ಹುಡುಗಿ ನನ್ನನ್ನು ಖೆಡ್ಡಾಕ್ಕೆ ತಳ್ಳಿದಳು!
Team Udayavani, Apr 11, 2017, 3:50 AM IST
ವಿದ್ಯಾರ್ಥಿ ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನಕಲು ಹೊಡೆದಿರುತ್ತಾರೆ. ನಾನೂ ನಕಲು ಮಾಡಿ ಒಂದು ಸಲ ಪಾಠ ಕಲಿತಿದ್ದೆ. ಆಗೆಲ್ಲಾ ನಕಲು ಮಾಡೋದೆಂದರೆ ಸಾಹಸ ಮಾಡಿದ ಹಾಗೆ ಅಂತ ತಿಳಿದಿದ್ದೆ. ಆದರೆ, ಅದು ಸುಳ್ಳೆಂದು ನನಗೆ ಒಂದು ಹುಡುಗಿಯಿಂದ ಅರ್ಥವಾಯಿತು.
ನಾನು ಆರನೇ ತರಗತಿಯಲ್ಲಿದ್ದಾಗ ಹಿಂದಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದೆ. ನನ್ನ ಪಕ್ಕದ ಬೆಂಚಿನಲ್ಲಿ ಕೂತಿದ್ದ ಒಂದು ಹುಡುಗಿಗೆ ನಾನು ಪುಸ್ತಕ ನೋಡ್ಕೊಂಡು ಬರೀತಾ ಇರೋದು, ಕಣ್ಣಿಗೆ ಬಿದ್ದೇ ಹೋಯಿತು. ಆ ಪುಣ್ಯಾತಿತ್ತಿ ನನ್ನನ್ನು ಖೆಡ್ಡಾಕ್ಕೆ ಬೀಳಿಸಿದಳು. ಅವಳು ಅದನ್ನು ಶಿಕ್ಷಕರಿಗೆ ತಿಳಿಸಿದಳು.
ನಕಲು ಮಾಡಿ ಸಿಕ್ಕಿಬಿದ್ದ ತಪ್ಪಿಗೆ ನಾನು ಇಡೀ ದಿನ ಕ್ಲಾಸಿನಿಂದ ಹೊರಗುಳಿದಿದ್ದೆ. ಆಗಿನಿಂದ ಗೆಳೆಯರೆಲ್ಲ “ನಿನಗೆ ನೆಟ್ಟಗೆ ಕಾಪಿ ಹೊಡೆಯೋದಿಕ್ಕೆ ಬರೋಲ್ಲ ಅಂದಿದ್ರೆ ತೆಪ್ಪಗೆ ಇಬೇìಕಿತ್ತು’ ಎಂದು ಖಡಕ್ಕಾಗಿ ಸಲಹೆ ನೀಡಿದರು. ಅವತ್ತಾದ ಅವಮಾನದಿಂದ ಇಲ್ಲಿಯವರೆಗೂ ನಕಲು ಮಾಡೋ ಸಾಹಸಕ್ಕೆ ಕೈ ಹಾಕಿಲ್ಲ.
ರಾಘವೇಂದ್ರ ಹೆಗಡೆ, ಹೊನ್ನಜ್ಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.