ಒಟ್ಟಿಗೇ ಬಹುಮಾನ ಸ್ವೀಕರಿಸೋಣ ಬಾರೋ…
Team Udayavani, Nov 5, 2019, 3:48 AM IST
ನೀನು ಬರೆದ ಒಂದು ಚುಕ್ಕಿಯು ಕೂಡ ನನಗೆ ವೇದವಾಕ್ಯದಂತೆ.ಆ ಮೌನದಲ್ಲೇ ಏನೋ ಒಂದು ಮಾತಿದೆಯೆಂದು ನಾನರಿಯುವೆ. ಮೌನಂ ಸಮ್ಮತಿ ಲಕ್ಷಣಂ ಎಂದು ಹಿರಿಯರೇ ಹೇಳಿರುವರಲ್ಲ? ನೀ ಬರೆದ ಒಂದು ಅಕ್ಷರವೂ ನನ್ನ ಪಾಲಿಗೆ ಉಪನಿಷತ್ತಿನಂತೆ ಕಣೋ. ಅಷ್ಟೇ ಅಲ್ಲ; ಮೂರು ಸಾಲುಗಳ ನೀ ಬರೆದ ಕಾವ್ಯ ತ್ರಿಪದಿಯಂತೆಯೂ, ಐದು ಸಾಲುಗಳು ಶರಣರ ವಚನಗಳಂತೆ. ಇನ್ನು ಚೌಪದಿ,ಷಟ³ದಿ,ಹೀಗೆ ಸಾಗುತ್ತಲೇ ಹೋಗುವುದು.
ನೀನು ನನಗಾಗಿ ಎರಡು ಸಾಲು ಬರೆದರೆ ಅದೇ ಸಾಕೆನಗೆ. ನೀನು ಬರೆವ ಸಾಲುಗಳೇ ನನ್ನ ಪಾಲಿಗೆ ಸುಭಾಷಿತವೂ, ನುಡಿಮುತ್ತು. ಅಮೃತ ವಚನದ ವಾಚನದಂತೆ ದಿನಾಲೂ ಒಂದು ಪತ್ರ ತೆರೆದು ಓದುವುದನ್ನು ನಾನು ಹವ್ಯಾಸವೆನ್ನಲೋ, ಹುಚ್ಚು ಎನ್ನಲೋ, ಅಭ್ಯಾಸವೆನ್ನಲೋ ತಿಳಿಯದು. ಅದಕ್ಕೆ ಏನು ಹೆಸರಿಡಲಿ ಗೆಳೆಯ?
ನೀ ಬರೆದ ಪತ್ರಗಳ ಸಂಗ್ರಹವೇ ನನಗೊಂದು ಗ್ರಂಥ ಭಂಡಾರ. ಪ್ರೀತಿ ದೇವತೆಯ ಮುಂದೆ ಆ ಗ್ರಂಥವಿಟ್ಟು ಪೂಜಿಸುವ ಸೌಭಾಗ್ಯವತಿ ನಾನು. ಮಾಡದ ಪೂಜೆ, ವ್ರತ, ಉಪವಾಸ, ಸಂಕಷ್ಟಿಗಳಿಲ್ಲ. ಆದರೆ ದೇವರು ಮಹಾ ತಪಸ್ಸಿನ ನಂತರ ನೀಡುವ ವರದಂತೆ ನೀ ಒಲಿಯಲು ಬಹಳ ಸಮಯವೇ ಬೇಕೇನೋ ಎಂಬ ಶಂಕೆ ಎನಗೆ.
ಇಷ್ಟು ದಿನವಾದರೂ ನಿನ್ನ ಪತ್ರ ಕಾಣದೇ ಇರುವುದು ಯಾಕೋ ಬಿಡಿಸಲಾರದ ಒಗಟಾಗಿದೆ.ಆ ಒಗಟಿಗೆ ಉತ್ತರವ ಕಳುಹಿಸುವೆಯಾ?ಒಗಟು ಬಿಡಿಸಲು ರಸಪ್ರಶ್ನೆಯಲ್ಲಿ ನೀಡುವಂತೆ ನೀನು ಥಟ್ ಅಂತ ಮಾತಾಡಬೇಕೆಂದು ನಾ ಬಯಸುವೆ. ಕಾಲಾವಕಾಶ ಜಾಸ್ತಿ ತೆಗದುಕೊಳ್ಳದೇ ಈ ಪ್ರಶ್ನೆಗೆ ಬೇಗ ಉತ್ತರ ಹೇಳಿ ಬಹುಮಾನವನ್ನು ಜಂಟಿಯಾಗಿ ಸ್ವೀಕರಿಸೋಣ ಬಾ ಗೆಳೆಯ.
ಇಂತಿ ನಿನ್ನ ಪ್ರೀತಿಯ,
ಉಲೂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.