ನೀವೂ ವಿಮಾನ ಹತ್ತಿ…ಬೇರೆಯವರ ಲೈಫ್ ನೋಡೋದು ನಿಮ್ಮ ಕೆಲಸ
Team Udayavani, Mar 10, 2020, 5:25 AM IST
ಇವತ್ತು ಇನ್ಸೂರೆನ್ಸ್ ಇಲ್ಲದೆ ಬದುಕೇ ಇಲ್ಲ ಅನ್ನೋ ರೀತಿ ಆಗಿದೆ. ತಲೆ, ಕಾಲು ಮೂಗು, ಮನೆ, ಸೈಟು ಹೀಗೆ ಬದುಕಿನ ಹಾಗೂ ಬದುಕಲು ಬೇಕಾದ ಎಲ್ಲ ವಸ್ತುಗಳಿಗೂ ವಿಮೆ ಬಂದಿದೆ. ಹೀಗಾಗಿ, ವಿಮಾ ಕ್ಷೇತ್ರದಲ್ಲಿ ಉದ್ಯೋಗಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಕಂಪೆನಿಗಳು ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ಮಾಡುತ್ತಿರುತ್ತವೆ.
ಜಗತ್ತಿನ ಶೇ. 84ರಷ್ಟು ಜನ ವಿಮೆ ಮಾಡಿಸಿಲ್ಲವೆಂದರೆ ನಂಬುವಿರಾ? ಹೌದು. ಕೇವಲ ಶೇ.14ರಷ್ಟು ಜನ ವಿಮೆ ಮಾಡಿಸಿದ್ದಾರಂತೆ. ವಿಮೆಯೆಂಬುದು ಗ್ರಾಹಕ (ವಿಮೆ ಪಡೆಯುವವನು) ಮತ್ತು ಸೇವಾ ಕಂಪೆನಿ (ವಿಮೆ ನೀಡುವವರು) ನಡುವೆ ನಡೆಯುವ ಲಿಖೀತ ಒಪ್ಪಂದ. ಜೀವ ಹಾನಿ, ಅಂಗ ಹಾನಿ, ಅಪಘಾತಗಳು, ಆರೋಗ್ಯ, ಆಸ್ತಿ, ಒಡವೆ ಹೀಗೆ ಎಲ್ಲದಕ್ಕೂ ವಿಮೆ ಸಾಧ್ಯ. ಮಾಸಿಕ ಅಥವಾ ವಾರ್ಷಿಕ ಕಂತುಗಳನ್ನು ಕಟ್ಟಿಸಿಕೊಳ್ಳುವ ಕಂಪೆನಿ, ಗ್ರಾಹಕನು ವಿಮೆ ಕ್ಲೈಮು ಮಾಡಿದಾಗ ಕರಾರಿನ ಅನ್ವಯ ಹಣವನ್ನು ತುಂಬಿಕೊಡುತ್ತದೆ. ಬಹುತೇಕ ಜನರಿಗೆ ವಿಮೆಯ ಮಹತ್ವ ತಿಳಿಯದ ಕಾರಣ, ವಿಮೆಯ ರಕ್ಷಣೆಯಿಂದ ವಂಚಿತರಾಗುತ್ತಾರೆ. ಕಷ್ಟ ಕಾಲದಲ್ಲಿ ನಮ್ಮನ್ನು ಕೈ ಹಿಡಿಯುವುದು ವಿಮೆಯೊಂದೇ. ಇದನ್ನು ಜನರಿಗೆ ತಿಳಿಸಿ, ಅವರ ಮನವೊಲಿಸಿ ಅವರಿಗೆ ಸೂಕ್ಷ್ಮವಾದ ವಿಮೆಯನ್ನು ನೀಡುವುದರಿಂದ ಕಮೀಷನ್ ರೂಪದಲ್ಲಿ ಅಪಾರ ಹಣ ಗಳಿಸುವ ಅವಕಾಶ ಇದೆ. ಸರ್ಕಾರಿ ಸ್ವಾಮ್ಯದ ಎಲ್.ಐ.ಸಿ., ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿಗಳ ಜೊತೆಗೆ ಖಾಸಗಿ ಕಂಪೆನಿಗಳಾದ ಐಸಿಐಸಿಐ ಪ್ರುಡೆನ್ಷಿಯಲ್, ಮ್ಯಾಕ್ಸ್ ನ್ಯೂಯಾರ್ಕ್, ಬಿರ್ಲಾ ಸನ್ ಲೈಫ್, ಬಜಾಜ್ ಅಲೆಯೆಂಜ್, ಟಾಟಾ ಎಐಜಿ, ಎಚ್.ಡಿ.ಎಫ್.ಸಿ ಮೊದಲಾದ ಖಾಸಗಿ ಕಂಪೆನಿಗಳು ಸದಾ ಸೂಕ್ತ ಅಭ್ಯರ್ಥಿಗಾಗಿ ಕಾಯುತ್ತಲೇ ಇರುತ್ತವೆ.
ಹೆಜ್ಜೆ ಮೇಲೊಂದು ಹೆಜ್ಜೆ
ಸಾಮಾನ್ಯವಾಗಿ ಪದವೀಧರರಾದ ಬಳಿಕ ವಿಮಾ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ಆದರೆ 10 + 2 ಮುಗಿಸಿದ ತಕ್ಷಣವೇ, ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರು ಇನ್ಸುರೆನ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇತರೆ ಪದವಿ ಓದುತ್ತಿರುವವರೂ ಪಾರ್ಟ್‌ಟೈಮ್ ವೃತ್ತಿಯಾಗಿ ಇನುÒರೆನ್ಸ್ ಮಾರಾಟ ಮಾಡಬಹುದು. ಐRಈಅ ನಡೆಸುವ ಒಂದು ಸಣ್ಣ ಸಾಮಾನ್ಯ ಪರೀಕ್ಷೆ, ಅದೂ ಆನ್‌ಲೈನ್ ಪರೀಕ್ಷೆ ಬರೆದು ಪಾಸಾಗಿ ಇನ್ಸುರೆನ್ಸ್ ಏಜೆಂಟರಾಗಬಹುದು. ಈ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದವರು ಪದವಿಯ ನಂತರ ಮಾಸ್ಟರ್ ಪದವಿಗೆ ಪ್ರಯತ್ನಿಸಬಹುದು. ಇಲ್ಲಿ ವಿಮೆಗೆ ಸಂಬಂಧಿಸಿ ವಿಷಯಗಳನ್ನು ಬಹಳ ವಿವರವಾಗಿ ಕಲಿಸಲಾಗುತ್ತದೆ. ಜೀವ ವಿಮೆ ಮತ್ತು ಸಾಮಾನ್ಯವಿಮೆಯ ತಣ್ತೀಗಳು, ವಿಮೆ ಕುರಿತಾದ ಕಾನೂನುಗಳು, ವಿಮೆಯ ಅಂಡರ್ ರೈಟಿಂಗ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್, ಕ್ಲೈಮು – ಪರಿಹಾರ ಮೊತ್ತದ ವಿಚಾರ, ಮರುವಿಮೆ ಮತ್ತು ಜೀವ ವಿಮಾ ಉತ್ಪನ್ನಗಳು – ಹೀಗೆ ವಿಮೆಯನ್ನು ಕುರಿತ ಎಲ್ಲ ಆಯಾಮಗಳ ಬಗ್ಗೆ ತಿಳಿಸಲಾಗುತ್ತದೆ. ಮುಂದುವರೆದು, ಇದರಲ್ಲೇ ಎಂ.ಬಿ.ಎ. ಕೂಡ ಮಾಡುವ ಅವಕಾಶವಿದೆ. ಐಇಊಅಐ, Nಐಅ ಬಿರ್ಲಾ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳು ವಿಮೆಯ ವಿಷಯದಲ್ಲಿ ಎಂ.ಬಿ.ಎ. ಅಧ್ಯಯನಕ್ಕೆ ಅವಕಾಶ ನೀಡುತ್ತವೆ.
ಗುರಿ ನಿಖರವಿರಲಿ
ಹಣ ಮಾಡುವ, ಕಮೀಷನ್ ಗಳಿಸುವ ಒಂದೇ ಗುರಿಯಿಂದ ವಿಮೆ ಪಾಲಿಸಿ ಮಾರಾಟಗಾರರಾಗುವುದು ಬೇಡ. ಜನರಿಗೆ ವಿಮೆಯ ಮಹತ್ವವನ್ನು ಅರಿವು ಮಾಡಿಕೊಡುವ ವೃತ್ತಿ ಇದೆಂದು ಅರಿತು ಕೆಲಸ ಆರಂಭಿಸಬೇಕು. ಜನರ ವಿಶ್ವಾಸ, ಆದರ ನಿಮ್ಮದಾಗಿದ್ದರೆ, ನಿಮಗೂ ಜನರ ಒಡನಾಟ ಹಿಡಿಸುವಂತಹದ್ದಾಗಿದ್ದರೆ ಈ ಕ್ಷೇತ್ರ ನಿಮಗೆ ಹೇಳಿ ಮಾಡಿಸಿದ್ದು. ವಿಮಾ ಕ್ಷೇತ್ರದ ಒಳಗೆ ಒಂದಷ್ಟು ಉದ್ಯೋಗಗಳು ಇವೆ. ಕಂಪೆನಿಗಳೂ ಕೂಡ ಸೂಕ್ತ ಅಭ್ಯರ್ಥಿಗಳನ್ನು ಹುಡುಕಾಟ ಮಾಡುತ್ತಿರುತ್ತವೆ. ಸಾಮಾನ್ಯ ಪದವೀಧರರು ಪ್ರವೇಶ ಪರೀಕ್ಷೆ ಬರೆದು ವೃತ್ತಿ ಆರಂಭಿಸಬೇಕು. ಇನುÒರೆನ್ಸ್ ಅಂಡರ್ ರೈಟರ್ – ವಿಮೆಗೆ ಸಲ್ಲಿಸಿ ಅರ್ಜಿಗಳ ಪರಿಶೀಲನೆ, ವಿಮೆ ನೀಡಬಹುದು ಅಂತ ತೀರ್ಮಾನಿಸುವುದು, ಕಂತಿನ ಮೊತ್ತ ನಿರ್ಧರಿಸುವುದು ಇವರ ಕೆಲಸದ ಸ್ವರೂಪ. ಸೇಲ್ಡ್ ಏಜೆಂಟ್‌ನಲ್ಲೂ ನಾನಾ ವಿಭಾಗಗಳೂ ಇವೆ. ರಿಸ್ಕ್ ಕನ್ಸಲ್ಟೆಂಟ್, ಲಾಸ್ ಕಂಟ್ರೋಲ್ ಕನ್ಸಲ್‌ಟೆಂಟ್ ಇತ್ಯಾದಿ. ಇದೇ ರೀತಿ, ಗ್ರಾಹಕಸೇವಾ ಪ್ರತಿನಿಧಿಯಾಗಿಯೂ ಇಲ್ಲಿ ಕೆಲಸ ಮಾಡಬಹುದು.
ಆದಾಯ ವೃತ್ತಿಯಲ್ಲಿ ಪ್ರಗತಿ
ಏಜೆಂಟರಾಗಿ ವೃತ್ತಿ ಆರಂಭಿಸುವ ವ್ಯಕ್ತಿ, 10 ರಿಂದ 12 ಸಾವಿರ ಗಳಿಸಿದರೆ, ಮುಂದೆ 1 ರಿಂದ 2 ಲಕ್ಷ ರೂಪಾಯಿ ಪಡೆಯುವ ಮ್ಯಾನೇಜರ್ ಮಟ್ಟದವರೆಗೆ ಬೆಳೆಯಬಹುದು. ಇಂದು ವಿಮಾ ಕ್ಷೇತ್ರ ಅತಿ ವೇಗವಾಗಿ ಬೆಳೆಯುತ್ತಿರುವ, ಬೇಡಿಕೆ ಇರುವ ಕ್ಷೇತ್ರ. ಮಾರಾಟ ಕಲೆ ಬಲ್ಲವರಿಗೆ ವರದಾನವಿದು. ವಿವಿಧ ವಿಮಾ ಕಂಪೆನಿಗಳ ಅಧ್ಯಯನ, ಸೇವಾಕ್ಷಮತೆ, ಸಂವಹನ ಕೌಶಲ, ಬೆಳೆಯಬೇಕೆಂಬ ಹಂಬಲ – ಇವೆಲ್ಲ ಸೇರಿದರೆ ಊಹೆಗೂ ನಿಲುಕದ ಎತ್ತರಕ್ಕೆ ಬೆಳೆಯಲು ಇಲ್ಲಿದೆ ಅವಕಾಶ.
ಪ್ರೊ ರಘು ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.