ಫುಟ್ಬಾಲ್‌ನಂತೆ ನೀವೂ ಒದೆ ತಿನ್ನಿ…
Team Udayavani, Jun 19, 2018, 5:18 PM IST
ಆ ಫುಟ್ಬಾಲ್ ಎಂಥ ಜೀವನ ಪಾಠ ಹೇಳುತ್ತದೆ ಅಲ್ಲವೆ? ಆಟಗಾರರ ಕಾಲೂ°ಕಿನಲ್ಲಿ ಅದು ಪದೇ ಪದೆ ಪೆಟ್ಟು ತಿನ್ನುತ್ತದೆ. ಕೊನೆಗೆ ಅದೂ ಗೋಲ್ ಸೇರುತ್ತದೆ. ಗೆಲುವು ಅನಾಯಾಸವಲ್ಲ. ಅದು ಹಲವು ಒದೆಗಳ ಮೊತ್ತ! ಲೈಫೇ ಫುಟ್ಬಾಲ್ ಆಗಿದೆಯೆಂದು ಕೊರಗುವ ಬದಲು, ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡ್ರೆ, ಈ ಸಲ ಕಪ್ ಎತ್ತುವವರು ಪಕ್ಕಾ ನೀವೇ ಆಗ್ತಿàರ…
ಮೊನ್ನೆಯಿಂದ ಜಗತ್ತಿನ ಬಹುಪಾಲು ಮಂದಿಗೆ ಒಂದು ಪುಳಕ ಮೆತ್ತಿಕೊಂಡಿದೆ! ಮೈದಾನದಲ್ಲಿ ಆ ಕಾಲ್ಚೆಂಡಾಟದ ಮೋಡಿಯನ್ನು ತುಂಬಿಕೊಳ್ಳಲು ಹಸಿದ ಕಂಗಳಿಂದ ಅವರ ನೋಟ ಅತ್ತ ನೆಟ್ಟಿದೆ. ಪ್ರತಿಬಾರಿ ಆಟ ನೋಡಲು ಕುಳಿತಾಗಲೂ ನನ್ನನ್ನು ಸೆಳೆಯುವುದು ಆ ಚೆಂಡು! ಆಟಗಾರರ ಕಾಲೂ°ಕಿನಲ್ಲಿ ಅದು ಪದೇ ಪದೆ ಪೆಟ್ಟು ತಿನ್ನುತ್ತದೆ. ಗಮನಿಸಿದ್ದೀರಾ? ಪಂದ್ಯ ಆರಂಭವಾದ ಕ್ಷಣದಿಂದ ಮುಗಿಯುವವರೆಗೂ ಮೈದಾನದ ತುಂಬೆಲ್ಲ ಅದು ಓಡಾಡುತ್ತದೆ. ರೊಯ್ಯನೆ ಮುಂದೆ ಸಾಗುತ್ತಿರುತ್ತದೆ. ಅದೇ ವೇಗದಲ್ಲಿ ಹಿಂದಕ್ಕೆ, ಎಡಕ್ಕೆ, ಬಲಕ್ಕೆ, ಕೆಲವೊಮ್ಮೆ ಮೇಲಕ್ಕೆ ಹೋಗಿ ಬಿಡುತ್ತದೆ. ಈ ಎಲ್ಲಾ ಸಂದರ್ಭದಲ್ಲೂ ಫುಟ್‌ಬಾಲ್ ಚೆನ್ನಾಗಿ ಒದೆಸಿಕೊಳ್ಳುತ್ತದೆ! ಸಿಕ್ಕಸಿಕ್ಕವರಿಂದ ಒದೆಸಿಕೊಳ್ಳುವುದೇ ಅದರ ಹಣೆಬರಹ. ಏಟುಗಳು ಅದರ ಪಾಲಿಗೆ ಕಾಯಂ. ಸತತ ಪ್ರಯತ್ನಗಳಿಗೆ ಮೈಯೊಡ್ಡಿಕೊಂಡ ಅದು ಗೋಲ್ ಪೋÓr… ಸೇರುತ್ತದಲ್ಲ, ಆಗ ಅದಕ್ಕೊಂದು ಗೆಲುವು ದಕ್ಕುತ್ತದೆ. ಅದುವರೆಗೂ ಸುಮ್ಮನೆ ನೋಡುತ್ತಾ ಕೂತವರು ಆ ಜಯಕ್ಕೊಂದು ಚಪ್ಪಾಳೆ ತಟ್ಟುತ್ತಾರೆ. ಆ ಫುಟ್ಬಾಲ್ ಎಂಥ ಜೀವನ ಪಾಠ ಹೇಳುತ್ತದೆ ಅಲ್ಲವೆ? ಗೆಲುವು ಅನಾಯಾಸವಲ್ಲ. ಅದು ಹಲವು ಒದೆಗಳ ಮೊತ್ತ! ಹೌದು, ನೀವೂ ಫುಟ್ಬಾಲ್ ಆಗುವುದರ ಬಗ್ಗೆ ಯೋಚಿಸಬಾರದೇಕೆ?
ನೀವೂ ಫುಟ್ಬಾಲ್ ಆಗಿಬಿಟ್ರೆ…
ಗೆಲುವು ಅನ್ನೋದು ಯಾರ ಪಾಲಿಗೂ ಅಜೀವ ಸದಸ್ಯತ್ವದ ಚೀಟಿಯನ್ನು ಕರುಣಿಸುವುದಿಲ್ಲ. ಹಾದಿ ಸವೆಸದ ಹೊರೆತು ಅದು ದಕ್ಕುವುದಿಲ್ಲ. ಫುಟ್ಬಾಲ್, ಅಂಗಳಕ್ಕೆ ಇಳಿಯುವುದೇ ಒಂದು ಬಲವಾದ ಏಟು ತಿಂದ ಕಿಕ್‌ಅಪ್‌ನಿಂದ. ನೀವು ಫುಟ್ಬಾಲ್ ಆಗಿಬಿಟ್ರೆ ಆಗಾಗ್ಗೆ ಮೆಟ್ಟಿಸಿಕೊಳ್ಳಬೇಕಾಗುತ್ತದೆ. ಬೊಗಸೆ ತುಂಬಾ ಅವಮಾನಗಳು ತುಂಬಿಕೊಳ್ಳುತ್ತವೆ. ಒದೆಸಿಕೊಂಡ ನೋವು, ರಾತ್ರಿ ಮಗ್ಗಲು ಬದಲಿಸಲು ಕೂಡ ಬಿಡುವುದಿಲ್ಲ. ನಿಮ್ಮನ್ನು ಸೈಡಿಗೆ ಎಸೆದು ಬಿಡುತ್ತಾರೆ, ಕೆಲವರು. ಮೂಲೆಗುಂಪು ಆಗಿಬಿಟ್ಟೆನೇ ಎಂಬ ಭಯ ನಿಮ್ಮನ್ನು ಆವರಿಸುತ್ತದೆ. ಇಲ್ಲಿಗೆ ನನ್ನ ಬದುಕು ಮುಗಿದೇ ಹೋಯಿತು ಅನಿಸುತ್ತದೆ. ಬೇಕು ಬೇಕು ಅಂತಲೇ ನಿಮ್ಮ ಮೇಲೆ ಕೆಲಸಗಳನ್ನು ಸುರಿಯಲಾಗುತ್ತದೆ. ಆಫೀಸ್‌ವೊಂದರಲ್ಲಿ ನೀವು ಒಳ್ಳೆ ಹು¨ªೆಯಲ್ಲಿದ್ದರೂ ಬಾಸ್ ನಿಮಗೆ ಟೀ ತರಲು ಕಳುಹಿಸಬಹುದು! ಈ ದುಷ್ಟ ಬಾಸ್ ನನ್ನಿಂದ ಎಂಥ ಕೆಲಸ ಮಾಡಿಸುತ್ತಾನೆ ನೋಡ್ರೋ… ಅಂತ ನೀವು ಗೆಳೆಯರ ಹತ್ತಿರ ಅಲವತ್ತುಕೊಳ್ಳುತ್ತೀರಿ. ಇದೆಲ್ಲವನ್ನೂ ನಾನೇ ಮಾಡಬೇಕಾ ಅಂದುಕೊಳ್ಳುತ್ತೀರಿ.
ನೆನಪಿಡಿ, ಅಂಗಳದಲ್ಲಿ ಫುಟ್ಬಾಲ್‌ಗೆ ಎರಡೂ ತಂಡಗಳಿಂದ ಸಿಗುವುದು ಬರೀ ಒದೆಗಳೇ! ಇಷ್ಟು ಬೇಕು; ಅಷ್ಟು ಸಾಕು, ಒದೆಗಳು ನವಿರಾಗಿರಲಿ ಅನ್ನುವ ಪ್ರಾರ್ಥನೆ ಅಲ್ಲಿ ನಡೆಯುವುದಿಲ್ಲ. ನಡೆದಿದ್ದೇ ಆದರೆ ಗೆಲುವು ದಕ್ಕುವುದಿಲ್ಲ. ಅವಮಾನವಾಗಿದೆಯಾ.. ನುಂಗಿಕೊಳ್ಳಿ. ಅದರÇÉೊಂದು ಪಾಠವಿದೆ, ಕಲಿತುಕೊಳ್ಳಿ. ಬಾಸ್‌ಗೆ ಟೀ ತಂದು ಕೊಟ್ಟ ನೀವು, ನಾಳೆ ನೀವು ಬಾಸ್ ಆದಾಗ ಟೀ ತರುವ ಹುಡುಗನ ಕಷ್ಟ ತಿಳಿಯುತ್ತದೆ. ಅಬ್ಟಾ, ಎಷ್ಟೊಂದು ಕೆಲಸಗಳು ಅಂತ ಓಡಿ ಹೋಗುವುದಲ್ಲ. ಇವೆಲ್ಲಾ ಕಲಿಯುವುದಕ್ಕೆ ನೀಡಿದ ಅವಕಾಶಗಳು ಎಂದು ಭಾವಿಸಿಕೊಳ್ಳಬೇಕು. ಎÇÉಾ ಹಂತದಲ್ಲೂ ನಿಂತು ಕೆಲಸ ಮಾಡಿದವನಿಗೆ ಒಂದು ನೈಪುಣ್ಯತೆ, ಧೈರ್ಯ ಬರುತ್ತದೆ. ಹೆದರುವ, ಚಿಂತಿಸುವ, ಕುಗ್ಗಿ ಹೋಗುವ ದಾರಿಗಳನ್ನು ಹಿಡಿದು ಹೊರಟು ಬಿಡಬಾರದು!
ಫುಟ್ಬಾಲ್ ಆಗೋದ್ರಿಂದ…
ನಿಮಗೊಂದು ಟ್ರೈನ್ ಅಪ್ ಆಗಿದೆ. ಗೆಲುವಿನ ದಾರಿಯಲ್ಲಿ ಏನೇನು ಅಡ್ಡ ಬರಬಹುದು ಎಂಬುದರ ಮಾಹಿತಿ ಇದೆ. ಅವುಗಳನ್ನು ಹೇಗೆ ಪಳಗಿಸಬೇಕು ಎಂಬ ಕಲೆ ನಿಮಗೆ ಸಿದ್ಧಿಸಿದೆ. ಪೆನ್ಸಿಲೊಂದು ಎಲ್ಲರನ್ನೂ ಮೆಚ್ಚಿಸುವಂತೆ ಬರೆಯುತ್ತಿದೆ ಎಂದರೆ, ಅದು ತನ್ನನ್ನು ತಾನು ಚೂಪು ಮಾಡಿಕೊಳ್ಳಲು ಬ್ಲೇಡ್‌ನ ಬಾಯಿಗೆ ಒಪ್ಪಿಸಿಕೊಂಡಿತ್ತು. ಈಗ ನಿಮ್ಮÇÉೊಂದು ಸ್ಪರ್ಧಿಸುವ ಗುಣ ಬಂದಿದೆ. I’ll take the challenge ಅಂತೀರಿ. ಏಟುಗಳು ಶಿಸ್ತನ್ನು ಕಲಿಸಿಕೊಟ್ಟು ಹೋಗಿವೆ. ಎಂಥ ಕಷ್ಟದ ಕೆಲಸವೇ ಆದರೂ ಅದನ್ನು ಅವುಡುಗಚ್ಚಿ ಮುಗಿಸಿಬಿಡುತ್ತೀರಿ. ನಿಮಗೆ ಗೊತ್ತಿಲ್ಲದೆಯೇ ನಿಮ್ಮೊಳಗೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ನಿಮ್ಮ ಬದ್ಧತೆಯನ್ನು ನೋಡಿ ನಿಮ್ಮನ್ನು ಫಾಲೋ ಮಾಡುವ ಒಂದು ಹಿಂಡು ನಿರ್ಮಾಣವಾಗುತ್ತದೆ.
– – –
ಫುಟ್ಬಾಲ್‌ನಿಂದ ನಾವು ಕಲಿಯಬೇಕಾದದ್ದು…
1. ಗೆಲುವು ಶ್ರಮ ಕೇಳುತ್ತದೆ – ರಾತ್ರೋರಾತ್ರಿ ಪಟ್ ಅಂತ ಅರಳುವುದಲ್ಲ ಗೆಲವು. ಅದಕ್ಕೆ ಒಳದಾರಿಗಳಿಲ್ಲ. ಭರಪೂರ ಶ್ರಮ ಕೇಳುತ್ತದೆ. ಏಟುಗಳನ್ನು ಕೇಳುತ್ತದೆ. ಬೆವರನ್ನು ಬಯಸುತ್ತದೆ. ಶ್ರಮಗಳ ಒಟ್ಟು ಮೊತ್ತವೇ ಒಂದು ಗೆಲುವು.
2. ಸ್ಪರ್ಧೆ ಇಲ್ಲದೆ ಏನೂ ಇಲ್ಲ – ಹಠಕ್ಕೆ ಬಿದ್ದಂತೆ ಸ್ಪರ್ಧಿಸು. ಎಲ್ಲರೂ ಗೆಲುವಿಗಾಗಿ ಹಸಿದವರು. ಅವರ ಮಧ್ಯೆ ಅದು ನನ್ನದೇ ಆಗಬೇಕಾದರೆ ಸ್ಪರ್ಧೆಗೆ ಇಳಿಯಬೇಕು. ಗೆಲವನ್ನು ಯಾರೋ ತಂದು ನಿಮ್ಮ ಕೈಯಲ್ಲಿ ಇಟ್ಟು ಹೋಗುವುದಿಲ್ಲ. ನುಗ್ಗಿ ಪಡೆಯಬೇಕು.
3. ಬದುಕು ಸದಾ ಬ್ಯೂಟಿಫುಲ್ ಅಲ್ಲ – ಇದೊಂದು ಅದ್ಭುತ ಪಾಠ. ಖುಷಿ, ನಗು, ಸಂಭ್ರಮ, ಸೌಂದರ್ಯ ಇದಷ್ಟೇ ಬದುಕು ಅಂದುಕೊಂಡು ಅದೇ ಗುಂಗಿನಲ್ಲಿರುತ್ತೇವೆ. ಅಲ್ಲಿ ಸೋಲು ಕೂಡ ಇದೆ. ಅವಮಾನಗಳಿವೆ. ಕಣ್ಣೀರಿದೆ. ಒದೆಗಳಿವೆ. ಆಯಾ ಸಂದರ್ಭದಲ್ಲಿ ಅವುಗಳಿಂದ ಕಲಿಯುತ್ತಾ ಹೋಗಬೇಕು. ಕಲಿಯದ ಹೊರತು ಎಂದೂ ಚಂದದ ಬದುಕು ದಕ್ಕುವುದಿಲ್ಲ.
ಬಚ್ಚನ್ ಪಾತಾಳ ಸೇರಿದ್ದು ಗೊತ್ತಾ?
ಬಾಕÕ…ಆಫೀಸ್‌ನ್ನು ಹಲವು ವರ್ಷಗಳ ಕಾಲ ಕೊಳ್ಳೆ ಹೊಡೆದ ಅಮಿತಾಭ್ ಬಚ್ಚನ್ ABC ಅನ್ನುವ ಕಂಪನಿ ಮಾಡಿಕೊಂಡು ಅದ್ಹೇಗೆ ಪಾತಾಳ ತಲುಪಿಬಿಟ್ಟರು ಗೊತ್ತೆ!? ಅದು ಅವರ ಪಾಲಿನ ಸೈಡ್ ಓವರ್. ನೋಡಿ ನಕ್ಕವರೆಷ್ಟೋ! ಇನ್ನು ಅಮಿತಾಭ್‌ನ ದಿನಗಳ ಮುಗಿದವು ಅಂದರು. ದಢಾರನೆ ಗೋಲು ಹೊಡೆದಂತೆ KBC ಮೂಲಕ ಎದ್ದು ಬಂದರು ನೋಡಿ. ಬಿದ್ದ ಕಾಲದಲ್ಲಿ ಅವರ ಜೊತೆ ಇದ್ದ ಅನುಭವಗಳು ಅವರನ್ನು ಮತ್ತೆ ಎತ್ತಿ ನಿಲ್ಲಿಸಿದವು.
– ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.