ಈ ಸರ್ವೀಸ್‌ ‘ನಂದು ಅಣ್ಣಾ…’

ಸೇವಾ ಕರ್ತರು

Team Udayavani, Nov 26, 2019, 1:29 AM IST

Josh—Seve-730

ಊರು ಅಂದ ತಕ್ಷಣ ಯುವಕರಲ್ಲಿ ಹೊಸ ಹೊಸ ಆಲೋಚನೆಗಳು ಹೊಸ ಹೊಸ ಯೋಜನೆಗಳು ನಿತ್ಯ ತಲೆಯಲ್ಲಿ ಹರಿದಾಡುತ್ತಿರುತ್ತವೆ. ನಮ್ಮ ಊರಿಗೆ ನಾವು ಏನಾದರೂ ಮಾಡಬೇಕು ಅಂದುಕೊಳ್ಳುತ್ತಾರೆಯೇ ಹೊರತು ಏನೂ ಮಾಡಲು ಮುಂದಾಗುವುದಿಲ್ಲ. ಆದರೆ, ಶಿವಾನಂದ ಗಾಯಕವಾಡ್‌ ಹಾಗಿಲ್ಲ. ತನ್ನದೇ ತಂಡ ಕಟ್ಟಿ, ಹಳ್ಳಿ ಹಳ್ಳಿ ಸುತ್ತಿ ಸಮಾಜ ಸೇವೆಗೆ ಮುಂದಾಗಿದ್ದಾರೆ.

ರಬಕವಿಯ ಬನಹಟ್ಟಿಗೆ ಬಂದು ನಂದು ಅಣ್ಣಾ ಯಾರು ಅಂತ ಕೇಳಿ?
‘ಏನಾಗಬೇಕಿತ್ತು, ಏನಾದರೂ ಸಹಾಯ ಬೇಕಿತ್ತ?’ ಹೀಗಂತ ಒಂದು ಯುವ ತಂಡವೇ ನಿಮ್ಮನ್ನು ಕೇಳಿದರೆ ಆಶ್ಚರ್ಯವಿಲ್ಲ. ಈ ನಂದು ಅಣ್ಣಾ ಅಂದರೆ ಮತ್ಯಾರು ಅಲ್ಲ ಅದೇ ಊರಿನ ಶಿವಾನಂದ ಗಾಯಕವಾಡ ಅಂತ. ನಂದು ಅಣ್ಣಾಯ ಎಂಬುದು, ಊರಿನವರು ಅವರಿಗಿಟ್ಟ ಪ್ರೀತಿ ಹೆಸರು.

ಅವರ ನೇತೃತ್ವದಲ್ಲಿ ಶಿವು ಗುಂಡಿ, ರಾಚು ಶಿರೋಳ, ಸದಾಶಿವ ತಟಕೋಟಿ, ವಿಜಯ್‌ ಬಾಗೇವಾಡಿ, ರವಿ ಕೊರ್ತಿ, ಸಚಿನ್‌ ಗೋಲಬಾವಿ, ಶ್ರೀಶೈಲ್‌ ಕೊಪ್ಪದ, ಸಚಿನ್‌ ಕಾಟ್ಕರ, ವಿರೂಪಾಕ್ಷಯ್ಯ ಮಠದ, ರವಿ ಜವಳಗಿ, ಧರೇಶ ಕುಂಬಾರ, ಬಸವರಾಜ ಮನ್ಮಿ ಹೀಗೆ ಒಂದಷ್ಟು ಜನರ ತಂಡವಿದೆ. ಇವರೆಲ್ಲ, ಬಿಡುವಿದ್ದಾಗ, ಅದರಲ್ಲೂ ಶನಿವಾರ, ಭಾನುವಾರಗಳಂದು ಸೇವೆಗೆ ನಿಲ್ಲುತ್ತಾರೆ. ಊರಿನ ಅಭಿವೃದ್ಧಿ, ಮಕ್ಕಳಲ್ಲಿ ದೇಶ ಪ್ರೇಮ-ಸ್ವತ್ಛತೆಯ ಅರಿವು, ಯುವಕರಲ್ಲಿ ರಾಷ್ಟ್ರೀಯತೆ ಕುರಿತು ಜಾಗೃತಿ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ಊರು ಅಲೆಯುತ್ತ ಸದಾ ಒಂದಿಲ್ಲ ಒಂದು ಚಟುವಟಿಕೆಯನ್ನು ಮಾಡುತ್ತಲೇ ಇರುತ್ತಾರೆ.

ಗಾಯಕವಾಡ್‌ ಅವರು ತೆರಿಗೆ ಸಲಹೆಗಾರರು. ಬಿಡುವಿನ ವೇಳೆಯನ್ನು ಈ ಸಮಾಜ ಸೇವೆಗೆ ಅಂತ ತೆಗೆದಿಟ್ಟಿದ್ದಾರೆ. ಇವರ ತಂಡದಲ್ಲಿ ಡಾಕ್ಟರ್‌, ವಕೀಲರು, ಉದ್ದಿಮೆದಾರರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ರಂಗದಲ್ಲಿ ಕೆಲಸ ಮಾಡುವವರು ಸಾಥ್‌ ನೀಡುತ್ತಿದ್ದಾರೆ. ರಜೆಗೆಂದು ಊರಿಗೆ ಬರುವ ಯೋಧರೂ ಕೂಡ ಇವರ ಸಾಮಾಜಿಕ ಕೆಲಸಗಳಿಗೆ ಜೊತೆಯಾಗುತ್ತಾರೆ.

ಸ್ಮಶಾನ, ನದಿ ತಟ ಸ್ವಚ್ಛತೆ
ಸ್ಮಶಾನ ಎಂದ ಕೂಡಲೇ ಜನಕ್ಕೆ ಏನೋ ಭಯ. ಆದರೆ ನಂದು ತಂಡಕ್ಕೆ ಅದಿಲ್ಲ. ಸ್ಥಳೀಯ ನಗರಸಭೆ, ಪುರಸಭೆ ನೆರವಿನಿಂದ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಬನಹಟ್ಟಿ ಸ್ಮಶಾನ, ರಬಕವಿ, ಮಹಾಲಿಂಗಪುರ, ತೇರೆದಾಳ, ರಾಂಪುರ… ಹೀಗೆ ಸುತ್ತ ಮುತ್ತಲ ಗ್ರಾಮದಲ್ಲಿರುವ ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು ಬಂದಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ ಹೋಗಿ ನೋಡಿ, ಸ್ಥಳೀಯ ಸದಸ್ಯರಿಗೆ ಉಸ್ತುವಾರಿ ವಹಿಸಿದ್ದಾರಂತೆ. ಹೀಗಾಗಿ, ನೆಟ್ಟ ಗಿಡಗಳಲ್ಲಿ ಶೇ.80ರಷ್ಟು ಚಿಗುರಿ ದೊಡ್ಡದಾಗಿದೆಯಂತೆ.

ಇದಲ್ಲದೆ, ರಬಕವಿಯ ಕಷ್ಣಾ ನದಿ ತಟವನ್ನು ಶುದ್ಧಿಗೊಳಿಸಿದ್ದೂ ಉಂಟು. ಪ್ರತಿ ಭಾನುವಾರ ತಂಡದ ಸದಸ್ಯರನ್ನು ಸೇರಿಸಿಕೊಂಡು ಪ್ರವಾಸಿಗರು ಬಿಸಾಕಿದ ವಸ್ತುಗಳನ್ನು ಒಂದೆಡೆ ಕಲೆ ಹಾಕಿ ನದಿಯ ತೀರವನ್ನು ಸ್ವತ್ಛ ಮಾಡಿ, 25 ಟನ್‌ ನಷ್ಟು ತ್ಯಾಜ್ಯಗಳನ್ನು ಹೊರಹಾಕಿದ್ದಾರೆ. ಸ್ವಚ್ಛ ಮಾಡಿ ಸುಮ್ಮನೆ ಬಿಟ್ಟು ಬಂದಿಲ್ಲ. ಆಗಾಗ ಹೋಗಿ, ಅಲ್ಲಿ ಬಂದು ಹೋಗುವವರಿಗೆ ‘ಇಲ್ಲೆಲ್ಲ ಕಸ ಹಾಕಬಾರದು, ನದಿಗೆ ಕಸ ಎಸೆದರೆ ಮತ್ತೆ ನಮ್ಮ ಮನೆಗೆ ವಾಪಸ್ಸು ಬರುತ್ತದೆ’ ಅಂತೆಲ್ಲ ಸ್ವತ್ಛತೆಯ ಪಾಠ ಮಾಡುತ್ತಾರೆ.

ನಂದಣ್ಣನ ತಂಡ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯ ಮಾಡುವ ಸಂಕಲ್ಪ ತೊಟ್ಟಿದೆ. ಇದಕ್ಕಾಗಿ ಈಗಾಗಲೇ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ, ಕಳೆದ ವರ್ಷ ಸಮೀಪದ ಹಳಿಂಗಳಿಯ ಭದ್ರಗಿರಿ ಬೆಟ್ಟದಲ್ಲಿ ಲಕ್ಷಾಂತರ ಸಿಸಿಗಳನ್ನು ನೆಟ್ಟು ಬಂದಿದ್ದಾರೆ.

ನೆರೆ ಪ್ರವಾಹಕ್ಕೆ ಸ್ಪಂದನೆ
ಉತ್ತರ ಕರ್ನಾಟಕದ ಕಷ್ಣಾ ಹಾಗೂ ಘಟಪ್ರಭಾ ನದಿಗಳ ಪ್ರವಾಹ ಉಂಟಾದಾಗ ನಂದಣ್ಣನ ಟೀಂ ಸುಮ್ಮನೆ ಕೂರಲಿಲ್ಲ. ವಾರ ಪೂರ್ತಿ ಇರುವ ಕೆಲಸ ಬಿಟ್ಟು ಸಂತ್ರಸ್ಥರ ನೆರವಿಗೆ ನಿಂತಿತು. ಪ್ರವಾಹ ಪೀಡಿತ ಗ್ರಾಮಗಳಿಗೆ. ತೆರಳಿ ಸುಮಾರು 15 ದಿನಗಳ ಕಾಲ ಅಲ್ಲಿನ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಅಲ್ಲದೇ ಅವರಿಗೆ ಊಟ ವಸತಿ ಕಲ್ಪಿಸುವ ಹೊಣೆಯನ್ನೂ ಹೊತ್ತರು. ಅಷ್ಟೇ ಅಲ್ಲ; ನೆರೆ ನಿಂತ ಮೇಲೆ, ತಾವೂ ಕೈಯಿಂದ ಹಣ ಹಾಕಿ, ಬೇರೆಯವರಿಂದ ಸಂಗ್ರಹಿಸಿದ ಅವಶ್ಯಕ ವಸ್ತುಗಳನ್ನು ಸಂತ್ರಸ್ಥರ ಮನಗೆ ತಲುಪಿಸಿದ್ದಾರೆ.

ಅಭಿಯಾನ
ದೇಶದ ಬಗ್ಗೆ ಅಭಿಮಾನ ಮೂಡಿಸುವುದೂ ಒಂದು ಬಗೆಯ ಸೇವೆ ಎಂದು ನಂದು ಅವರ ತಂಡ ನಂಬಿದೆ. ಹೀಗಾಗಿ, 306 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ರಾಷ್ಟ್ರ ಭಕ್ತಿಯ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ವಿವೇಕಾನಂದರ ಆದರ್ಶಗಳನ್ನು ಯುವಕರಿಗೆ ತಲುಪಿಸಬೇಕು ಅನ್ನೋದು ನಮ್ಮ ಧ್ಯೇಯ, ಆಸೆ ಎನ್ನುತ್ತಾರೆ ಶಿವಾನಂದ ಗಾಯಕವಾಡ.

ಪಾಠ ಮಾಡ್ತಾರೆ
ಗಾಯಕವಾಡರಿಗೆ ಇನ್ನೊಂದು ಹುಚ್ಚಿದೆ. ಅದೇನೆಂದರೆ, ಬೆಳಗ್ಗೆ ಕೆಲಸಕ್ಕೆ ಹೋದರೆ, ಮಧ್ಯಾಹ್ನ ಊಟಕ್ಕೆ ಅಂತ ಮನೆಗೆ ಬರುತ್ತಾರೆ. ನಂತರ ಎರಡು ಗಂಟೆ ನಿದ್ದೆ ಮಾಡಿ, ಸಂಜೆ ಮತ್ತೆ ಕಚೇರಿಗೆ ಹೋಗಬಹುದು. ಗಾಯಕವಾಡರು ಹಾಗೇ ಮಾಡುವುದಿಲ್ಲ. ಊಟ ಮಾಡಿ, ನೇರ ಯಾವುದಾದರೂ ಶಾಲೆಗೆ ಹೋಗುತ್ತಾರೆ. ಅಲ್ಲಿ ಮಕ್ಕಳ ಜೊತೆ ಇದ್ದು, ಒಂದಷ್ಟು ದೇಶದ ಬಗ್ಗೆ ಪಾಠ ಮಾಡಿ ಬರುತ್ತಾರೆ. ಇದು ಅವರ ದಿನಚರಿ.
ಇನ್ನು ತಾಲೂಕಿನಲ್ಲಿ ಸೈನಿಕರ ಮನೆ ಹುಡುಕಿ, ದೀಪಾವಳಿ ಹಬ್ಬದ ಮೂರು ದಿನ ಅವರ ಮನೆಗೆ ಹೋಗಿ, ಸೈನಿಕರ ಕುಟುಂಬಕ್ಕೆ ಸಿಹಿ ಹಂಚಿ, ಅವರ ಮನೆ ಮುಂದೆ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರ ಗೀತೆ ಹೇಳಿಬರುವ ಸಂಪ್ರದಾಯವನ್ನೂ ಬೆಳೆಸಿದ್ದಾರೆ.

– ಕಿರಣ ಶ್ರೀ ಶೈಲ ಆಳಗಿ

ಟಾಪ್ ನ್ಯೂಸ್

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.