ಮತ್ತೂಮ್ಮೆ ಬಂದು ಬಿಡು ಮೊದಲಿನಂತೆ ಪ್ರೀತ್ಸೋಣ!
Team Udayavani, May 29, 2018, 1:30 PM IST
ಹಾಯ್ ಗೌರಮ್ಮ..
ನಿನಗೆ ಮು¨ªಾಗಿ ಗೌರಮ್ಮ ಅಂತಿ¨ªೆ ನೆನಪಿದೆಯಾ? ನನಗಂತೂ ಮತ್ತೆ ಮತ್ತೆ ನಿನ್ನ ನೆನಪಾಗುತ್ತಿದೆ, ನೀ ಓದಲೆಂದೇ ಈ ಓಲೆಯನ್ನು ಬರೆಯುತ್ತಿದ್ದೇನೆ. ತಪ್ಪದೇ ಓದು.
ನಮ್ಮಿಬ್ಬರ ನಿಷ್ಕಲ್ಮಶ ಪ್ರೀತಿಗೆ ಕೊನೆಗೂ ಬೆಲೆ ಸಿಗಲೇ ಇಲ್ಲ. ನಮ್ಮ ಪ್ರೀತಿ, ಪರಿಸ್ಥಿತಿ ಎಂಬ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ನಮ್ಮಿಬ್ಬರ ಕನಸು ಕನಸಾಗಿಯೇ ಉಳಿಯಿತು. ನಿಜವಾದ ಪ್ರೀತಿಗೆ ಈ ಸಮಾಜದಲ್ಲಿ ಬೆಲೆ ಸಿಗಲ್ಲ ಎಂಬ ಮಾತು ಮತ್ತೂಮ್ಮೆ ನಿಜವಾಯಿತು, ಅಲ್ವಾ ಗೌರಮ್ಮ.
ನಿನಗೆ ಗೊತ್ತಾ? ನೋಡಿದ ಮೊದಲ ದಿನಾನೇ ನೀನು ನನ್ನ ಹೃದಯ ಕದ್ದು ಬಿಟ್ಟೆ. ಅಂದಿನಿಂದ, ನಿನ್ನ ಜೊತೆ ಮಾತಾಡಬೇಕು ಅಂತ ಮನಸು ಹಂಬಲಿಸುತ್ತಿತ್ತು. ಆದರೆ ನಾವಿಬ್ಬರೂ ಪರಸ್ಪರ ಮಾತಾಡಿದ್ದು ಒಂದು ತಿಂಗಳ ನಂತರ. ಆನಂತರದ 2 ವರ್ಷ ನಮ್ಮ ಪ್ರೀತಿಗೆ ಯಾರ ವಕ್ರ ದೃಷ್ಟಿಯೂ ಬೀಳಲಿಲ್ಲ. ಆದರೆ, ಅದೊಂದು ದಿನ ನಿಮ್ಮ ಮನೆಯವರಿಗೆ ವಿಷಯ ಗೊತ್ತಾಗಿ ರಂಪವಾಯಿತು. ನಿಮ್ಮ ಮನೆಯವರು ನಿನಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿ, ನನ್ನ ಜೊತೆ ಮಾತಾಡಬಾರದು ಅಂತ ಕರಾರು ಮಾಡಿದ್ರು. ನೀನು ಅವನ ಜೊತೆ ಮಾತಾಡಿದ್ರೆ, ನಾವೇ ಆತ್ಮಹತ್ಯೆ ಮಾಡಿಕೋತೀವಿ ಅಂತ ಹೆದರಿಸಿದರು. ಆದರೂ ನಿನಗೆ ನನ್ನ ಮರೆತು ಬದುಕೋ ಶಕ್ತಿ ಇರಲಿಲ್ಲ…
ನಿನ್ನ ಮದುವೆ ದಿನ ಸಮೀಪಿಸುತ್ತಿದ್ದಂತೆ, ನಾನು ನಿನ್ನಿಂದ ದೂರ ಆಗೋಕೆ ಪ್ರಯತ್ನಿಸುತ್ತಿ¨ªೆ. ಸ್ವಲ್ಪ ದಿನದ ನಂತರ ಸಂಪೂರ್ಣವಾಗಿ ದೂರಾನೇ ಆಗಿºಟ್ಟೆ. ನಂತರದ ದಿನಗಳಲ್ಲಿ ನಿನ್ನ ಮದುವೆ ಆಗಲಿಲ್ಲ, ಅದಕ್ಕೆ ಕಾರಣ ನಾನೇ ಅಂತ ಗೊತ್ತಾಗಿ ನನ್ನ ಹೃದಯ ಒಡೆದು ಛಿದ್ರ ಛಿದ್ರವಾಯಿತು. ನಿನ್ನ ಮದುವೆ ನಿÇÉೋಕೆ ನಾನೇ ಕಾರಣನಾ? ನಾನು ಮಾಡಿದ್ದು ತಪ್ಪಾ? ನಾನು ಮಾಡಿರೋ ತಪ್ಪನ್ನು ನಾನೇ ಸರಿ ಮಾಡ್ತೀನಿ, ಒಂದು ಅವಕಾಶ ಕೊಡು.
ಹೇಳು ನನ್ನ ಮುದ್ದು ಗೌರಮ್ಮ. ನೀನು ಎಲ್ಲಿದ್ದೀ? ಹೇಗಿದ್ದೀ? ಏನ್ಮಾಡ್ತಾ ಇದ್ದೀ? ನಾನು, ತುಂಬ ಪ್ರೀತಿಯಿಂದ ಕೇಳಿಕೊಳ್ತಾ ಇದೀನಿ. ಸರಿದು ಹೋಗದ ಹಾಗೆ ಮತ್ತೆ ಬರುವೆಯಾ ನನ್ನ ಹೃದಯದೊಳಗೆ. ನೀನಾಗಿರುವೆ ನನ್ನ ಜೀವದ ಚೈತನ್ಯ, ಹೀಗೂ ಮುಡಿಪಿಟ್ಟಿರುವೆ ನಿನಗೆ ನನ್ನ ಹೃದಯವ… ಹೊತ್ತುರಿದು ಬಿಡುವ ರಾತ್ರಿಗಳ ವಿರಹಕ್ಕೆ ಅದೆಷ್ಟು ಕ್ಷಣಗಳನ್ನು, ಸಾವಿನ ಬಳಿ ಜೀತಕ್ಕಿಡಲಿ? ನೀನು ನನ್ನ ಜೀವನಕೆ ಓಡೋಡಿ ಬಂದುಬಿಡು, ಮೊದಲಿನಂತೆ ಪ್ರೀತ್ಸೋಣ.
ನಿನ್ನ ಮುದ್ದಿನ ಬಿ.ಕೆ
– ಎಸ್.ಕೆ.ಪತ್ತಾರ, ಲಿಂಗಸ್ಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.