ಅಪ್ಪನ ಜೊತೆ ಇದೀನಿ ಆಮೇಲಿಂದ ಕಾಲ್ ಮಾಡ್ತೀನಿ…
Team Udayavani, Jun 11, 2019, 6:00 AM IST
ಹುಡುಗಿಯರಿಗೆ ಅಷ್ಟು ಬೇಗ ಸಹಾಯ ಮಾಡಲು ಮುಂದಾಗದ ಮನಸ್ಸು, ಅವಳಿಗೇಕೆ ನಾನು ರೀಚಾರ್ಜ್ ಮಾಡಿಸಬೇಕು ಅಂತ ಕೇಳಿತು. ಆಗೋದಿಲ್ಲ ಅಂತ ಹೇಳಲೂ ಮನಸ್ಸಾಗದೆ, ಗೆಳೆಯರ ಸಲಹೆ ಕೇಳಿದೆ. ಹುಡುಗೀರ ಮನಸ್ಸಿಗೆ ನೋವು ಕೊಡುವುದು ಮಹಾಪಾಪ ಅಂದುಕೊಂಡಿದ್ದ ಗೆಳೆಯರು, “ಪಾಪ ಕಣೋ, ರೀಚಾರ್ಜ್ ಮಾಡಿಸು’ ಅಂದರು. ರೀಚಾರ್ಜ್‌ನ ನಂತರ ಮತ್ತೆ ಚಾಟಿಂಗ್ ಮುಂದುವರೆಯಿತು.
ಇದು ಡಿಗ್ರಿ ದಿನಗಳಲ್ಲಿ ನಡೆದ ಘಟನೆ. ಆಗ ನಾನು ಹಾಸ್ಟೆಲ್‌ನಲ್ಲಿದ್ದೆ. ಒಂದು ದಿನ ಬೆಳಗ್ಗೆ ಆರು ಗಂಟೆಗೆ ಎದ್ದು ಓದುತ್ತಾ ಕುಳಿತಿದ್ದೆ. ಅಷ್ಟರಲ್ಲೇ ಕ್ಲಾಸಿನ ಸಮಯವಾಗಿತ್ತು. ಸರಿ ಅಂತ, ಸ್ನಾನ ಮಾಡಲು ಹೋದೆ. ಸ್ನಾನ ಮುಗಿಸಿಕೊಂಡು ಬಂದಾಗ ನನ್ನ ರೂಂಮೇಟ್, “ನಿನ್ನ ಮೊಬೈಲ್ ಬಡ್ಕೊತಾ ಇತ್ತು’ ಅಂದ. ನೋಡಿದರೆ, ಯಾವುದೋ ಹೊಸ ನಂಬರ್‌ನಿಂದ ಮೂರು ಮಿಸ್ಡ್ ಕಾಲ್‌ಗಳಿದ್ದವು. ಕುತೂಹಲ ತಡೆಯಲಾದರೆ, “ಯಾರಿದು?’ ಅಂತ ಮೆಸೇಜ್ ಕಳಿಸಿದೆ. ತಕ್ಷಣವೇ, “ಸಂಜಯ್ ಎಲ್ಲಿದ್ದೀರಾ?’ ಎಂದು ಮೆಸೇಜ್ ಬಂತು. ಯಾರೋ ಫ್ರೆಂಡ್ ಇರಬೇಕು ಅಂದುಕೊಂಡು, “ಧಾರವಾಡದಲ್ಲಿ’ ಎಂದುತ್ತರಿಸಿದೆ. ಆಗ ಆ ಕಡೆಯಿಂದ- “ಸರಿ, ಅಪ್ಪ ಮನೆಯಲ್ಲೇ ಇದ್ದಾರೆ. ಈಗ ಕಾಲ್ ಮಾಡಬೇಡಿ. ಆಮೇಲೆ ಮಾತಾಡೋಣ’ ಎಂದು ಮೆಸೇಜ್ ಬಂತು. ನನಗೆ ಏನೂ ಅರ್ಥವಾಗಲಿಲ್ಲ. ಬೆಳ್ಳಂಬೆಳಿಗ್ಗೆ ಯಾರಪ್ಪಾ ಇದು ಆಟ ಆಡಿಸ್ತಿರೋದು? ಅಂದುಕೊಂಡು ಸುಮ್ಮನಾದೆ.
ಸ್ವಲ್ಪ ಹೊತ್ತಿನ ನಂತರ ಅದೇ ನಂಬರ್‌ನಿಂದ ಮತ್ತೆ ಎಸ್‌ಎಂಎಸ್ ಬಂದಾಗ, ಇಲ್ಲೇನೋ ಎಡವಟ್ಟಾಗಿದೆ ಅನ್ನಿಸಿತು. “ನೀವ್ಯಾರೂಂತ ಗೊತ್ತಾಗಲಿಲ್ಲ’ ಅಂದೆ. ಅದಕ್ಕೂ ಸಮರ್ಪಕ ಉತ್ತರ ಸಿಗದಿದ್ದಾಗ ಸಿಟ್ಟಾಗಿ, “ನಿಮಗೆ ಮಾಡಲಿಕ್ಕೆ ಕೆಲಸ ಇಲ್ವಾ? ನಿಮ್ಮ ಹೆಸರು ಹೇಳಿ’ ಅಂತ ಮತ್ತೂಂದು ಮೆಸೇಜ್ ಬಿಟ್ಟೆ. “ಗೊತ್ತಿದ್ರೂ ನನ್ನನ್ನೇ ಕೇಳ್ತೀರಲ್ಲಾ’ ಅಂತ ಉತ್ತರ ಬಂದಾಗ, “ಹೌದು, ನೀವು ಸದಾ ನನ್ನ ಮನಸ್ಸಿನಲ್ಲಿರೋ ಹುಡುಗಿ ತಾನೆ?’ ಎಂದೆ. ಯಾವುದೋ ಹುಡುಗಿಯೇ ಇರಬೇಕು ಅಂತ ಆಗಲೇ ಗುಮಾನಿ ಬಂದಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ, “ಏನ್ ಹೇಳ್ತಾ ಇದ್ದೀರಾ? ನಂಗೆ ನಂಬೋಕೆ ಆಗ್ತಿಲ್ಲ. ನೀವು ನನ್ನ ಲವ್ ಮಾಡ್ತಾ ಇದ್ದೀರ?’ ಅಂತ ಪ್ರಶ್ನೆ ಬಂತು.
ಸರಿ, ಯಾರಿದು ಅಂತ ನೋಡೇ ಬಿಡೋಣ ಅಂದ್ಕೊಂಡು, ಆ ನಂಬರ್‌ಗೆ ಕಾಲ್ ಮಾಡಿದೆ. ಆಗ ಅತ್ತಲಿನಿಂದ, “ನಾನು ನಮ್ಮಪ್ಪನ ಜೊತೆ ಅಜ್ಜಿ ಮನೆಗೆ ಹೋಗ್ತಿದೀನಿ. ಆಮೇಲೆ ಮೆಸೇಜ್ ಮಾಡ್ತೀನಿ’ ಅಂತ ಉತ್ತರ ಬಂತು. ಯಾರಿರಬಹುದು ಅಂತೆಲ್ಲಾ ಅರ್ಧ-ಮುಕ್ಕಾಲು ಗಂಟೆ ತಲೆ ಕೆಡಿಸಿಕೊಂಡು, ತಡೆಯಲಾರದೆ ಮತ್ತೂಮ್ಮೆ ಆ ನಂಬರ್‌ಗೆ ಕಾಲ್ ಮಾಡಿದೆ.
ಎರಡೂರು ಬಾರಿ ಪ್ರಯತ್ನಿಸಿದ ನಂತರ ಆ ಕಡೆಯಿಂದ “ಹಲೋ’ ಎನ್ನುವ ಹೆಣ್ಣು ದನಿ ಕೇಳಿಸಿತು. ನನಗೆ ಅಚ್ಚರಿಯೋ ಅಚ್ಚರಿ. ಹುಡುಗಿಯೊಬ್ಬಳು ಅವಳಾಗಿಯೇ ಮೆಸೇಜ್ ಮಾಡಿದಳೆಂಬ ಖುಷಿ. ತಕ್ಷಣ ಕಾಲ್ ಕಟ್ ಮಾಡಿದಳಾದರೂ, ಮೆಸೇಜ್‌ನಲ್ಲಿ “ಅಪ್ಪ ಜೊತೆಗಿದ್ದಾರೆ. ಮಾತಾಡೋಕೆ ಆಗಲ್ಲ’ ಅಂದಳು. ಇಬ್ಬರೂ ಚಾಟಿಂಗ್ ಮುಂದುವರೆಸಿದೆವು. ಹುಡುಗಿ ಅಂತ ಕನ್ಫರ್ಮ್ ಆದಮೇಲೆ, ಕುತೂಹಲ ದುಪ್ಪಟ್ಟಾಯ್ತು.
“ನೀವು ಯಾರು ಹೇಳ್ರಿ? ನಿಮ್ಮದು ಯಾವೂರು? ಏನ್ಸಮಾಚಾರ?’ ಅಂತ ಪುಂಖಾನುಪುಂಖವಾಗಿ ಮೆಸೇಜ್ ಕಳಿಸಿದೆ. “ಆಗೇನೋ ಮನಸ್ಸಿನಲ್ಲಿರೋ ಹುಡುಗಿ ಅಂತಿದ್ರಿ. ಈಗ ಯಾರು ಅಂತ ಕೇಳ್ತೀರ? ಯಾರಂತ ಗೊತ್ತಾಗಲಿಲ್ವಾ?’ ಅಂತ ಕಾಡಿಸಿದಳು. ಹಲವಾರು ಬಾರಿ ಸ್ನೇಹಿತರು ಹೀಗೆ ಯಾವ್ಯಾವುದೋ ನಂಬರ್‌ನಿಂದ ಆಟ ಆಡಿಸಿರೋದ್ರಿಂದ, ಈ ಸಲವೂ ಅವರೇ ಯಾರೋ ಇರಬೇಕು ಅಂದೊRಂಡೆ ಅಂತ ಹೇಳಿದ್ಮೇಲೆ, ನನಗೆ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಮಾತಾಡಬೇಕು ಅಂತ ಆಸೆಯಾಗಿದೆ ಅಂತಲೂ ಹೇಳಿದೆ. “ನಾನು ನಮ್ಮ ಮನೆಯಲ್ಲಿಲ್ಲ. ಅಜ್ಜಿ ಮನೆಗೆ ಬಂದಿದ್ದೇನೆ’ ಎಂಬ ಉತ್ತರ ಬಂತು.
ಹಾಗೆಯೇ ಎರಡು ದಿನಗಳು ಕಳೆದ ಮೇಲೆ ಅವಳು ತನ್ನ ಹೆಸರು ಲತಾ, ಊರು ಹುಬ್ಬಳ್ಳಿ ಅಂತ ಹೇಳಿದಳು. ಮೊಬೈಲ್ ನಂಬರ್ ಹೇಗೆ ಸಿಕ್ಕಿತು ಎಂದಿದ್ದಕ್ಕೆ, “ಗೆಳತಿಯ ಹತ್ತಿರ ಕೇಳಿ ಪಡೆದುಕೊಂಡೆ’ ಅಂದಳು. ಮತ್ತೂಮ್ಮೆ ಫೋನ್ ಮಾಡಿದಾಗಲೂ, ಅಮ್ಮನ ಜೊತೆ ಅಡುಗೆ ಮಾಡ್ತಿದೀನಿ ಎಂಬ ಉತ್ತರ ಬಂತು. ಸ್ವಲ್ಪ ಸಮಯದ ಚಾಟಿಂಗ್‌ನ ನಂತರ, “ನನ್ನ ಎಸ್‌ಎಂಎಸ್ ಖಾಲಿಯಾಗ್ತಿದೆ. ನಾನು 40 ರೂ. ರೀಚಾರ್ಜ್ ಮಾಡಿಸ್ಬೇಕು. ಹತ್ತಿರದಲ್ಲಿ ಅಂಗಡಿ ಇಲ್ಲ. ನೀವಾದರೂ ರೀಚಾರ್ಜ್ ಮಾಡಿಸ್ರಿ’ ಎಂದು ಗೋಗರೆದಳು.
ಆದರೆ, ಹುಡುಗಿಯರಿಗೆ ಅಷ್ಟು ಬೇಗ ಸಹಾಯ ಮಾಡಲು ಮುಂದಾಗದ ಮನಸ್ಸು, ಅವಳಿಗೇಕೆ ನಾನು ರೀಚಾರ್ಜ್ ಮಾಡಿಸಬೇಕು ಅಂತ ಕೇಳಿತು. ಆಗೋದಿಲ್ಲ ಅಂತ ಹೇಳಲೂ ಮನಸ್ಸಾಗದೆ, ಗೆಳೆಯರ ಸಲಹೆ ಕೇಳಿದೆ. ಹುಡುಗೀರ ಮನಸ್ಸಿಗೆ ನೋವು ಕೊಡುವುದು ಮಹಾಪಾಪ ಅಂದುಕೊಂಡಿದ್ದ ಗೆಳೆಯರು, “ಪಾಪ ಕಣೋ, ರೀಚಾರ್ಜ್ ಮಾಡಿಸು’ ಅಂದರು. ರೀಚಾರ್ಜ್‌ನ ನಂತರ ಮತ್ತೆ ಚಾಟಿಂಗ್ ಮುಂದುವರೆಯಿತು. ಕೆಲವು ದಿನಗಳ ನಂತರ ಅವಳಾಗಿಯೇ ಪ್ರಪೋಸ್ ಕೂಡಾ ಮಾಡಿದಳು. ನಿಗದಿತ ತಾರೀಖು ಭೇಟಿಯಾಗುವ ಒಪ್ಪಂದವೂ ಆಯ್ತು.
ಅವತ್ತು ರಾತ್ರಿ ಇನ್ನೊಬ್ಬ ಗೆಳೆಯ ನಮ್ಮ ರೂಂಗೆ ಬಂದಿದ್ದ. ಇಬ್ಬರೂ ಸೇರಿ ಅವನ ಮೊಬೈಲ್‌ನಲ್ಲಿ ಸಿನಿಮಾ ನೋಡಿದೆವು. ನನ್ನಂತೆಯೇ ಅವನೂ ಯಾವುದಾದರೂ ಹುಡ್ಗಿಯ ಜೊತೆ ಚಾಟಿಂಗ್ ಮಾಡುತ್ತಿದ್ದಾನಾ ಅಂತ ಕದ್ದು ಮೆಸೇಜ್ ತೆಗೆದು ನೋಡಿದಾಗ, ಅಲ್ಲಿತ್ತು ನೋಡಿ ಒಂದು ವಾರದ ನಿಗೂಢ ಸತ್ಯ! ಚಾಟಿಂಗ್‌ಗಳ ಸರಮಾಲೆ ಸತ್ಯದ ನಿಜದರ್ಶನ ಮಾಡಿಸಿತ್ತು. ನಾನು ಹುಡುಗಿ ಅಂತ ತಿಳಿದು ಚಾಟಿಂಗ್ ಮಾಡಿದ್ದು ಅವನ ಜೊತೆಗೇ! ಯಾಕ್ರಯ್ನಾ ಹೀಗ್ ಮಾಡಿದ್ರೀ? ಎಂದು ಕೇಳಿದಾಗ ಎಲ್ಲರೂ ಎದ್ದು ಬಿದ್ದು ನಗತೊಡಗಿದರು.
-ಸಂಜಯ ಮಹಾಜನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.