸ್ಪರ್ಶಿಸಿದ್ದು ಅಕ್ಷರಗಳನ್ನಲ್ಲ, ಈ ಹಾಳು ಜೀವವನ್ನ ಎಂದುಕೊಂಡು ಹಾಡುತ್ತಿರುವ ಸೃಷ್ಟಿಯೊಂದಿಗೆ  ಮತ್ತೆ ಬದುಕುವ ಪ್ರಯತ್ನ ಮಾಡುತ್ತೇನೆ.

     ನಿನ್ನನ್ನು ಹುಚ್ಚಿಯಂತೆ ಹಚ್ಚಿಕೊಳ್ಳುವ ಮೊದಲು ನಾನು ಕೂಡ ಎಲ್ಲರಂತೆಯೇ ಇದ್ದೆ. ಹನಿ ಹನಿ ಮಳೆಗೆ ಮುಖವೊಡ್ಡಿ ಖುಷಿ ಪಡುತ್ತಿದ್ದೆ. ಎಲ್ಲರೊಂದಿಗೆ ಬೆರೆಯುತ್ತ, ತಮಾಷೆ ಮಾಡುತ್ತ ನಗುನಗುತ್ತಿದ್ದೆ. ನನ್ನ ಸಂತೋಷ ಎಂದೂ ಬರಗಾಲವನ್ನೇ ಕಂಡಿರಲಿಲ್ಲ. ಆದರೆ ಈಗ ಮೌನವೇ ನನ್ನ ಭಾಷೆ. ಎಲ್ಲರೂ ನಗುವಾಗ ಒಂಟಿಯಾಗಿ ಅಳುತ್ತೇನೆ. ಎಲ್ಲರೂ ಅಳುವಾಗ ಹುಚ್ಚಿಯಂತೆ ನಗುತ್ತೇನೆ. ನಾನು ಇದನ್ನೆಲ್ಲ ಯಾರ ಬಳಿ ಹೇಳಲಿ? ಹತ್ತಿರವಿರುವ ನೀನೇ ಹೃದಯದ ಬಾಗಿಲು ಮುಚ್ಚಿಕೊಂಡಿರುವಾಗ ಯಾರ ಕಿವಿಯಲ್ಲಿ ಹೇಳಿ ಏನು ಪ್ರಯೋಜನ?

     ನನ್ನ ಪಾಡಿಗೆ ನಾನಿದ್ದೆ. ಅಪರಿಚಿತನಾಗಿ ಬಂದು, ಮೌನವೆಂಬ ಭಯದ ಕತ್ತಲೆಯೊಳಗೆ ಬಿದ್ದಿದ್ದ ನನಗೆ ಧೈರ್ಯವೆಂಬ ಬೆಳಕು ಚೆಲ್ಲಿ, ಭಾಷೆಯೆಂಬ ಬಾಗಿಲು ತೆರೆದು, ಬದುಕೆಂಬ ಜಗತ್ತಿಗೆ ನನ್ನನ್ನು ಕರೆತಂದೆ. ಇಂದು ಮತ್ತೆ ಕತ್ತಲು ಮೈತುಂಬಿಕೊಂಡಿದೆ. ಆದರೆ ನನಗೆ ಯಾವುದೇ ಭಯವಿಲ್ಲ. ಇದಕ್ಕೆಲ್ಲ ಕಾರಣ ನೀನೇ ಎಂದು ರಾಜಾರೋಷವಾಗಿ ಹೇಳಬಲ್ಲೆ.

     ಇಷ್ಟೆಲ್ಲ ಆದರೂ ನಾನು ನಿನ್ನೊಂದಿಗೆ ಬದುಕುವ ಆಸೆಯಲ್ಲಿದ್ದೇನೆ ಎಂದುಕೊಂಡೆಯೇನೋ ಅವಿವೇಕಿ? ಮನಸ್ಸು ನೀಡಿದವಳ ಕನಸು ಕೊಂದವನು ನೀನು. ನನ್ನ ಭಾವನೆಯ ಕಣ್ಣೀರನ್ನು ಕಾಲಲ್ಲಿ ಹೊಸಕಿ ಹಾಕಿದವನು ನೀನು. ಅರ್ಥವಿಲ್ಲದ ನಿನ್ನ ಅನುಮಾನ ನನ್ನ ವ್ಯಕ್ತಿತ್ವವನ್ನೇ ಅನುಮಾನಿಸಿತು. ಅವಮಾನಿಸಿತು. ನನ್ನ ಬದುಕಿಗೊಂದು ಕಪ್ಪು ಚುಕ್ಕಿ ಇಟ್ಟು ಬೆನ್ನು ಹಾಕಿ ಹೊರಟುಹೋದವನು ನೀನು.

     ನನ್ನ ನಿಸ್ವಾರ್ಥ ಪ್ರೀತಿಯ ಮೇಲೆ ಆಣೆ ಕಣೋ. ನಿನ್ನ ಅನುಮಾನದಲ್ಲಿ ಸಾಸಿವೆಯಷ್ಟೂ ಸತ್ಯವಿಲ್ಲ. ಸತ್ಯ ಅಸತ್ಯಗಳನ್ನು ತಿಳಿಯದ ಪಾಪಿಗಳ ಎದುರು ಗೋಗರೆದರೆ ಪ್ರಯೋಜನವಿಲ್ಲ. ಆದರೂ ಕಡೆಯದಾಗಿ ಹೇಳ್ತಿದೀನಿ ತಿಳ್ಕೊà. ನಾನು ಜಸ್ಟ್‌ ನಿನಗಾಗಿ ಬದುಕಿದ್ದವಳು. ಅದನ್ನು ಅರ್ಥ ಮಾಡಿಕೊಳ್ಳದೇ ಹೋದೆಯಲ್ಲ…ಪೂರ್‌ ಫೆಲೋ..

ಇಂತಿ, ನಿನ್ನ ಮೌನದ ನಂತರ ಮಳೆಯಾದವಳು…
ಕಾವ್ಯಾ ಭಟ್ಟ ಜಕ್ಕೊಳ್ಳಿ, ಧಾರವಾಡ

ಟಾಪ್ ನ್ಯೂಸ್

Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ

hardik

Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Champions Trophy: New Zealand squad announced; Three mark key players return to the team

Champions Trophy: ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು

4-bng

Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

National Youth Day: Swami Vivekananda, the guide of the young generation

National Youth Day: ಯುವ ಪೀಳಿಗೆಯ ಮಾರ್ಗದರ್ಶಿ ಸ್ವಾಮಿ ವಿವೇಕಾನಂದ

ashoka

The Rise Of Ashoka: ಅಶೋಕನ ರಕ್ತಚರಿತೆ

Shimoga: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನಿಂದಲೇ ತಮ್ಮನ ಕೊಲೆ

hardik

Team India: ಪಾಂಡ್ಯಾಗೆ ಉಪನಾಯಕತ್ವವೂ ಇಲ್ಲ: ಈ ಆಟಗಾರನಿಗೆ ಹೊಸ ಜವಾಬ್ದಾರಿ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.