ಪ್ರೀತಿ ಎಂಬ ಮಾಯೆ
Team Udayavani, Dec 10, 2019, 4:11 AM IST
ಅದೊಂದು ದಿನ ಬಸ್ಸಿನಲ್ಲಿ ಬರುವಾಗ ನನ್ನ ಪಕ್ಕ ಯಾರೋ ಕುಳಿತುಕೊಂಡರು. ಯಾರೋ ಎನ್ನುವ ಬದಲು ಒಬ್ಬ ಹುಡುಗ ಅನ್ನಬಹುದು. ನಮ್ಮೂರಿಗೆ ಮುಕ್ಕಾಲು ಗಂಟೆ ಪಯಣ. ಅವನು ಪಕ್ಕ ಕುಳಿತಾಗ, ನನಗೇನೂ ಅಂಥ ಯಾವುದೇ ವಿಶೇಷ ಅನುಭವವೇನು ಆಗಲಿಲ್ಲ. ನನ್ನ ಸ್ಟಾಪ್ ಬಂತು. ಎದ್ದು ನಿಂತೆ, ನೋಡಿದರೆ, ಅವನೂ ಅಲ್ಲೇ ಇಳಿಯುಲು ಫುಟ್‌ಬೋರ್ಡ್ ಮೇಲೆ ನಿಂತಿದ್ದಾನೆ. ಆದರೆ, ಇಬ್ಬರ ದಾರಿಗಳು ಬೇರೆ ಬೇರೆಯಾಗಿದ್ದವು. ಕುತೂಹಲ ತಾಳಲಾರದೆ, ಒಮ್ಮೆ ಅವನ ಮುಖ ನೋಡುವಾ ಅಂತ ಜಸ್ಟ್ ಅವನ ಕಡೆಗೆ ತಿರುಗಿದೆ. ಅದೇ ಸಮಯದಲ್ಲಿ ಅವನೂ ನೋಡಿಬಿಡುವುದೇ! ಅದೇನೋ ಮುಜುಗರ, ಮನಸ್ಸಿನ ಒಳಗೆ ಏನೋ ರೋಮಾಂಚನದ ಭಾವ ಉಂಟಾಯಿತು. ಮೊದಲ ಆಕರ್ಷಣೆ ಅಂದ್ರೆ ನಮ್ ಭಾಷೆಲಿ crush ಅಂತ ಹೇಳ ಬಹುದೇನೊ… ಅವನ ಆ ಒಂದು ನೋಟ ಮುಂದೆ ನನ್ನ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಅವತ್ತು ನನಗೆ ಗೊತ್ತಾಗಿರಲಿಲ್ಲ.
ಮತ್ತೆ ಅದೆಷ್ಟೋ ದಿನಗಳ ಕಾಲ; ದಿನಗಳಲ್ಲ ವರ್ಷಗಳು ಅವನು ನನಗೆ ಸಿಗಲೇ ಇಲ್ಲ .ಆದಾಗಿ ತುಂಬಾ ಸಮಯದ ನಂತರ ಒಂದು ದಿನ ನನ್ನ ಫೇಸ್‌ಬುಕ್ ಅಕೌಂಟ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅರೆ, ಇದೇ ಅಲ್ಲವಾ ನಾನು ಹುಡುಕುತ್ತಿದ್ದ ಮುಖ ಅಂದು ಕೊಂಡು, ತಕ್ಷಣವೇ ಚccಛಿಟಠಿ ಮಾಡಿದೆ. ಆವಾಗಲೂ ಅವನ ಮೇಲೆ ಯಾವುದೇ ಭಾವನೆ ಮೂಡಿರಲಿಲ್ಲ. ಅಲ್ಲಿಂದ ನಮ್ಮ ಗೆಳೆಯತನ ವ್ಯಾಟ್ಸಾಆ್ಯಪ್‌ಗೆ ವಿಸ್ತರಿಸಿಕೊಂಡು, ಹಾಯ್, ಬಾಯ್ ನಲ್ಲಿ ಮುಗಿತಾ ಇತ್ತು. ಒಂದು ದಿನ ಮಂಗಳೂರಿಗೆ ಹೋಗೋಕೆ ರೆಡಿಯಾಗಿ ಬಸ್ಟಾಂಡ್‌ಗೆ ಹೋದರೆ, ಮತ್ತದೇ ಇನ್ಸಿಡೆಂಟ್. ಅವನೂ ಮಂಗಳೂರಿಗೆ ಹೊರಟಿದ್ದ. ಮತ್ತೆ ಬರುವಾಗ ಒಟ್ಟಿಗೆ ಬಂದೆವು. ಅಲ್ಲಿವರೆಗೆ ನನ್ನ ಮನಸ್ಸಿನಲ್ಲಿರದ ಪ್ರೀತಿಯ ಭಾವನೆಯನ್ನು ಆವತ್ತು ಅವನು ನನ್ನಲ್ಲಿ ತುಂಬಿದ್ದ. ಅವನಿಗೆ ನನ್ನ ಮೇಲಿದ್ದ ಒಲವನ್ನು ಹೇಳಿಕೊಂಡಿದ್ದ. ಉತ್ತರಿಸಲು ನನಗೆ ಧೈರ್ಯವಿರಲಿಲ್ಲ. ಮನಸಿನಲ್ಲಿ ಪ್ರೀತಿ ಇದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ¨ªೆ. ಕಾರಣ, ಒಂದು ಕಡೆ ಮನೆ, ಇನ್ನೊಂದು ಕಡೆ ಸಮಾಜದ ಕಟ್ಟು ನಿಟ್ಟುಗಳು. ಆ ದಿನ ಏಕೆ ಅವನ ಜೊತೆ ಬಂದೆನೋ ನಂಗೊತ್ತಿಲ್ಲ. ಈ ಹಾಳಾದ ಮನಸು ಅವನನ್ನು ಸೆಳೆಯುತ್ತಿದೆ. ಆದರೆ, ಏನು ಮಾಡೋಣ, ನನ್ನ ಭಾವನೆ ಅವನಿಗೆ ಅರ್ಥವಾಗದೆ ಹೋಯಿತು.
ನನ್ನದೆಯಲ್ಲಿ ಪ್ರೀತಿಯ ಬೀಜವನ್ನು ಬಿತ್ತಿ
ಅವನು ಕಣ್ಮರೆಯಾಗಿ ಹೋದ………
– ಶ್ರುತಿ .ಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.