ನಾನು ಸಿನಿಮಾ ಹೀರೋ ಅಲ್ಲ..!
Team Udayavani, Mar 3, 2020, 4:18 AM IST
ನಿನ್ನ ಪ್ರೀತಿ ಸ್ನೇಹಕ್ಕಾಗಿ ಪ್ರತಿದಿನ ಪ್ರತಿಕ್ಷಣ ಹಂಬಲಿಸುವ ಜೀವ ನನ್ನದು. ನನ್ನಿಂದ ಸಾಧ್ಯವಾಗಬಹುದಾದ ನೂರಾರು ಕನಸುಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ.ಆ ಕನಸುಗಳು ನನಸಾಗಲು ನನ್ನ ಬದುಕಿನಲ್ಲಿ ನಿನ್ನ ಹಾಜರಿ ಬಲು ಮುಖ್ಯ.
ನಗು ಬರುತ್ತಿದೆ, ನಿನ್ನ ಕಲ್ಪನೆಗಳನ್ನು ಕೇಳಿ. ನೀನಂದುಕೊಂಡಂತೆ ಜೀವನ ಹಾಗೂ ಸಿನಿಮಾ ಒಂದೇ ಅಲ್ಲ. ಸಿನಿಮಾದಂತೆ ಜೀವನ ಸಾಗುವುದು, ಸಿನಿಮಾದಲ್ಲಿ ತೋರಿಸುವಂತೆ ನಿಜ ಜೀವನದಲ್ಲಿ ಆಗುವಂಥ ತುಂಬಾ ಕಷ್ಟ. ಸಿನಿಮಾದಲ್ಲಿ ನಡೆಯುವುದನ್ನೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾದಲ್ಲಿ ನೂರಾರು ಜನರೊಂದಿಗೆ ಫೈಟ್ ಮಾಡಿ ನಾಯಕಿಯನ್ನು ನಾಯಕ ವರಿಸಿದಂತೆ, ನಿಜ ಜೀವನದಲ್ಲಿ ನಾನೂ ನೂರಾರು ಜನರೊಂದಿಗೆ ಹೋರಾಡಲು ಸಾಧ್ಯವೇ? ನಾನಾ ಟ್ರಿಕ್ ಬಳಸಿ ನಿನ್ನ ಹಾಗೂ ನಿನ್ನ ಮನೆಯವರ ಮನಸ್ಸೆಲ್ಲಾ ಗೆದ್ದು ನಿನ್ನ ವರಿಸಲು ಸಾಧ್ಯವೇ..? ದೇಶ ವಿದೇಶಗಳಿಗೆ ತೆರಳಿ ಸುಂದರ ತಾಣಗಳಲ್ಲಿ ನಿನ್ನೊಂದಿಗೆ ಡ್ನೂಯಟ್ ಹಾಡಿ ನಿನ್ನ ಖುಷಿಗೊಳಿಸಲು ಸಾಧ್ಯವೇ? ಅದಿರಲಿ ಯಾವುದೋ ಸವಾಲನ್ನು ಸ್ವೀಕರಿಸಿ, ಕ್ಷಣಮಾತ್ರದಲ್ಲಿ ದೊಡ್ಡ ವ್ಯಕ್ತಿ ಅಥವಾ ಅಧಿಕಾರಿಯಾಗಲು ಸಾಧ್ಯವೆ? ಇಂತಹ ನಿನ್ನ ಕಲ್ಪನೆಗಳಿಗೆ ನಾನೇನು ಹೇಳಲಿ?
ನಿಜ ಹೇಳುವೆ ಕೇಳು. ನಾನೂ ಎಲ್ಲರಂತೆ ಸಾಮಾನ್ಯ ಹುಡುಗ. ನಾನೇನು ಸಿನಿಮಾ ಹೀರೋ ಅಲ್ಲ. ಆದರೆ, ಒಂದು ಮಾತ್ರ ಸತ್ಯ. ನನ್ನ ಪ್ರೀತಿ ಯಾವುದೇ ಹೀರೋಗಿಂತ ಕಡಿಮೆಯೇನಿಲ್ಲ. ವಾಸ್ತವವನ್ನು ಅರಿತು ಬದುಕುತ್ತಿರುವವನು ನಾನು. ನಿನ್ನ ಪ್ರೀತಿ ಸ್ನೇಹಕ್ಕಾಗಿ ಪ್ರತಿದಿನ ಪ್ರತಿಕ್ಷಣ ಹಂಬಲಿಸುವ ಜೀವ ನನ್ನದು. ನನ್ನಿಂದ ಸಾಧ್ಯವಾಗಬಹುದಾದ ನೂರಾರು ಕನಸುಗಳು ನನ್ನ ಮನದಲ್ಲಿ ಮೊಳಕೆಯೊಡೆದಿವೆ.ಆ ಕನಸುಗಳು ನನಸಾಗಲು ನನ್ನ ಬದುಕಿನಲ್ಲಿ ನಿನ್ನ ಹಾಜರಿ ಬಲು ಮುಖ್ಯ. ಬಣ್ಣ ಬಣ್ಣದ ಕಲ್ಪನಾ ಲೋಕದಿಂದ ಹೊರಬಂದು ವಾಸ್ತವದಲ್ಲಿ ಸುಂದರ ಬದುಕ ಕಟ್ಟೋಣ. ಅದಕ್ಕೆ ನಿನ್ನ ಸಮ್ಮತಿಗಾಗಿ ಕಾಯುತ್ತಿರುವೆ ಅಷ್ಟೇ..!
ವೆಂಕಟೇಶ ಚಾಗಿ ಲಿಂಗಸುಗೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.