ಪ್ರೀತಿ ಯಾವತ್ತಿದ್ರೂ ಮಗುವಿನ್ ಥರಾ ಮುದ್‌ಮುದ್ದು…
Team Udayavani, Jan 2, 2018, 10:02 AM IST
ನೀನ್ ಮುತ್ ಕೊಡೋಕ್ ಬಂದಾಗ ನಾನ್ ನಾಚ್ಕೊಂಡ್ ಓಡೋಗ್ ಬೇಕು, ಕದ್ದು ಕದ್ದು ನೋಡ್ಬೇಕು, ನಾಚ್ಕೊಂಡು ನೆಲ ಕೆರಿಬೇಕು ಇಂಥಹ ಅಸಹಜ ಸಿನಿಮಾ ಡ್ರಾಮಗಳನ್ನೆಲ್ಲ ನನ್ನಿಂದ ನಿರೀಕ್ಷೇ ಮಾಡ್ಬೇಡ ನೀನು! ತಬ್ಕೋಬೇಕು ಅನ್ನಿಸ್ತಾ? ಸುಮ್ನೆ ಕಣ್ ಮುಚ್ಚಿ ತಬ್ಕೋಡ್ ಬಿಡು!
ಅಲ್ಲ ಕಣೋ ಮಾರಾಯ, ಇಂದ, ಇಗೆ, ವಿಷಯ, ಧನ್ಯವಾದಗಳೊಂದಿಗೆ, ಇತಿ ನಿಮ್ಮ ವಿಶ್ವಾಸಿ ಅಂತೆಲ್ಲ ಫಾಮ್ಯಾìಟ್ ಇಟ್ಕೊಂಡ್ ಬರಿಯೋಕೆ ನಾನ್ ಬರಿತಿರೋದು ಲೀವ್ ಲೆಟರ್ ಅಲ್ಲ! ಲವ್ ಲೆಟ್ರಾ! ನಾನ್ ಲವ್ ಲೆಟರ್ ಬರಿತೀನಿ ಅಂದ ತಕ್ಷಣ ತುಂಬ ಡೀಸೆಂಟ್ ಆಗೇ ಬರ್ದಿರ್ತೀನಿ ಅಂತ ಹೇಗ್ ಅನ್ಕೊಳ್ತೀಯ ನೀನು? ಮೊದ್ಲು ಆ ಡೀಸೆಂಟ್ ಪದಾನ ನಿನ್ ಡಿಕ್ಷನರಿ ಇಂದ ಡಿಲೀಟ್ ಮಾಡ್ಬೇಕು! ಯಾಕಂದ್ರೆ ಅವಶ್ಯಕತೆ ಇಲ್ದೆ ಇರೋ ಕಡೆಯೆಲ್ಲಾ ಆ ಪದನ ಬಳ್ಸಿ ಬಳ್ಸಿ ಬಳ್ಸಿ ಅದ್ರ ಅರ್ಥಾನೇ ಹಾಳ್ ಮಾಡ್ತಿದೀಯಾ. ನಿಜ ಹೇಳ್ಳೋ, ಯಾವಾಗ್ಲೂ ಒಳ್ಳೇ ಮಿಲಿಟರಿ ಆಫೀಸರ್ ಥರ ಸ್ಟ್ರಿಕ್ಟಾಗ್ ಇರೋ ನೀನು.. ನನ್ ಜೊತೆ ಫೋನಲ್ ಮಾತಾಡ್ತಾ ರೋಡ್‌ನಲ್ ನಡ್ಕೊಂಡ್ ಹೋಗ್ವಾಗ.. ನಾನ್ ಆಡೋ ತರ್ಲೆ ಮಾತಿಗೆ ಸುತ್ತ ಇರೋ ಜನರನ್ನ ಮರ್ತು ನಕ್ಕೇ ಇಲ್ವ? ನಕ್ಕಿದ್ದೀಯಾ ತಾನೆ? ಮತ್ತೆ ನನ್ ಮುಂದೆ ಯಾಕಪ್ಪ ಈ ಬಿಗುಮಾನ? ಹೇಗೂ ನಗೋದ್ ನಗ್ತಿಯ, ಮನ್ಸಾರೆ ನಕಿºಡು!. ಏನೋ ಹೇಳ್ಬೇಕು ಅನ್‌ಸಿ¤ದೆ.. ಏನೋ ಹೇಳ್ಬೇಕು ಅನ್ಸಿದೆ ಅಂತ ಪ್ರತೀ ಸಲ ಅದನ್ನ ಹೇಳೆª ತಡಿಯೋದ್ ಯಾಕೆ?
ನೀನ್ ಹಾಗ್ ಇರೋದಲ್ದೆ ನಾನೇನಾದ್ರು ಚೂರು ರೊಮ್ಯಾಂಟಿಕ್ ಆಗಿ, ಬಾನು ಭುವಿ ಸಂಗಮ, ದುಂಬಿ ಹೂವ ಮಿಲನ. ಆಯಸ್ಕಾಂತದ್ ಸೆಳೆತ, ಹೇಳಕ್ ಆಗದ ಮಿಡಿತ, ನಿನ್ ಬಿಟ್ ನಾನ್ ಬದ್ಕಲ್ಲ, ನನ್ನ ಬಿಟ್ ನೀನ್ ಹೋಗ್ಬೇಡ… ಅಂತೆಲ್ಲ ಹೇಳಿದ್ರೆ. ಹೇ ಈ ಥರ ಆಕರ್ಷಣೆ ಪದಗಳನ್ನೆಲ್ಲ ಹೇಳ್ಕೊಳ್ತಾ ಸಮಯ ವ್ಯರ್ಥ ಮಾಡೋಕೆ ನಮ್ದೇನ್ ಟೀನೇಜ್ ಲವ್ ಸ್ಟೋರಿನ? ನಮ್ದು ಮೆಚ್ಯುರ್ಡ್ ಲವ್ ಸ್ಟೋರಿ.. ಅಂತ ಲೆಕ್ಚರ್ ಹೊಡಿತೀಯಾ! ಆದ್ರೆ ನಿಂಗೆ ಒಂದ್ ವಿಷ್ಯ ಗೊತ್ತಿಲ್ಲ.. ಈ ಮೆಚ್ಯುರಿಟಿ ಅನ್ನೋದು ಪ್ರೀತ್ಸೋರಿಗ್ ಇರ್ಬಹುದು ಆದ್ರೆ ಪ್ರೀತಿಗಿಲ್ಲ! ಪ್ರೀತಿ ಯಾವತ್ತಿದ್ರೂ ಪುಟ್ ಮಗುವಿನ ಥರ ಮುದ್ ಮುದ್ದು! ಅದಕ್ಕೇ ಅದು ನಮ್ಮನ್ನ ಆಗಾಗ ಅಳತ್ತೆ, ನಗತ್ತೆ, ಹಟಾ ಹಿಡಿಯುತ್ತೆ, ಕೋಪ ಮಾಡ್ಕೊಳುತ್ತೆ, ಮು… ಕೊಂಡ್ ಹೋಗ್ತಿರೋ ನನ್ನನ್ನು ನಿನ್ನನ್ನು ಮತ್ತೆ ಎಳ್ಕೊಂಡ್ ಬಂದು ಕಾಂಪ್ರಮೈಸ್ ಮಾಡ್ಸತ್ತೆ. ಅದಕ್ಕೇ ಈ ಪ್ರೀತಿ ಅನ್ನೋ ಮಗುನ ಹೃದಯದಲ್ಲಿ ಹೊತ್ತು ಮೆರೆಸ್ತಿರೋ ನಾವಿಬ್ರು ನಮ್ ಈಗೋಗಳನ್ನ ತ್ಯಾಗ ಮಾಡ್ಬೇಕೇ ಹೊರ್ತು, ಮೆಚ್ಯುರಿಟಿ ಅನ್ಕೊಂಡು, ಬೇದ್ದೆ ಇರೋ ಅಂತರ ತಂದ್ಕೊಂಡು, ನದಿಯಾಗಿ ಹರೀತಿರೋ ಭಾವನೆಗಳಿಗೆ ಅಣೆಕಟ್ಟು ಕಟ್ಟಿ, ಪ್ರೀತಿನೇ ತ್ಯಾಗ ಮಾಡಾºರ್ದು. ಅರ್ಥ ಆಯ್ತಾ? ನಾನ್ ನಿನಿಂಗೆ ಹೇಳ್ಳೋದ್ ಇಷ್ಟೆ, ಪ್ರೀತೀಲಿ ಮಗುವಾಗಿರು. ಯಾದ್ದೆ ಚೌಕಟ್ ಹಾಕೊಳ್ಬೇಡ!
ನೀನ್ ಮುತ್ ಕೊಡೋಕ್ ಬಂದಾಗ ನಾನ್ ನಾಚೊಡ್ ಓಡೋಗ್ ಬೇಕು, ಕದ್ದು ಕದ್ದು ನೋಡ್ಬೇಕು, ನಾಚೊRಂಡು ನೆಲ ಕೆರಿಬೇಕು ಇಂಥಹ ಅಸಹಜ ಸಿನಿಮಾ ಡ್ರಾಮಗಳನ್ನೆಲ್ಲ ನನ್ನಿಂದ ನಿರೀಕ್ಷೇ ಮಾಡ್ಬೇಡ ನೀನು! ತಬ್ಕೋಬೇಕು ಅನ್ನಿಸ್ತಾ? ಸುಮ್ನೆ ಕಣ್ ಮುಚ್ಚಿ ತಬ್ಕೋಡ್ ಬಿಡು! ಈ ಜನ್ಮಕ್ ಆಗೋವಸ್ಟ್ ಪ್ರೀತಿ ಕೊಡ್ತೀನಿ..! ಹೆಂಡ್ತಿ ಗಂಡನ್ನ ಹೋಗಿ ಬನ್ನಿ ಅನ್ಬೇಕು.. ಊಟಕ್ ಇಟ್ಟು ಎರ್ಡ್ ಅಡಿ ದೂರ್ದಲ… ನಿಂತು ಕಾಯೆºಕು ಅನ್ನೋದೆಲ್ಲ ತುಂಬ ಹಳೇ ಫಾಮ್ಯಾìಟ್ ಕಣೋ! ಪ್ರೀತಿಯಿಂದ ಒಂದೇ ತಟ್ಟೆಲ… ತುತ್ ಮಾಡಿ ತಿನ್ನಿಸ್ಬೇಕು ಅಂತಾರಲ್ಲ? ಅದೂ ಸ್ವಲ್ಪ ಹಳೇ ಫಾಮ್ಯಾìಟೇ.. ಬಟ್ ಒಂಥರ ಚೆನ್ನಾಗ್ ಇದೆ. ಆದ್ರೆ ಸಿಂಗಲ… ಸ್ಲೆ„ಸ್ ಬ್ರೆಡ್‌ನ ಕಿತ್ತಾಡ್ಕೊಂಡ್ ತಿನ್ನೋದ್ ಇದೆಯಲ್ಲ, ಅದು ಪ್ರೀತಿ ಮಾಡೋ ಹೊಸ ಫಾಮ್ಯಾìಟು ಕಣೋ.. ನಾವ್ ಆಗಾಗ ಎರ್ಡನ್ನೂ ಮಿಕ್ಸ್ ಮಾಡೋಣ. ಗಮ್ಮತ್ ಇರುತ್ತೆ! ಆಯ್ತ?
ನನ್ ಫ್ರೆಂಡ್ ಯಾವಾಗ್ಲೂ ಹೇಳ್ತಿರ್ತಾಳೆ: ನಿನ್ ಹುಡ್ಗನ್ನ ನೀನ್ ಅಷ್ಟೊಂದ್ ಪ್ರೀತಿಸ್ತೀನಿ ಅಂತ ತೋರಿಸ್ಕೊಳ್ಬೇಡ ಕಣೇ. ಈ ಗಂಡ್ ಮಕ್ಳು ಹೇಗೆ ಅಂದ್ರೆ, ಒಂದ್ ಹುಡ್ಗಿ ನಮ್ಮನ್ ಪ್ರೀತಿಸ್ತಿದ್ದಾಳೆ. ಏನೇ ಆದ್ರೂ ಅ… ನಮ್ಮನ್ ಬಿಟ್ ಹೋಗಲ್ಲ ಅನ್ನೋ ವಿಷ್ಯ ಅವ್ರಿಗ್ ಗೊತ್ತಾಗ್ ಬಿಟ್ರೆ ತುಂಬ ತುಂಬಾ ಕಾಡಿಸ್ತಾರೆ ಅಂತ! ನೀನೂ ಹಾಗೇನಾ?! ಬೇಡ ನೋಡು, ಒಳ್ಳೆ ಮಾತ್ನಲ… ಹೇಳ್ತಿದೀನಿ ನನ್ನ ಕಾಡಿಸ್ಬೇಡ. ನಿನ್ ಮನ್ಸಿನ್ ಭಾವನೆಗಳಾದ ಈ ಕೋಪ, ಪ್ರೀತಿ, ಸಿಟ್ಟು, ಮುನಿಸು… ಪ್ರತಿಯೊಂದೂ ನನ್ ಮುಂದೆ ಬಂದು ಅಟೆಂಡೆ… ಹಾಕೋಕ್ ಬಿಡು.. ಆಗ್ಲೆ ಅಲ್ವ ನಾವ್ ಲೈಫ್ ಅನ್ನೋ ಪರೀಕ್ಷೇಲಿ ಪಾಸ್ ಆಗೋದು?
ನಂದಿನಿ ನಂಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.