ನಿನ್ನನ್ನು ಅತಿಯಾಗಿ ಪ್ರೀತಿಸಿದ್ದೇ ತಪ್ಪಾ?


Team Udayavani, May 22, 2018, 6:00 AM IST

8.jpg

ನಿನಗೆ ನನಗಿಂತ ಫ್ರೆಂಡ್ಸ್‌, ಆಟ ಮೋಜು ಮಸ್ತಿ ಇದೇ ಮುಖ್ಯವಾಯ್ತಾ? ಯಾಕ್‌ ಈ ರೀತಿ ನನಗೆ ನೋವಿನ ಮೇಲೆ ನೋವು ಕೊಡ್ತಾ ಇದೀಯಾ? ನಿನ್ನನ್ನ ಅತಿಯಾಗಿ ಪ್ರೀತಿಸಿದ್ದೇ ತಪ್ಪಾಯ್ತಾ? ಒಮ್ಮೆ ಯೋಚಿಸಿ ನೋಡೋ, ನೀನೇ ನನ್ನ ಪ್ರಪಂಚ ಅಂದುಕೊಂಡಿರೋ ನನ್ನ ಮೇಲೆ ಸ್ವಲ್ಪವಾದ್ರೂ ಕರುಣೆ ತೋರು. 

ಅಂದು ಬುಧವಾರ… ಕಾಲೇಜಿನ ಮೊದಲ ದಿನ.. ಆಗತಾನೇ ಪಿಯು ಮುಗಿಸಿ ಡಿಗ್ರಿಗೆ ಕಾಲಿಟ್ಟ ದಿನ. ಫ‌ಸ್ಟ್‌ ಡೇ ಹೇಗಿರುತ್ತೋ ಏನೋ ಅನ್ನೋ ಆತಂಕದ ಜೊತೆಗೇ ಹೊಸ ಪರಿಸರಕ್ಕೆ ದಾಪುಗಾಲಿಟ್ಟೆನೆಂಬ ಖುಷಿ. ಹಾಗಂತ, ನಾನೇನು ಸೈಲೆಂಟ್‌ ಹುಡ್ಗಿ ಅಲ್ಲ. ರ್ಯಾಗಿಂಗ್‌ಗೆಲ್ಲಾ ಭಯ ಬೀಳ್ಳೋ ಜಾಯಮಾನ ನಂದಲ್ಲ. ಆದ್ರೆ ಹೊಸ ಜಾಗ, ಹೊಸ ಫ್ರೆಂಡ್ಸ್‌, ಹೊಂದಿಕೊಳ್ಳೋದು ಹೇಗೆ ಅನ್ನೋ ಕಳವಳವಿತ್ತು. ಅಂದು ನನಗೆ ಮೊದಲು ಪರಿಚಯವಾಗಿದ್ದು ಕಾಲೇಜಿನ ಹಳೇ ತಲೆಗಳು, ಅಂದ್ರೆ ಸಿನಿಯರ್! ಅವರು ತುಂಬಾ ಜಾಣತನದಿಂದ ನನಗೆ ಮತ್ತು ಗೆಳತಿಗೆ ಸರಿಯಾಗಿ ಬಕ್ರಾ ಮಾಡಿದರು. ಅವತ್ತೇ, ತೀರಾ ಆಕಸ್ಮಿಕವಾಗಿ “ಅವನ’ ಪರಿಚಯವಾಯ್ತು. ಆ ಪರಿಚಯವೇ ನನ್ನ ಬದುಕಿಗೆ ದೊಡ್ಡ ಟ್ವಿಸ್ಟ್‌ ಕೊಟ್ಟಿದ್ದು. ಅದ್‌ ಯಾವ್‌ ಘಳಿಗೆಯಲ್ಲಿ ಅವನ ಪರಿಚಯವಾಯೊ¤à ಗೊತ್ತಿಲ್ಲ, ಆನಂತರದಲ್ಲಿ ನಾನು ಸಂಪೂರ್ಣವಾಗಿ ಕಳೆದು ಹೋಗಿಬಿಟ್ಟೆ.

ಸುಮ್ನೆ ಮುಖ ನೋಡಿಕೊಂಡು ಎಷ್ಟು ದಿನ ಕಾಲ ಕಳೆಯೋದು? ಆಗಿದ್ದಾಗ್ಲಿ, ನಾನೇ ಮುಂದಾಗಿ ಕೇಳಿಬಿಡೋಣ ಅಂದೊRಂಡೆ. ಕಡೆಗೂ ಅವನಿಗೆ ಪ್ರಪೋಸ್‌ ಮಾಡೋ ಟೈಂ ಬಂದೇ ಬಿಡು¤. ಹೇಗೋ ಹಾಯಾಗಿದ್ದ ಬದುಕಿನಲ್ಲಿ ಪ್ರೀತಿ ಅನ್ನೋ ಅಲೆ ಒಮ್ಮೆ ಜೋರಾಗಿ ಅಪ್ಪಳಿಸಿತು.  ಮೊದಮೊದಲು ಎಲ್ಲವೂ ಚೆನ್ನಾಗಿತ್ತು. ನನಗೆ ಅವನೇ ಪ್ರಪಂಚ, ಅವನಿಗೆ ನಾನೇ ಎಲ್ಲಾ ಆಗಿದ್ದೆ. ನಮ್ಮಿಬ್ಬರನ್ನು ದೂರ ಮಾಡೋಕೆ ಯಾರಿಂದಲೂ ಆಗಲ್ಲ ಅನ್ನುವಷ್ಟರ ಮಟ್ಟಿಗೆ ಒಬ್ಬರಲ್ಲೊಬ್ಬರು ಬೆರೆತು ಹೋಗಿದ್ವಿ. ಆದ್ರೆ, ಎಲ್ಲಾ ಒಂದು ಹಂತದವರೆಗೆ ಮಾತ್ರ. ಆನಂತರದಲ್ಲಿ ಯಾಕೋ ಅವನ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣೋಕೆ ಶುರುವಾಯ್ತು.. ಅಲ್ಲಿಂದ ದಿನಾ ಜಗಳವೇ! ಸಾಲದ್ದಕ್ಕೆ, ನಮ್ಮಿಬ್ಬರ ನಡುವೆ ಇನ್ಯಾರೋ ಎಂಟ್ರಿ ಕೊಟ್ಟಿದ್ದು ಇನ್ನೂ ದೊಡ್ಡ ಶಾಕ್‌. ಆ ಕ್ಷಣ ನನ್ನ ಹೃದಯವೇ ಛಿದ್ರವಾಗಿತ್ತು. ನಾನಿದ್ದೂ ಬೇರೆಯವರ ಸಾಂಗತ್ಯವನ್ನು ನನ್ನ ಗೆಳೆಯ ಬಯಸಿದ್ದಾದರೂ ಹೇಗೆ? ಅವನು ನಿಜವಾಗಿಯೂ ನನ್ನನ್ನು ಪ್ರೀತಿ ಮಾಡ್ತಿದ್ದಾನಾ ಇಲ್ವಾ? ಅನ್ನೋ ಅನುಮಾನ ನನ್ನನ್ನು ಕಾಡತೊಡಗಿತು. ಅಂತೂ ಆ ಎಲ್ಲಾ ಗೊಂದಲಕ್ಕೆ ಐದಾರು ತಿಂಗಳ ನಂತರ ಕಡೆಗೂ ತೆರೆ ಬಿತ್ತು. ಆ ಮೂರನೆ ವ್ಯಕ್ತಿ ನಮ್ಮಿಂದ ದೂರಾಗಿದ್ದೂ ಆಯ್ತು.

ಇಷ್ಟೆಲ್ಲಾ ಆದ ನಂತರವಾದ್ರೂ ನಾನು ಅವನು ಚೆನ್ನಾಗಿರಿ¤àವಿ ಅಂದುಕೊಂಡಿದ್ದೆ. ಆದ್ರೆ, ಒಮ್ಮೆ ಒಡೆದು ಹೋದ ಮನಸುಗಳು ಮತ್ತೆ ಮೊದಲಿನಂತೆ ಪ್ರೀತಿಸುವುದು ಎಂದಾದರೂ ಸಾಧ್ಯವಾ? ಮತ್ತದೇ ಜಗಳ, ಹುಸಿ ಮುನಿಸು. ಕೋಪ, ನೋವು ಕಣ್ಣೀರು.. ನಾನು ತೋರಿದ ಪ್ರೀತಿಗೆ ಪ್ರತಿಯಾಗಿ ಒಂದು ದಿನವೂ ನನಗೆ ಪ್ರೀತಿ ಸಿಗಲಿಲ್ಲ. 

ಹೇ ಹುಡ್ಗಾ, ನಿನಗೆ ನನಗಿಂತ ಫ್ರೆಂಡ್ಸ್‌, ಆಟ ಮೋಜು ಮಸ್ತಿ ಇದೇ ಮುಖ್ಯವಾಯ್ತಾ? ಯಾಕ್‌ ಈ ರೀತಿ ನನಗೆ ನೋವಿನ ಮೇಲೆ ನೋವು ಕೊಡ್ತಾ ಇದೀಯಾ? ನಿನ್ನನ್ನ ಅತಿಯಾಗಿ ಪ್ರೀತಿಸಿದ್ದೇ ತಪ್ಪಾಯ್ತಾ? ಒಮ್ಮೆ ಯೋಚಿಸಿ ನೋಡೋ, ನೀನೇ ನನ್ನ ಪ್ರಪಂಚ ಅಂದುಕೊಂಡಿರೋ ನನ್ನ ಮೇಲೆ ಸ್ವಲ್ಪವಾದ್ರೂ ಕರುಣೆ ತೋರು. ಚೂರು ಅರ್ಥ ಮಾಡ್ಕೊà ನನ್ನನ್ನ. ನೀನೆಷ್ಟೇ ನೋವು ಕೊಟ್ರೂ ಮತ್ತೆ ನಾನು ಎಲ್ಲ ಮರೆತು ನಿನ್ನ ಜೊತೆ ಮಾತನಾಡೋದು ನಿನ್ನ ಮೇಲಿನ ಅತಿಯಾದ ಪ್ರೀತಿಯಿಂದ. ದಿನದ 24 ಗಂಟೆಯಲ್ಲಿ ನನಗಾಗಿ ಕನಿಷ್ಠ 1 ಗಂಟೆಯಾದ್ರೂ ಮೀಸಲಿಡು. ಇಷ್ಟೇ ನನ್ನ ವಿನಂತಿ.

ಇಂತಿ ಪ್ರೀತಿಯ
ನೀನೇ ಕರೆದಂತೆ ಜಾನು..
ಸುನೀತ ರಾಥೋಡ್‌ ಬಿ.ಎಚ್‌ ದಾವಣಗೆರೆ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.