ಇಟ್ಸ್ ಎ ಕ್ರೇಜಿ ಕ್ರೇಜಿ ಫೀಲಿಂಗ್!
Team Udayavani, Jan 30, 2018, 3:13 PM IST
ಈ ಪ್ರೀತಿಯ ಭಾವನೆಗಳು ನನಗೆ ಸಂತೋಷಕ್ಕಿಂತ ನೋವನ್ನೇ ಜಾಸ್ತಿ ಕೊಡುತ್ತಿವೆಯಾದರೂ, ಈ ಪ್ರೀತಿಯ ನೋವಿನಲ್ಲೂ ಒಂದು ರೀತಿಯ ವಿಚಿತ್ರವಾದ ಸಂತೋಷವಿದೆ. ಸಿನಿಮಾಗಳಲ್ಲಿ ಒಂದು ಹೀರೋಯಿನ್‌ಗಾಗಿ ಹೀರೋಗಳು ಯಾಕಷ್ಟು ಕಷ್ಟ ಪಡುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ.
ಪ್ರೀತಿ ಎಂಬ ಎರಡಕ್ಷರದ ಪದದಲ್ಲಿ ಅದೆಷ್ಟು ಆನಂದ ತುಂಬಿದೆ ಗೊತ್ತೇ? ಅದರಲ್ಲಿ ಒಂದು ಬಾರಿ ಮುಳುಗಿದರೆ ಮತ್ತೆ ಆ ಬಾವಿಯಿಂದ ಎದ್ದು ಬರುವುದು ಕಷ್ಟಸಾಧ್ಯವೇ ಸರಿ! ನನ್ನವಳ ನಗೆಗೆ ಮರುಳಾಗಿ ನನ್ನ ಪ್ರಪಂಚವನ್ನೇ ಮರೆತು ಅವಳದೇ ನಿತ್ಯಧ್ಯಾನದಲ್ಲಿ ಬದುಕುತ್ತಿದ್ದೇನೆ. ನಾ ಪ್ರೀತಿಸುತ್ತಿರುವ ವಿಷಯ ಗೊತ್ತಿದ್ದರೂ ನನ್ನ ಮುಂದೆ ಅವಳು ನಡೆದುಕೊಳ್ಳುವ ನಡೆಗೆ ಶಹಬಾಷ್ ಎನ್ನಲೇಬೇಕು!
ಹೆಣ್ಣಿನ ಅಂದದ ಪ್ರಪಂಚ ಹೇಗಿರುತ್ತದೋ ನೋಡದೇ ಅಣ್ಣತಮ್ಮ ಎಂದು ಬರೀ ಗಂಡು ಮಕ್ಕಳ ಪ್ರಪಂಚದಲ್ಲಿ ರಾಜನಂತೆ ಬೆಳೆದವನು ನಾನು. ರಾಜರು ಏನನ್ನೂ ಬಯಸಿದರೂ ಆಗಿಂದಾಗ್ಗೆಯೇ ಸಿಗುತ್ತದೆಯಂತೆ. ಹಾಗೆಯೇ ನನ್ನನ್ನು ಕೂಡ ರಾಜನಂತೆ ಯಾವುದೇ ಕಷ್ಟಗಳು ನನ್ನ ಹತ್ತಿರ ಬರದಂತೆ ನನ್ನ ಹೆತ್ತವರು ಸಾಕಿದರು. ನಾನು ಏನನ್ನೂ ಬಯಸಿದರೂ ಅದನ್ನು ತೆಗೆದುಕೊಡುತ್ತಿದ್ದರು. ಆದರೆ ನನಗೆ ಮೊದಲ ಬಾರಿಗೆ ಒಂದು ಹೆಣ್ಣಿನ ಮೇಲೆ ಪ್ರೀತಿಯಾಯಿತು. ಅವಳು ವಸ್ತುವಲ್ಲಾ ಅಲ್ಲವೇ? ಅದಕ್ಕೇ ನಾನು ನನಗೆ ಅವಳು ಬೇಕು ಎಂದು ನನ್ನ ಹೆತ್ತವರ ಬಳಿ ಕೇಳಲಿಲ್ಲ. ನಾನೇ ಬಹಳ ಆಳವಾದ ಪ್ರೀತಿಯಲ್ಲಿ ಬಿದ್ದು ಆ ಪ್ರೀತಿಯ ಭಾವನೆಗಳ ಮಾಯ ಪ್ರಪಂಚದಲ್ಲಿ ಒದ್ದಾಡುತ್ತಿದ್ದೇನೆ. ಈ ಮೊದಲ ಪ್ರೀತಿಯ ಅನುಭವವೂ ನನ್ನನ್ನು ಹಾಗೆಯೇ ಇರಿಸದಂತೆ ರೋಡ್ ರೋಮಿಯೋ ತರಹ ಅವಳ ಹಿಂದೆಯೇ ಯಾವಾಗಲೂ ಸುತ್ತುತ್ತಿರಬೇಕು ಎನ್ನುವಂತೆ ಮಾಡುತ್ತಿದೆ.
ಅವಳು ನನ್ನೆದುರು ನಿಂತು ಪಟಪಟನೆ ಮಾತನಾಡುತ್ತಿದ್ದರೆ, ಸುಮ್ಮನೆ ಕಣೆಪ್ಪೆ ಮುಚ್ಚದಂತೆ ಅವಳನ್ನೇ ಗುರಾಯಿಸಿಕೊಂಡು ನೋಡಬೇಕು ಎನ್ನಿಸುತ್ತಿದೆ! ಅವಳು ನನ್ನ ಕಣ್ಣಿನಿಂದ ಎಷ್ಟೇ ದೂರವಿದ್ದರೂ ಅವಳು ನನಗೆ ಹತ್ತರದಲ್ಲಿರುವಂತೆಯೇ ಕಾಣುತ್ತಾಳೆ. ಅವಳು ನಿಜವಾಗಿ ಹತ್ತಿರದಲ್ಲಿಯೇ ಇದ್ದರೆ, ಇದ್ದಕ್ಕಿದ್ದಂತೆ ವೇಗವಾಗಿ ನನ್ನ ಹೃದಯಬಡಿತ ನನಗೇ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ಈ ಪ್ರೀತಿಯ ಭಾವನೆಗಳು ನನಗೆ ಸಂತೋಷಕ್ಕಿಂತ ನೋವನ್ನೇ ಜಾಸ್ತಿ ಕೊಡುತ್ತಿವೆಯಾದರೂ, ಈ ಪ್ರೀತಿಯ ನೋವಿನಲ್ಲೂ ಒಂದು ರೀತಿಯ ವಿಚಿತ್ರವಾದ ಸಂತೋಷವಿದೆ. ನಾನು ಪ್ರೀತಿಯಲ್ಲಿ ಬೀಳುವವರೆಗೂ ಯಾರ ಬಗೆಗೂ ತಲೆ ಕೆಡಿಸಿಕೊಂಡಿರಲಿಲ್ಲ! ಆದರೆ ನನಗೆ ಮೊದಲ ಬಾರಿ ಈ ರೀತಿಯ ವಿಚಿತ್ರವಾದ ಅನುಭವಗಳು ಆಗುತ್ತಿರುವುದರಿಂದ ನಾನೂ ಪ್ರೀತಿಯ ಹುಚ್ಚನಾಗಿ ಬಿಟ್ಟಿದ್ದೇನೆ ಎಂಬ ಅನುಮಾನವು ನನ್ನ ಮೇಲೆ ನನಗೇ ಶುರುವಾಗಿದೆ! ಸಿನಿಮಾಗಳಲ್ಲಿ ಒಂದು ಹೀರೋಯಿನ್‌ಗಾಗಿ ಹೀರೋಗಳು ಯಾಕಷ್ಟು ಕಷ್ಟ ಪಡುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ. ನಾನು ಸಹ ನನ್ನ ಹೀರೋಯಿನ್‌ಗಾಗಿ ಏನು ಬೇಕಾದರೂ ಮಾಡಬಲ್ಲೆ ಎನ್ನಿಸುತ್ತಿದೆ! ಏನೇ ಆದರೂ ಪ್ರೀತಿ ಮಾಡಲು ಆರಂಭಿಸಿದ ದಿನದಿಂದ ನನಗೆ ತುಂಬಾ ಕ್ರೇಜಿ ಕ್ರೇಜಿ ಯೋಚನೆಗಳು ಬರುತ್ತಿವೆ. ನನ್ನ ಹಾಗೆಯೇ ಎಲ್ಲರಿಗೂ ಮೊದಲ ಪ್ರೀತಿಯು ಕ್ರೇಜಿ ಕ್ರೇಜಿ ಫೀಲಿಂಗ್ಸ್ ಒದಗಿಸಿರುತ್ತದೆ!
ಗಿರೀಶ್ ಚಂದ್ರ ವೈ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್