ಪ್ರೀತಿ ಸಂಹಿತೆ ಜಾರಿಯಾಗಿದೆ!
Team Udayavani, May 15, 2018, 1:54 PM IST
ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ… ದಯವಿಟ್ಟು ಸ್ವಲ್ಪ ಲಕ್ಷಗೊಟ್ಟು ಕೇಳಿ.
ಅಂದು ನಾನು ಹಿಂಬಾಲಿಸುತ್ತಿರುವುದನ್ನು ಗಮನಿಸಿದರೂ ತಿರುಗಿ ನೋಡದೇ ಹೋದ ಹುಡುಗಿಯರೇ, ಒಂದು ಕಿರುನಗೆಗಾಗಿ ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ ದಯವಿಟ್ಟು ಸ್ವಲ್ಪ ಲಕ್ಷ್ಯಗೊಟ್ಟು ಕೇಳಿರಿ.
ಇದೇ ಮೇ 20ಕ್ಕೆ ನನಗಾಗಿಯೇ ಹುಟ್ಟಿಬಂದ ಅವಳಿಗೆ ನನ್ನ ಅಧಿಕೃತ ಪ್ರೇಮ ನಿವೇದನಾ ಮುಹೂರ್ತ ಹಾಗೂ 21ಕ್ಕೆ ಅದರ ಫಲಿತಾಂಶವೂ ಫಿಕ್ಸಾಗಿದೆ. ಆದ್ದರಿಂದ ಇಂದಿನಿಂದ ನನಗೆ ಪ್ರೀತಿಸಂಹಿತೆ ಜಾರಿಯಾಗಿದೆ.
ಇಂದಿನಿಂದ ನಾನು ಯಾವ ಹುಡುಗಿಗೂ ಕಾಳು ಹಾಕುವಂತಿಲ್ಲ. ನೀವಾಗಿಯೇ ಬಂದು – “ಸತ್ಯ ಕಣೋ. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀ ಒಪ್ಪಿಕೊಳ್ಳದಿದ್ದರೆ ಸಾಯುತ್ತೇನೆ’ ಎಂದರೂ ನಾನು ಯಾವ ಭರವಸೆಯನ್ನೂ ನೀಡುವಂತಿಲ್ಲ. ಪ್ರತಿದಿನವೂ ತಪ್ಪದೇ ಎದುರಾಗಿ, ಸತ್ತು ಹೋಗುವಂಥ ಸ್ಮೈಲ್ ಕೊಟ್ಟು, ಏನೂ ಆಗೇ ಇಲ್ಲ ಎನ್ನುವಂತೆ ನಕ್ಕು ಮುಂದೆ ಸಾಗುವ ಹುಡುಗಿಯರ ಕುರಿತು ಕವನ ಗೀಚುವಂತಿಲ್ಲ. ಅಲ್ಲದೇ ಅದು ನನ್ನ ಪ್ರತಿಭಾ ಸಾಧನೆಯೆಂದು ಕೊಚ್ಚಿಕೊಳ್ಳುವಂತಿಲ್ಲ.
ಇದುವರೆಗೂ ನನ್ನ ಕಾಲೇಜು ಜೀವನದಲ್ಲಿ ಯಾರಿಗೇನೆ ಸಹಾಯ, ಸೇವೆ ಒದಗಿಸಿದ್ದರೂ, ಏನೇನೋ ಸಾಹಸ ಮಾಡಿ ನೋಟ್ಸು, ಕ್ವಶ್ಚನ್ ಪೇಪರ್ ತಂದುಕೊಟ್ಟಿದ್ದರೂ, ಕೆಲವೊಮ್ಮೆ ಕಾಪಿ ಚೀಟಿ ಸಪ್ಲೆ„ ಮಾಡಿ ಪ್ರೀತಿ, ಮೆಚ್ಚುಗೆ, ಸಿಂಪತಿ…ಮತ್ತು ಎಂತೆಂಥದೋ ಮೆಚ್ಚುಗೆಗೆ ಪಾತ್ರನಾಗಿದ್ದರೂ, ಅದನ್ನೆಲ್ಲ ಅಪ್ಪಿತಪ್ಪಿಯೂ ನಾನು ಹೇಳಿಕೊಳ್ಳುವಂತಿಲ್ಲ. ಕಾಲೇಜು ಗೋಡೆಗಳು, ಪಾರ್ಕಿನ ಮರಗಳ ಕಾಂಡದ ಮೇಲೆ ಯಾರದ್ದಾದರೂ ಹೆಸರಿನೊಂದಿಗೆ ನನ್ನ ಹೆಸರನ್ನು ಗೀಚಿದ ಕುರುಹುಗಳಿದ್ದರೆ ಅವೆಲ್ಲವನ್ನೂ ನಾನು ಈಗಿಂದೀಗಲೇ ಅಳಿಸಿ ಹಾಕಬೇಕು. ಹಳೆಯ ಹುಡುಗಿಯರು ಕೊಟ್ಟ ಪ್ರೇಮ ಪತ್ರಗಳನ್ನು ಸುಟ್ಟು ಹಾಕಬೇಕು. ಗೆಳತಿಯರೊಂದಿಗಿನ ಸೆಲ್ಫಿ, ಫೋಟೋಗಳನ್ನು ಫೇಸುºಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಡಿಪಿಗಳಲ್ಲಿ ಬಹಿರಂಗಪಡಿಸುವಂತಿಲ್ಲ. ಹಳೆಯ ಗೆಳತಿ ಕೊಟ್ಟ ಹೀರೋ ಪೆನ್ನನ್ನು ಬಳಸುವಂತಿಲ್ಲ. ಒಳಗೊಳಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವಂತಿಲ್ಲ. ಪ್ರೇಮದ ಹೊಸ ಯೋಜನೆ ಪ್ರಕಟಿಸುವಂತಿಲ್ಲ.
ಇನ್ನೇನಿದ್ದರೂ, ನಿಗದಿತ ದಿನದಂದು ನಡೆಯುವ ಪ್ರೇಮ ನಿವೇದನೆ ಹಾಗೂ ಅವಳು ನೀಡಲಿರುವ ಧನಾತ್ಮಕ ಫಲಿತಾಂಶದತ್ತಲೇ ನನ್ನ ಚಿತ್ತ. ಬೇಕಂತಲೇ ಬಂದು ನುಲಿದು, ನಲಿದು ಚಿತ್ತ ಚಂಚಲಗೊಳಿಸಿ ಪ್ರೀತಿ ಸಂಹಿತೆ ಉಲ್ಲಂ ಸಬಾರದೆಂದು ಎಲ್ಲ ತುಂಟಿಯರಿಗೂ ವಿನಂತಿಸಲಾಗಿದೆ. ಪ್ರೀತಿಯ ವಿಷಯಕ್ಕೆ ಬಂದಾಗ, ನಾನು ಯಾವಾಗ, ಏನು ಮಾಡುತ್ತೇನೆ ಎಂದು ನನಗೇ ಗೊತ್ತಾಗದ ಕಾರಣ, ನನ್ನಿಂದ ಯಾವುದೇ ಅಪರಾಧವಾಗದಂತೆ ಕೆಲದಿನಗಳ ಮಟ್ಟಿಗೆ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸಲಾಗಿದೆ…
ಅಶೋಕ ವಿ. ಬಳ್ಳಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.