ಲೈಬ್ರರಿಯಲ್ಲಿ KT ಆಯ್ತಾ? 


Team Udayavani, Aug 7, 2018, 6:00 AM IST

4.jpg

ಸೀನಿಯರ್‌ಗಳು ನಮ್ಮನ್ನು ಕಂಡಾಗಲೆಲ್ಲಾ “ಲೈಬ್ರರಿಯಲ್ಲಿ KT ಕುಡಿದ್ರಾ?’ ಅಂತ ರೇಗಿಸುತ್ತಿದ್ದರು. ಇಲ್ಲೆಲ್ಲಿ ಕೆ.ಟಿ ಸಿಗುತ್ತದೆ ಅಂತ ನಾವು ಮೊದಲು ಗೊಂದಲಪಟ್ಟಿದ್ದೆವು. ಆಮೇಲೆ ಅದರ ಅರ್ಥವನ್ನೂ ಅವರೇ ಹೇಳಿದರು. KT ಅಂದರೆ- ಕಣ್ಣು ತಂಪು ಮಾಡಿಕೊಳ್ಳುವುದು; ಅರ್ಥಾತ್‌ ಲೈಬ್ರರಿಯಲ್ಲಿ ಕುಳಿತು ಸುಂದರವಾದ ಹುಡುಗಿಯರನ್ನು ನೋಡುವುದು ಎಂದರ್ಥ.

ಆಗಷ್ಟೇ ಪಿಯುಸಿ ಮುಗಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿಗೆ ಸೇರಿಕೊಂಡಿದ್ದೆ. ಇಷ್ಟು ದಿನ ನಮ್ಮೂರು ವಿಜಯಪುರದ ಬಿರುಬಿಸಿಲನಲ್ಲಿ ಕಂಗೆಟ್ಟಿದ್ದ ನನಗೆ, ಧಾರವಾಡದ ಹಿತವಾದ ಆಹ್ಲಾದಕರ ವಾತಾವರಣ ಮುದ ನೀಡಿತ್ತು. ಮಳೆಗಾಲವಾದ್ದರಿಂದ ಸದಾ ಜಿಟಿಜಿಟಿ ಅಂತ ಸುರಿಯುವ ಮಳೆ ವಾತಾವರಣವನ್ನು ಮತ್ತಷ್ಟು ತಂಪು ಮಾಡುತ್ತಿತ್ತು. 

ಪ್ರಥಮ ವರ್ಷದ ವಿದ್ಯಾರ್ಥಿಗಳಾದ ನಮ್ಮನ್ನು ರೈತಭವನದ ವಿಶಾಲವಾದ ಹಾಲ…ನಲ್ಲಿ ಕೂರಿಸಿದ್ದರು. ಒಂದೇ ಹಾಲ್ನಲ್ಲಿ ತುಂಬಾ ವಿದ್ಯಾರ್ಥಿಗಳನ್ನು ಹಾಕಿದ್ದರಿಂದ ಅದೊಂದು ರೀತಿಯಲ್ಲಿ ಸಂತೆಯಾಗಿಬಿಟ್ಟಿತ್ತು. ಮೊದಲ ದಿನ ಕ್ಲಾಸಿಗೆ ಹೋದಾಗ ವಿಚಿತ್ರ ಶಾಕ್‌ ಕಾದಿತ್ತು. ಕ್ಲಾಸಿನ ಮುಂದೆ ನಿಂತುಕೊಂಡಿದ್ದ ಸೀನಿಯರ್‌ಗಳು ನಮ್ಮನ್ನು ದುರುಗುಟ್ಟಿ ನೋಡುತ್ತಿದ್ದರು. ಹಸಿದ ಹುಲಿ ಜಿಂಕೆಯನ್ನು ನೋಡುತ್ತದಲ್ಲಾ, ಹಾಗಿತ್ತು ಅವರೆಲ್ಲರ ನೋಟ. ಯಾರು ಓವರ್‌ ಆಗಿ ವರ್ತಿಸುತ್ತಾರೋ ಅವರು ಸೀನಿಯರ್‌ಗಳ ಟಾರ್ಗೆಟ್‌ ಆಗಿಬಿಡುತ್ತಿದ್ದರು. ಹಾಗಾಗಿ ನಾವೆಲ್ಲರೂ ಅವರ ಮುಂದೆ ತಲೆತಗ್ಗಿಸಿಕೊಂಡು ತುಟಿ ಪಿಟಕ್‌ ಅನ್ನದೆ ಇರುತ್ತಿದ್ದೆವು. ನಾನಂತೂ, ಸೀನಿಯರ್‌ಗಳ ಕೆಂಗಣ್ಣಿಗೆ ಗುರಿಯಾಗಬಾರದೆಂದು ಸೈಲೆಂಟ್‌ ಹುಡುಗನಂತೆ ಸ್ವಲ್ಪ ಓವರ್‌ ಆಗಿಯೇ ನಟಿಸುತ್ತಿದ್ದೆ.

ಸೀನಿಯರ್ಗಳ ರೂಲ್ಸ್‌ ಕೂಡ ವಿಚಿತ್ರವಾಗಿದ್ದವು. ಜ್ಯೂನಿಯರ್‌ಗಳು ಅವರನ್ನು “ಅಣ್ಣಾ’ ಎನ್ನುವಂತಿರಲಿಲ್ಲ. ಅವರನ್ನು “ಸರ್‌’ ಅಂತಲೇ ಕರೆಯಬೇಕಾಗಿತ್ತು. ಅವರನ್ನು ಕಂಡಾಗ ಗುಡ್‌ ಮಾರ್ನಿಂಗೋ, ಗುಡ್‌ ಈವ್ನಿಂಗೋ ಹೇಳಿ ವಿಶ್‌ ಮಾಡಬೇಕಿತ್ತು. ಇಲ್ಲದಿದ್ದರೆ ಅವರು ಗಂಟೆಗಟ್ಟಲೆ ನಮ್ಮನ್ನು ನಿಲ್ಲಿಸಿಕೊಂಡು ಸತಾಯಿಸುತ್ತಿದ್ದರು. ಜ್ಯೂನಿಯರ್‌ಗಳು ಲಕಲಕ ಹೊಳೆಯುವ ಬಟ್ಟೆಗಳನ್ನು ಹಾಕಿಕೊಳ್ಳುವಂತಿಲ್ಲ. ಅಪ್ಪಿತಪ್ಪಿಯೂ ನಾವು ಸೀನಿಯರ್‌ಗಳ ಹಾಸ್ಟೆಲ… ಹತ್ತಿರ ಸುಳಿಯುವಂತಿಲ್ಲ. ಟಿವಿ ಹಾಲ…ಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹುಡುಗಿಯರೊಂದಿಗೆ ತುಂಬಾ ಕ್ಲೋಸಾಗಿ ವರ್ತಿಸುವಂತಿಲ್ಲ. ಜೇಬಿನಲ್ಲಿ ಪೆನ್ನು ಇಡುವಂತಿಲ್ಲ… ಹೀಗೆ ವಿಚಿತ್ರ ರೂಲ್ಸ…ಗಳ ಪಟ್ಟಿ ಹೇಳುತ್ತಾ ಹೋದರೆ ಮುಗಿಯುವುದಿಲ್ಲ.

   ಸೀನಿಯರ್‌ಗಳಿಗೆ ಪ್ರಾಯೋಗಿಕ ಕಲಿಕೆಗಾಗಿ ಒಂದಿಷ್ಟು ತುಂಡುಭೂಮಿಯನ್ನು ಕೊಡಲಾಗುತ್ತಿತ್ತು. ಅಲ್ಲಿ ಅವರು ವರ್ಷವಿಡೀ ಹತ್ತಿಯನ್ನೋ, ಜೋಳವನ್ನೋ ಬೆಳೆಯಬೇಕಿತ್ತು. ಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಎಲ್ಲವನ್ನೂ ಅವರೇ ನಿರ್ವಹಿಸಬೇಕಾಗಿತ್ತು. ಅಲ್ಲಿ ಪದೇಪದೆ ಬೆಳೆಯುತ್ತಿದ್ದ ಕಳೆ ತೆಗೆಯುವ ಕೆಲಸವನ್ನು ಅವರು ನಮಗೆ ಹೇಳುತ್ತಿದ್ದರು. ಇದರಿಂದ  ತಪ್ಪಿಸಿಕೊಳ್ಳಲು ನಾವು ಕ್ಲಾಸು ಮುಗಿದ ತಕ್ಷಣ ಗ್ರಂಥಾಲಯಕ್ಕೆ ಹೋಗಿಬಿಡುತ್ತಿದ್ದೆವು. ಆದರೆ, ಅವರು ಅಲ್ಲಿಗೂ ಬಂದು, ನಮ್ಮ ಮುಂದೆ ಕುಳಿತು ಕಣÕನ್ನೆಯಲ್ಲಿಯೇ ಸೂಚನೆ ನೀಡಿ ಕರೆದುಕೊಂಡು ಹೋಗುತ್ತಿದ್ದರು. ಎಲ್ಲಿ ಹೋದರೂ ಅವರ ಕಾಟ ತಪ್ಪುತ್ತಿರಲಿಲ್ಲ. ಹೊಲದಲ್ಲಿಯೂ ನಮ್ಮಿಂದ ಚಿತ್ರ ವಿಚಿತ್ರ ಚಟುವಟಿಕೆಗಳನ್ನು ಮಾಡಿಸುತ್ತಿದ್ದರು. ಹಳೆಯ ಪ್ರೇಯಸಿಯ ಹೆಸರನ್ನು ಜೋರಾಗಿ ಕೂಗುವುದು, ಡ್ಯಾನ್ಸು ಮಾಡುವುದು, ಮಿಮಿಕ್ರಿ ಮಾಡುವುದು, ನಮ್ಮ ಕ್ಲಾಸ್‌ ಹುಡುಗಿಯರ ಬಗ್ಗೆ ಮಾಹಿತಿ ಕೇಳುವುದು, ಹೀಗೆ ಒಂದೇ ಎರಡೇ! ಅಷ್ಟೇ ಅಲ್ಲ ಅವರ ಪ್ರಾಕ್ಟಿಕಲ… ರೆಕಾರ್ಡ್‌ಗಳನ್ನು ನಾವೇ ಬರೆದುಕೊಡಬೇಕಾಗಿತ್ತು. ಕಾರಣ ಕೇಳಿದರೆ, ತಾವು ಕೂಡ ಸೀನಿಯರ್‌ಗಳಿಗೆ ಹೀಗೇ ಬರೆದುಕೊಡುತ್ತಿದ್ದೆವು ಎಂದು ಸಮಜಾಯಿಷಿ ನೀಡುತ್ತಿದ್ದರು. 

ಸೀನಿಯರ್‌ಗಳು ನಮ್ಮನ್ನು ಕಂಡಾಗಲೆಲ್ಲಾ “ಲೈಬ್ರರಿಯಲ್ಲಿ ಓಖ ಕುಡಿದ್ರಾ?’ ಅಂತ ರೇಗಿಸುತ್ತಿದ್ದರು. ಇಲ್ಲೆಲ್ಲಿ ಕೆ.ಟಿ ಸಿಗುತ್ತದೆ ಅಂತ ನಾವು ಮೊದಲು ಗೊಂದಲಪಟ್ಟಿದ್ದೆವು. ಆಮೇಲೆ ಅದರ ಅರ್ಥವನ್ನೂ ಅವರೇ ಹೇಳಿದರು. ಓಖ ಅಂದರೆ- ಕಣ್ಣು ತಂಪು ಮಾಡಿಕೊಳ್ಳುವುದು; ಅರ್ಥಾತ್‌ ಲೈಬ್ರರಿಯಲ್ಲಿ ಕುಳಿತು ಸುಂದರವಾದ ಹುಡುಗಿಯರನ್ನು ನೋಡುವುದು ಎಂದರ್ಥ. ಇಂಥ ಅನೇಕ ವಿಚಿತ್ರ ಪರಿಭಾಷೆಗಳು ಅವರಲ್ಲಿ ಚಾಲ್ತಿಯಲ್ಲಿದ್ದವು. ಅವುಗಳನ್ನು “ಅಗ್ರಿವರ್ಡ್‌’ಗಳು ಅಂತ ಕರೆಯಲಾಗುತ್ತಿತ್ತು.

  ಆರಂಭದಲ್ಲಿ ನಮ್ಮ ಪಾಲಿಗೆ ಸೀನಿಯರ್‌ಗಳು ಉಗ್ರವಾದಿಗಳೇ ಆಗಿದ್ದರು. ಯಾರೂ ಆತ್ಮೀಯವಾಗಿ ಮಾತಾಡುತ್ತಿರಲಿಲ್ಲ. ಅದು ಅವರು ಮಾಡಿಕೊಂಡ ಅಲಿಖೀತ ನಿಯಮವಾಗಿತ್ತು. ಹಾಗಂತ ಎಲ್ಲಾ ಸೀನಿಯರ್‌ಗಳೂ ಕಟ್ಟುನಿಟ್ಟಾಗಿ ಇರುತ್ತಿರಲಿಲ್ಲ. ಒಂದಿಬ್ಬರು ಮೃದು ಸ್ವಭಾವದವರೂ ಇದ್ದರು. ಅವರಲ್ಲಿ ನಮ್ಮ ಅತೀಕ್‌ ಉಲ್ಟಾ ಅಣ್ಣನೂ ಒಬ್ಬ. ಆತ ತನ್ನನ್ನು ಸರ್‌ ಅಂತ ಕರೆಯಬೇಡಿ ಅಂತಲೇ ಹೇಳುತ್ತಿದ್ದ. ನಾವು ಅವನ ಫೀಲ್ಡಿಗೆ ಹೋದರೆ, ಬೆಳೆಗಳ ವೈಜ್ಞಾನಿಕ ಹೆಸರುಗಳು, ಕೀಟನಾಶಕಗಳು, ಕಳೆಗಳು, ಕೃಷಿಗೆ ಸಂಬಂಧಪಟ್ಟ ಮಾಹಿತಿಯನ್ನೆಲ್ಲಾ ತಿಳಿಸಿಕೊಡುತ್ತಿದ್ದ. ಗೆಳೆಯರ ಪಾಲಿಗೆ ಅವನೊಬ್ಬ “ಫ‌ಸ್ಟ್ ರ್‍ಯಾಂಕ್‌ ರಾಜು’ ಥರ ಪುಸ್ತಕದ ಹುಳು ಆಗಿದ್ದ. ಆದರೆ ನಮ್ಮ ಪಾಲಿಗೆ ಅವನೇ ಆಪದ್ಭಾಧವ! 

ಮೊದಮೊದಲು ಕಠಿಣವಾಗಿ ವರ್ತಿಸುತ್ತಿದ್ದ ಸೀನಿಯರ್‌ಗಳು ಬರುಬರುತ್ತಾ ನಮಗೆ ಆತ್ಮೀಯರಾದರು. ತಮ್ಮ ನೋಟ್ಸ್‌ಗಳನ್ನು ಕೊಟ್ಟು ಸಹಾಯ ಮಾಡಿದರು. ಹೇಗೆ ಓದಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕೆಂದು ಮಾರ್ಗದರ್ಶನ ನೀಡಿದರು. ಇವೆಲ್ಲ ನಡೆದು ನಾಲ್ಕೈದು ವರ್ಷಗಳಾಗಿವೆ. ಆದರೂ ಧಾರವಾಡದ ಅಗ್ರಿ ಹುಡುಗರ ವಿಚಿತ್ರ ನಿಯಮಗಳು ನೆನಪಿನಲ್ಲಿವೆ. ಅಲ್ಲಿನ ವಿಚಿತ್ರ ರೂಲ್ಸ್‌ಗಳನ್ನು ಮೆಲುಕು ಹಾಕಿದಾಗ ಮೊಗದಲ್ಲಿ ಮುಗುಳ್ನಗೆ ಮೂಡುತ್ತದೆ.

ಹನಮಂತ ಕೊಪ್ಪದ

ಟಾಪ್ ನ್ಯೂಸ್

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.