ಲ್ಯಾಂಪ್‌ ಫೆಲೋಶಿಪ್‌


Team Udayavani, Mar 7, 2017, 3:45 AM IST

lead-udyoga-margadarshi.jpg

ಎಂಪಿಗಳಿಗೆ ಶಾಸಕಾಂಗ ಸಹಾಯಕರಾಗಿ ಕೆಲಸ ಮಾಡುವ ಅವಕಾಶ
ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಅತಿ ಪ್ರಮುಖವಾದ  ಆಧಾರಸ್ತಂಭ. ಸಂಸತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಯುವಶಕ್ತಿಯ ನೆರವನ್ನು ಪಡೆಯುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಅವಶ್ಯಕ.  ಸಂಸತ್ತಿನ ಸದಸ್ಯರುಗಳಿಗೆ ಅವರ ಕಾರ್ಯಗಳನ್ನು ಯಶಸ್ವಿಯಾಗಿ ನಿರೂಪಿಸಲು ಬೇಕಾದ ಮಾಹಿತಿ ಒದಗಿಸುವುದರ ಮೂಲಕ ಹಾಗೂ ನೀತಿ ನಿರೂಪಣೆಯಲ್ಲಿ (Policy making) ಸಹಾಯ ಮಾಡಲು ಯುವ ಪ್ರತಿಭೆಯ ನೆರವು ಪಡೆಯುವುದರ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. 

ಜೊತೆಗೆ ಯುವ ಉತ್ಸಾಹಿಗಳಿಗೆ ಸಂಸತ್ತಿನ ಸದಸ್ಯರುಗಳ ಜೊತೆಗೆ ಕೆಲಸ ಮಾಡುವ ಮತ್ತು ಸಂಸತ್ತಿನ ಕಾರ್ಯಗಳನ್ನು ಹತ್ತಿರದಿಂದ ತಿಳಿಯುವ ಒಂದು ಅವಕಾಶವನ್ನು ಒದಗಿಸಿದಂತಾಗುತ್ತದೆ.  ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲ್ಯಾಂಪ್‌ ಫೆಲೋಶಿಪ್‌ (LAMP- Legislative assistant for Member of Parliament Fellowship)ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಫೆಲೋಶಿಪ್‌ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸಂಸತ್ತಿನ ಸದಸ್ಯರುಗಳ ಜೊತೆಗೆ ಶಾಸಕಾಂಗ ಸಹಾಯಕರಾಗಿ ಕೆಲಸ ಮಾಡುತ್ತಾರೆ.  

ಲ್ಯಾಂಪ್‌ ಫೆಲೋಶಿಪ್‌ ಕಾರ್ಯಕ್ರಮವು ಪಿ.ಆರ್‌.ಎಸ್‌. ಲೆಜಿಸ್ಲೇಟಿವ್‌ ರೀಸರ್ಚ್‌  (PRS Legislative Research)ಸಂಸ್ಥೆಯ ಅಡಿಯಲ್ಲಿ 2010ರಿಂದ ಪ್ರಾರಂಭವಾಗಿದೆ. ದೇಶದ ಯುವಕರಿಗೆ ಸಂಸತ್ತಿನ ಸದಸ್ಯರುಗಳ ಜೊತೆಗೆ ಕೆಲಸ ಮಾಡುವ ವಿನೂತನ ಅವಕಾಶವನ್ನು ಈ ಫೆಲೋಶಿಪ್‌ ಒದಗಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಸುಮಾರು 11 ತಿಂಗಳುಗಳ ಕಾಲ ಸಂಸತ್ತಿನ ಒಬ್ಬ ಸದಸ್ಯರ ಜೊತೆಗೆ ಕಾರ್ಯ ನಿರ್ವಹಿಸುತ್ತಾರೆ. ಕೆಲಸದ ಅವಧಿ ಮುಂಗಾರು ಅಧಿವೇಶನದಿಂದ ಶುರುವಾಗಿ ಬಜಟ್‌ ಅಧಿವೇಶನದವರೆಗೂ ಇರುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಸಂಸತ್ತಿನ ಸದಸ್ಯರುಗಳಿಗೆ ಅವರ ಕಾರ್ಯಗಳಲ್ಲಿ ಮತ್ತು ಹೆಚ್ಚಿನ ಕಾರ್ಯಕ್ಷಮತೆಗಾಗಿ ಸಂಶೋಧನಾ ಮಾಹಿತಿಯನ್ನು ಒದಗಿಸುವುದರ ಮೂಲಕ ಸಹಾಯ ಮಾಡುತ್ತಾರೆ. ಇದರ ಜೊತೆಗೆ ದೇಶದ ಪ್ರತಿಷ್ಠಿತ ವಿಷಯ ತಜ್ಞರ ಜೊತೆಗೆ ಹಾಗು ಪ್ರಭಾವಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುವ ಮತ್ತು ಸಲಹೆಯನ್ನು ಪಡೆಯುವ ಅವಕಾಶ ಕೂಡ ದೊರೆಯುವ ಸಾಧ್ಯತೆಗಳಿವೆ.  

ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ
25 ವರ್ಷ ಒಳಗಿನ ಪದವಿಯನ್ನು ಹೊಂದಿದ ಯಾವುದೇ ಭಾರತೀಯ ನಾಗರೀಕ ಕೂಡ ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಕೆಲಸದ ಅನುಭವ ಮತ್ತು ಅಭ್ಯರ್ಥಿಯ ಇನ್ನಿತರೆ ಹವ್ಯಾಸಗಳ ಬಗೆಗೆ ಮಾಹಿತಿಯನ್ನು ಪಡೆಯಲಾಗುತ್ತದೆ. ಇದರ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯೂ ಶಾಸಕಾಂಗದ ಬಗೆಗೆ ಅಥವಾ ಸರ್ಕಾರದ ಯಾವುದಾದರೊಂದು ಅಭಿವೃದ್ಧಿ ನೀತಿಯ ಬಗೆಗೆ ಒಂದು ಪ್ರಬಂಧವನ್ನು ಬರೆಯಬೇಕು. ಹಾಗೆಯೇ ಏಕೆ ಈ ಫೆಲೋಶಿಪ್‌ ಕಾರ್ಯಕ್ರಮವನ್ನು ಸೇರಲು ಬಯಸುತ್ತೇನೆ? ಇದರ ಹಿಂದಿರುವ ಪ್ರೇರಣೆ ಏನು? ಎಂಬುದರ ಬಗೆಗೂ ಒಂದು ಲೇಖನವನ್ನು ಬರೆಯಬೇಕು. ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನಲೆ, ಕೆಲಸದ ಅನುಭವ ಮತ್ತು ಪ್ರಬಂಧದ ಗುಣಮಟ್ಟದ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನವನ್ನು ದೂರವಾಣಿಯ ಮುಖಾಂತರ ಅಥವಾ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಈ ಎಲ್ಲ ಹಂತಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಡೆಯ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. 
 
ಆಯ್ಕೆಯಾದ ಅಭ್ಯರ್ಥಿಗಳಿಗೆ ಪಿ.ಆರ್‌.ಎಸ್‌. ಲೆಜಿಸ್ಲೇಟಿವ್‌ ರೀಸರ್ಚ್‌ ((PRS Legislative Research) ಸಂಸ್ಥೆಯ ವತಿಯಿಂದ ಸೂಕ್ತ ತರಬೇತಿ ನೀಡಲಾಗುತ್ತದೆ. ನಂತರದಲ್ಲಿ ಅವಶ್ಯಕತೆಗೆ ಅನುಸಾರವಾಗಿ ಒಬ್ಬ ಸಂಸತ್‌ ಸದಸ್ಯರ ಅಡಿಯಲ್ಲಿ ಕೆಲಸ ಮಾಡಲು ಕಳಿಸಲಾಗುತ್ತದೆ.  
ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯೂ ಮಾಸಿಕ ರೂ. 17,000/- ವೇತನ ಪಡೆಯುತ್ತಾರೆ. ಜೊತೆಗೆ ಇನ್ನಿತರೆ ಖರ್ಚಿಗಾಗಿ (ಓಡಾಟ, ಇಂಟರ್‌ನೆಟ್‌ ಸೌಲಭ್ಯ ಇತ್ಯಾದಿ) ರೂ. 3000/- ಅಧಿಕ ವೇತನವನ್ನು ಕೂಡ ನೀಡಲಾಗುತ್ತದೆ.  

ಫೆಲೋಶಿಪ್‌ ನಂತರ ಮುಂದೇನು?  
ಫೆಲೋಶಿಪ್‌ ನಂತರದಲ್ಲಿ ಕೆಲವು ಅಭ್ಯರ್ಥಿಗಳು ಉನ್ನತ ವ್ಯಾಸಂಗಕ್ಕೆಂದು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ (Oxford University), ಕೊಲಂಬಿಯಾ ವಿಶ್ವವಿದ್ಯಾನಿಲಯ, ಯೇಲ್‌ ವಿಶ್ವವಿದ್ಯಾನಿಲಯ ((Yale University) ಇತ್ಯಾದಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. ಕೆಲವರು ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳಲ್ಲಿ, ಪ್ರತಿಷ್ಠಿತ ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗು ಸರ್ಕಾರದ ನೀತಿ ನಿರೂಪಣೆ (Policy making) ಮತ್ತು ನೀತಿ ವಿಶ್ಲೇಷಣೆಯಲ್ಲಿ (Policy analysis) ಸಹಾಯ ಮಾಡುವ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

– ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌, ಚಿತ್ರದುರ್ಗ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.