ಕೆಪಿಓ: ಬುದ್ಧಿವಂತರಿಗೆ ಮಾತ್ರ…
Team Udayavani, Nov 26, 2019, 1:46 AM IST
ಬಿಪಿಓ ಅಂದರೆ ರಾತ್ರಿ ಎಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಯಾವುದೋ ಕಂಪನಿಯ ಪರವಾಗಿ ಗ್ರಾಹಕರ ಸುಖದುಃಖಗಳನ್ನು ಕೇಳುವ ಕೆಲಸ. ಇದು ಸ್ವಲ್ಪ ಹಳೆಯದ್ದಾಯಿತು. ಈಗ ಇದೇ ರೀತಿ ಕೆಪಿಓ ಬಂದಿದೆ. ಇದು ಮಾತಿಗಿಂತ ಕೃತಿ ಲೇಸು ಅನ್ನುತ್ತದೆ. ಅಂದರೆ, ನಿಮ್ಮಲ್ಲಿರುವ ಬುದ್ಧಿವಂತಿಕೆ, ಜ್ಞಾನವನ್ನು ಕಂಪನಿ ತನ್ನ ಪುರೋಭಿವೃದ್ಧಿಗೆ ಬಳಸಿಕೊಳ್ಳುತ್ತದೆ. ಹೀಗಾಗಿ, ಕೆಪಿಓ ಕ್ಷೇತ್ರದಲ್ಲಿ ಬಹಳ ಡಿಮ್ಯಾಂಡ್ ಇದೆ.
ಅವು ತೊಂಭತ್ತರ ದಶಕದ ಕೊನೆಯ ದಿನಗಳು. ಇಂಟರ್‌ನೆಟ್ ಪ್ರಚ್ಛನ್ನ ಶಕ್ತಿ ಪಡೆದು ನಾಗಾಲೋಟ ಪ್ರಾರಂಭಿಸಿತ್ತು. ನಗರಗಳಲ್ಲಿ ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡಿ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದ ಯುವಕ -ಯುವತಿಯರೆಲ್ಲ ಬಿಪಿಓ (Business Process Outsourcing) ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಹಾತೊರೆಯುತ್ತಿದ್ದರು.
ಅಂದಿನ ದಿನಗಳಲ್ಲಿ ಯಾವ ಹಿರಿಯರನ್ನು ಮಾತನಾಡಿಸಿದರೂ, ‘ನಮ್ಮ ಮಗ ಬಿಪಿಓನಲ್ಲಿ ಕೆಲಸ ಮಾಡುತ್ತಾನೆ. ನಮ್ಮ ಸೊಸೆ ಬಿಪಿಓನಲ್ಲಿದ್ದಾಳೆ’ ಎಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನವಿರಾದ ಇಂಗ್ಲೀಷ್, ವಿದೇಶೀಯರೊಂದಿಗೆ ಸಂಭಾಷಣೆ, ವಿಚಾರ ವಿನಿಮಯ, ಸಭ್ಯ ವಾತಾವರಣ, ಕೈತುಂಬಾ ಸಂಬಳ, ಕೆಲವೊಮ್ಮೆ, ತರಬೇತಿಗಾಗಿ ವಿದೇಶ ಪ್ರಯಾಣಕ್ಕೂ ಅವಕಾಶ…. ಹೀಗೆ ಉದ್ಯೋಗ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸಿದ BPO- ಬ್ಯುಸಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್ ಕ್ಷೇತ್ರ, ಭಾರತದಲ್ಲಿ ಬಹು ಬೇಗ ನೆಲೆಯೂರಿ, ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿತ್ತು.
ಹೆಚ್ಚಿನ ವಿದ್ಯಾರ್ಹತೆಯನ್ನೇನೂ ಬಯಸದ BPOಗಳು ಬಹುಬೇಗ ವ್ಯವಹಾರದ ಮುಖ್ಯವಾಹಿನಿಗೆ ಬಂದವು. ಉದ್ಯಮ ಅಥವಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯನ್ನು ವಿಸ್ತರಿಸಲು ಬಳಸಿಕೊಳ್ಳುತ್ತಿದ್ದ ಹೈಟೆಕ್ ವಿಧಾನವೇ ಆಕOಆಗಿತ್ತು. ಉತ್ಪಾದನೆಯನ್ನಷ್ಟೇ ಮಾಡುತ್ತಿದ್ದ ಉದ್ಯಮಗಳು ಮಾರಾಟ ವ್ಯವಹಾರದ ಜವಾಬ್ದಾರಿ, ವ್ಯಾಪಾರ ಒಪ್ಪಂದದ ಪ್ರಾರಂಭ, ವಿಸ್ತರಣೆ, ಲಾಭ-ನಷ್ಟಗಳ ಲೆಕ್ಕಾಚಾರ, ಭವಿಷ್ಯದ ಅವಶ್ಯಕತೆ ಮುಂತಾದ ವ್ಯಾವಹಾರಿಕ ಕೆಲಸಗಳನ್ನು ಬಿಪಿಓ ಗಳಿಗೆ ಒಪ್ಪಿಸಿ, ಬಂದ ಲಾಭವನ್ನು ಅನುಭವಿಸುತ್ತಾ, ಉದ್ಯಮವನ್ನು ವಿಸ್ತರಿಸುತ್ತಾ ನಡೆದು ಎರಡು ದಶಕಗಳೇ ಕಳೆದಿವೆ.
ಈಗ, ಬಿಪಿಓಗಳಂತೆಯೇ ಕೆಲಸ ನಿರ್ವಹಿಸುವ, ಆದರೆ ಉನ್ನತ ಮತ್ತು ನಿರ್ದಿಷ್ಟ ಅಧ್ಯಯನ, ಹೆಚ್ಚಿನ ಕೌಶಲ್ಯ ಹೊಂದಿದವರನ್ನು ಬಳಸಿಕೊಂಡು ವ್ಯಾಪಾರ – ವ್ಯವಹಾರಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಕೆಪಿಓಗಳು ಅಸ್ತಿತ್ವಕ್ಕೆ ಬಂದಿವೆ. ಉನ್ನತ ಅಧ್ಯಯನ ಮಾಡಿದ, ವಿಶೇಷ ಕೌಶಲ್ಯ ಹೊಂದಿದ ಮತ್ತು ಸಮಸ್ಯೆ ಬಿಡಿಸುವ ಜ್ಞಾನ ಹೊಂದಿದ ಬುದ್ಧಿವಂತರಿಗೆ ಮಾತ್ರ ಕೆಪಿಓ ಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ.
ಏನಿದು ಕೆ.ಪಿ.ಓ?
ಕೆ.ಪಿ.ಓ ಎಂದರೆ ನಾಲೆಡ್ಜ್ ಪ್ರೊಸೆಸ್ ಔಟ್‌ಸೋರ್ಸಿಂಗ್ (Knowledge Process Outsourcing) ಎಂದರ್ಥ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ, ನಿಮಗಿರುವ ಉನ್ನತ ಜ್ಞಾನ ಮತ್ತು ಕೌಶಲ್ಯವನ್ನು ಉದ್ಯಮ ಕಂಪನಿಗಳ ಏಳಿಗೆಗೆ ತ್ವರಿತವಾಗಿ ಬಳಸಿ, ಅವರ ವ್ಯಾಪಾರ-ಲಾಭಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿ, ಉನ್ನತೀಕರಿಸಿ ಲಾಭ ತಂದುಕೊಡುವ ಕೆಲಸವನ್ನು ಸ್ಥೂಲವಾಗಿ ಕೆ.ಪಿ.ಓಎನ್ನುತ್ತೇವೆ.
ಈ ಕ್ಷೇತ್ರದಲ್ಲಿ ಕೆಲಸಮಾಡಲು ಅಪಾರ ವಿಷಯ ಜ್ಞಾನ, ಕ್ರಿಟಿಕಲ್ ಥಿಂಕಿಂಗ್, ಮಾಹಿತಿ ಸಂಗ್ರಹಣಾ ಕೌಶಲ್ಯ, ವೈಜ್ಞಾನಿಕ ಮತ್ತು ವೇಗದ ಚಿಂತನೆ, ಉತ್ಕೃಷ್ಟ ಬರಹ ಕೌಶಲ್ಯ, ಮಾಹಿತಿ ವಿಶ್ಲೇಷಣೆ ಮತ್ತು ಶುದ್ಧವಾದ ಪ್ರಸೆಂಟೇಶನ್ ನೀಡುವ ಸಾಮರ್ಥ್ಯವಿರಬೇಕು. ತಾವು ಕಲಿತಿರುವುದನ್ನು ಇತರರಿಗೆ ಕಲಿಸುವುದನ್ನೂ ತಿಳಿದಿರಬೇಕು.
ಬಿಪಿಓ ಗಳಲ್ಲಿ ಕೇವಲ ವ್ಯವಹಾರಕ್ಕೆ ಸಂಬಂಧಿಸಿದ ಮಾತು ನಡೆಯುತ್ತಿತ್ತು. ಆದರೆ, ಕೆಪಿಓನಲ್ಲಿ ಹಾಗಲ್ಲ. ಈ ಕ್ಷೇತ್ರದಲ್ಲಿ ಕೆಲಸಗಳು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಕಾನೂನಿನಂತಹ ಸಂಕೀರ್ಣ ವಿಷಯಗಳನ್ನೊಳಗೊಂಡಿರುತ್ತವೆ. ಉನ್ನತ ಮಟ್ಟದ ತಿಳುವಳಿಕೆ ಮತ್ತು ಕೌಶಲ್ಯದ ತಳಹದಿಯ ಮೇಲೆ ನಡೆಯುತ್ತವೆ.
ಯಾವಯಾವ ಕೆಲಸ?
ಹಣಕಾಸು ವ್ಯವಹಾರ, ಸಂಶೋಧನೆ ಮತ್ತು ಅಭಿವೃದ್ಧಿ, ಹಣ ಹೂಡುವಿಕೆ, ಮಾಹಿತಿ ವಿಶ್ಲೇಷಣೆ, ಕಾನೂನ ಸೇವೆ, ಆರೋಗ್ಯ, ಮುಂದುವರೆದ ವೆಬ್ ಅಪ್ಲಿಕೇಶನ್ಸ್, ಮೆಡಿಕಲ್ ಟ್ರಾನ್ಸಿಕ್ರಿಪ್‌ಶನ್, ರೈಟಿಂಗ್ ಅಂಡ್ ಕಂಟೆಂಟ್ ಡೆವಲಪ್‌ಮೆಂಟ್, ಫಾರ್ಮಾಸ್ಯುಟಿಕಲ್ಸ್, ಬಯೋಟಿಕ್ನಾಲಜಿ, ಕನ್ಸಲ್ಟೆನ್ಸಿ ಅಂಡ್ ಟ್ರೈನಿಂಗ್, ಡಿಸೈನ್, ನೆಟವರ್ಕ್ ಮ್ಯಾನೇಜ್‌ಮೆಂಟ್, ಬ್ಯುಸಿನೆಸ್ ಎಸ್ಟಾಬ್ಲಿಷ್‌ಮೆಂಟ್, ಸಾಗರೋತ್ತರ ಒಪ್ಪಂದ, ಎಂಪ್ಲಾಯ್ ಸ್ಕಿಲ್ ಎಕ್ಸ್‌ಚೇಂಜ್ ಕ್ಷೇತ್ರಗಳು ಕೆಪಿಓ ವ್ಯಾಪ್ತಿಗೆ ಬರುತ್ತವೆ.
ಆಯಾ ವಿಷಯಕ್ಕೆ ಸಂಬಂಧಿಸಿದ ಉನ್ನತ ಜ್ಞಾನ ಹೊಂದಿರುವ ಎಲ್ಲರಿಗೂ ಆ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಬಳ ತರುವ ಕೆಲಸಗಳಿವೆ. ಸಂಬಳ ಎಷ್ಟಿರುತ್ತದೆ ಎಂದರೆ, ಉದಾಹರಣೆಗೆ ಜ್ಞಾನ ಮತ್ತು ಕೌಶಲ್ಯ ಹೊಂದಿದ ಕೆಲಸಗಾರನಿಗೆ ಅಮೆರಿಕದಲ್ಲಿ ಗಂಟೆಗೆ 500 ಡಾಲರ್ ಸಂಬಳ ನೀಡಿದರೆ ನಮ್ಮಲ್ಲಿ 100 ಡಾಲರ್ ಸಿಗುತ್ತದೆ.
ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಾಮೆಡಿಕಲ್, ಆರ್ಕಿಟೆಕ್ಚರ್, ಗಣಿತ, ವಿಜ್ಞಾನ, ಜೀವಶಾಸ್ತ್ರ, ಭೌತಶಾಸ್ತ್ರ, ಕಾನೂನು, ಮ್ಯಾನೇಜ್‌ಮೆಂಟ್, ಪ್ಲಾನಿಂಗ್, ಬ್ಯಾಂಕಿಂಗ್, ವಾಣಿಜ್ಯ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಕೆಪಿಓಗಳಲ್ಲಿ ಆದ್ಯತೆ ನೀಡಲಾಗುತ್ತದೆ. ರಾಕೆಟ್ ವೇಗದಲ್ಲಿ ಬೆಳೆಯುತ್ತಿರುವ ದೈನಂದಿನ ಅಗತ್ಯಗಳನ್ನು ಸರಿಯಾದ ಸಮಯದಲ್ಲಿ ಪೂರೈಸಲು ಉದ್ಯಮ -ಸರ್ಕಾರಗಳು ಹರಸಾಹಸ ಮಾಡುತ್ತಿವೆ.
ಅವರ ಕೆಲಸಗಳಿಗೆ ಕೈಜೋಡಿಸಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡುವಂತೆ ಉದ್ಯಮಗಳಿಗೆ ಯೋಜನೆ ಒದಗಿಸುವಲ್ಲಿ ಕೆಪಿಓಗಳು ಪ್ರಮುಖ ಪಾತ್ರ ವಹಿಸುತ್ತವೆ. ಲ್ಯಾಟಿನ್ ಅಮೆರಿಕಾ, ಆಸ್ಟ್ರೇಲಿಯಾ, ಸಿಂಗಾಪೂರ್, ಯುರೋಪ್, ಕೆನಾಡಾ, ಜಪಾನ್‌ಗಳ ಕೆಪಿಓಗಳಿಗೆ ಅಪಾರ ಸಂಖ್ಯೆಯ ಬುದ್ಧಿವಂತರ ಅವಶ್ಯಕತೆ ಇದೆ.
ಅಂಕಿ-ಅಂಶದ ಪ್ರಕಾರ ವಿಶ್ವದಲ್ಲಿ ಕೆಪಿಓ ಉದ್ಯಮದ ವಾರ್ಷಿಕ ವಹಿವಾಟು 2025 ರ ವೇಳೆಗೆ 100 ಬಿಲಿಯನ್ ಡಾಲರ್‌ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 2015 ರಲ್ಲಿ ಭಾರತದ ಕೆಪಿಓ ಮಾರುಕಟ್ಟೆ 30 ಬಿಲಿಯನ್ ಡಾಲರ್‌ನಷ್ಟಿದ್ದು, 2022ರ ವೇಳೆಗೆ 45 ಬಿಲಿಯನ್ ಡಾಲರ್‌ನಷ್ಟಗಲಿದೆ ಎನ್ನುವ ಅಂದಾಜಿದೆ. ಪ್ರತೀ ವರ್ಷ ವಿಜ್ಞಾನ, ತಂತ್ರಜ್ಞಾನ, ಕಾನೂನೂ, ವಾಸ್ತುಶಿಲ್ಪ ಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಗಣಿತ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪದವಿ ಮತ್ತು ಕೌಶಲ್ಯ ಗಳಿಸುತ್ತಿರುವುದು ಕೆಪಿಓಗಳಿಗೆ ವರವಾಗಿ ಪರಿಣಮಿಸಿದೆ.
ಎಲ್ಲೆಲ್ಲಿ ಕೆಲಸ?
ಬುದ್ಧಿವಂತರ ಜ್ಞಾನ ಮತ್ತು ಕೌಶಲ್ಯಗಳೆರಡನ್ನೂ ಬಳಸಿಕೊಳ್ಳುವ ಜೆನ್ ಪ್ಯಾಕ್ಟ್, ಇ ವ್ಯಾಲ್ಯೂ ಸರ್ವ್, ಉಗಮ್ ಸಲೂಷನ್ಸ್, ಗNಖ ಗ್ಲೋಬಲ್, 24/7 ಕಸ್ಟಮರ್, ಐಇಐಇಐ ಒನ್ ಸೋರ್ಸ್, ಸರ್ವಿಸ್ ಹೋಲ್ಡಿಂಗ್, ಕೋಪಲ್ ಪಾರ್ಟ್‌ನರ್, ಪಂಜಿ¿å3, ವಿಪೊ›, ಇನ್ಫೋಸಿಸ್, ಟಿಸಿಎಸ್, ಹೆಚ್‌ಸಿಎಲ್, ಐಬಿಎಮ್ ದû…, ಫಸ್ಟ್ ಸೋರ್ಸ್, ಆದಿತ್ಯ ಬಿರ್ಲಾ ಮಿನಾಕ್ಸ್ ವರ್ಲ್ಡ್ವೈಡ್‌ಗಳು ಸಮರ್ಥ ಅಭ್ಯರ್ಥಿಗಳಿಗೆ ಕೆಲಸನೀಡಿ ಉತ್ತಮ ಸಂಬಳವನ್ನೂ ನೀಡುತ್ತಿವೆ. ಭಾರತದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಕೆಪಿಓ ಕೆಲಸಗಾರರಿದ್ದು ತಿಂಗಳ ಸಂಬಳ 50 ಸಾವಿರದಿಂದ 2 ಲಕ್ಷರೂವರೆಗೂ ಇದೆ. 2025 ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯ ಗುರಿ ಹೊಂದಿರುವ ನಮಗೆ ಇನ್ನೂ ಹೆಚ್ಚಿನ ಸಂಖ್ಯೆಯ ಕೆಪಿಓ ತಜ್ಞರ ಅವಶ್ಯಕತೆ ಇದೆ.
– ಗುರುರಾಜ್ ಎಸ್.ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.