ಪ್ರೀತಿಯ ಗೇಮ್‌ನಲ್ಲಿ ಸದಾ ಡ್ರಾ ಮಾಡ್ಕೊಳ್ಳೋಣ!
Team Udayavani, Oct 31, 2017, 11:07 AM IST
ನೀನು ಇತ್ತೀಚೆಗೆ ಫೇರ್‌ನೆಸ್ ಕ್ರೀಮು ಬದಲಿಸಿದಂತೆ ಕಾಣುತ್ತೆ. ನಿನ್ನ ತ್ವಚೆ ಮೊದಲಿಗಿಂತಲೂ ಕೋಮಲ ಮತ್ತು ಮೃದು; ಕಳೆದ ವೀಕೆಂಡ್‌ನಲ್ಲಿ ಈ ಸೌಂದರ್ಯ ರಹಸ್ಯ ನನ್ನ ಅನುಭವಕ್ಕೆ ಬಂತು, ಅದೂ ಒಂದು ಕಿಸ್‌ನ ಮೂಲಕ. ನೆನಪಿರಲಿ, ಆ ಕ್ರೀಮಿನಲ್ಲಿ ನಾನಿದ್ದೇನೆ. ನಿನ್ನ ಮುಖದ ಕಾಂತಿಗೆ ಕಾರಣ ನಾನೇ. ಈ ಗುಟ್ಟನ್ನು ನಿನ್ನ ತಂಗಿಗೆ ಹೇಳಬೇಡ, ಹೇಳಿದರೆ ಮುಂದೆ ಆಗಬಹುದಾದ ಅನಾಹುತಕ್ಕೆ ನಾನು ಕಾರಣನಲ್ಲ…
ಕಿರುಬೆರಳಿನಂತವಳೇ,
ನನ್ನ ಪತ್ರದ ಪ್ರತಿ ಒಕ್ಕಣೆಯಲ್ಲೂ ಹೀಗೆ ನಿನ್ನ ಕಾಲು ಎಳೆಯದಿದ್ದರೆ ನಮ್ಮ ಪ್ರೇಮಕ್ಕೆ ಲವಲವಿಕೆಯಿರುವುದಿಲ್ಲ. ನಿನ್ನ ಮರೆತು ಗಿಳಿಯ ಸಂಗತಿ ಏಕೆ ಹೇಳಿದೆ ಎಂದು ಮುನಿಸೆ? ನಿನ್ನ ಮುನಿಸಿನಲ್ಲೂ ಒಂದು ಚೆಲುವಿದೆ. ಗಿಳಿ ಮುನಿಸಿಕೊಳ್ಳದಿದ್ದರೂ ಕೊಕ್ಕು ಮಾತ್ರ ಕೆಂಪಗಿರುತ್ತೆ. ನಿನಗೆ ಮುನಿಸು ಬಂದರೆ ದೇಹ ಪೂರ್ತಿ ಕೆಂಪು, ಥೇಟ್ ಬ್ಯಾಡಗಿ ಮೆಣಸಿನಕಾಯಿ ಥರ! ಆ ಖಾರದ ರುಚಿಯ ಸವಿಯಲು ನಾನು ಕಾತುರನಾಗಿರುವೆ. ಅದು ಸರಿ, ಮೊನ್ನೆ ದೇವಸ್ಥಾನದಲ್ಲಿ ಕಂಡ ನೀನು ಇದ್ದಕ್ಕಿದ್ದ ಹಾಗೆ ಎಲ್ಲಿ ಮಾಯವಾಗಿ ಹೋದೆ? ನನಗಂತೂ ಎಲ್ಲಾ ಕಂಬಗಳನ್ನು ಸುತ್ತೀ ಸುತ್ತೀ ಸಾಕಾಯ್ತು. ಜೊತೆಗೆ ಬಂದವನು ನನ್ನ ಅಳಿಯ ಇರಬೇಕು; ನನ್ನನ್ನೇ ದುರುಗುಟ್ಟಿಕೊಂಡು ನೋಡ್ತಾ ಇದ್ದ. ನಿನ್ನ ಲಂಗ ದಾವಣಿ ಮೇಲಾಣೆ, ಅವನು ಕೈಗೆ ಸಿಕ್ಕಿದ್ದಿದ್ದರೆ ದೇವರಿಗೆ ನೈವೇದ್ಯ ಮಾಡಿಬಿಡುತ್ತಿ¨ªೆ. ಅವನೇ ಅಲ್ಲವೇ ನಾನು ನಿನಗೆ ಬರೆದ ಮೊದಲ ಪತ್ರವನ್ನು ನಿನ್ನ ಅಪ್ಪನಿಗೆ ಕೊಟ್ಟದ್ದು? ಐಸ್‌ಕ್ರೀಮ… ಪಾರ್ಲರ್‌ನಲ್ಲಿ ನಾವಿಬ್ಬರೇ ಇದ್ದದ್ದನ್ನ ಕದ್ದು ನೋಡಿ ನಿಮ್ಮ ಅಮ್ಮನಿಗೆ ಹೇಳಿದ್ದು? ಆ ಶನಿಯೊಂದು ಇಲ್ಲ ಅಂದಿದ್ದರೆ ಇಷ್ಟು ಹೊತ್ತಿಗೆ ನಾನು ಎರಡು ಮಕ್ಕಳ ತಂದೆಯಾಗಿರುತ್ತಿದ್ದೆ. ನೀನು ಸಾಕ್ಷಾತ್ ಸತಿ ಸಾವಿತ್ರಿಯಾಗಿರುತ್ತಿದ್ದೆ.
ಹನಿಮೂನ್ ಹಾಳಾಗಿ ಹೋಗಲಿ, ಆದರ್ಶ ದಂಪತಿ ಸ್ಪರ್ಧೆಗಾದರೂ ಹೋಗಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ, ನೀನು “ಹೂn…’ ಅನ್ನು. ನಿಮ್ಮ ಅಪ್ಪನಿಗೊಂದು ಟ್ವೀಟ್ ಬಿಸಾಕಿ ಟಾಟಾ ಮಾಡೋಣ. ಶಾಸ್ತ್ರೋಕ್ತವಾಗಿ ಮೂರು ಗಂಟು ಹಾಕ್ತೀನಿ. ಹನಿಮೂನ್‌ಗೆ ಕೆಮ್ಮಣ್ಣು ಗುಂಡಿಗೆ ಹೋಗೋಣ. ನಮ್ಮ ಲವ್ ಶುರುವಾಗಿದ್ದು ಫೇಸ್‌ಬುಕ್‌ನಲ್ಲಿ ಹಾಗಾಗಿ ಹುಟ್ಟೋ ಮಕ್ಕಳಿಗೆ ಒಂದಕ್ಕೆ “ಫೇಸ್’ ಎಂದೂ, ಮತ್ತೂಂದಕ್ಕೆ “ಬುಕ್’ ಎಂದೂ ಹೆಸರಿಡೋಣ ಏನಂತೀ?! ಅವಳಿ-ಜವಳಿ ಆದವು ಅಂತ ಇಟ್ಕೊà, “ವೈ-ಫೈ’ ಅಂತ ಹೆಸರಿಡೋಣ!
ನಿನ್ನ ಪ್ರೀತಿಯ ಕಣಕಣದಲ್ಲೂ ಅಕ್ಷರಶಃ ನಾನಿದ್ದೇನೆ ಎಂದು ನನಗೆ ಗೊತ್ತು. ನನ್ನೆÇÉಾ ತಲೆಹರಟೆಗಳನ್ನು ಸಹಿಸಿಕೊಂಡು ಬಂದಿರುವ ನಿನಗೆ ಜೀ ಕನ್ನಡದವರಿಗೆ ಹೇಳಿ ಕುಟುಂಬ ಅವಾರ್ಡ್ ಕೊಡಿಸ್ತೀನಿ. ನೀನು ಇತ್ತೀಚೆಗೆ ಫೇರ್‌ನೆಸ್ ಕ್ರೀಮು ಬದಲಿಸಿದಂತೆ ಕಾಣುತ್ತೆ. ನಿನ್ನ ತ್ವಚೆ ಮೊದಲಿಗಿಂತಲೂ ಕೋಮಲ ಮತ್ತು ಮೃದು; ಕಳೆದ ವೀಕೆಂಡ್‌ನಲ್ಲಿ ಈ ಸೌಂದರ್ಯ ರಹಸ್ಯ ನನ್ನ ಅನುಭವಕ್ಕೆ ಬಂತು, ಅದೂ ಒಂದು ಕಿಸ್‌ನ ಮೂಲಕ. ನೆನಪಿರಲಿ, ಆ ಕ್ರೀಮಿನಲ್ಲಿ ನಾನಿದ್ದೇನೆ. ನಿನ್ನ ಮುಖದ ಕಾಂತಿಗೆ ಕಾರಣ ನಾನೇ. ಈ ಗುಟ್ಟನ್ನು ನಿನ್ನ ತಂಗಿಗೆ ಹೇಳಬೇಡ, ಹೇಳಿದರೆ ಮುಂದೆ ಆಗಬಹುದಾದ ಅನಾಹುತಕ್ಕೆ ನಾನು ಕಾರಣನಲ್ಲ.
ನಿನ್ನ ಚೆಲುವು ನನ್ನಲ್ಲಿ ಕನಸುಗಳನ್ನು ಬಿತ್ತಿದೆ, ಹೊಸ ಹೊಸ ಆಸೆಗಳನ್ನು ಚಿಗುರಿಸಿದೆ, ನನ್ನನ್ನು ನಾನೇ ಮರೆಯುವಂತೆ ಮಾಡಿದೆ. ಈ ಮರೆಯುವಿಕೆಯಿಂದ ಎಂಥಾ ಅಪಘಾತವಾಗುತ್ತಿತ್ತೆಂದರೆ, ಒಮ್ಮೆ ಬಚ್ಚಲು ಮನೆಯಿಂದ ನೇರ ರಸ್ತೆಗೆ ಬಂದು ನಿಂತಿದ್ದೇನೆ, ಪುಣ್ಯಕ್ಕೆ ಟವಲ… ಮರೆತಿರಲಿಲ್ಲ! ಈ ಪ್ರೀತಿಯ ಆಟದಲ್ಲಿ ಅಂತ್ಯ ಬೇಡವೇ ಬೇಡ, ಸೋಲು ಗೆಲುವು ಯಾವನಿಗೆ ಬೇಕು. ಇಬ್ಬರೂ ಉಸಿರಿರುವವರೆಗೆ ಸೆಣಸುತ್ತಿರೋಣ. ಬದುಕಿನ ಅನಂತ ನಡಿಗೆಯಲ್ಲಿ ಸದಾ ಜತೆಗಿರೋಣ. ಹೆಗಲಿಗೆ ಹೆಗಲು ತಾಕಿಸುತ್ತಾ ನಡೆಯೋಣ, ಕ್ಷಿತಿಜದಂಚಿನತ್ತ ಸಾಗೋಣ.
ಮತ್ತದೇ ಬಸವನಗುಡಿಯ ರಾಕ್ ಗಾರ್ಡನ್‌ನ ಕಪ್ಪು ಕಲ್ಲಿನ ಮೇಲೆ ನಿನಗಾಗಿ ಕಾಯುತ್ತಿರುತ್ತೇನೆ, ಉಪ್ಪು-ಖಾರ-ಹುಳಿ ಬೆರೆತ ಹುರಿಗಡಲೆಯೊಂದಿಗಿನ ನಿನ್ನ ಹಾಜರಿಗೆ ಕಾಯುತ್ತಿರುತ್ತೇನೆ.
ತೆಳ್ಳಗಿನ, ಕುಳ್ಳಗಿನ ಹುಡುಗಿಗೊಂದು ಉಮ್ಮಾ…
ಇಂತಿ
ಕಂಡಕ್ಟರ್ ಸೋಮು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.