ಜೊತೆಯಾಗಿ ನಡೆಯೋಣ ನಾನಿನ್ನ ಬಿಡಲಾರೆ!
Team Udayavani, Jun 19, 2018, 5:02 PM IST
ನನ್ನ ದಾರಿಯಲ್ಲಿ ನಾನೆಂದೂ, ಯಾರಿಗೂ ಸೋತವಳಲ್ಲ. ಆದರೆ, ನಿನ್ನ ಪ್ರೀತಿ ಶರಧಿಯ ಮುಂದೆ ನನ್ನ ಪ್ರತಿಜ್ಞೆಗಳು ಮಂಜಿನ ಹನಿಗಳಂತೆ ಕರಗುತ್ತಿವೆ. ಅದೆಷ್ಟೋ ಮುನಿಸಿನ ಘನ ನಿರ್ಧಾರಗಳು ಸಡಿಲಗೊಂಡು ಸೋಲುತ್ತಿವೆ.
ಹೂ ನಗೆಯ ಹುಡುಗ,
ಹೇಗಿದ್ದೀಯಾ? ಎಂದೂ ಕೇಳದ ಪ್ರಶ್ನೆ ಅಲ್ಲವಾ ಇದು? ಅದ್ಯಾಕೆ, ನೀನು ಎದುರಿಗಿ¨ªಾಗ ಈ ಪ್ರಶ್ನೆ ಕೇಳುವುದಿಲ್ಲ ನಾನು? ಹೀಗೆ ಉಭಯ ಕುಶಲೋಪರಿ ವಿಚಾರಿಸಲು ಪತ್ರದ ಸಹಾಯ ಅಡ್ಡವಿಡಬೇಕೇನೋ. ಜೀವಕ್ಕೆ ಜೀವವಾದ, ನಿನ್ನ ಅಪರಿಮಿತ ಕನಸಾದ ನಾನೇ ನಿನ್ನೊಟ್ಟಿಗೆ ಇರುವಾಗ ಎಂಥ ಚಿಂತೆ ಎಂಬ ಹುಂಬತನ. ಅದಕ್ಕೇ ಇವತ್ತು ಹೇಗಿದ್ದೀ ಎಂದು ಕೇಳುತ್ತಿರುವೆ. ನಿನ್ನ ಕನಸುಗಳೆಲ್ಲ ನನಸಾಗುವ ದಾರಿಯಲ್ಲಿ ಹೆಜ್ಜೆ ತಪ್ಪದೆ ನಡೆಯುತ್ತಿರುವೆಯಾ? ಆಸೆಗಳೆಲ್ಲಾ ನಿನ್ನ ಬಳಿಗೆ ದಾಪುಗಾಲು ಹಾಕಿ ಓಡಿ ಬರುತ್ತಿವೆಯಾ? ಇದನ್ನೆಲ್ಲ ಏಕೆ ಕೇಳುತ್ತಿದ್ದೇನೆ ಗೊತ್ತಾ?
ಪ್ರೇಮ ನಿವೇದನೆ ಅಂದ್ರೆ ಬರಿಯ ಒಲವನ್ನು ಸುರಿಸುವುದಲ್ಲ. ನಿನ್ನನ್ನು ಹೊಗಳಿ ಅಟ್ಟದ ಮೇಲೆ ಕೂರಿಸುವುದಲ್ಲ. ಅಲ್ಲಿ ಕಾಳಜಿ, ಪ್ರೀತಿ, ಆಸರೆ, ಸ್ಫೂರ್ತಿ, ವಿಶ್ವಾಸ, ನಂಬುಗೆ ಎಲ್ಲವೂ ಇರಬೇಕು. ಅಪರಿಚಿತ ಕೆಟ್ಟ ಕನಸುಗಳ ರಾತ್ರಿಯಲ್ಲಿ, ಚಿರಪರಿಚಿತನಾಗಿ ಹೆಜ್ಜೆ ಇಟ್ಟವನು ನೀನು. ಮನಸ್ಸಿಗೆ ಶಾಂತಿ ತುಂಬಿ, ನಗು ಬೀರುತ್ತಾ, ಭದ್ರತಾ ಭಾವವನ್ನು ಕೊಂಚವಾಗಿ ಅರಳಿಸಿದೆ. ಒಲವ ಕುಂಚದಿಂದ, “ನಾನಿರುವೆ ಜೊತೆಯಾಗಿ’ ಎಂದು ಶರಾ ಬರೆದೆ.
ಮನಸ್ಸಿನ ಒಳಗೆÇÉೋ ನಾನು ಬಿಕ್ಕುತ್ತಿದ್ದರೆ ಒಂದರೆ ಘಳಿಗೆಯಲ್ಲಿ ಪರಿಣತನ ಹಾಗೆ ಅದನ್ನೆಲ್ಲ ಪತ್ತೆ ಮಾಡಿ ಬಿಡುವೆಯÇÉೋ ಮಾರಾಯ! ನಿನ್ನ ಪ್ರೇಮದ ಪರಿಯೇ ನನಗೊಂದು ಬೆರಗು. ನನ್ನನ್ನೇ ನಾನು ಕಳೆದುಕೊಂಡು, ನಿನ್ನಲ್ಲಿ ಒಂದಾಗಿ ಬಿಡುತ್ತಿದ್ದೇನೆ. ನನ್ನ ದಾರಿಯಲ್ಲಿ ನಾನೆಂದೂ, ಯಾರಿಗೂ ಸೋತವಳಲ್ಲ. ಆದರೆ, ನಿನ್ನ ಪ್ರೀತಿ ಶರಧಿಯ ಮುಂದೆ ನನ್ನ ಪ್ರತಿಜ್ಞೆಗಳು ಮಂಜಿನ ಹನಿಗಳಂತೆ ಕರಗುತ್ತಿವೆ. ಅದೆಷ್ಟೋ ಮುನಿಸಿನ ಘನ ನಿರ್ಧಾರಗಳು ಸಡಿಲಗೊಂಡು ಸೋಲುತ್ತಿವೆ. ಅದೇ ಅಲ್ಲವೆ ಚಿರನೂತನ ಒಲವು?
ನಾನು ನಿನ್ನನ್ನು ಎಂದಿಗೂ ಅನುಮಾನಿಸಿಲ್ಲ. ನಿನ್ನ ಸಹಪಾಠಿ, ಸಹೋದ್ಯೋಗಿ ಹುಡುಗಿಯರೊಂದಿಗೆ ಸಲುಗೆ ಇರಲಿ. ಸ್ನೇಹ, ಹರಟೆ, ಮೋಜು ಮಸ್ತಿ ಎಲ್ಲವೂ ಇರಲಿ. ಅವರೊಂದಿಗೆ ಒಂದು ನಿರಂತರ ಅಂತರದ ಗೆರೆಯೂ ಇರಲಿ. ಏಕೆಂದರೆ, ನಾನು ಮಾತ್ರವೇ ನಿನ್ನ ಏಕೈಕ ಸ್ನೇಹಿತೆ, ಕೇರ್ ಟೇಕರ್, ಹೆಂಡತಿಗಿಂತ ಹೆಚ್ಚಿನವಳು. ಸಂಗಾತಿ ಆಗುವವಳು. ಮೊದಲ ಸೂರ್ಯ ರಶ್ಮಿ ಭೂಮಿಗೀತ ಹಾಡುವಂತೆ, ನಿನ್ನ ಮನದಲ್ಲಿ ನನ್ನದೇ ಮೊದಲ ಅನುರಾಗ ಗೀತೆಯಾಗಲಿ. ನಿನ್ನ ಬದುಕಿನ ಕಠಿಣ ಸವಾಲುಗಳಿಗೆ ನನ್ನ ಹೆಜ್ಜೆಯೂ ಜೊತೆಯಾಗಲಿ.
ಬಯಸಿದ ಪ್ರೀತಿ ಸಿಗುವವರೆಗೆ ಎಲ್ಲರೂ ಒಳ್ಳೆಯವರೇ. ಬಯಕೆಯ ಹಪಹಪಿ ತೀರಿದ ನಂತರ, ಸಿಕ್ಕ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇರುವಷ್ಟು ಗಳಿಗೆಯನ್ನು ನಿನ್ನೊಂದಿಗೆ ಸುಖವಾಗಿ, ತೃಪ್ತಿಕರವಾಗಿ ಕಳೆಯುವ ಆಸೆ ನನ್ನದು. ಬೆರಳಿಗೆ ಬೆರಳ ಸೇರಿಸಿ ಬಂದುಬಿಡು ಗೆಳೆಯ, ಬದುಕು ದೊಡ್ಡದಿದೆ ಜೊತೆಗೆ ಹೆಜ್ಜೆ ಹಾಕುವ…
ಇಂತಿ ನಿನ್ನವಳು
– ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.