ಚರಿತ್ರೆ ಅರಿಯಿರಿ ಇತಿಹಾಸ ಸೃಷ್ಟಿಸಿ


Team Udayavani, Jun 13, 2017, 10:20 AM IST

charitre.jpg

ಇತ್ತೀಚಿನ ದಿನಗಳಲ್ಲಿ ಇತಿಹಾಸ ವಿಭಾಗಕ್ಕೂ ಉತ್ತಮ ಮೌಲ್ಯ ದೊರೆತಿದೆ. ಪುರಾತತ್ವ ಇಲಾಖೆ, ಗ್ರಂಥಾಲಯ, ಮಾಹಿತಿ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇತಿಹಾಸದ ವಿಷಯದಲ್ಲಿ ವಿಮಶಾìತ್ಮಕ, ಚಿಂತನಾ ಆಸಕ್ತಿಯನ್ನು ಬೆಳೆಸಿಕೊಂಡು, ವಸ್ತು ಸಂಗ್ರಹಾಲಯದ ನಿರ್ವಹಣೆ ಮಾಡಿದರೆ ಮ್ಯೂಜಿಯೊಲಜಿಸ್ಟ್ ಆಗಬಹುದು.

“ಎಸ್ಸೆಸ್ಸೆಲ್ಸಿ ಏನೋ ಮುಗಿಯಿತು. ಮುಂದೆ ಏನ್‌ ತಗೋತೀಯಾ?’ ಅಂತ ಇಂದಿನ ಮಕ್ಕಳನ್ನು ಕೇಳಿದರೆ, ತಕ್ಷಣ ಸಿಗುವ ಉತ್ತರ “ಸೈನ್ಸ್‌ ತಗೋತೀನಿ’ ಅಥವಾ “ಡಾಕ್ಟರ್‌, ಎಂಜಿನಿಯರ್‌ ಆಗ್ತಿàನಿ’. ಇವನ್ನು ಹೊರತುಪಡಿಸಿ ಅನೇಕ ಆಸಕ್ತಿಕರ ವಿಷಯಗಳಿವೆ. ಇವುಗಳ ಕುರಿತು ಬಹಳಷ್ಟು ವಿದ್ಯಾರ್ಥಿಗಳಿಗೆ ಅರಿವೇ ಇರುವುದಿಲ್ಲ. ನಮ್ಮ ಸುತ್ತಲಿನ ವಾತಾವರಣವೇ ಇದಕ್ಕೆ ಕಾರಣ. ಹುಟ್ಟಿದಂದಿನಿಂದ ಮಕ್ಕಳು ಕೇಳುವ ಎರಡು ಪದ “ಡಾಕ್ಟರ್‌- ಇಂಜಿನಿಯರ್‌’. ಆರ್ಟ್ಸ್ ಓದಿದವರಿಗೆ ಉದ್ಯೋಗಾವಕಾಶಗಳು ಕಡಿಮೆ ಎನ್ನುವ ಅಪನಂಬಿಕೆಯೊಂದಿದೆ. ವೃತ್ತಿ ಕೌಶಲವಿದ್ದರೆ ಕಲಾ ವಿಭಾಗದಲ್ಲಿದ್ದವರೂ ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಬಹುದು. ಅಂದ ಹಾಗೆ ಆರ್ಟ್ಸ್ ಓದಿದವರು, ಇತಿಹಾಸದ ಸಮಗ್ರ ಅಧ್ಯಯನ ಮಾಡಿದರೆ ವಸ್ತುಸಂಗ್ರಹಾಲಯದಲ್ಲಿ ಉತ್ತಮ ಹು¨ªೆಗಳನ್ನು ಅಲಂಕರಿಸಬಹುದು.

ಮ್ಯೂಜಿಯೋಲಜಿಸ್ಟ್ ಆಗುವುದು ಹೇಗೆ?
ಇತಿಹಾಸದ ವಿಷಯದಲ್ಲಿ ಡಿಗ್ರಿ ಮುಗಿಸಿದ ಬಳಿಕ ಮ್ಯೂಜಿಯಾಲಜಿ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆಯಬೇಕು( ಈಗ ಈ ವಿಷಯದಲ್ಲಿ ಎಂಎಸ್ಸಿ, ಡಿಪ್ಲೋಮಾ ಪದವಿಯೂ ಇದೆ). ಜೊತೆಗೆ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಪಿಎಚ್‌.ಡಿ ಪದವಿ ಪಡೆದರೆ ಒಳಿತು.

ಸಂಗ್ರಹ ಶಾಸ್ತ್ರ, ಮಾನವಶಾಸ್ತ್ರ, ಶಸ್ತ್ರಾಸ್ತ್ರ ಮತ್ತು ರûಾ ಕವಚಗಳ ಬಗೆಗೆ ಅರಿವು, ಆಭರಣ ವಿನ್ಯಾಸಗಳ ಬಗ್ಗೆ ಅರಿವು, ವಿಶ್ವದ ಮೂಲ ಭಾಷೆ (ಸಂಸ್ಕೃತ, ಅರೇಬಿಕ್‌, ಪರ್ಷಿಯಾ, ಗ್ರೀಕ್‌, ಲ್ಯಾಟಿನ್‌ ಇತ್ಯಾದಿ)ಗಳ ಬಗ್ಗೆ ತಿಳಿವಳಿಕೆ, ನಾಣ್ಯಶಾಸ್ತ್ರ, ಶಿಲಾಶಾಸ್ತ್ರ, ಶಿಲಾಮುದ್ರಣ, ವಿಜ್ಞಾನ ವಿಷಯಗಳ ಸಾಮಾನ್ಯ ಜ್ಞಾನ ಅಗತ್ಯ. ಮ್ಯೂಜಿಯಾಲಜಿಯಲ್ಲಿ ದೇಶ ಸುತ್ತುವ, ಕೋಶ ಓದುವ ಎರಡೂ ಅವಕಾಶಗಳೂ ಜ್ಞಾನವನ್ನು ಹೆಚ್ಚಿಸುತ್ತದೆ. 

ವಸ್ತು ಸಂಗ್ರಹಕಾರರು ರಾಜ್ಯ, ದೇಶಮಟ್ಟದಲ್ಲಿ ಸರ್ಕಾರಿ ಅಥವಾ ಖಾಸಗಿ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮ್ಯೂಜಿಯಾಲಜಿಯಲ್ಲಿ ಪದವಿ/ ಸ್ನಾತಕ ಪದವಿ ಪಡೆದವರು ಅಭ್ಯಸಿಸಿದರೆ, ವಸ್ತುಸಂಗ್ರಹಣಾ ನಿರ್ದೇಶಕ, ಕ್ಯುರೇಟರ್‌, ಪ್ರದರ್ಶನ ವಿನ್ಯಾಸಕ, ಆರ್ಕಿವಿಸ್ಟ್, ಸಂರಕ್ಷಣಾ ತಜ್ಞ, ಮ್ಯೂಜಿಯಾಲಜಿ ಅಧ್ಯಾಪಕ ಹು¨ªೆಗೆ ಅರ್ಹರಿರುತ್ತಾರೆ. ಅಲ್ಲದೆ ಪುರಾತತ್ವ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಬಹುದು.

ಹು¨ªೆಗನುಗುಣವಾಗಿ- 25 ಸಾವಿರದಿಂದ 35 ಸಾವಿರಕ್ಕೂ ಹೆಚ್ಚಿನ ಸಂಭಾವನೆ ಪಡೆಯಬಹುದು.

ಕೌಶಲ್ಯಗಳೂ ಇರಲಿ
– ನಿರ್ವಹಣಾ, ಸಂವಹನ ಕೌಶಲ್ಯ
– ಆಂಗ್ಲ ಭಾಷಾ ಪರಿಣತಿ, ಗಣಕದ ಬಳಕೆ, ಪತ್ರ ವ್ಯವಹಾರ
– ಸಂಶೋಧನಾ, ಅನುವಾದ, ಸಂವಾದ ಕೌಶಲ್ಯ
– ವಸ್ತುಗಳ ವೈಜ್ಞಾನಿಕ ಹೆಸರು, ವಸ್ತುಗಳು ಸಿಗುವ ದೇಶ, ಕಾಲದ ಅರಿವು
– ವಸ್ತು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ

ಕರ್ತವ್ಯಗಳೇನು?
– ವಸ್ತು ಸಂಗ್ರಹಾಲಯದಲ್ಲಿ ವಸ್ತುಗಳನ್ನು ಓರಣವಾಗಿ ಜೋಡಿಸುವುದು. ಜೊತೆಗೆ ರಕ್ಷಣೆ, ಸ್ವತ್ಛತೆ ಜವಾಬ್ದಾರಿ.
– ವಸ್ತು ಸಂಬಂಧಿತ ಮಾಹಿತಿ, ಹೆಸರಿನ ಚೀಟಿಗಳನ್ನು ಆಯಾ ವಸ್ತುಗಳ ಮುಂದಿರಿಸುವುದು(ಲೇಬಲಿಂಗ್‌). ಜಾಗ್ರತೆ ವಹಿಸುವುದು.
– ಸಂಗ್ರಹಾಲಯಕ್ಕಾಗಿ ಐತಿಹಾಸಿಕ ಮಹತ್ವದ ವಸ್ತುಗಳನ್ನು ಖರೀದಿ ಮಾಡುವುದು.
– ವಸ್ತು ಪ್ರದರ್ಶನಗಳ ಆಯೋಜನೆ ಮಾಡುವುದು.
– ವಸ್ತುಗಳ ಬಗ್ಗೆ ರೆಕಾರ್ಡ್‌ಗಳ ನಿರ್ವಹಣೆ, ವಸ್ತು, ವಸ್ತ್ರ, ಚಿತ್ರ, ಲೋಹ, ಖನಿಜ ಮಾಹಿತಿ ಸಂಗ್ರಹ.
– ವಿಶಿಷ್ಟ ವಸ್ತುಗಳ ಹರಾಜು ಪ್ರಕ್ರಿಯೆ ನಡೆಸುವುದು. ಜೊತೆಗೆ ಆಯಾ ವಸ್ತುಗಳ ಮಾಹಿತಿ ವಿವರಿಸುವುದು.

ಕೋರ್ಸಗಳು
– ಹಿಸ್ಟರಿ ಆಫ್ ಮ್ಯೂಜಿಯಂ
– ಕಲೆಕ್ಷನ್‌ ಮ್ಯಾನೇಜ್‌ಮೆಂಟ್‌
– ಮ್ಯೂಜಿಯಂ ಆರ್ಕಿಟೆಕ್ಚರ್‌
– ಹಿಸ್ಟರಿ ಆಫ್ ಆರ್ಕಿಯಾಲಜಿ ಆಫ್ ಇಂಡಿಯಾ
– ಹಿಸ್ಟರಿ ಆಫ್ ಆರ್ಟ್ಸ್
– ಏನ್ಷಿಯೆಂಟ್‌ ಹಿಸ್ಟರಿ ಅÂಂಡ್‌ ಆರ್ಕಿಯಾಲಜಿ
– ಫೋಕ್‌ ಆರ್ಟ್‌ ಅÂಂಡ್‌ ಕಲ್ಚರ್‌ ಆಫ್ ಇಂಡಿಯಾ

ಕಾಲೇಜುಗಳು
– ಮೈಸೂರು ವಿಶ್ವವಿದ್ಯಾಲಯ (ಪ್ರಾಚೀನ ಇತಿಹಾಸ, ಪುರಾತತ್ವ ಶಾಸ್ತ್ರ ಎಂ.ಎ)
– ನ್ಯಾಷನಲ… ಮ್ಯೂಜಿಯಂ ಇನ್ಸ್‌ಟಿಟ್ಯೂಟ್‌ ಆಫ್ ಹಿಸ್ಟರಿ(ಎಂ.ಎ, ಪಿ.ಎಚ್‌.ಡಿ) ನವದೆಹಲಿ
– ವಿಕ್ರಮ್‌ ವಿಶ್ವವಿದ್ಯಾಲಯ(1 ವರ್ಷದ ಪಿಜಿ ಡಿಪ್ಲೋಮಾ) ಮಧ್ಯಪ್ರದೇಶ
– ಬರೋಡ ವಿಶ್ವವಿದ್ಯಾಲಯ(ಮ್ಯೂಜಿಯಾಲಜಿ ಎಂ.ಎ)
– ಕೋಲ್ಕತ್ತಾ ವಿಶ್ವವಿದ್ಯಾಲಯ(ಪಿಜಿ ಡಿಪ್ಲೋಮಾ)
– ಬನಾರಸ್‌ ಹಿಂದೂ ಯೂನಿವರ್ಸಿಟಿ (ಮ್ಯೂಜಿಯಾಲಜಿ ಪಿಜಿ ಡಿಪ್ಲೋಮ, ಎಂ.ಎ)

– ಎನ್‌. ಅನಂತನಾಗ್‌

ಟಾಪ್ ನ್ಯೂಸ್

SSLC 2025ರ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

SSLC 2025ರ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SSLC 2025ರ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

SSLC 2025ರ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

PCB

PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ

1-foot

FIFA ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಮಾಲ್ದೀವ್ಸ್‌  ವಿರುದ್ಧ ಭಾರತಕ್ಕೆ 11-1 ಗೆಲುವು

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

Karnataka ಕೆಐಎಡಿಬಿಗೆ ಬಂಪರ್‌: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ

4

Kaup: ರಿಕ್ಷಾ ಚಾಲಕ ನೇಣಿಗೆ ಶರಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.