ಬಾರೋ ಸಾಧಕರ ಕೇರಿಗೆ : ಬದುಕು ಕಿರಿದುಗೊಳಿಸಿದ ಧರ್ಮಗುರು


Team Udayavani, Oct 6, 2020, 7:55 PM IST

Josh-tdy-2

ದೇವರು ಪೂರ್ಣಾಂಕಗಳನ್ನು ಸೃಷ್ಟಿಸಿದ, ಮಿಕ್ಕಿದೆಲ್ಲವೂ ಮನುಷ್ಯಪ್ರಯತ್ನ – ಎಂಬುದು ಗಣಿತಜ್ಞ ಕ್ರೊನೆಕರ್‌ನ ಮಾತು(ಅದೇ ಹೇಳಿಕೆ ಯನ್ನುಶೀರ್ಷಿಕೆಯಾಗಿ ಹೊತ್ತಿರುವ, ಸಾವಿರಕ್ಕೂ ಹೆಚ್ಚು ಪುಟಗಳ ಉದ್ಗ್ರಂಥವೂ ಇದೆ – ಸ್ಟೀವನ್‌ ಹಾಕಿಂಗ್‌ ಬರೆದದ್ದು). ಅಂದರೆ ಪ್ರಕೃತಿಯ ಮೂಲಭೂತ ಪ್ರಕ್ರಿಯೆಗಳೆಲ್ಲ ಪೂರ್ಣಾಂಕದಲ್ಲಿ

ನಡೆಯುತ್ತವೆ; ಅದರ ಹೊರತಾಗಿ ಮನುಷ್ಯ ತನಗೆ ಅಗತ್ಯ ಬಿದ್ದಂತೆಲ್ಲ ಹೊಸ ಬಗೆಯ ಸಂಖ್ಯೆಗಳನ್ನು ಸೃಷ್ಟಿಸುತ್ತಾ ನಡೆದ ಎಂದೂ ಅರ್ಥೈಸಿಕೊಳ್ಳಬಹುದು. ಆದರೆ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುವ ಬಹಳಷ್ಟು ಸಂಗತಿಗಳು ಪೂರ್ಣಾಂಕದಲ್ಲಿಲ್ಲದೆ ಭಿನ್ನರಾಶಿಗಳಲ್ಲೋ, ಅಭಾಗಲಬ್ಧ ಸಂಖ್ಯೆಗಳಲ್ಲೋ ಇರುವುದು ಅರಿವಿಗೆ ಬರುತ್ತದೆ. ವೃತ್ತದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುವ ಉತ್ತರ ಒಂದು ಅಭಾಗಲಬ್ಧ ಸಂಖ್ಯೆ. ಭೂಮಿಯು ಸೂರ್ಯನಿಗೆ ಪ್ರದಕ್ಷಿಣೆ ಬರುವ ಅವಧಿ, ಭೂಮಿಯ ಆವರ್ತನಾವಧಿ, ಚಂದ್ರ ಭೂಮಿಗೆ ಸುತ್ತುಹಾಕುವ ಅವಧಿ.. ಇವ್ಯಾವುವೂ ಪೂರ್ಣಾಂಕಗಳಲ್ಲ. ಬಹುಶಃ ಇದೇ ಕಾರಣಕ್ಕಿರಬೇಕು, ಜಗತ್ತಿನಲ್ಲಿ ಕ್ಯಾಲೆಂಡರ್‌ ಬರೆಯುವ ಹಲವು ಪ್ರಯತ್ನಗಳಾದವು ಮತ್ತು ಅವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ನಿಖರತೆಗಿಂತ ತುಸು ಆಚೀಚೆಯೇ ನಿಂತವು.

ಜೂಲಿಯಸ್‌ ಸೀಸರನು ಸಿಸೆಜೊನಿಸ್‌ ಎಂಬ ಗಣಿತಜ್ಞನನ್ನು ಬಳಸಿಕೊಂಡು ಮಾಡಿದ ಪರಿಷ್ಕರಣೆ ಅವನ ಕಾಲಕ್ಕೇನೋ ಸರಿಯಾಗಿತ್ತು; ಆದರೆಸಾವಿರದೈನೂರುವರ್ಷಗಳಾಗುವಷ್ಟರಲ್ಲಿಆ ಕ್ಯಾಲೆಂಡರಿನ ದೋಷಗಳೂ ಢಾಳಾಗಿಯೇ ಕಾಣಿಸತೊಡಗಿದವು. ಹಬ್ಬಗಳಿಗೂ ಪ್ರಕೃತಿಯ ಮಾಸಗಳಿಗೂ ವಾರಗಟ್ಟಲೆ ವ್ಯತ್ಯಾಸ ಬಂದಿತ್ತು. ಮುಖ್ಯವಾಗಿ ಈಸ್ಟರ್‌ ಹಬ್ಬ ಎಲ್ಲೆಲ್ಲೋ ಹೋಗಿತ್ತು. ಇವನ್ನೆಲ್ಲ ಮತ್ತೆ ಸರಿಪಡಿಸಬೇಕೆಂದು ಪೋಪ್‌ ಹದಿಮೂರನೆಯ ಗ್ರೆಗೊರಿ ನಿರ್ಧರಿಸಿ, ಕ್ರಿಸ್ಟೊಫ‌ರ್‌ ಕ್ಲಾವಿಯಸ್‌ ಎಂಬ ಗಣಿತಜ್ಞನ ಮೊರೆಹೋದ.

ಕ್ಲಾವಿಯಸ್‌ ಅನೇಕ ಲೆಕ್ಕಾಚಾರಗಳನ್ನು ಮಾಡಿ, ಕೊನೆಗೆ ಒಂದು ಪ್ರಸ್ತಾಪವನ್ನು ಪೋಪ್‌ನ ಮುಂದಿಟ್ಟ. ಅದೇನೆಂದರೆ, “ಆ ವರ್ಷದ (ಅಂದರೆ 1582ರ) ಯಾವುದೇ ತಿಂಗಳಲ್ಲಿ ಒಟ್ಟು 10 ದಿನಗಳನ್ನು ಕ್ಯಾಲೆಂಡರಿಂದ ಕೈ ಬಿಡಬೇಕು. ಆಗ ಮಾತ್ರ ಕ್ಯಾಲೆಂಡರ್‌ ಸರಿಹೋಗುತ್ತದೆ. ಅದರ ಹೊರತಾಗಿ ಮತ್ತೇನನ್ನೂ ಮಾಡಲು ಸಾಧ್ಯವಿಲ್ಲ…’ ಎಂದ. ಕ್ಲಾವಿಯಸ್ನ ಮಾತನ್ನು ಪರಿಗಣಿಸಿ ಪೋಪ್‌ ಆ ವರ್ಷದ ಅಕ್ಟೋಬರ್‌ 4ರ ನಂತರದ ದಿನ ಅಕ್ಟೋಬರ್‌ 15 ಆಗಿರಬೇಕೆಂದೂ,ಆಎರಡು ದಿನಗಳ ನಡುವಿನ ಹತ್ತು ದಿನಗಳನ್ನು ಕ್ಯಾಲೆಂಡರಿಂದ ಕೈ ಬಿಡಬೇಕೆಂದೂ ಆದೇಶಿಸಿದ! ಹಾಗಾಗಿ ಆ ವರ್ಷದ ಕ್ಯಾಲೆಂಡರಲ್ಲಿಅಕ್ಟೋಬರ್‌ ತಿಂಗಳು ಎಲ್ಲಕ್ಕಿಂತಚಿಕ್ಕದು. ಅದರಲ್ಲಿದ್ದುದು ಕೇವಲ 21 ದಿನಗಳಷ್ಟೆ. ಈ ಆಜ್ಞೆ ಹೊರಬೀಳುತ್ತಿದ್ದಂತೆಯೇ ಯುರೋಪಿನ ಬಹಳಷ್ಟು ಕಡೆಗಳಲ್ಲಿ ಪ್ರತಿಭಟನೆಗಳಾದವು. ಯಾವೊಂದು ದೇಶವೂ ಆತನ ಮಾತನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆತನ ಕೆಲಸವೇನಿದ್ದ ರೂರಿಲಿಜನ್‌ಗೆ ಸಂಬಂಧಪಟ್ಟಿದ್ದು ಅಷ್ಟೇ; ಆತ ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತಲೆ ಹಾಕಬಾರದು ಎಂದು ಜನ ಸಿಡಿದೆದ್ದರು.ಬೀದಿಗಿಳಿದರು. ನಮ್ಮ ಜೀವನದಹತ್ತು ದಿನಗಳನ್ನು ಪೋಪ್‌ಕಿತ್ತುಕೊಂಡಿದ್ದಾನೆ ಎಂದೂ ದೂರಿದರು.

ಜೂಲಿಯಸ್‌ ಸೀಜರ್‌ ಸರಿಮಾಡಿಸಿದ್ದ ಕ್ಯಾಲೆಂಡರಿಗೆ ಹೇಗೆ ಜೂಲಿಯನ್‌ ಕ್ಯಾಲೆಂಡರ್‌ ಎಂಬ ಹೆಸರು ಬಂತೋ, ಹಾಗೆಯೇ ಪೋಪ್‌ ಗ್ರೆಗೊರಿ ಮಾಡಿಸಿದ ಪರಿಷ್ಕೃತ ಕ್ಯಾಲೆಂಡರಿಗೆ ಗ್ರೆಗೊರಿಯನ್‌ ಕ್ಯಾಲೆಂಡರ್‌ ಎಂಬ ಹೆಸರು ಬಿತ್ತು. ಎರಡೂ ಕಡೆಗಳಲ್ಲೂ ಅವನ್ನು ಪರಿಷ್ಕರಿಸಿಕೊಟ್ಟ ಗಣಿತಜ್ಞರು ಮಾತ್ರ ಅಜ್ಞಾತರಾಗಿಯೇ ಉಳಿದುಬಿಟ್ಟರು. ­

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.