ಮುಂದಿನ ಜನ್ಮದಲ್ಲಾದರೂ ಸಿಗುವೆಯಾ?
Team Udayavani, Jan 28, 2020, 6:10 AM IST
ನಾನು ಈ ಪತ್ರ ಬರೀತಿರೋದು ನಿನ್ನ ಮನಸ್ಸಿನಲ್ಲಿ ಇಲ್ಲದಿರೋ ಆಸೇನ ಹುಟ್ಟಿಸೋಕೆ ಅಲ್ಲ. ಹೃದಯದಲ್ಲಿ ಜಾಗ ಕೊಡು ಅಂತ ಕೇಳ್ಳೋಕೂ ಅಲ್ಲ…
ತು ಪ್ಯಾರ್ ಹೈ ಕಿಸಿ ಔರ್ ಕಾ..
ತುಝೆ ಚಾಹತಾ ಕೋಯಿ ಔರ್ ಹೈ..
ಈ ಬದುಕು ಎಷ್ಟು ವಿಚಿತ್ರ ಅಲ್ವಾ? ನಾವಂದುಕೊಳ್ಳೋದೇ ಒಂದು, ಆಗುವುದು ಇನ್ನೊಂದು. ಹಾಗಿದ್ದರೇ ಚಂದ, ಆಗಲೇ ಜೀವನ ರಸಮಯವಾಗಿ ಕುತೂಹಲಭರಿತವಾಗಿರುತ್ತೆ. ಇದೆಲ್ಲ ಗೊತ್ತಿದ್ದರೂ ನಾವು ಕೆಲವೊಂದು ವಿಷಯಗಳ ಬಗ್ಗೆ ತುಂಬಾ ನಿರೀಕ್ಷೆಗಳನ್ನ ಇಟಗೊಂಡಿರ್ತೀವಿ. ಅವು ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಡೀಲಿಲ್ಲ ಅಂದ್ರೆ ಬೇಜಾರಾಗೋದು ಸಹಜ. ಅದು ಮಾನವ ಸಹಜ ಗುಣ. ಆದರೆ, ನನ್ನ ಬೇಜಾರಿಗೆ ಅರ್ಥವಿದೆಯೋ ಇಲ್ಲವೋ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ತು ನಝರ್ ಮೆ ಹೈ ಕಿಸಿ ಔರ್ ಕಿ
ತುಝೆ ದೆಖತಾ ಕೋಯಿ ಔರ್ ಹೈ..
ಹೌದು, ಏಕೆಂದರೆ ನೀನಿರುವುದು ಇನ್ನೊಬ್ಬರ ಮನಸ್ಸಿನಲ್ಲಿ. ಆದರೆ, ಅದು ತಿಳಿಯುವಷ್ಟರಲ್ಲಿ ತುಂಬಾ ಸಮಯ ಕಳೆದು ಹೋಗಿತ್ತು. ಇದು ತಪ್ಪೋ ಸರಿಯೋ ಎನ್ನುವ ಗೊಂದಲದಲ್ಲಿ ಮುಳುಗಿ ಹೋಗಿದ್ದೀನಿ. ಅದರಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ ವಿಫಲವಾಗುತ್ತಿದ್ದೇನೆ. ನನಗೂ ಗೊತ್ತು, ಎಷ್ಟೇ ಪ್ರಯತ್ನ ಪಟ್ಟರೂ ಅದು ಫಲಿಸುವುದಿಲ್ಲ ಎಂದು. ಏಕೆಂದರೆ, ಅದು ನಾವು ಹಾಕಿಕೊಳ್ಳುವ ಬಟ್ಟೆಯ ಹಾಗಲ್ಲ ನೋಡು? ಬೇಕಾದಾಗ ಧರಿಸುವುದು, ಬೇಡವಾದಾಗ ಬದಲಿಸಲು. ಅದು ಮೈ ಮೇಲಿನ ಚರ್ಮದ ಥರ ಅದನ್ನು ತೊರೆಯಲೂ ಆಗುವುದಿಲ್ಲ, ಬದಲಾಯಿಸಲೂ ಬರುವುದಿಲ್ಲ.
ತು ಪಸಂದ ಹೈ ಕಿಸಿ ಔರ್ ಕಿ
ತುಝೆ ಮಾಂಗತಾ ಕೋಯಿ ಔರ್ ಹೈ..
ಮೊದಲು ನಿಂಗೊಂದು ವಿಷಯನ ಸ್ಪಷ್ಟಪಡಿಸೋಕೆ ಇಷ್ಟ ಪಡ್ತೀನಿ. ನಾನು ಈ ಪತ್ರ ಬರೀತಿರೋದು ನಿನ್ನ ಮನಸ್ಸಿನಲ್ಲಿ ಇಲ್ಲದಿರೋ ಆಸೇನ ಹುಟ್ಟಿಸೋಕೆ ಅಲ್ಲ. ಹೃದಯದಲ್ಲಿ ಜಾಗ ಕೊಡು ಅಂತ ಕೇಳ್ಳೋಕೂ ಅಲ್ಲ. ನನ್ನ ಭಾವನೆಗಳನ್ನ ಹೇಳ್ಳೋಕೂ ಅಲ್ಲ. ಹಾಗೆ ಮಾಡುವುದು ಸರಿಯಲ್ಲ ಎಂದು ನನಗೂ ಗೊತ್ತು. ಈ ಪತ್ರ ಬರೆದ ಉದ್ದೇಶ ಏನೆಂದರೆ, ಮುಂದಿನ ಜನ್ಮದಲ್ಲಾದರೂ ನಿನ್ನನ್ನು ಎಲ್ಲರಿಗಿಂತ ಮೊದಲು ನಾನೇ ಪ್ರೀತಿಸುತ್ತೇನೆ ಎಂದು ತಿಳಿಸಲು. ಈ ಜನ್ಮದಲ್ಲಿ ನೀನು ಎಲ್ಲೇ ಇರು, ಚೆನ್ನಾಗಿರು, ಇದೇ ನನ್ನ ಆಶಯ..
ಇಂತಿ ನಿನ್ನ ಹಿತೈಷಿ..
* ಈರಯ್ಯ ಉಡೇಜಲ್ಲಿ, ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.