ಟೇಸ್ಟ್‌ ಮ್ಯಾಚ್‌ ನೋಡ್ತೀರಾ?

ಉದ್ಯೋಗ ಮಾರ್ಗದರ್ಶಿ : ಆಹಾರ ಪ್ರಪಂಚದ ರುಚಿ ವಿಮರ್ಶಕ!

Team Udayavani, Apr 9, 2019, 6:00 AM IST

Josh-Food

ಯಾವ ರೀತಿ ಒಬ್ಬ ಸಿನಿಮಾ ವಿಮರ್ಶಕ ಸಿನಿಮಾದ ಪಾಸಿಟಿವ್‌ ಮತ್ತು ನೆಗೆಟಿವ್‌ ಅಂಶಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾನೋ ಅದೇ ರೀತಿ ಹೋಟೆಲ್‌, ಖಾನಾವಳಿಗಳ ಫ‌ುಡ್‌ ಮೆನು ಹೇಗಿದೆ, ಅಲ್ಲಿನ ಸ್ಪೆಷಾಲಿಟಿ ಏನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವವನು ಆಹಾರ ವಿಮರ್ಶಕ! ರುಚಿಗ್ರಹಣಾ ಚತುರರಿಗೆ ಸರಿಹೊಂದುವ ಕೆಲಸವಿದು!

ಉದ್ಯೋಗ ಕ್ಷೇತ್ರದಲ್ಲಿ ಅದೆಷ್ಟೋ ವಿಭಿನ್ನ ತೆರನಾದ ಕೆಲಸಗಳಿವೆ. ಅವುಗಳಲ್ಲೊಂದು ಆಹಾರ ವಿಮರ್ಶಕ ಅಂದರೆ ಫ‌ುಡ್‌ ಕ್ರಿಟಿಕ್‌! ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಿನಿಮಾ ವಿಮರ್ಶೆಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನೋಡಿರಬಹುದು. ಹೊಸ ಸಿನಿಮಾ ಚೆನ್ನಾಗಿದೆಯಾ ಇಲ್ಲವಾ? ಸಿನಿಮಾದ ಪಾಸಿಟಿವ್‌ ಮತ್ತು ನೆಗೆಟಿವ್‌ ಅಂಶಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಅದೇ ರೀತಿ ಒಬ್ಬ ಆಹಾರ ವಿಮರ್ಶಕ ಹೋಟೆಲ್‌, ಖಾನಾವಳಿಗಳ ಫ‌ುಡ್‌ ಮೆನು ಹೇಗಿದೆ, ಅಲ್ಲಿನ ಸ್ಪೆಷಾಲಿಟಿ ಏನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾನೆ. ಅಡುಗೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೃಶ್ಯ ಮಾಧ್ಯಮಗಳಲ್ಲಿ ಹೆಚ್ಚು ವೀಕ್ಷಕರನ್ನು ಆಕರ್ಷಿಸಿರುವುದು ಈ ಕ್ಷೇತ್ರದ ಜನಪ್ರಿಯತೆಯನ್ನು ಸೂಚಿಸುತ್ತದೆ. ‘ಮಾಸ್ಟರ್‌ ಶೆಫ್’ ರಿಯಾಲಿಟಿ ಶೋ ಜಗತ್ತಿನಾದ್ಯಂತ ಜನಮನ್ನಣೆ ಪಡೆದಿರುವುದನ್ನು ನಾವಿಲ್ಲಿ ನೆನೆಯಬಹುದು.

ಬೇಕಾದ ವಿದ್ಯಾರ್ಹತೆಯೇನು?
ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇಕಾದ ವಿದ್ಯಾರ್ಹತೆ ಎಂದರೆ ಜರ್ನಲಿಸಮ್‌ ಅಥವಾ ಹೊಟೇಲ್‌ ಮ್ಯಾನೇಜ್‌ಮಂಟ್‌ನಲ್ಲಿ ಪದವಿ. ಪತ್ರಿಕೋದ್ಯಮ ಹಿನ್ನೆಲೆ ಇದ್ದರೆ ಬರವಣಿಗೆ ಕಲಿತಿರುತ್ತಾರೆ ಮತ್ತು ರುಚಿ ಪ್ರಪಂಚದ ಅನುಭವವನ್ನು ಜನರಿಗೆ ಮುಟ್ಟಿಸಲು ಸಮರ್ಥರಾಗಿರುತ್ತಾರೆ ಎನ್ನುವುದು ಅದಕ್ಕೆ ಕಾರಣ. ಹೊಟೇಲ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆದವರು ಹೊಟೇಲ್‌ ಉದ್ಯಮದ ಮೂಲಸೂತ್ರಗಳನ್ನು ಅರಿತಿರುತ್ತಾರೆ. ಅದರ ಜತೆಗೆ ಕ್ರಿಯಾಶೀಲ ಬರವಣಿಗೆಯನ್ನು ಕಲಿತರೆ ಉತ್ತಮ ಫ‌ುಡ್‌ ಕ್ರಿಟಿಕ್‌ ಆಗಿ ಬೆಳೆಯಬಲ್ಲರು. ಇವರು ಡಿಪ್ಲೊಮ ಇನ್‌ ಫ‌ುಡ್‌ ಪ್ರಿಸರ್ವೇಷನ್‌, ಪಿ.ಜಿ. ಡಿಪ್ಲೊಮ ಇನ್‌ ಕುಕರಿ ಆ್ಯಂಡ್‌ ಕ್ಯಾಟರಿಂಗ್‌ ಕೂಡ ಮಾಡಬಹುದು.

ಅವಕಾಶಗಳು
ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದರಿಂದ ಮತ್ತು ಎಲ್ಲೆಡೆ ಆಹಾರ ಕೇಂದ್ರಗಳು ತೆರೆಯುತ್ತಿರುವುದರಿಂದ ಫ‌ುಡ್‌ ಕ್ರಿಟಿಕ್‌ಗಳಿಗೆ ಬೇಡಿಕೆಯಿದೆ. ಮಾಧ್ಯಮಗಳಲ್ಲಿ ಆಹಾರ ವಿಮರ್ಶಕರಿಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ದಿನಪತ್ರಿಕೆ, ವಾರಪತ್ರಿಕೆ, ಆಹಾರದ ವಿಷಯಗಳಿಗೆಂದೇ ಮೀಸಲಾದ ನಿಯತಕಾಲಿಕೆಗಳು, ಪ್ರವಾಸಿ ಕೈಪಿಡಿಗಳು, ದೃಶ್ಯ ಮಾಧ್ಯಮ ಮತ್ತು ಇಂಟರ್‌ನೆಟ್‌ ಕಂಪನಿಗಳಲ್ಲಿ ಫ‌ುಡ್‌ಕ್ರಿಟಿಕ್‌ಗಳು ಕೆಲಸ ಮಾಡಬಹುದು. ಇದಷ್ಟೇ ಅಲ್ಲದೆ ಫ‌ುಡ್‌ ಎಡಿಟರ್‌, ಫ್ರೀಲಾನ್ಸ್‌ ಫ‌ುಡ್‌ ರೈಟರ್‌, ರೆಸ್ಟೋರೆಂಟ್‌ ರಿವ್ಯೂವರ್‌, ಸ್ಟಾಫ್ ಫ‌ುಡ್‌ ರೈಟರ್‌, ಫ‌ುಡ್‌ ಕಾಲಮಿಸ್ಟ್‌ ಆಗಿಯೂ ಇವರು ಕೆಲಸ ಮಾಡಬಹುದು. ಅಲ್ಲದೆ ಟಿ.ವಿ ಕಾರ್ಯಕ್ರಮಗಳನ್ನೂ ನಡೆಸಿಕೊಡಬಹುದು.

ಫ‌ುಡ್‌ ಕ್ರಿಟಿಕ್‌ ಜವಾಬ್ದಾರಿ
ಇಂದಿನ ಮಾಹಿತಿಯುಗದಲ್ಲಿ ಹೋಟೆಲ್‌ ಇರಲಿ, ದರ್ಶಿನಿ ಇರಲಿ ಯಾವುದೇ ತಿನಿಸಿನ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಜನರು ಇಂಟರ್‌ನೆಟ್‌ನಲ್ಲಿ ಆ ಸ್ಥಳದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು, ಅನಿಸಿಕೆಗಳನ್ನು ಹುಡುಕಾಡುತ್ತಾರೆ. ಇಲ್ಲಿ ಆಹಾರ ವಿಮರ್ಶಕನ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ. ಜವಾಬ್ದಾರಿ ಇರುವುದರಿಂದ, ನಿಖರವಾದ, ಪ್ರಾಮಾಣಿಕ, ಪೂರ್ವಗ್ರಹ ಪೀಡಿತವಲ್ಲದ ವಿಮರ್ಶೆಯನ್ನು ಆಹಾರ ವಿಮರ್ಶಕ ನೀಡಬೇಕಾಗುತ್ತದೆ. ಇದು ಕೇವಲ ಓದುಗರಿ ಗಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ವಿಮರ್ಶಕನಿಗೂ ನೆರವಾಗುತ್ತದೆ. ಆಹಾರದ ಬಗ್ಗೆ ಫ‌ುಡ್‌ ಕ್ರಿಟಿಕ್‌ ನೀಡುವ ವರದಿ ಖಂಡಿತ ಸಾರ್ವಜನಿಕ ವಿಮರ್ಶೆಗೊಳಪಡುತ್ತದೆ. ಆದುದರಿಂದ ಆತನಿಗೆ ಸಾರ್ವಜನಿಕರಿಗೆ ಏನು ಇಷ್ಟವಾಗುತ್ತದೆ ಎನ್ನುವುದರ ಅಂದಾಜಿರಬೇಕು. ಜೊತೆಗೆ ಪಾಕ ಕಲೆಯ ಬಗ್ಗೆ ಮಾಹಿತಿ ಇರಬೇಕು. ಹೊಸರುಚಿಗಾಗಿ ಹಾತೊರೆಯುವ, ಹುಡುಕಾಟದ ಮನೋಭಾವವಿರಬೇಕು.

ಬೇಕಾದ ಕೌಶಲ್ಯಗಳು
– ಓದುಗರ ನಿರೀಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಹಾರದ ಗುಣಮಟ್ಟ, ರೆಸ್ಟೋರೆಂಟ್‌ನ ಸೇವಾ ಮನೋಭಾವವನ್ನು ಓದುಗರಿಗೆ ತಲುಪಿಸುವ ಉತ್ಸಾಹ ಇರಬೇಕು, ತಿಳಿವಳಿಕೆ ಇರಬೇಕು.
– ಸೃಜನಶೀಲ ಬರವಣಿಗೆ
– ಹೊಸ ಹೊಸ ಜಾಗಗಳಿಗೆ ಹೋಗುವುದು, ಅಲ್ಲಿನ ಆಹಾರ ಪದ್ಧತಿಯನ್ನು ತಿಳಿದುಕೊಳ್ಳುವ ಆಸಕ್ತಿ

— ರಘು ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.