ನಿನ್ನನ್ನೇ ಧ್ಯಾನಿಸುತ್ತ ನಿಂತಲ್ಲೇ ನಿಂತಿರುತ್ತಿದ್ದೆ…
Team Udayavani, May 21, 2019, 6:00 AM IST
ಗುಳಿಗೆನ್ನೆಯ ಗೆಳೆಯ,
ನಿನ್ನೊಳಗೆ ನಾನಿದ್ದೆ ಎಂದು ತಿಳಿಯಲೇ ಇಲ್ಲ, ನನಗಾದರೂ ಹೇಗೆ ಹೊಳೆದೀತು? ಬಸ್ ನಿಲ್ದಾಣದಲ್ಲಿ ನನಗಾಗಿ ಅರಸುವಾಗ, ನಾನು ಕಾಣಿಸುತ್ತಲೇ ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿದ್ದ ನಿನ್ನ ಕಂಗಳ ಕಾಂತಿ ನನ್ನನ್ನೇಕೆ ಸೆಳೆಯಲಿಲ್ಲ? ಜನ ಸಂದಣಿಯಿದ್ದ ಬಸ್ಸಿನಲ್ಲಿ, ನೀ ಕುಳಿತ ಜಾಗವ, ನಿಂತಿದ್ದ ನನಗೆ ಬಿಟ್ಟಾಗ ನಿನ್ನ ಹೃದಯದಲ್ಲಿ ನನಗಾಗಿ ಕಾದಿರಿಸಿದ್ದ ಸಿಂಹಾಸನ ನನಗೇಕೆ ಗೋಚರಿಸಲಿಲ್ಲ? ನಿನ್ನ ಮಿತ ಭಾಷೆಯ ಹಿಂದೆ ಅವಿತು ಕಾತರಿಸುತ್ತಿದ್ದ ತುಂಟಮನ ನನಗೇಕೆ ಅರಿವಾಗಲಿಲ್ಲ?
ನನಗೆ ತಿಳಿದದ್ದು ಒಂದೇ ವಿಷಯ, ನೀನು ಅತ್ಯಂತ ಸಭ್ಯ ಹುಡುಗ ಅನ್ನೋದು. ತುರ್ತಿಗೆ ಇರಲಿ’ ಅಂತ ಅವತ್ತು ನಿನ್ನ ಮೊಬೈಲ್ ನಂಬರ್ ಕೊಟ್ಟಾಗಲೂ, ಅದನ್ನು ನಾನು ವಿಶೇಷವೆಂದು ಪರಿಗಣಿಸಲಿಲ್ಲ.
ನಿನ್ನಲ್ಲೂ ಸಾವಿರಾರು ಆಸೆ, ಕನವರಿಕೆ ಇದೆಯೆಂದು ತಿಳಿದದ್ದು, ನಿನ್ನೆ ನನ್ನ ಹುಟ್ಟುಹಬ್ಬದ ಆಮಂತ್ರಣ ಸಂದೇಶವನ್ನು ಉಳಿದವರಿಗೆ ಕಳುಹಿಸಿದಂತೆ ನಿನಗೂ ತಲುಪಿಸಿದಾಗ. ಅಬ್ಟಾ, ಪೌರ್ಣಮಿಯ ಅಲೆಯಂತೆ ಒಂದೇ ರಭಸದಲ್ಲಿ ನನಗೆ ಕರೆ ಮಾಡಿ ಪ್ರೀತಿಯ ಬಾಗಿಲು ತೆರೆದೆಯಲ್ಲೋ?
I am lucky! ನಿನ್ನೊಳಗೆ ಎಷ್ಟೊಂದು ಮೃದುಭಾವಗಳು, ನನ್ನ ಕುರಿತು! ಬೇಕಿಲ್ಲ ಬೇರೇನೂ…ನಿನ್ನೆ ಕರೆ ಮುಗಿಸುವಾಗ ಏನಂದೆ? ನಾನು ದೂರ ದೂರ ಹೋಗುತ್ತಿದ್ದೆ ಎಂದೇ?… ಇಲ್ಲ, ನೀನು ನನ್ನನ್ನು ಸಮೀಪಿಸಲು ಹೆಜ್ಜೆ ಮುಂದೆ ಇಟ್ಟೇ ಇರಲಿಲ್ಲ, ಅಲ್ಲವೆ?
-ರಾಜಿ,ಬೆಂಗಳೂರು
ಕೆ.ವಿ. ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.