ಲೈಟ್ಸ್‌ ಕ್ಯಾಮೆರಾ ಲಡಾಖ್‌;  ಉಡುಪಿ ಹುಡುಗನ ರಾಯಲ್‌ ಹುರುಪು


Team Udayavani, Jul 18, 2017, 3:40 AM IST

SACHIN-SHETTY2.gif

ಸಾಕ್ಷ್ಯಚಿತ್ರವೊಂದರ ನಿರ್ಮಾಣಕ್ಕಾಗಿ ಸಚಿನ್‌ ಶೆಟ್ಟಿ 40 ದಿನಗಳಲ್ಲಿ 16 ರಾಜ್ಯಗಳನ್ನು ಸುತ್ತಿದ್ದಾರೆ. ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೆ ಬೈಕ್‌ ರೈಡ್‌ ಮಾಡುವುದೆಂದರೆ ಸುಮ್ಮನೆಯೇ? 

ಪ್ರಪಂಚದಲ್ಲೇ ಅತಿ ಎತ್ತರ ಪ್ರದೇಶದಲ್ಲಿರುವ ರಸ್ತೆ ಮೇಲೆ ಒಬ್ಬಂಟಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಸಮುದ್ರಮಟ್ಟದಿಂದ ಸುಮಾರು 17 ಸಾವಿರ ಅಡಿಗಳಷ್ಟು ಎತ್ತರದ ಲಡಾಖ್‌ನ ಕಾರ್ದುಂಗ್ಲಾ ಪಾಸ್‌ ರಸ್ತೆ ಅದು. ಬೆಂಗಳೂರಿನಿಂದ ಹೊರಟು ವಾರಗಳೇ ಕಳೆದಿದ್ದವು. ಹಗಲು ರಾತ್ರಿ ಬೈಕ್‌ನಲ್ಲಿ ಪ್ರಯಾಣಿಸಿ ಮೈಕೈಯೆಲ್ಲಾ ಸೋತಿದ್ದವು. ನಿರ್ಜನ ಪ್ರದೇಶ ಬೇರೆ. ಸುತ್ತಮುತ್ತ ಯಾವ ವಾಹನಗಳೂ ಕಾಣಿಸುತ್ತಿಲ್ಲ, ಜನರೂ ಇಲ್ಲ. ಮೈಕೈ ನಡುಗುತ್ತಿದೆ. ಜರ್ಕಿನ್‌, ಸ್ವೆಟರ್‌, ಶರ್ಟುಗಳಷ್ಟನ್ನೂ ಒಂದರ ಮೇಲೊಂದು ಹಾಕಿಯೂ ವಿಪರೀತ ಚಳಿ! 

ಆ ರಸ್ತೆಯಲ್ಲಿ ಒಂದಷ್ಟು ದೂರ ಹೋಗುವಷ್ಟರಲ್ಲಿ ಬೈಕ್‌ ಎಂಜಿನ್‌ ತನ್ನಿಂದ ತಾನೇ ಆಫ್ ಆಗಬೇಕೇ? ಟ್ಯಾಂಕ್‌ ಚೆಕ್‌ ಮಾಡಿದರೆ ಪೆಟ್ರೋಲು ತುಳುಕುವಷ್ಟಿದೆ. ಗಾಡಿ ಮಾತ್ರ ಏನು ಮಾಡಿದರೂ ಸ್ಟಾರ್ಟ್‌ ಆಗುತ್ತಿಲ್ಲ. ಕತ್ತಲು ಬೇರೆ ಕವಿಯುತ್ತಾ ಇದೆ. ಯಾವ ವಾಹನವೂ ಬರುತ್ತಿಲ್ಲ. ದೇವರೇ ಕಾಪಾಡಬೇಕು ಎಂದುಕೊಳ್ಳುವಷ್ಟರಲ್ಲಿ ಭಾರತೀಯ ಸೈನಿಕರು ಅಲ್ಲಿ ಕಂಡುಬಂದರು. ನಾನು ಅವರಿಗೆ ಅನುಮಾನಾಸ್ಪದವಾಗಿ ಕಂಡಿರಲೇಬೇಕು. ಏಕೆಂದರೆ, ಅವರು ನನ್ನ ಇತ್ಯೋಪರಿಗಳನ್ನು ವಿಚಾರಿಸತೊಡಗಿದರು. ದಾಖಲೆಗಳನ್ನೂ ಪರಿಶೀಲಿಸಿದರು. ನಂತರ ಅವರಿಗೆ ನಾನು ಯಾವುದೇ ನಿಗೂಢ ಉದ್ದೇಶದವನಲ್ಲವೆಂದು ಖಾತರಿಯಾದ ಬಳಿಕ ಅವರೇ ಬೈಕ್‌ ಅನ್ನು ರಿಪೇರಿ ಮಾಡಿಕೊಟ್ಟರು! 

ಹೀಗೆ ಯುವಕನೊಬ್ಬ ತನ್ನ ರೈಡಿಂಗ್‌ ಕತೆಗಳನ್ನು ಹೇಳುತ್ತಿದ್ದರೆ, ಎದುರು ಕುಳಿತವರು ದಂಗಾಗದೇ ಇರಲು ಸಾಧ್ಯವೇ ಇಲ್ಲ. ಇದು ಸಚಿನ್‌ ಶೆಟ್ಟಿಯವರ ಅನುಭವ ಕಥನ. ಉಡುಪಿ ಮೂಲದ ಸಚಿನ್‌ ಸದ್ಯ ಬೆಂಗಳೂರಿನಲ್ಲಿ ಉದ್ಯೋಗನಿಮಿತ್ತ ನೆಲೆಸಿದ್ದಾರೆ. ಸಾಕ್ಷ್ಯಚಿತ್ರ ನಿರ್ಮಾಣ, ಕನ್ನಡ, ತೆಲುಗು, ಹಿಂದಿ ಚಿತ್ರರಂಗದಲ್ಲಿ ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಟ್ರಾವೆಲಿಂಗ್‌ ಇವರ ಹವ್ಯಾಸ. 

ಸಾಕ್ಷ್ಯಚಿತ್ರವೊಂದರ ನಿರ್ಮಾಣಕ್ಕಾಗಿ ಒಬ್ಬರೇ 40 ದಿನಗಳಲ್ಲಿ 16 ರಾಜ್ಯಗಳನ್ನು ಸುತ್ತಿರುವುದು ಅವರ ಹೆಗ್ಗಳಿಕೆ. “ಜಾವಾ ಬೈಕ್‌ ರೈಡಿಂಗ್‌ ಕ್ಲಬ್‌’ನ ಸದಸ್ಯರಾಗಿರುವ ಸಚಿನ್‌ ಹೆಸರು ಇತ್ತೀಚಿಗಷ್ಟೇ ಗಿನ್ನೆಸ್‌ನಲ್ಲಿ ಸೇರ್ಪಡೆಯಾಗಿದೆ. ಅದರಿಂದಲೇ ದೇಶಾದ್ಯಂತ ಬೈಕ್‌ನಲ್ಲಿ ಪ್ರಯಾಣಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಲು ಅವರಿಗೆ ಪ್ರೇರಣೆ ಸಿಕ್ಕಿದ್ದು. 

ಪ್ರಯಾಣವೆಂದರೆ ಬರೀ ಪ್ರಯಾಣವಲ್ಲ. ಹೋಗುವ ಜಾಗದ ಕುರಿತ ಮಾಹಿತಿ, ಅಲ್ಲಿನ ಜನರೊಂದಿಗಿನ ಒಡನಾಟ, ಅವರ ಆಚಾರ, ಕಲೆ, ಸಂಸ್ಕೃತಿ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳುವುದೂ ತುಂಬಾ ಮುಖ್ಯ ಎನ್ನುವುದು ಸಚಿನ್‌ ಅಭಿಪ್ರಾಯ. ಹೀಗಾಗಿ ಹೋಗುತ್ತಿದ್ದ ಜಾಗಗಳಲ್ಲೆಲ್ಲ ಸ್ಥಳೀಯರೊಂದಿಗೆ ಸಚಿನ್‌ ಬೆರೆತಿದ್ದಾರೆ. ಅವರ ಜೊತೆಯಿದ್ದಿದ್ದು ಸ್ವಲ್ಪವೇ ಸಮಯವಾದರೂ ಅವರ ಜೀವನಶೈಲಿಯನ್ನು ಸೆರೆಹಿಡಿಯುವ, ಕಲಿಯುವ ಪ್ರಯತ್ನವನ್ನವರು ಮಾಡಿದ್ದಾರೆ. ಸಚಿನ್‌ರವರು 16 ರಾಜ್ಯಗಳನ್ನು ಸುತ್ತಿದ್ದು ತಮ್ಮ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ. ಪ್ರಯಾಣಕ್ಕೆಂದೇ ಗಾಡಿಯನ್ನು ವಿಶೇಷವಾಗಿ ಮಾರ್ಪಡಿಸಿಕೊಂಡಿದ್ದಾರೆ.

ಇವರು ಬೆಂಗಳೂರಿನಿಂದ ಹೊರಡುವಾಗ ಸಣ್ಣ ಆ್ಯಕ್ಸಿಡೆಂಟಿಗೆ ಒಳಗಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರಂತೆ. ಆದರೆ, ಪ್ರವಾಸದ ದಿನಾಂಕವನ್ನು ಮುಂದೂಡಲಿಲ್ಲ. ಕಾಲುನೋವಿನಲ್ಲೇ ಪ್ರಯಾಣ ಹೊರಟಿದ್ದರು. ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೆ ಬೈಕ್‌ ರೈಡ್‌ ಮಾಡುವುದೆಂದರೆ ಸುಮ್ಮನೆಯೇ? ಅದೂ ವಿಭಿನ್ನ ಭೂ ಪ್ರದೇಶಗಳಲ್ಲಿ, ವಿಭಿನ್ನ ವಾತಾವರಣಗಳಲ್ಲಿ! ಸಚಿನ್‌, ರಾಜಸ್ಥಾನವನ್ನು ಹಾದು ಹೋಗುವಾಗ ಇದ್ದ ಉಷ್ಣಾಂಶ ಎಷ್ಟು ಗೊತ್ತಾ? 51 ಡಿಗ್ರಿ ಸೆಲಿÒಯಸ್‌! ಆ ಧಗೆಯಲ್ಲೂ ಜಾಕೆಟ್‌ ಕಳಚುವ ಹಾಗಿರಲಿಲ್ಲ. ಅದನ್ನು ತೊಟ್ಟುಕೊಂಡೇ ರೈಡ್‌ ಮಾಡಿದ್ದಾರೆ. ಸಚಿನ್‌, ಜಮ್ಮು ತಲುಪಿದಾಗ ಇದ್ದ ಉಷ್ಣಾಂಶ -2 ಡಿಗ್ರೀ ಸೆಲಿÒಯಸ್‌. 51 ಮತ್ತು -2, ಎಂಥ ವೈರುಧ್ಯ ಅಲ್ಲವೇ? ಜಮ್ಮು ತಲುಪಿದಾಗ ಉಸಿರಾಡುವುದೇ ತುಸು ಕಷ್ಟವಾಯಿಯಂತೆ. ಆ ಶೀತಲ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತಂತೆ. 

ಅಂದಹಾಗೆ, ತಮ್ಮ ಅನುಭವಗಳಷ್ಟನ್ನೂ ಸಚಿನ್‌ ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡಲಿದ್ದಾರೆ. ಸಾಕ್ಷ್ಯಚಿತ್ರದ ಹೆಸರು “ಲೈಟ್ಸ್‌ ಕ್ಯಾಮೆರಾ ಲಡಾಖ್‌’!

ಜಮ್ಮುವಿನಲ್ಲಿ ಕಂಡ ಕನ್ನಡಿಗರು!
ಸಚಿನ್‌ ಜಮ್ಮುವಿನಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಕೆಲವರು ಇವರನ್ನು ಮಾತನಾಡಿಸಿದರಂತೆ. ಅದೂ ಕನ್ನಡದಲ್ಲಿ! ಕರ್ನಾಟಕದಲ್ಲಿ ನಿಮ್ಮೂರು ಯಾವುದು? ಊಟ ಆಯ್ತಾ? ಅಂತೆಲ್ಲ ಕೇಳಿದ್ದಾರೆ. ಹಾಗೆ ಕನ್ನಡದಲ್ಲಿ ಮಾತನಾಡಿದವರೆಲ್ಲ ಇಲ್ಲಿನವರೇ! ಸಚಿನ್‌ ಅವರ ಬೈಕ್‌ನ ನಂಬರ್‌ ಪ್ಲೇಟ್‌ ನೋಡಿ, ಇವರು ಕನ್ನಡದವರೆಂದು ಮಾತಾಡಿಸಿದ್ದಾರೆ. ಆಗ ಸಚಿನ್‌ರ ಮೊಗದಲ್ಲಿದ್ದ ದೂರದ ಪ್ರಯಾಣದ ಆಯಾಸವೆಲ್ಲ ಮರೆಯಾಯಿತಂತೆ.

ರಶ್ಮಿ ಟಿ.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.