ಕಾಳಿ ನದಿಯ, “ದಂಡೆ’ಯಾತ್ರೆ

ಮತ್‌ ಬರ್ತಿರಲ್ಲಾ, ದಾಂಡೇಲಿಗೆ ಹೋಗೂಣ?

Team Udayavani, Jun 11, 2019, 6:00 AM IST

b-4

ನಾವಂತೂ ದಾಂಡೇಲಿಯಲ್ಲಿ ಮನಸ್ಸಾರೆ ಕುಣಿದು ಕುಪ್ಪಳಿಸಿಬಿಟ್ಟೆವು. ತಣ್ಣಗೆ ಹರಿಯುತ್ತಿದ್ದ ಕಾಳಿ ನದಿಯಲ್ಲಿ ಒಮ್ಮೆ ಮಿಂದೆದ್ದಾಗ, ನಮ್ಮೆಲ್ಲರ ದಣಿವು, ಒತ್ತಡಗಳೆಲ್ಲ ಮಾಯವಾಗಿದ್ದವು. ಕಲ್ಲು ಬಂಡೆಗಳ ಮೇಲೆ ನಿಂತುಕೊಂಡು, ಒಬ್ಬರಿಗೊಬ್ಬರು ನೀರ ಹನಿಗಳನ್ನು ಚಿಮ್ಮಿಸಿಕೊಳ್ಳುತ್ತಾ ಬಾಲ್ಯಕ್ಕೆ ಜಾರಿದ್ದೆವು…

ಜೀವನ ಅನ್ನೋದೇ ಹೀಗೆ ನೋಡಿ. ಎಲ್ಲರ ಬದುಕಿನೊಳಗೂ ಒಂದಿಷ್ಟು ಖುಷಿಯ ವಿಚಾರಗಳು ಚಾರಣ ಹೊಡೆದಿರುತ್ತವೆ. ಅದರೊಟ್ಟಿಗೆ ಒಂದಿಷ್ಟು ಬೇಸರಗಳೂ ನಮ್ಮನ್ನು ಅದೇ ಬೆಟ್ಟದಿಂದಲೇ ಕಾಲು ಜಾರಿಸಿ, ಬೀಳಿಸಿರುತ್ತವೆ. ಪ್ರತಿ ಭಾವಜೀವಿಯ ಬೆನ್ನ ಮೇಲೆಯೂ ಖುಷಿ- ಬೇಸರ, ನೋವು- ನಲಿವುಗಳ ಸಮಾನ ಲೆಕ್ಕದ ಒಂದು ಬ್ಯಾಗ್‌ ಇದ್ದೇ ಇರುತ್ತೆ. ಇಂಥದ್ದೇ ಒಂದು ಭಾವ ತೀರದ ಯಾನ, ಕಾಲೇಜಿನ ಲೈಫ‌ು. ಇಲ್ಲಿ ಇಟ್ಟ ಹೆಜ್ಜೆಗಳು, ಹೋದ ದಾರಿಗಳು, ಯಾವುದೂ ಶೂನ್ಯ ಸಂಪಾದನೆ ಅಲ್ಲ. ಅಪಾರ ಅನುಭವದ ಬೆಟ್ಟವನ್ನು ಮುಂದಿಡುತ್ತವೆ. ಬದುಕಿನಲ್ಲಿ ಅಂಥ ಒಂದೊಳ್ಳೆ ನೆನಪು ದಾಖಲಾಗಲಿಯೆಂಬ ಉದ್ದೇಶದಿಂದ, ನಾನು ಮತ್ತು ಗೆಳೆಯರೆಲ್ಲ ಒಟ್ಟಿಗೆ ಟ್ರಿಪ್‌ ಹೋಗುವ ಬಗ್ಗೆ ಯೋಚಿಸಿದೆವು. ಆಗ ಹೊಳೆದಿದ್ದೇ, ದಾಂಡೇಲಿಯ ಹೊಳೆಯ ಸಾಲುಗಳು.

ದಾಂಡೇಲಿಯ ವೈವಿಧ್ಯತೆಗೆ ದೃಷ್ಟಿಯ ಬೊಟ್ಟೊಂದು ಇಡಲೇಬೇಕು. ಒಂದು ಕಡೆ ಮಲೆನಾಡು, ಮತ್ತೂಂದೆಡೆ ಕರಾವಳಿ, ಇನ್ನೊಂದೆಡೆ ಬಯಲುಸೀಮೆ… ಎಲ್ಲ ಚಹರೆಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡ ವಿಸ್ಮಯ ತಾಣ. ಉತ್ತರ ಕನ್ನಡ ಜಿಲ್ಲೆಯ ಈ ನಿಸರ್ಗ ರಮಣೀಯ ತಾಣದಲ್ಲಿ ಕಾಳಿ ನದಿಯ ವೈಯ್ನಾರವೇ ಕಣ್ಣಿಗಾನಂದ. ಸುತ್ತಲೂ ಆಗಸದೆತ್ತರ ಮರಗಳ ಬೀಸಣಿಗೆ, ಎಲ್ಲೋ ಚೀಂವ್‌ ಚೀಂವ್‌ ಅಂತ ಕೇಳುವ ಹಕ್ಕಿಯ ಗಾನ, ಇನ್ನೆಲ್ಲೋ ಮರದಿಂದ ಪುರ್ರನೆ ಹಾರಿದ ಪಕ್ಷಿಯ ರೆಕ್ಕೆಬಡಿತದ ಸಪ್ಪಳ, ಕಾಳಿಯ ಜುಳು ಜುಳು ನಿನಾದ… ಒಂದೊಂದು ಕ್ಷಣಕ್ಕೆ ಒಂದೊಂದು ಅರ್ಥ ಬರುವ ಹಾಗೆ, ದಾಂಡೇಲಿ ದಿವ್ಯಕಾವ್ಯವಾಗಿ ತೆರೆದುಕೊಳ್ಳುತ್ತದೆ.

ನಾವಂತೂ ದಾಂಡೇಲಿಯಲ್ಲಿ ಮನಸ್ಸಾರೆ ಕುಣಿದು ಕುಪ್ಪಳಿಸಿಬಿಟ್ಟೆವು. ತಣ್ಣಗೆ ಹರಿಯುತ್ತಿದ್ದ ಕಾಳಿ ನದಿಯಲ್ಲಿ ಒಮ್ಮೆ ಮಿಂದೆದ್ದಾಗ, ನಮ್ಮೆಲ್ಲರ ದಣಿವು, ಒತ್ತಡಗಳೆಲ್ಲ ಮಾಯವಾಗಿದ್ದವು. ಕಲ್ಲು ಬಂಡೆಗಳ ಮೇಲೆ ನಿಂತುಕೊಂಡು, ಒಬ್ಬರಿಗೊಬ್ಬರು ನೀರ ಹನಿಗಳನ್ನು ಚಿಮ್ಮಿಸಿಕೊಳ್ಳುತ್ತಾ ಬಾಲ್ಯಕ್ಕೆ ಜಾರಿದ್ದೆವು. ಆ ಬಂಡೆಯ ಮೇಲೆ ಅಂಗಾತ ಮಲಗಿ, ನೀಲಾಗಸ ನೋಡಿದಾಗ, ದೇವರ ಸೃಷ್ಟಿಯ ವಿಸ್ಮಯಗಳ ಮುಂದೆ ನಾವೆಷ್ಟು ಚಿಕ್ಕವರು ಅಂತನ್ನಿಸಿಬಿಟ್ಟಿತು.

ನೀರೆಂದರೆ, ಏನೋ ಖುಷಿ
ನಿಜ ಅಲ್ವಾ? ನೀರನ್ನು ಕಂಡರೆ, ಯಾರಿಗೇ ಆದರೂ ಮೀನಾಗುವ ಬಯಕೆ ಹುಟ್ಟುತ್ತೆ. ನಮ್ಮನ್ನು ನೀರಿಗೆ ಇಳಿಸಿದ್ದು ಕೂಡ ಅದೇ ಪುಳಕವೇ. ಅಲ್ಲಿ ಆಡಿದ ತುಂಟಾಟಕ್ಕೆ ಲೆಕ್ಕವೇ ಇಲ್ಲ. ನದಿಯೊಳಗೆ ಮುಳುಗೋದು, ಏಳ್ಳೋದು, ಅಲೆಗಳು ಬಂದಾಗ ಹೆದರಿ ಓಡೋದು, ಪಕ್ಕದಲ್ಲಿ ಇದ್ದವರನ್ನು ಗಟ್ಟಿಯಾಗಿ ಹಿಡ್ಕೊಳ್ಳೋದು ಇದೇ ಆಗಿತ್ತು. ಒಮ್ಮೆಯಂತೂ ಅಲೆಗಳು ಜೋರಾಗಿ ಅಪ್ಪಳಿಸಿದಾಗ, ಮುಳುಗಿ ನೀರು ಕುಡಿದು, ಕಂಗಾಲಾಗಿ ಹೋಗಿದ್ದೆ.

ಕಾಳಿ ಬಿಡಲಿಲ್ಲ…
ದಾಂಡೇಲಿಯ ಬಹುಮುಖ್ಯ ಆಕರ್ಷಣೆಯೇ ಕಾಳಿ ನದಿ. ನನಗಂತೂ ಆ ನದಿಯನ್ನು ಬಿಟ್ಟು ಬರುವ ಮನಸ್ಸೇ ಆಗಲಿಲ್ಲ. ಬೋರ್ಗರೆಯುವ ನಿಸರ್ಗ ರಮಣೀಯ ಸೌಂದರ್ಯವನ್ನು ಸವಿಯುತ್ತಾ ಅಲ್ಲೇ ತಪಸ್ಸಿಗೆ ಕೂರುವ ಮನಸ್ಸಾಗಿತ್ತು. ಬೋಟಿಂಗ್‌ ಆಡಲೂ ಮುಂದಾದೆವು. ಆಗ ನೋಡಿ, ಒಳಗೊಳಗೇ ಪುಕುಪುಕು. ನಾನು ಬೇಡವೆಂದರೂ, ನನ್ನ ಫ್ರೆಂಡ್ಸೆಲ್ಲ ಒತ್ತಾಯಿಸಿ, ಕರಕೊಂಡು ಹೋದರು. ನಾನಂತೂ ಬೋಟಿಂಗ್‌ ವೇಳೆ ಉಸಿರು ಬಿಗಿಹಿಡಿದು ಕುಳಿತಿದ್ದೆ. ನೀರಿನ ಆ ಸಪ್ಪಳ, ನಿರ್ಜನ, ನಾವಷ್ಟೇ ತೇಲಾಡುತ್ತಿರುವಂಥ ಅನುಭವ… ಇವೆಲ್ಲದರ ನಡುವೆ ನಾನೇನಾದ್ರೂ ಬಿದಿºಟ್ರೆ ಎಂಬ ಭಯದ ಭೂತ. ನನ್ನ ಪುಕ್ಕಲುತನ ಕಂಡು, ಫ್ರೆಂಡ್‌ಗಳು ರೇಗಿಸುತ್ತಿದ್ದರು. ಬೋಟಿಂಗ್‌ ಮುಗಿಸಿ ಬಂದಿದ್ದು, ನಿಜಕ್ಕೂ ನನ್ನ ಮರುಜನ್ಮ.

ಇಲ್ಲಿ ನಮಗೆ ಇನ್ನೊಂದು ಖುಷಿ ಕೊಟ್ಟಿದ್ದು, ದಾಂಡೇಲಿಯ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದಾದ, ದಂಡೇಲಪ್ಪನ ದರುಶನ. ಹಸಿರು, ಬೆಟ್ಟ- ಕಣಿವೆಗಳ ನಡುವೆ, ಭಕ್ತಿ ಭಾವದಲ್ಲೂ ಕಳೆದುಹೋದ ದಿವ್ಯ ಸುಖ ಸಿಕ್ಕಿತು.
ಹೀಗೆ ರಾಶಿ ರಾಶಿ ನೆನಪುಗಳನ್ನು ಹೊತ್ತು, ನಾವು ದಾಂಡೇಲಿಯಿಂದ ವಾಪಸಾದೆವು.

– ಲಕ್ಷ್ಮೀ ಅರ್ಜುನ ಮೊರಬ, ವಿಜಯಪುರ

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.