ಬಾರೋ ಸಾಧಕರ ಕೇರಿಗೆ : ರುಚಿ ಹಣ್ಣು, ದೊರಗು ಭಿತ್ತಿ
Team Udayavani, Nov 24, 2020, 8:33 PM IST
ಮ್ಯಾಕ್ ಡೊನಾಲ್ಡ್ ನಲ್ಲಿ ಫ್ರೆಂಚ್ ಫ್ರೈಸ್ ತಿಂದವರು ನೀವಾಗಿದ್ದರೆ ಬಹುಶಃ ಲೂಥರ್ ರ್ಬಬ್ಯಾಂಕ್‌ನ ಋಣದಲ್ಲಿ ನೀವು ಬಿದ್ದಿರುವ ಸಾಧ್ಯತೆಯಿದೆ. ಯಾಕೆಂದರೆ ಫ್ರೆಂಚ್ ಫ್ರೈಸ್‌ಗೆಂದು ಬಳಸುವ ಆಲೂಗಡ್ಡೆಯ ತಳಿ ಅಭಿವೃದ್ಧಿಪಡಿಸಿದಾತ ಇದೇ ಲೂಥರ್ ಬ್ಯಾರ್ಯಂಕ್. ಹದಿನೆಂಟನೇ ಶತಮಾನದ ನಡುಭಾಗದಲ್ಲಿ ಹುಟ್ಟಿದ ಲೂಥರ್‌ನಿಗೆ ಚಿಕ್ಕಂದಿನಿಂದಲೂ ಜೀವಶಾಸ್ತ್ರದಲ್ಲಿ ಅತಿಯಾದ ಆಸಕ್ತಿ ಇತ್ತು. ಮುಂದೆ, ಜೀವಶಾಸ್ತ್ರದಲ್ಲೇ ಪದವಿ ಪಡೆದ ಮೇಲಂತೂ ಹಾರಬಯಸಿದ ಹಕ್ಕಿಗೆ ರೆಕ್ಕೆಪುಕ್ಕ ಹುಟ್ಟಿದಂತಾಯಿತು. ತಳಿಶಾಸ್ತ್ರದಲ್ಲಿ ಲೂಥರ್ ವಿಶೇಷ ಅಧ್ಯಯನ ಮಾಡಿದ.
ಯುರೋಪಿನಲ್ಲಿ ಆಲೂಗಡ್ಡೆ ಮುಖ್ಯ ಆಹಾರ. ಆದರೆ ಆಲೂಗಡ್ಡೆಯನ್ನು ಬಾಧಿಸುವಒಂದು ಸೂಕ್ಷ್ಮಣುರೋಗಆವರಿಸಿಕೊಂಡದ್ದರಿಂದ 1845-49ರ ಅವಧಿಯಲ್ಲಿ ಇಡೀ ಖಂಡದ ಹೊಲಗದ್ದೆಗಳೆಲ್ಲಪಾಳುಬಿದ್ದವು. ಆಲೂಗಡ್ಡೆ ಬೆಳೆ ಸಾರ್ವತ್ರಿಕವಾಗಿ ನಾಶವಾಗಿ ದೊಡ್ಡ ಕ್ಷಾಮ ಉಂಟಾಯಿತು. ಅದೆಷ್ಟು ಭೀಕರ ಸ್ವರೂಪ ಪಡೆಯಿತೆಂದರೆ, ಐರ್ಲೆಂಡಿನಲ್ಲಿ ತಿನ್ನಲು ಆಹಾರವಿಲ್ಲದೆ ಸಾವಿರಾರು ಜನ ಹಸಿದು ಪ್ರಾಣಬಿಟ್ಟರು. ಲಕ್ಷಾಂತರ ಮಂದಿ ಗುಳೆ ಹೋದರು. ಆ ಸಂದರ್ಭದಲ್ಲಿ ಲೂಥರ್‌ಕಡಿಮೆ ನೀರಿನಂಶ ಬಳಸಿಕೊಂಡುಬೇಗಕಟಾವಿಗೆ ಬರುವ ಆಲೂಗಡ್ಡೆ ತಳಿಯನ್ನು ಅಭಿವೃದ್ಧಿಪಡಿಸಿ ಜನರಿಗೆ ಹಂಚಿದ. ರೋಗ ಹರಡುವ ಸೂಕ್ಷ¾ಜೀವಿಗಳಿಂದ ಈ ಆಲೂಗಡ್ಡೆಗೆ ಯಾವ ಹಾನಿಯೂ ಆಗದಂತೆ ಎಚ್ಚರವಹಿಸಿದ. ಈ ತಳಿ ಅಂಥ ಎಲ್ಲ ಸೂಕ್ಷ್ಮಾಣುಗಳ ವಿರುದ್ಧವೂ ರೋಗನಿರೋಧತೆ ಬೆಳೆಸಿಕೊಳ್ಳುವಂತೆ ನೋಡಿಕೊಂಡ. ಇದರಿಂದಾಗಿ ಲೂಥರ್‌ನ ಆಲೂಗಡ್ಡೆ ತಳಿ ಯುರೋಪಿನಲ್ಲಷ್ಟೇ ಅಲ್ಲ, ಅಮೆರಿಕದಲ್ಲೂ ಭಲೇ ಜನಪ್ರಿಯವಾಯಿತು.
ಎಷ್ಟೆಂದರೆ ಮುಂದೆ ಜಗತ್ತಿನಾದ್ಯಂತ ಅಂಗಡಿ ತೆರೆದಿದ್ದ ಮ್ಯಾಕ್ ಡೊನಾಲ್ಡ್, ಫ್ರೆಂಚ್ ಫ್ರೈಗಾಗಿ ಇದೇ ಆಲೂಗಡ್ಡೆಯನ್ನು ಅವಲಂಬಿಸುವಷ್ಟು! ಲೂಥರ್ ತನ್ನ 55 ವರ್ಷಗಳ ದೀರ್ಘ ವೃತ್ತಿಜೀವನದ ಅವಧಿಯಲ್ಲಿ ಸುಮಾರು 800 ಬಗೆ ಬಗೆಯ ಸಸ್ಯ, ತರಕಾರಿ, ಬಳ್ಳಿ, ಗಿಡಗಳ ವಿಶೇಷ ತಳಿಗಳನ್ನು ಅಭಿವೃದ್ಧಿಪಡಿಸಿದ. ಮುಳ್ಳಿಲ್ಲದ, ಹಸುಗಳಿಗೆ ಉತ್ತಮ ಮೇವಾಗಬಲ್ಲ ಮೃದುಕ್ಯಾಕ್ಟಸ್ ಈತನದೇಕೊಡುಗೆ. ಹಣ್ಣು- ಹೂವುಗಳ ಹೊಚ್ಚ ಹೊಸ ತಳಿಸೃಷ್ಟಿಗಳು ಎಂಬ ಅವನ ಗಿಡಮರಬಳ್ಳಿಗಳ ಕ್ಯಾಟಲಾಗ್ ಸುಮಾರು ಮೂರ್ನಾಲ್ಕು ದಶಕಗಳುದ್ದಕ್ಕೂ ಜನಪ್ರಿಯ ಹೊತ್ತಗೆಯಾಗಿತ್ತು. ಇಷ್ಟೆಲ್ಲ ಪ್ರಸಿದ್ಧಿ ಪಡೆದ ವ್ಯಕ್ತಿ ವೈಫಲ್ಯವನ್ನೇಕಾಣಲಿಲ್ಲವೆ? ಇತ್ತು, ಅಂಥ ಸಂದರ್ಭವೂ ಇತ್ತು. ಒಮ್ಮೆ ಲೂಥರ್ ವಾಲ್ನಟ್‌ನ ಹೊಸತಳಿಯ
ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ. ವಾಲ್ನಟ್ ಎಂದರೆ ಒಂದು ಬಗೆಯ ಡ್ರೈ ಫ್ರೊಟ್ಸ್. ಹೊರಭಿತ್ತಿ ದಪ್ಪ, ಗಟ್ಟಿ. ಒಳಗೆ ಮಿದುಳಿನ ರಚನೆಯಲ್ಲಿರುವಒಂದು ಸಣ್ಣ ಹಣ್ಣಿನ ಭಾಗ. ಗೋಡಂಬಿ, ಖರ್ಜೂರಗಳಂತೆ ಇದೂ. ಒಳಗಿನ ರುಚಿಯಾದ ಹಣ್ಣು ತಿನ್ನಬೇಕಾದರೆ ಹೊರಗಿನ ದೊರಗುಭಿತ್ತಿಯನ್ನು ಕಲ್ಲಿನಲ್ಲೋ ಕುಟ್ಟಣಿಗೆಯ ಮೂಲಕವೋ ಜಜ್ಜಿಕುಟ್ಟಿ ಒಡೆಯಬೇಕು. ತಿನ್ನುವ ಸುಖ ಬೇಕಾದರೆ ಈ ಜಜ್ಜುವಕಷ್ಟ ಅನಿವಾರ್ಯ!
ಲೂಥರ್, ಮೃದು ಭಿತ್ತಿ ಇರುವ, ಸುಲಭದಲ್ಲಿ ಬೆರಳುಗಳಿಂದ ಬಿಡಿಸಿ ತೆಗೆಯಬಹುದಾದ ವಾಲ್ನಟ್ ಹಣ್ಣುಗಿಡದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ. ಆದರೆಕೆಲವೇ ದಿನಗಳಲ್ಲಿ ಅವನಿಗೆ ಈ ಪ್ರಯೋಗದಲ್ಲಿ ತಾನು ಪ್ರಕೃತಿಯ ಮುಂದೆ ಸೋತೆ ಅನ್ನಿಸಿತು.ಕಾರಣ? ತೆಳು ಭಿತ್ತಿಯ ವಾಲ್ನಟ್ ಮರದಲ್ಲಿ ಹುಟ್ಟಲಿಲ್ಲವೆ? ಹುಟ್ಟಿತು! ಗ್ರಾಹಕರಿಗೆ ಈ ತೆಳುಸಿಪ್ಪೆಯ ಹಣ್ಣು ಇಷ್ಟವಾಗಲಿಲ್ಲವೆ? ಅದೂ ಆಯಿತು. ಆದರೂ ಪ್ರಯೋಗ ವಿಫಲ ಯಾಕೆ? ಯಾಕೆಂದರೆ ಗಿಡದಲ್ಲಿ ಹಣ್ಣು ಪಕ್ವವಾಗುವುದಕ್ಕೆ ಮೊದಲೇ ಅವು ಹಕ್ಕಿ ಮತ್ತು ಅಳಿಲುಗಳ ಪಾಲಾದವು! ರುಚಿಹಣ್ಣನ್ನು ಸವಿಯಲು ಪ್ರಾಣಿಪಕ್ಷಿಗಳು ಮರಗಳಿಗೆ ಮುತ್ತಿಗೆ ಹಾಕಿಬಿಟ್ಟವು! ವಾಲ್ನಟ್‌ನ ಭಿತ್ತಿಯನ್ನು ಪ್ರಕೃತಿ ದೊರೆಗಾಗಿ ಇಟ್ಟದ್ದು ಯಾಕೆ ಎಂಬುದು ಲೂಥರ್‌ಗೆ ಆಗ ಅರ್ಥವಾಯಿತು!
– ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.