ಗ್ರೂಪಲ್ಲಿ ಸಿಕ್ಕ ಪ್ರೀತಿ


Team Udayavani, Oct 29, 2019, 4:02 AM IST

x-1

ಗ್ರೂಪ್‌: ‘ಸ್ನೇಹದ ಕಡಲು’
ಅಡ್ಮಿನ್‌: ಶ್ವೇತಾ ಜಂಗಳಿ.
ಸದ್ಯಸರು: ಪ್ರಿಯಾ, ಶೆಟ್ಟಿ, ಶಿಲ್ಪಾ, ಮುತ್ತು, ಬಸು

ನಾನು ನಮ್ಮ ಹಳೆಯ ಪ್ರಾಥಮಿಕ ಮತ್ತು ಕಾಲೇಜಿನ ಎಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಲು “ಸ್ನೇಹದ ಕಡಲು’ ಅನ್ನೋ ಹೆಸರಿನ ವ್ಯಾಟ್ಸಾಪ್‌ ಗ್ರೂಪ್‌ ಮಾಡಿದ್ದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲಿರುವ ನನ್ನ ಎಲ್ಲಾ ಸ್ನೇಹಿತರು ಈ ಗ್ರೂಪ್‌ನ ಮೂಲಕ ಸಂವಹನ ನಡೆಸಲು ಅವಕಾಶವಾಯಿತು. ನಾವು ಮಾಡಿದ ಕಿತಾಪತಿ, ಕಿಟಲೆ, ಗಲಾಟೆ, ಲವ್‌, ಹೀಗೆ, ಹಲವಾರು ಘಟನೆಗಳನ್ನು ಹಂಚಿಕೊಂಡು, ಕೆಲವರಿಂದ ಬೈಯಿಸಿಕೊಂಡು, ಹೊಗಳಿಸಿಕೊಂಡದ್ದು ಈಗ ಕೇವಲ ನೆನಪು ಮಾತ್ರ.

ನಾವು ನಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆ ಹೋಗಿದ್ದರಿಂದಾಗಿ, ಅಲ್ಲಿಯೇ ನಮ್ಮ ಸಂವಹನ ತುಂಡಾಗಿತ್ತು. ಹೇಗಾದರೂ ಮಾಡಿ ನಮ್ಮ ಎಲ್ಲಾ ಸ್ನೇಹದ ಬಳಗ ಒಟ್ಟಾಗಿ ಸೇರುವುದು ಯಾವಾಗ? ಎಲ್ಲಿ? ಹೇಗೆ? ಎಂಬತ್ಯಾದಿ ಪ್ರಶ್ನೆಗಳು ದಿನೇ ದಿನೇ ಕಾಡತೊಡಗಿದ್ದವು. ಆಗ ನನಗೆ ತಟ್ಟನೇ ನೆನಪಾಗಿದ್ದೇ ಈ ವ್ಯಾಟ್ಸಾಪ್‌ ಗ್ರೂಪ್‌. ಈ ಗ್ರೂಪ್‌, ನಮ್ಮ ಸ್ನೇಹಕ್ಕೆ ಇಂದೂ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಸುತ್ತಿದೆ.

ಒಂದು ದಿನ ನಾನು ಗ್ರೂಪ್‌ನಲ್ಲಿ ಹಾಯ್‌ ಎಂದು ಮೆಸೇಜ್‌ ಹಾಕಿದ್ದೆ ತಡ, ಎಲ್ಲರೂ ಪ್ರತಿಕ್ರಿಯೆ ನೀಡಲು ಶುರುಮಾಡಿದರು. ಆಗ ನನಗೆ ಎಲ್ಲಿಲ್ಲದ ಸಂತೋಷ. ನಾನು ಕಳೆದುಕೊಂಡಿದ್ದ ನನ್ನ ಸ್ನೇಹ ಬಳಗದ ಮಾತುಗಳನ್ನು ಕೇಳಿ ಏನೋ ಒಂಥರಾ ಸಂಭ್ರಮದ ಅನುಭವ ನನ್ನಲ್ಲಿ ಉಂಟಾಯಿತು. ಏಕೆಂದರೆ ನಾನು ಪ್ರೀತಿಸುತ್ತಿದ್ದ ಹುಡುಗನೂ ಆ ಗ್ರೂಪ್‌ನಲ್ಲಿ ಇದ್ದ. ಅವನು ಕೂಡ ನಮ್ಮೆಲ್ಲಾ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದ. ಹೇಗಾದರೂ ಮಾಡಿ ನಾವೆಲ್ಲರೂ ಒಂದು ಸಲ ಭೇಟಿಯಾಗಬೇಕೆಂದು ನಿರ್ಧಾರ ಮಾಡಿದ್ದೆವು. ಎಲ್ಲರಿಗೂ ಅನುಕೂಲವಾಗುವಂಥ ಸ್ಥಳವನ್ನು ಆಯ್ಕೆಮಾಡಿ ಎಲ್ಲಿ? ಯಾವಾಗ ಬರಬೇಕೆಂದುನ್ನು ಮಾತನಾಡಿಕೊಂಡೆವು. ಅದುವರೆಗೆ, ನಾವು ಮತ್ತೆ ಎಲ್ಲರೂ ಒಟ್ಟಿಗೆ ಸೇರುತ್ತೇವೆಂಬ ಕಲ್ಪನೆಯಂತೂ ಯಾರಲ್ಲಿಯೂ ಇರಲಿಲ್ಲ. ಅದು ಈ ಗ್ರೂಪ್‌ನ ಮೂಲಕ ಸಾಧ್ಯವಾಯಿತು. ಎಲ್ಲರೂ ಭೇಟಿಯಾಗಿ ತಮ್ಮ ಹೊಸ ಜೀವನದ ಎಲ್ಲ ಸಂಗತಿಗಳನ್ನು ಪರಸ್ಪರ ಹಂಚಿಕೊಂಡೆವು. ಎಲ್ಲಾ ಸ್ನೇಹಿತರೂ ತಮ್ಮ ಕಣ್ಣಂಚಿನಲ್ಲಿಯೇ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದರು. ಎಲ್ಲರ ಮಾತುಗಳನ್ನೂ ಕೇಳಿ ನನಗೆ ಒಂದು ಕಡೆ ಆನಂದವಾಯಿತು. ನನ್ನಲ್ಲಿ ಗುಪ್ತವಾಗಿಯೇ ಉಳಿದಿದ್ದ ಪ್ರೀತಿ, ಈ ಭೇಟಿಯ ಮೂಲಕ ಮತ್ತೆ ಚಿಗುರೊಡೆಯಿತು.
ಶ್ವೇತಾ ಜಂಗಳಿ

ಶ್ವೇತಾ ಜಂಗಳಿ

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.