ನೀನಿಷ್ಟ ಕಣೋ ಅನ್ನೋಕೇನ್ರೀ ಕಷ್ಟ?
Team Udayavani, Sep 19, 2017, 3:12 PM IST
ನಿಮ್ಮನ್ನು ನೋಡಿದ ಮೊದಲನೇ ದಿನವೇ ನನ್ನ ಹಾರ್ಟಲ್ಲಿ ಒಂದು ಬೀಟ್ ಮಿಸ್ ಆದಂಗಿತ್ತು. ಆದರೆ ಅವತ್ತು ಅದು ನನ್ನ ಅನುಭವಕ್ಕೆ ಬರ್ಲಿಲ್ಲ. ಯಾಕಂತೀರ? ಅದಕ್ಕೂ ಮುಂಚೆ ನನಗೆ ಯಾವತ್ತೂ ಆ ಥರದ ಅನುಭವ ಆಗಿರ್ಲಿಲ್ಲ ನೋಡಿ ಅದಕ್ಕೆ.
ಅಲ್ಲಾ ಕಣ್ರೀ, ನಿಮಗ್ಯಾಕೆ ಇಷ್ಟು ಸೊಕ್ಕು ಅಂತೀನಿ..? ನೀವು ನನಗೆ ಇಷ್ಟ ಅಂತ ಗೊತ್ತಿದ್ರೂ, ಗೊತ್ತಿಲ್ಲದೇ ಇರೋ ಥರ ಇರ್ತೀರಲ್ಲ, ಅದು ಹೇಗೆ? ಮತ್ತು ಅದು ಯಾಕೆ?
ನಿಮ್ಮನ್ನು ನೋಡಿದ ಮೊದಲನೇ ದಿನವೇ ನನ್ನ ಹಾರ್ಟಲ್ಲಿ ಒಂದು ಬೀಟ್ ಮಿಸ್ ಆದಂಗಿತ್ತು. ಆದರೆ ಅವತ್ತು ಅದು ನನ್ನ ಅನುಭವಕ್ಕೆ ಬರ್ಲಿಲ್ಲ. ಯಾಕಂತೀರ? ಅದಕ್ಕೂ ಮುಂಚೆ ನನಗೆ ಯಾವತ್ತೂ ಆ ಥರದ ಅನುಭವ ಆಗಿರ್ಲಿಲ್ಲ ನೋಡಿ ಅದಕ್ಕೆ. ನನಗೆ ನನ್ನ ಹಾರ್ಟಬೀಟ್ ಮಿಸ್ ಆಗ್ತಾ ಇದೆ ಅಂತ ಗೊತ್ತಾಗಿದ್ದು ಕಾಲೇಜು ಫೆಸ್ಟ್ ದಿನ ನೀವು ಸೀರೆ ಉಟ್ಕೊಂಡ್ ಬಂದಿದ್ದನ್ನ ನೋಡಿದ್ ಮೇಲೇನೆ! ಅದೂ ನನಗೆ ಇಷ್ಟ ಆಗೋ ಕೆಂಪು ಬಣ್ಣದ ಸೀರೆ, ಅದಕ್ಕೊಂದು ಬಂಗಾರದ ಬಣ್ಣದ ಬಾರ್ಡರ್. ಆಹಾ..! ಎಷ್ಟ ಮುದ್ದಾಗಿ ಕಾಣಿ¤ದ್ರಿ ಅವತ್ತು ಗೊತ್ತಾ? ನನಗಂತಾನೇ ಅವತ್ತು ಆ ರೀತಿ ಬಂದಿದ್ದು ಅನ್ನೋದು ಫ್ರೆಂಡ್ಸ್ ಹೇಳಿದ್ ಮೇಲೇನೆ ನಂಗೆ ಗೊತ್ತಾಗಿದ್ದು.
ಅವತ್ತು ನೀವು ನನ್ನೊಬ್ಬನ ಹತ್ರ ಬಿಟ್ಟು ಬೇರೆಯವರ ಜೊತೆ ಫೋಟೊಗೆ ಪೋಸ್ ಕೊಡುವಾಗ ನನಗೆ ಹೆಂಗಾಗಿತ್ತು ಗೊತ್ತಾ? ನನಗೆ ಒಳಗೊಳಗೆ ಉರಿದು ಹೋಗ್ತಾ ಇತ್ತು. ಕೊನೇಗೆ ನನ್ಹತ್ರ ಬಂದು “ಒಂದು ಫೋಟೋ ಫ್ಲೀಸ್’ ಅಂತ ಹೇಳಿ ಫೋಟೋ ತೆಗಿಸಿಕೊಂಡ್ರಲ್ಲ, ಆಗ್ಲೆà ಸಮಾಧಾನ ಆಗಿದ್ದು.
ಅದೆಲ್ಲಾ ಇರ್ಲಿ ಬಿಡಿ, ನೋಡಿ, ನೀವಂದ್ರೆ ನನಗಿಷ್ಟ ಅಂತ ನಿಮಗೆ ಗೊತ್ತು, ನಾನಂದ್ರೆ ನಿಮಗಿಷ್ಟ ಅಂತ ನನಗೂ ಗೊತ್ತು, ಆದರೂ ನೀವ್ಯಾಕೆ ಬಂದು ಏನೂ ಹೇಳ್ತಾ ಇಲ್ಲಾ? ನಾನೇ ಹೇಳಲಿ ಅಂತ ಕಾಯ್ತಾ ಇದ್ದೀರಾ? ಆಗಲಿ, ಸ್ವಲ್ಪ ದಿನ ಕಾಯಿ, ನಾನೇ ಬಂದು ಹೇಳ್ತೀನಿ. ಇಲ್ಲಾ ಅಂದ್ರೆ ನೀವೇ ಬಂದು ಈಗಲೇ ಹೇಳಿºಡಿ. ರೀ….ಫ್ಲೀಸ್ ಹೇಳಿºಡ್ರೀ… ಹೇಳ್ತೀರಾ ತಾನೆ? ಹಾnಂ..?
ಭರತ್ ಎಚ್. ನಾರಾಯಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.