ಲಾಸ್ಟ್ ಬೆಂಚ್ ಹುಡುಗನ ಪ್ರೇಮಾಲಾಪ
Team Udayavani, Jul 23, 2019, 5:00 AM IST
ಗೆಳತೀ, ನಿನ್ನ ಹೊಸ ಬಟ್ಟೆಗಳ ಕಲರ್ ನನ್ನ ಆಯ್ಕೆ. ನನ್ನ ಟಿ -ಶರ್ಟ್ ನಿನ್ನ ಡ್ರೆಸ್ ಸೇಮ್ ಟು ಸೇಮ್. ನೀ ತರಗತಿಗೆ ಚಕ್ಕರ್ ಹೊಡೆದ ದಿನ ನಾನೂ ಕ್ಲಾಸ್‌ಗೆ ಬಂಕ್ ಹೊಡೆದು, ಟೀಅಂಗಡಿಯಲ್ಲಿ ಕೂತು ನಿನ್ನ ಕನಸು ಕಾಣುತ್ತಿದ್ದೆ. ಕಿತ್ತೋದ ಸೈಲೆನ್ಸರ್ ಬೈಕೇರಿ ನಿಮ್ಮ ಮನೆಯ ಮುಂದೆ ರೌಂಡ್ ಹಾಕುವಾಗ, ಏನೂ ಗೊತ್ತಿರದ ಮಳ್ಳಿಯ ಥರ ತಲೆಗೂದಲು ಒರೆಸುತ್ತಾ, ಟೀ ಹೀರುತ್ತಾ ಬಾಲ್ಕನಿಗೆ ಬರುತ್ತಿದ್ದದ್ದು ನೀನೆ ತಾನೇ..?
ನೀನೋ ಫಸ್ಟ್‌ರ್‍ಯಾಂಕ್ ಹುಡುಗಿ. ನಾನು ಲಾಸ್ಟ್ ಬೆಂಚ್ ಹುಡುಗ. ಹೀಗಿದ್ದರೂ, ಅದು ಹೇಗೆ ನಮ್ಮಿಬ್ಬರ ಮಧ್ಯೆ ಪ್ರೀತಿ ಟಿಸಿಲೊಡೆಯಿತೋ ನಾ ಕಾಣೇ ! ಮರೆತೆಯೇನು? ಮಳೆಯಲಿ ಕೈ ಹಿಡಿದು, ಒಂದೇ ಛತ್ರಿಅಡಿಯಲ್ಲಿ ಜೊತೆ ಜೊತೆಯಾಗಿ ನಡೆದದ್ದು ನೆನಪಾಗಲಿಲ್ಲವೇ, ನಿನಗೋಸ್ಕರ ಪ್ರಿನ್ಸಿಪಾಲರ ಹತ್ತಿರ ಜಗಳ ಮಾಡಿದ್ದೆನಲ್ಲ; ಅದನ್ನು ಇಷ್ಟು ಬೇಗ ಮರೆತೆಯಾ? ದಿಡೀರನೆ ಬದಲಾದ ನೀನು ಅವನ್ಯಾರೋ, ನಾನ್ಯಾರೋ ಅಂತ ನನ್ನ ಬಗ್ಗೆ ನಿನ್ನ ಗೆಳತಿಗೆ ಹೇಳುತ್ತಿದ್ದ ಮಾತು ಬರ ಸಿಡಿಲಂತೆ ಕಿವಿಗಪ್ಪಳಿಸಿ, ಈ ಹೃದಯಕ್ಕೆ ಗಾಯವಾಯಿತು.
ನನ್ನೇಕೆ ದೂರ ಮಾಡುತ್ತಿರುವೇ ?
ಓ ಕಾರಣ ಅದೇನಾ? ಆ ಬಗ್ಗೆ ಹೇಳ್ತೀನಿ. ಆವತ್ತು ಅಪರೂಪಕ್ಕೆ ಗೆಳೆಯರೊಂದಿಗೆ ಊರಲ್ಲಿದ್ದೆ . ಅಲ್ಲೋ ನೆಟ್‌ವರ್ಕ್ ಸಮಸ್ಯೆ. ಆ ಒಂದು ದಿನ ನಿನಗೆ ಮೆಸೇಜ್, ಕಾಲ್ ಮಾಡಿಲಾಗಲಿಲ್ಲ. ಚಡಪಡಿಕೆ ನನಗೂ ಇತ್ತು. ಇಷ್ಟಕ್ಕೇ ಈ ಹಠಮಾರಿತನವೇ? ಮೆಸೇಜ್ ಕಾಲ್ ಮಾಡುತ್ತಿದ್ದರೆ ಮಾತ್ರ ಪ್ರೀತಿಯೇನು..?
ನೀನು ನಿಮ್ಮೂರಿಗೆ ಹೋದಾಗ ವಾರಗಟ್ಟಲೇ ಕಾಲ್, ಮೇಸೆಜ್ ಮಾಡುತ್ತಿರಲಿಲ್ಲ.
ಮನೆಯಲ್ಲಿ ಅಪ್ಪ ತುಂಬಾ ಸ್ಟ್ರಿಕ್ಟ್ ಅನ್ನುತ್ತಿದ್ದೆ. ನಾನು ಎಂದಾದರೂ ಅದರ ಬಗ್ಗೆ ಮಾತನಾಡಿದ್ದೆನಾ..? ಹೇಳು. ಯಾರೇ ಕರೆ ಮಾಡಿದರೂ, ಅದರಲ್ಲಿ ನಿನ್ನ ದನಿ ಹುಡುಕಲು ಹೃದಯ ಬಡಬಡಿಸುತ್ತದೆ.
ಇನ್ನೂ ಎಷ್ಟು ದಿನ ಹೀಗೆ ಇರುತ್ತೀಯ? ನಿನ್ನ ಕೋಪ ಇಳಿಯುವ ತನಕ ಕಾಯುತ್ತೇನೆ.
ನಿನಗೆ, ನಿನ್ನ ಪ್ರೀತಿಗಾಗಿ, ನಿನ್ನ ದನಿಗಾಗಿ, ನಿನ್ನ ಒಲವಿಗಾಗಿ ಕಾಯುವುದರಲ್ಲೂ ಒಂಥರಾ ಖುಷಿ ಇದೆ.
ಬಸನಗೌಡ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.