ಬದುಕೆಂದರೆ ನೋವು ಬದುಕೆಂದರೆ ನಲಿವು!
Team Udayavani, Jan 1, 2019, 12:30 AM IST
ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆ ಇರೋದು ಬರೀ ಕಣ್ಣೀರು.
ನನ್ನ ಪ್ರೀತಿಯ ಹುಡುಗ ,
ದುಃಖದ ಕಡಲಿನಿಂದ ಈಗಷ್ಟೇ ಎದ್ದು ಬಂದೆ. ನನ್ನೆಲ್ಲಾ ದುಃಖದ ಮೂಲ, ನೀನಿನ್ನು ನನ್ನ ಬದುಕಿನಲ್ಲಿ ಬರಲಾರೆಯೆಂಬ ಒಂದೇ ಒಂದು ಸತ್ಯ. ನನಗೆಲ್ಲಾ ಅರ್ಥವಾಗುತ್ತೆ. ನಾನು ನೀನು ಜತೆಗಿದ್ದಾಗ ಕನಸು ಕಾಣುವುದು ಎಷ್ಟೊಂದು ಸುಲಭವಿತ್ತು. ಅದೇ ನೀನು ನಿನ್ನ ಮನೆಯಲ್ಲಿದ್ದಾಗ, ಮನೆಯವರು ಕಾಣುವ ಕನಸುಗಳಲ್ಲಿ ನೀನಿರುತ್ತೀಯ. ಅವರ ಕನಸುಗಳನ್ನು ನೀನು ಈಡೇರಿಸುತ್ತೀಯ ಎಂಬ ಅದಮ್ಯ ನಂಬಿಕೆ ಅವರಿಗಿದೆ. ಸಮಸ್ಯೆಯೆಂದರೆ, ಅವರ ಕನಸುಗಳಲ್ಲಿ ನಾನಿಲ್ಲ. ಅವರಿಗೆ ಅವರ ಕನಸುಗಳೇ ಪರಮ ಸತ್ಯ. ಆ ಸತ್ಯಗಳೇ ಅವರ ಸಂತೋಷದ ಮೂಲವಸ್ತು. ಅದು ಚೂರು ಅತ್ತಿತ್ತಲಾದರೆ ಮನೆಯೆಂಬುದು ರಣರಂಗ. ನಿನ್ನನ್ನು ಮನೆಯವರೆಲ್ಲರೂ ಅದೆಷ್ಟು ಪ್ರೀತಿಸುತ್ತಾರೆ. ಅವರ ಪ್ರೀತಿಯ ಮುಂದೆ, ನಿನ್ನೆ ಮೊನ್ನೆ ಪರಿಚಯವಾದ ಹುಡುಗಿ ನಿನ್ನನ್ನು ಸಂಪೂರ್ಣವಾಗಿ ಬಯಸಿದ್ದು ತಪ್ಪಲ್ಲವಾ?
ಹೌದೋ ಹುಡುಗ, ನೀನು ನನ್ನನ್ನು ದೂರ ಮಾಡಿ ಹೋಗುತ್ತಿರುವ ಕೋಪದಲ್ಲಿ, ನಿನ್ನನ್ನು ಮೋಸಗಾರ ಅಂತ ಹೇಳಿದ್ದೇನೋ ನಿಜ. ಆದರೆ, ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುತ್ತೆ. ಸರಿ, ನೀನಿನ್ನು ಹೊರಡು. ನೀನು ನನ್ನ ಬದುಕಿಗೆ ದಕ್ಕಿದ್ದು ಇಷ್ಟೇ ಅಂದುಕೊಳ್ಳುತ್ತೇನೆ. ನೀನೊಂದು ಮುಗಿಯದ ಕನಸು. ಈ ಜಗತ್ತು ನನ್ನ ನಿನ್ನ ನಡುವೆ ತನಗಿಷ್ಟ ಬಂದಂತೆ ಒಂದು ಗೋಡೆ ಕಟ್ಟಿಬಿಟ್ಟಿದೆ. ನನಗೆ ಅದರ ಗೊಡವೆಯಿಲ್ಲ. ನೀನು ಯಾವತ್ತಿದ್ದರೂ ನನ್ನವನು. ನಿನ್ನ ಅನಿವಾರ್ಯತೆ, ನನ್ನ ನಿಸ್ಸಹಾಯಕತೆ ಎರಡೂ ನಮ್ಮಿಬ್ಬರ ಬಲಹೀನತೆಗಳು. ನಾವಿಬ್ಬರೂ ನಮ್ಮ ನಮ್ಮ ಪರಿಸ್ಥಿತಿಗೆ ಸೋತು ಶರಣಾದವರು. ನಾವಿಬ್ಬರೂ ಕೊಂಚ ಧೈರ್ಯ ಮಾಡಿದ್ದರೆ, ಈ ಬದುಕು ಹೇಗೋ ಇರುತ್ತಿತ್ತು. ನಾವಿಬ್ಬರೂ ಕಂಡ ಕನಸಿನಂತೆ.
ಬಿಡು, ಈಗ ಅದೆಲ್ಲಾ ಆಗದ ಹೋಗದ ಮಾತುಗಳು. ನಿನ್ನ ಮದುವೆಯ ಸುದ್ದಿ ತಿಳಿಯಿತು. ನಂಗೆ ದುಃಖವಾಗಬೇಕಿತ್ತು. ಆದರೆ, ಒಳಗೆಲ್ಲೋ ಒಂದು ನಿರಾಳ ಭಾವ ನೆಲೆಸಿತು. ಯಾಕೋ ಗೊತ್ತಿಲ್ಲ! ನಿನ್ನ ಬದುಕಿನ ಹಾದಿಗೆ ನಾನು ಬಿಡಿಸಲಾಗದ ಬೇಲಿ, ಸರಿಸಲಾಗದ ಬಾಗಿಲಂತಾಗಿ ಬಿಟ್ಟಿದ್ದೇನೆಂಬ ಪಶ್ಚಾತ್ತಾಪ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆನೆಂಬ ತೊಳಲಾಟದಲ್ಲಿ ನೀ ನರಳಾಡುವಾಗ, ನನ್ನನ್ನು ಆವರಿಸಿ ಕಾಡುತ್ತಿತ್ತು. ಈಗ ನಿನ್ನ ನಿರಾಕರಣೆ ನನ್ನೊಳಗೆ ಒಂದು ನೆಮ್ಮದಿ ತಂದಿದೆ. ನಿನ್ನ ಪ್ರೀತಿಯಲ್ಲಿ ಕನಸುಗಳನ್ನಷ್ಟೇ ಕಂಡಿದ್ದ ನನಗೆ, ನಿನ್ನ ನಿರಾಕರಣೆಯಲ್ಲಿ ವಾಸ್ತವದ ಪರಿಚಯವಾಗುತ್ತಿದೆ. ಬದುಕೆಂದರೆ ಇಷ್ಟೇ ಅಲ್ಲ, ಅದು ನೋವು ನಲಿವುಗಳ ಸಂಗಮ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆಯುವ ಪಯಣ… ಉಫ್… ಸದಾ ನಗುತ್ತಾ, ಬೇರೆಯವರ ಕಾಲೆಳೆದು ಖುಷಿ ಪಡುತ್ತಾ ಇದ್ದ ನನ್ನನ್ನು, ಈ ಬದುಕು ಎದುರು ಕೂರಿಸಿಕೊಂಡು, ಎಂಥಾ ಪಾಠ ಮಾಡಿತು! ಈಗ ಹಳೆಯದನ್ನೆಲ್ಲ ನೆನಪಿಸಿಕೊಂಡ್ರೆ ಎಷ್ಟೊಂದ್ ನಗು ಬರುತ್ತೆ ಅಂದ್ರೆ, ಎಲ್ಲರ ಜೊತೆ ನಕ್ಕು ನಕ್ಕು ಸುಸ್ತಾಗಿ, ಕೊನೆಗೆ ಒಬ್ಬಳೇ ಉಳಿದಾಗ, ನನ್ನ ಜೊತೆೆ ಇರೋದು ಬರೀ ಕಣ್ಣೀರು. ಥೂ, ಈ ಭಾವನೆಗಳಿಗೆ ಗುಲಾಮರಾಗ್ಬಾರ್ದು.
ಲೋ ಹುಡ್ಗ ನೀನಾದ್ರೂ ಖುಷಿಯಾಗಿ ಚೆನ್ನಾಗಿರು. ನಿನ್ನ ನೆನಪೇ ನಂಗೆ ಸವಿಗನಸು. ಯಾವತ್ತಾದ್ರೂ ದುಃಖ ಆದಾಗ, ಅವಿÛಬೇìಕಿತ್ತು ಅಂತ ನನ್ನನ್ನ ಒಂದ್ ಕ್ಷಣ ನೆನಪು ಮಾಡ್ಕೊà. ನಂಗೆ ಅದಷ್ಟೇ ಸಾಕು.. ಮೈ ಡಿಯರ್ ಕೋತಿ, ಬಾಯ… ಬಾಯ್…
ನಿನ್ನವಳು (?)
ಅಮ್ಮು, ಮಲ್ಲಿಗೆಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.