ಕುಟ್ಟಿ ಡಾಕ್ಟ್ರಿಗೊಂದು ಲವ್ ಲೆಟರ್
Team Udayavani, Sep 12, 2017, 8:20 AM IST
ನಂಗಿಷ್ಟ ಆಗಿದ್ದು ನೀನಲ್ಲ, ನಿನ್ನ ಡ್ರೆಸ್ಸಿಂಗ್ ಸ್ಟೈಲ್. ನಿನ್ ಮುಖ ಸ್ವಲ್ಪ ಚೆಂಗೀಸ್ ಖಾನ್ ಥರ ಇದೆ. ಆದ್ರೆ ನಿನ್ನ ಸ್ಟೈಲ್ ಚೆನ್ನಾಗಿದೆ. 2-3 ದಿನ ನಿನ್ನ ಚಲನವಲನಗಳನ್ನು ನೋಡಿದ್ಮೇಲೇನೆ ನೀನು ಪಕ್ಕಾ 420 ಅಂತ ಗೊತ್ತಾಗಿದ್ದು.
ಹಲೋ ಮಿ. 420,
ಕೋಪ ಮಾಡ್ಕೊàಬೇಡ ಮಾರಾಯ ಹಾಗ್ ಕರೆªà ಅಂತ. ಏನ್ ಮಾಡ್ಲಿ? ನಂಗೆ ನಿನ್ನ ಹೆಸರೇ ಗೊತ್ತಿಲ್ಲ. ಇನ್ನು ಏನಂತ ಕರೆಯೋಣ ಹೇಳು? ಅದ್ಕೆà ನಿಂಗೆ 420 ಅಂತೀನಿ. ಹಾಗಂತ ನೀನೇನು ಫ್ರಾಡ್ ಅಲ್ಲ, ಆದ್ರೂ ಅದೇ ಹೆಸರು ಯಾಕಂತ ಹೇಳ್ತೀನಿ.
ನೀನು ಆಯುರ್ವೇದ ಡಿಗ್ರಿ ಓದಿ¤ದ್ಯಲ್ಲಾ? ಅದೇ ಮಂಗಳೂರಿನ ಕಾಲೇಜಿನಲ್ಲಿ… ನಾನೂ ಅದೇ ಕಾಲೇಜಿನ ಸ್ಟೂಡೆಂಟ್. ನಿನ್ನನ್ನು ಫಸ್ಟ್ ಟೈಮ್ ನೋಡಿದ್ದು ನಮ್ಮ ಲೈಬ್ರರಿಯಲ್ಲಿ. ಅಲ್ಲಿಗೆ ತುಂಬಾ ಜನ ಮರಿ ಡಾಕ್ಟರ್ಗಳು ಬರಿ¤ದ್ರು. ನಾನೂ ಅಲ್ಲಿಗೆ ಪೇಪರ್ ಓದೋಕೆ ಅಂತ ಹೋಗ್ತಿದ್ದೆ. ಆಮೇಲೆ ಅಲ್ಲೇ ಕೂತು ಸ್ವಲ್ಪ ಹೊತ್ತು ಓದೊRàತಿದ್ದೆ. ನಿಂಗೊತ್ತಲ್ಲ, ಲೈಬ್ರರಿಗೆ ಕರೆದ್ರೆ ಫ್ರೆಂಡ್ಸ್ ಯಾರೂ ಜೊತೆಗೆ ಬರಲ್ಲ. ನಾನು ಓದಿ ಓದಿ ಬೇಜಾರಾದಾಗ ಟೈಂ ಪಾಸ್ ಮಾಡೋಕೆ ಆ ಕಡೆ, ಈ ಕಡೆ ನೋಡ್ತಿದ್ದೆ. ಹಾಗೆ ನೋಡೋವಾಗ ಒಂದಿನ ನೀನು ಕಣ್ಣಿಗೆ ಬಿದಿºಟ್ಟೆ. ಬ್ರೌನ್ ಪ್ಯಾಂಟ್, ಬ್ಲಾಕ್ ಶರ್ಟ್, ಫ್ರೆàಮ್‌ಲೆಸ್ ಸ್ಪೆಕ್ಸ್, ಸೈಡ್‌ಬ್ಯಾಗ್, ಹೆಗಲ ಮೇಲೆ ವೈಟ್ ಏಪ್ರಾನ್…ಹೈಟ್ ಸ್ವಲ್ಪ ಕಡಿಮೇನೇ ಆದ್ರೂ ಏನೋ ಚೆನ್ನಾಗಿದಾನೆ ಅಂದೊRಂಡೆ. ಅಷ್ಟಕ್ಕೇ ಸುಮ್ನಾಗಿದ್ರೆ ಚೆನ್ನಾಗಿತ್ತು.
ಮಾರನೆ ದಿನಾನು ನೀನು ಬಂದೆ, ನಾನೂ ಅಲ್ಲೇ ಇದ್ದೆ. ಡೀಸೆಂಟ್ ಆಗಿ ಪೇಪರ್ ಓದಿ ವಾಪಸ್ ಹೋದೆ. ನಂಗಿಷ್ಟ ಆಗಿದ್ದು ನೀನಲ್ಲ, ನಿನ್ನ ಡ್ರೆಸ್ಸಿಂಗ್ ಸ್ಟೈಲ್. ನಿನ್ ಮುಖ ಸ್ವಲ್ಪ ಚೆಂಗೀಸ್ ಖಾನ್ ಥರ ಇದೆ. ಆದ್ರೆ ನಿನ್ನ ಸ್ಟೈಲ್ ಚೆನ್ನಾಗಿದೆ. 2-3 ದಿನ ನಿನ್ನ ಚಲನವಲನಗಳನ್ನು ನೋಡಿದ್ಮೇಲೇನೆ ನೀನು ಪಕ್ಕಾ 420 ಅಂತ ಗೊತ್ತಾಗಿದ್ದು. ಯಾಕ್ ಗೊತ್ತಾ? ನೀನು ಕರೆಕ್ಟ್ ಆಗಿ 4 ಗಂಟೆ 20 ನಿಮಿಷಕ್ಕೆ ಲೈಬ್ರರಿಗೆ ಬರಿ¤ದ್ದೆ!
ಆಮೇಲೊಂದಿನ ನೀನು ಮಲಯಾಳಿ ಹುಡುಗಿ ಜೊತೆ ಮಾತಾಡೋದನ್ನ ನೋಡಿದೆ. ಆಗ್ಲೆà ಡೌಟ್ ಬಂದಿತ್ತು, ಆಮೇಲೆ ನೀನು ಓದೋದು ಮಲಯಾಳಿ ಪೇಪರ್ ಅಂತ ಗೊತ್ತಾದ್ಮೇಲೆ ಕನ್ಫರ್ಮ್ ಆಯ್ತು ನೀನು “ಕುಟ್ಟಿ ಡಾಕ್ಟರ್’ ಅಂತ.
ಮೊದೆÉಲ್ಲಾ ಪೇಪರ್ ಓದಿ, ಓದೋಕೆ ಕೂರಿ¤ದ್ದ ನಾನು ಆಮೇಲಾಮೇಲೆ ಕರೆಕ್ಟ್ 4.20ಕ್ಕೆ “ದಿ ಹಿಂದು’ ಪೇಪರ್ ಹತ್ರ ಹೋಗ್ ನಿಲ್ತಿದ್ದೆ. ಅದ್ರ ಪಕ್ಕದಲ್ಲೇ ಮಲಯಾಳಂ ಪೇಪರ್ ಇಡ್ತಿದ್ರಲ್ವಾ ಅದಕ್ಕೆ! ಗೂಬೆ ಕಣೋ ನೀನು. ಅಷ್ಟ್ ದಿನ ಪಕ್ಕ ಬಂದು ನಿಂತಿದ್ರೂ ಒಂದಿನಾನೂ ನನ್ನ ಕಡೆಗೆ ನೋಡ್ಲಿಲ್ಲ.
ಬಿಡು, ಪಾಪದ ಹುಡುಗ ನೀನು. ಬೇರೆ ಹುಡುಗೀರ ಜೊತೆ ಮಾತಾಡೋವಾಗ ಮಾರು ದೂರ ನಿಲ್ತಿದ್ದೆ, ಅದೇ ಆ ನಿನ್ನ ಹುಡುಗಿ ಒಬÛನ್ನ ಬಿಟ್ಟು. ಅವಳತ್ರ ಮಾತ್ರ ಗುಟ್ಟು ಹೇಳ್ಳೋಷ್ಟು ಹತ್ರ ಹೋಗಿ ನಿಲ್ತಿದ್ದನ್ನ ನೋಡಿದಾಗ್ಲೆà ಗೊತ್ತಾಗಿತ್ತು ಆ ಚೇಚಿ ನಿನ್ ಲವ್ವರ್ ಅಂತ. ಯು ನೋ ವಾಟ್? ಶಿ ಇಸ್ ವೆರಿ ಕ್ಯೂಟ್…ಒಳ್ಳೇ ಹುಡ್ಗಿàನ ಪಟಾಯಿಸ್ಕೊಂಡಿದ್ಯಾ ಬಿಡು. ಅವೂÛ ಡಾಕ್ಟರ್, ನೀನೂ ಡಾಕ್ಟರ್. ನಿಮ್ಮ ಕಾನೊÌಕೇಷನ್ ಡೇ ದಿನ ನೀವಿಬ್ರೂ ಕ್ಯಾಂಟೀನ್ ಹತ್ರ ಫೋಟೊ ತೆಗೆಸಿಕೊಂಡ್ರಲ್ವಾ? ಅವತ್ತು ನಿಂಗಿಂತ ಚೇಚೀನೇ ತುಂಬಾ ಚೆನ್ನಾಗಿ ಕಾಣಿ¤ದುÉ. ನಿಂಗಿಂತ ಸ್ವಲ್ಪ ಹೈಟಿದಾಳಲ್ವ ಅವ್ಳು? ನೋಡು ಯೋಚೆ° ಮಾಡು, ನಂದೂ ನಿಂದೂ ಸೇಮ್ ಹೈಟು!
ಹಿಂಗೆ ಒಂದಾರ್ ತಿಂಗ್ಳು ನಿನ್ನ ಪಕ್ಕ ನಿಂತು ಪೇಪರ್ ಓದಿದ ಪುಣ್ಯಕ್ಕೆ ಎಕ್ಸಾಂನಲ್ಲಿ ನೀಟಾಗಿ ಹೊಗೆ ಹಾಕಿಸಿಕೊಂಡೆ. ಅದ್ರಲ್ಲಿ ನಿನ್ ತಪ್ಪೇನಿಲ್ಲ ಬಿಡು. ನಿನ್ ಬಗ್ಗೆ ನನ್ನೆಲ್ಲಾ ಫ್ರೆಂಡ್ಸ್‌ಗೂ ಹೇಳಿದ್ದೆ. ಅವೆÅಲ್ರೂ ನಿನ್ನ ಮಿ.420 ಅಂತಾನೇ ಕರೀತಿದ್ರು. ಬಿಡು, ಇದೆಲ್ಲಾ ನಡುª ಎರಡೂ¾ರು ವರ್ಷಾನೇ ಆಯ್ತು.
ಡಿಯರ್ ಕುಟ್ಟಿ, ಈಗ್ಯಾಕೆ ನೀನು ಸಡನ್ನಾಗಿ ನೆನಪಾದೆ ಗೊತ್ತಾ? ಈಗ ನಿಮ್ಮಲ್ಲಿ ಓಣಂ ನಡೀತಿದೆ ಅಲ್ವಾ? ನಿನ್ನ ಇಂಪ್ರಸ್ ಮಾಡೋಕೆ ಹೇಳ್ತಿರೋದಲ್ಲ, ನಂಗೆ ಕೇರಳ ಕಲ್ಚರ್ ಅಂದ್ರೆ, ಮಲಯಾಳಂ ಮೂವೀಸ್ ಅಂದ್ರೆ ತುಂಬಾ ಇಷ್ಟ. ಈಗ ನನ್ ರೂಮ್‌ಮೇಟ್ ಕೂಡ ಮಲಯಾಳೀನೆ. ಅವ್ರು ಮೊನ್ನೆ ಓಣಂ ಬಗ್ಗೆ ಹೇಳ್ತಿದ್ರು ಆಗ ಸಡನ್ನಾಗಿ ನೀ ನೆನಪಾದೆ. ನಿಂಗೂ ಮತ್ತು ಆ ಕ್ಯೂಟ್ ಚೇಚಿಗೂ ನನ್ ಕಡೆಯಿಂದ ಓಣಂ ಆಶಂಶಗಳ್. ಆಯ್ತಾ.
ಇಂತಿ ನಿನ್ನ ಅಪ್ಪಟ ಕನ್ನಡತಿ
-ನತಾಶಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.