ಜೈಲು ಬದಲಿಸಿದ ಬದುಕಿನ ದಿಕ್ಕು

Team Udayavani, Mar 23, 2021, 4:35 PM IST

ಜೈಲು ಬದಲಿಸಿದ ಬದುಕಿನ ದಿಕ್ಕು

ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ನಿರ್ದಿಷ್ಟ ವಿಭಾಗಗಳು ಪ್ರಸಿದ್ಧವಾಗಿರುತ್ತವೆ. ಉದಾಹರಣೆಗೆ ಜರ್ಮನಿಯ ಗಾಟಿಂಗನ್‌ ವಿಶ್ವವಿದ್ಯಾಲಯದ ಗಣಿತ ವಿಭಾಗ ಹೆಸರುವಾಸಿ.

ಗೌಸ್‌, ಹಿಲ್ಬರ್ಟ್‌ರಂಥ ಅತಿರಥ ಮಹಾರಥರು ಆ ವಿಭಾಗವನ್ನು ಕಟ್ಟಿಬೆಳೆಸಿದರು. ಅದೇ ರೀತಿ ಅಮೆರಿಕದ ಒಹಾಯೋ ಸ್ಟೇಟ್‌ ಯೂನಿವರ್ಸಿಟಿಯ ಗಣಿತ ವಿಭಾಗವೂ ಬಹಳ ಪ್ರಸಿದ್ಧ. ಅದನ್ನು ಪ್ರಾರಂಭಿಸಿ, ಬೆಳೆಸಿ, ವಿಶ್ವಮಾನ್ಯತೆ ದೊರಕಿಸಿಕೊಟ್ಟ ಗಣಿತಜ್ಞ ತಿಬೋರ್‌ ರ್ಯಾಡೋ ಎಂಬಾತ.

ರ್ಯಾಡೋ ಮೂಲತಃ ಗಣಿತದ ವಿದ್ಯಾರ್ಥಿಯಲ್ಲ. 1915ರ ಸಮಯದಲ್ಲಿ ಆತ ಸಿವಿಲ್‌ ಎಂಜಿನಿಯರಿಂಗ್‌ ಓದಲು ಕಾಲೇಜಿಗೆ ಪ್ರವೇಶ ಪಡೆದಿದ್ದನಷ್ಟೆ. ಅಷ್ಟರಲ್ಲಿ ಯುರೋಪಿನಲ್ಲಿಯುದ್ಧದ ಕಾರ್ಮೋಡ ಕವಿಯಿತು. ಆಸ್ಟ್ರಿಯಾವು ಸರ್ಬಿಯದಮೇಲೆ ಮುಗಿಬಿತ್ತು. ಆಸ್ಟ್ರೋ-ಹಂಗೆರಿಯ ಮೇಲೆ ರಷ್ಯ ಗುರ್‌ ಎಂದಿತು. ರಷ್ಯದ ಮೇಲೆ ಜರ್ಮನಿ ಯುದ್ಧ ಘೋಷಿಸಿತು.

ಜರ್ಮನಿಯ ಮೇಲೆ ಫ್ರಾನ್ಸ್ ಆಕ್ರಮಣ ನಡೆಸಿತು. ಹೀಗೆ ಯುರೋಪಿನ ಹತ್ತಾರು ದೇಶಗಳು ಒಂದರ ಮೇಲೊಂದರಂತೆಮುಗಿಬಿದ್ದು ಕಿತ್ತಾಡತೊಡಗಿದಾಗ ಆ ಎಲ್ಲಾ ದೇಶಗಳಕಾಲೇಜು ವಿದ್ಯಾರ್ಥಿಗಳೂ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿಯೋಧರ ಸಮವಸ್ತ್ರ ಧರಿಸಿದರು. ರ್ಯಾಡೋ ಹಂಗೆರಿಯಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿ ಯುದ್ಧಭೂಮಿಗೆತೆರಳಬೇಕಾಯಿತು. ರಷ್ಯನ್‌ ಸೇನೆ ಹಂಗೆರಿಯ ಸಾವಿರಾರು ಸೈನಿಕರನ್ನು ಹಿಡಿದು ಕೈದಿಗಳಾಗಿ ಸೆರೆಗೆ ತಳ್ಳಿತು. ಹಾಗೆಸೈಬೀರಿಯ ಸೇರಿದವರಲ್ಲಿ ರ್ಯಾಡೋ ಕೂಡಇದ್ದ. ಜೈಲಿನಲ್ಲಿ ಆತನಿಗೆ ಹೆಲಿ ಎಂಬಾತನ ಪರಿಚಯವಾಯಿತು. ಹೆಲಿ ಯೂನಿವರ್ಸಿಟಿಯಲ್ಲಿ ಗಣಿತ ಓದಿಕೊಂಡಿದ್ದವನು. ಆತಜೈಲಿನ ಉಳಿದ ಕೈದಿಗಳಿಗೆ ಗಣಿತ ಶಿಕ್ಷಕನಾಗಿ ಕೆಲಸಮಾಡತೊಡಗಿದ. ಪಾಠಗಳು ಎಷ್ಟು ಆಸಕ್ತಿದಾಯಕವಾಗಿದ್ದವೆಂದರೆ ರ್ಯಾಡೋ ಜೈಲಿನ ಲೈಬ್ರರಿಯಲ್ಲಿದ್ದ ಗಣಿತ ಪುಸ್ತಕಗಳನ್ನೆಲ್ಲ ಓದಿ ಅರಗಿಸಿಕೊಂಡ.

ನಾಲ್ಕು ವರ್ಷಗಳ ಸೆರೆವಾಸದ ನಂತರ, ಜೀವನವನ್ನೆಲ್ಲ ಅಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಗಬಹುದೆಂದು ಅರಿತರ್ಯಾಡೋ ಪಾರಾಗುವ ಯೋಜನೆ ಹಾಕತೊಡಗಿದ. ಸಮಯನೋಡಿ ಜೈಲಿನ ಬೇಲಿಗಳನ್ನು ಹಾರಿ ಆಚೆಬಿದ್ದ ಆತ ಅಲ್ಲಿಂದಮತ್ತೂ ಉತ್ತರಕ್ಕೆ, ಉತ್ತರ ಧ್ರುವದತ್ತ ನಡೆಯತೊಡಗಿದ. ಅಲ್ಲಿಎಸ್ಕಿಮೋಗಳ ಭೇಟಿಯಾಗಿ, ಅವರ ಸ್ನೇಹ ಸಂಪಾದಿಸಿ,ಪಶ್ಚಿಮದತ್ತ ತನ್ನ ಪಯಣ ಮುಂದುವರಿಸಿದ. 6000 ಕಿ.ಮೀ.ಗಳನ್ನೂ 1000ಕ್ಕೂ ಹೆಚ್ಚು ತಾಸಿನ ನಡಿಗೆಯನ್ನೂ ಕ್ರಮಿಸಿರ್ಯಾಡೋ ಕೊನೆಗೆ ತನ್ನ ಬುಡಾಪೆಸ್ಟಿನ ಊರನ್ನು ಮುಟ್ಟಿದ. ಹೆಲಿಕಲಿಸಿದ ಗಣಿತದ ರುಚಿ ಹೇಗಿತ್ತೆಂದರೆ ರ್ಯಾಡೋ ಸಿವಿಲ್‌ಇಂಜಿನಿಯರಿಂಗ್‌ ಓದನ್ನು ಮುಂದುವರಿಸುವ ಆಸೆ ಕೈಬಿಟ್ಟುಗಣಿತವನ್ನೇ ತನ್ನ ಓದಿನ ವಿಷಯವಾಗಿ ಆರಿಸಿಕೊಂಡ. ಅದರಲ್ಲಿಪದವಿ ಗಳಿಸಿದ. ನಂತರ ಅಮೆರಿಕೆಗೆ ತೆರಳಿ, ಶಿಕ್ಷಕವೃತ್ತಿ ಪ್ರಾರಂಭಿಸಿ, ಕೊನೆಗೆ ಒಹಾಯೋ ಸ್ಟೇಟ್‌ಯೂನಿವರ್ಸಿಟಿಯಲ್ಲಿ ಗಣಿತ ಪ್ರಾಧ್ಯಾಪಕನಾಗಿ ಆಯ್ಕೆಯಾದ. ಬದುಕಿನ ತಿರುವುಗಳು ಹೇಗೇಗಿರುತ್ತವೋ, ವ್ಯಕ್ತಿಗಳನ್ನು ಎಲ್ಲೆಲ್ಲಿ ತಂದುಮುಟ್ಟಿಸುತ್ತವೋ ಯಾರು ಬಲ್ಲರು!

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.