ಬದುಕು ನಾವು ಅಂದುಕೊಂಡಂತೆ ನಡೆಯೋದಿಲ್ಲ…
Team Udayavani, Mar 3, 2020, 4:33 AM IST
ನಿನ್ನ ನೆನಪೇ ಇನ್ನೂ ಹಸಿರಾಗಿದೆ. ಈಗ ನಾವಿಬ್ಬರೂ ಜೊತೆಗಿಲ್ಲ. ದೂರಾದದ್ದೂ ಸಣ್ಣ ವಿಷಯಕ್ಕೆ. ಅಂದು ನೀನಾದರೂ ತಾಳ್ಮೆ ವಹಿಸಲಿಲ್ಲ. ನಾನಾದರೂ ನನ್ನ ಹಠವನ್ನ ಬಿಡಲಿಲ್ಲ. ಅದರಿಂದ ನಮ್ಮಿಬ್ಬರ ಸಂಬಂಧದಲ್ಲಿ ಮಹಾ ಬಿರುಕಾಯಿತು. ಜಗಳ ನಡೆದಾಗಲೆಲ್ಲ ಸ್ವಲ್ಪ ದಿನದ ಬಳಿಕ ರಾಜಿಯಾಗಿ ಮತ್ತೆ ಮತ್ತೆ ಸೇರಿಕೊಳ್ಳುತ್ತಿದ್ದೆವು. ಆದರೀಗ ಹಾಗಾಗುವುದಿಲ್ಲ. ನಿನ್ನ ಮನಸ್ಸು ಹೇಳಿದ್ದು ಕೇಳುವ ನಿನಗೆ, ನಾನೊಬ್ಬ ತಪ್ಪಿತಸ್ಥನಂತೆ, ವಂಚಕನಂತೆ, ನಂಬಿಕೆ ದ್ರೋಹಿಯಂತೆ ಕಾಣಿಸಬಹುದು. ನನಗೆ ನೀನು ನಿಷ್ಠಾವಂತ ಪ್ರೇಮಿಯಂತೆ ಕಂಡರೂ ಮತ್ತೂಂದು ದೃಷ್ಟಿಯಲ್ಲಿ ಕೇರ್‌ಲೆಸ್ ಹುಡುಗಿ. ಪ್ರೀತಿ ಬಿಟ್ಟುಕೊಡಲು ಮನಸ್ಸಿಲ್ಲ. ಆದರೆ, ಬಲವಂತವಾಗಿ ಪ್ರೀತಿಸಿಕೊಳ್ಳುತ್ತ, ನಿನ್ನನ್ನ ಚಿನ್ನು, ಮುದ್ದು’ ಎಂದುಕೊಳ್ಳಲು ಸಾಧ್ಯವೂ ಆಗುತ್ತಿಲ್ಲ. ಒಮ್ಮೊಮ್ಮೆ ಹೋದರೆ ಹೋಗಲಿ ಅನಿಸಿದರೂ, ಮತ್ತೆ ಬರಬಾರದೇ ಎಂದು ನಾನೇ ಅಂದುಕೊಳ್ಳುತ್ತೇನೆ.
ಆದರೆ, ನಡೆದಿದ್ದೆಲ್ಲ ಮರೆತು ನೀನು ವಾಪಸ್ ಬಂದೇ ಬರುತ್ತೀಯ ಎಂಬ ನಂಬಿಕೆ ಈಗ ನನಗಿಲ್ಲ. ಅದು ನಡೆಯಬಹುದೆಂಬ ಸಣ್ಣ ಆಸೆಯನ್ನೂ ಇಟ್ಟುಕೊಂಡಿಲ್ಲ. ನೀನೇನು ಎಂಬುದು ನನಗೆ ಇಂಚಿಂಚು ತಿಳಿದಿದೆ. ಗೊತ್ತಿದ್ದರೂ ನಿರೀಕ್ಷೆ ಇಟ್ಟುಕೊಳ್ಳುವುದು ನೋವಿಗೆ ಆಹ್ವಾನ ಕೊಟ್ಟಂತೆ ಭವಿಷ್ಯದಲ್ಲಿ ನೀನಾಗಲೀ, ನಾನಾಗಲೀ ಒಬ್ಬರನ್ನೊಬ್ಬರು ಟೀಕಿಸಬಾರದು. ಆದದ್ದು ಆಯಿತಷ್ಟೇ. ಮರೆತು ಬಿಡೋಣ. ಹೊಸಜೀವನ ಇಬ್ಬರಿಗೂ ಸಿಗಲಿದೆ. ಕಠೊರ ವಾಸ್ತವದ ಸತ್ಯಗಳನ್ನು ಅರಿತು ಬದುಕಲು ಕಷ್ಟವಾಗಬಹುದು. ಆದರೇನು ಮಾಡಲು ಸಾಧ್ಯ? ನಾನು ಅಥವಾ ನೀನು ಅಂದುಕೊಂಡಂತೆ ಜೀವನದಲ್ಲಿ ನಡೆಯುವುದಿಲ್ಲ. ನಾವೇ ಹೊಂದಿಕೊಳ್ಳಬೇಕು. ಏನೇ ಆದರೂ ನಮ್ಮಿಬ್ಬರೆದೆಯಲ್ಲೂ ಗಾಢವಾದ ವೇದನೆ ಉಳಿದು ಬಿಡುವುದರಲ್ಲಿ ಅನುಮಾನವೇ ಇಲ್ಲ.
ಅಜಯ್ ಕುಮಾರ್ ಎಂ. ಗುಂಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.