ಬಿಸಿಲಲ್ಲೂ ತಂಪಾಗಿರಲು ಕಲಿತದ್ದು ನಿನ್ನಿಂದಲೇ…

Team Udayavani, Apr 14, 2020, 11:12 AM IST

ಬಿಸಿಲಲ್ಲೂ ತಂಪಾಗಿರಲು ಕಲಿತದ್ದು ನಿನ್ನಿಂದಲೇ…

ಈಗಂತೂ, ಬುದ್ಧಿವಾದ ಹೇಳಲು ಎಲ್ಲರೂ ಕ್ಯೂನಲ್ಲಿ ನಿಂತಿರುತ್ತಾರೆ. ಅದನ್ನೆಲ್ಲ ಕೇಳಿ ಮನಸ್ಸು ಕೆಡಿಸಿಕೊಳ್ಳಬೇಡ. ಯಾವುದು ಸರಿ, ಯಾವುದು ತಪ್ಪು ಅಂತ ನೀನೇ ಒಮ್ಮೆ ಯೋಚಿಸು.

ಬಟ್ಟಲು ಕಂಗಳ ಹುಡುಗ, ಹೇಗಿದ್ದೀಯಾ? ಎದುರಿಗೆ ಇದ್ದಾಗ ತಲೆ ಚಿಟ್ಟು ಹಿಡಿಸುವವಳು, ಈಗ ಪತ್ರದಲ್ಲೂ ಹಿಂಸೆ ನೀಡುತ್ತಾಳಲ್ಲ ಎಂದು ಓದದೇ ಇರಬೇಡ. ನಿನಗೆ ಹೇಳದ ಹಲವು ಗುಟ್ಟುಗಳನ್ನು ಹೇಳಬೇಕಿದೆ ಇಲ್ಲಿ. ಮೊಗೆದಷ್ಟೂ ನೀಡುವ ನಿನ್ನ ಪ್ರೀತಿಗೆ, ನಾನು ಮೇಣದಬತ್ತಿಯಂತೆ ಅದೆಷ್ಟು ಬಾರಿ ಕರಗಿಲ್ಲ ಹೇಳು? ಇನ್‌ಫ್ಯಾಕ್ಟ್, ಎಲ್ಲಕ್ಕಿಂತ ಹೆಚ್ಚಾಗಿ, ನನ್ನೊಂದಿಗೆ ನಾನೇ ಆಹ್ಲಾದದಿಂದ ಮಾತನಾಡಿದ್ದು, ಉರಿವ ನನ್ನ ಹೊಟ್ಟೆಯನ್ನು ತಂಪಾಗಿಸಿ ಬದುಕಿಸಿಕೊಂಡದ್ದು, ಬದುಕಿನಲ್ಲಿ ಜೀವಂತಿಕೆ ಕಾಯ್ದುಕೊಂಡಿದ್ದು, ಉರಿವ ಬಿಸಿಲನ್ನು ತಣ್ಣಗಾಗಿಸುವ ಕಲೆ ಸಿದ್ಧಿಸಿಕೊಂಡಿದ್ದು- ನನಗೆ ಜೊತೆಯಾದದ್ದು ನಿನ್ನ ಸಹವಾಸದ ನಂತರವೇ… ಇಷ್ಟೆಲ್ಲ ಕಲಿಸಿದವನಿಗೆ, ಅತೀ ಅನಿಸುವಷ್ಟು ಮುಗ್ಧತೆ, ಸೋಮಾರಿತನ! ಅದರಲ್ಲಿ ನನಗೂ ನೀನು ವರ್ಗಾಯಿಸಿದ್ದು ಎರಡನೆಯದ್ದನ್ನ. ಈ ಎರಡನ್ನು ಬಿಟ್ಟು
ಹೊರಗೆ ಬಾ ಮಾರಾಯ.

ಅಮ್ಮಾ ತಾಯಿ ಮುಚ್ಚುಬಾಯಿ, ಅದೆಷ್ಟೇ ನೀನು ಈ ವಿಷಯಗಳ ಬಗ್ಗೆ ಉಪನ್ಯಾಸ ಮಾಡೋದು?- ಎಂದು ಇದಕ್ಕೂ ಸಿಟ್ಟಾಗಿ ಕೆರಳಬೇಡ್ವೊ. ಈಗಂತೂ, ಬುದ್ಧಿವಾದ ಹೇಳಲು ಎಲ್ಲರೂ ಕ್ಯೂನಲ್ಲಿ ನಿಂತಿರುತ್ತಾರೆ. ಅದನ್ನೆಲ್ಲ ಕೇಳಿ ಮನಸ್ಸು ಕೆಡಿಸಿಕೊಳ್ಳಬೇಡ. ಯಾವುದು ಸರಿ, ಯಾವುದು ತಪ್ಪು ಅಂತ ನೀನೇ ಒಮ್ಮೆ ಯೋಚಿಸು. ನಿನ್ನ ಆತಂಕವೇನೆಂದು ನನಗೆ ತಿಳಿದಿಲ್ಲವೆಂದು ಭಾವಿಸಬೇಡ. ನನಗೂ ಹಲವು ಆತಂಕಗಳಿವೆ ಮಾರಾಯ. ಇನ್ನಾದರೂ ನೀನು ಪ್ರತಿದಿನವೂ ಸಿಗುವ ನಕ್ಷತ್ರವಾಗದೆ, ಅಂಗೈಗೆ ಸಿಗುವ, ಅರ್ಥಾತ್‌ ಕಾಲಿಗೆ ತೊಡರಿಕೊಳ್ಳುವ ಮಗುವಾಗಬೇಡ. ಬದಲಿಗೆ, ಹುಣ್ಣಿಮೆಯಲ್ಲಿ ಸಿಗುವ, ಅಮವಾಸ್ಯೆಯಲ್ಲಿ ಕರಗುವ ಚಂದಿರನಾಗು. ಆ ಬೆಳದಿಂಗಳಲ್ಲಿ ನಾವು ನಿನ್ನಿಷ್ಟದ ಅಡುಗೆಯನ್ನ ಸವಿಯೋಣ. ಹೇಗಿ ದ್ದರೂ ಸಿಗ್ತಿಯಲ್ಲ ಬಿಡು, ಎಂಬ ನಿರಾಳತೆ ಯನ್ನು ತುಸುದಿನವಾದರೂ ಮುಂದೂಡು. ನಡುವೆ ಕೊಂಚ ಅಂತರವಿರಲಿ. ಇಂತಿ ನಿನ್ನವಳು…

ಪಲ್ಲವಿ

ಟಾಪ್ ನ್ಯೂಸ್

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

7-belagavi

Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.