ಪ್ರೀತಿ ಓಕೆ, ಶೋ ಏಕೆ?
Team Udayavani, Aug 14, 2018, 6:00 AM IST
ಶಿವಮೊಗ್ಗದ ಬಸ್ ನಿಲ್ದಾಣ. ಅವನು ಆಕೆಯನ್ನು ಬಸ್ ಹತ್ತಿಸಲೋಸುಗ ಅವಳೊಂದಿಗೆ ಬಂದಿದ್ದ. ಹತ್ತುವ ಮುನ್ನ ಅವಳನ್ನು ಲಘುವಾಗಿ ತಬ್ಬಿ ಹಣೆಗೆ ಮುತ್ತಿಟ್ಟ. ನನ್ನಂತೆ ಬಹುತೇಕರು ಅದನ್ನು ನೋಡಿದರು. ಆಕೆ ಬಸ್ಸಿನೊಳಗೆ ಬಂದ ಐದ್ಹತ್ತು ನಿಮಿಷ ಅದೆಂಥ ನಿಶ್ಶಬ್ದವಿತ್ತು! ಅಮೇಲೆ ಅಲ್ಲಲ್ಲಿ ಒಂದೆಡರು ಪಿಸು ಪಿಸು ಮಾತುಗಳು. ಈ ಥರದ್ದು ಇಲ್ಲಿಗೂ ಬಂತಾ? ಅಥವಾ ತೀರ ಮೆಟ್ರೋಪಾಲಿಟನ್ ನಗರದಲ್ಲಿ ಸಾಮಾನ್ಯವಾಗಿಯೇ ಇರುವಂಥದ್ದು ಈಗ ಇಲ್ಲಿ ನಮ್ಮ ಗಮನಕ್ಕೆ ಬಂತಾ? ಅದರಲ್ಲಿ ನನಗೆ ಇನ್ನೂ ದ್ವಂದ್ವವಿದೆ.
ಈಗ ಇಂಥದೊಂದು ಬದಲಾವಣೆ ಹೆಚ್ಚಿದೆ. ಅಲ್ಲಲ್ಲಿ ಈ ಥರದ ಬೆಳವಣಿಗೆಗಳು ನಮ್ಮ ಕಣ್ಣಿಗೆ ಬೀಳುತ್ತಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಸಾಮಾನ್ಯವೇ ಆದರೂ ಪ್ರೀತಿ, ಅಪ್ಪುಗೆ, ಮುತ್ತು ಎಲ್ಲಿ ಮಾಡಿದರೂ ಒಂದೇ! ನೋಡುವ ಕಣ್ಣುಗಳೂ ಒಂದೇ. ಅಷ್ಟಕ್ಕೂ ಎಲ್ಲರೂ ಮನುಷ್ಯರೇ ತಾನೆ? ಅಲ್ಲಿ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಮುಂದೆ ಹೋದರೂ ಮನಸ್ಸಿನಲ್ಲೊಂದು ಮರಕುಟಿಗ ಕೆಲಸ ಮಾಡತೊಡಗುತ್ತದೆ. ಅದರಾಚೆಯ ಊರುಗಳಲ್ಲಿ ನೋಡುವ, ಮಾತನಾಡುವ ಕ್ರಿಯೆಗಳು ಹೆಚ್ಚೇ ಬಿಡಿ!
ಇಂಥವು ನಿಮ್ಮ ಗಮನಕ್ಕೂ ಬಂದಿರುತ್ತವೆ. ಅವು ಈ ನಡುವೆ ಜಾಸ್ತಿಯೇ! ಆಕೆ ಮತ್ತು ಅವನು ಅಂಟಿಕೊಂಡೇ ನಡೆಯುವ, ಬೈಕ್‌ನಲ್ಲಿ ತಬ್ಬಿಕೊಂಡೆ ಸಾಗುವ, ಯಾರು ಇ¨ªಾರೆ ಎಂಬುದನ್ನು ನೋಡದೆ ಮುತ್ತಿಕ್ಕುವ ಚಟುವಟಿಕೆಗಳವು. ಪ್ರೀತಿಯ ಪ್ರದರ್ಶನ. ಒಲುಮೆಯ ತೋರ್ಪಡಿಕೆ. ಅದರ ಹಿಂದೆ ಯಾವುದೇ ಉದ್ದೇಶವಿಲ್ಲದಿದ್ದರೂ ಸಡನ್ ಆಗಿ ಅದು ಬೇರೆಯವರ ಗಮನ ಸೆಳೆಯುತ್ತದೆ. ಏಕೆಂದರೆ, ಇಲ್ಲಿನ ಸಂಸ್ಕೃತಿ ಮತ್ತು ಮಣ್ಣಿನಲ್ಲಿ ಬೆರೆತು ಹೋದ ಗುಣಗಳು ಅದಕ್ಕೆ ಪೂರಕವಾಗಿಲ್ಲ. ಅದು ಒಗ್ಗದು ಕೂಡ. ನಮ್ಮ ಹಿಂದಿನ ಪೀಳಿಗೆಗೆ ಅಂಥದ್ದನ್ನು ಬಹಿರಂಗವಾಗಿ ತೋರಿಸಿ ಗೊತ್ತಿಲ್ಲ. ನೋಡಿಯೂ ಗೊತ್ತಿಲ್ಲ.
ಅದನ್ನು PDA ಅಂತಾರೆ
ಹೌದು, ಇದನ್ನು Public Display of Affectio ಅಂತಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಪ್ರೀತಿಯನ್ನು ಪ್ರದರ್ಶಿಸುವುದು. ಬಸ್, ಪಾರ್ಕ್, ಸಿನೆಮಾ ಹಾಲ್, ಟ್ರೈನ್, ಹೋಟೆಲ್ ಮುಂತಾದೆಡೆ ಇವೆಲ್ಲಾ ನಿಮಗೆ ಕಾಣ ಸಿಗುತ್ತವೆ. ಇತ್ತೀಚೆಗೆ ಈ ಕಈಅಯನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಅಭ್ಯಸಿಸುವ ಪ್ರಯತ್ನಗಳು ಆಗಿವೆ. ಕೊನೆಕೊನೆಗೆ ಅದೊಂದು ಗೀಳಾಗುವ ಅಪಾಯವಿದೆ ಅನ್ನುತ್ತಾರೆ ತಜ್ಞರು. ಇದಕ್ಕೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅನುಮತಿ ಇದೆ. ಅಲ್ಲೆಲ್ಲಾ ಇದು ಖುಲ್ಲಂ ಖುಲ್ಲಂ. ಆದರೆ ಭಾರತದಲ್ಲಿ ಅದಕ್ಕೆ ಅವಕಾಶವಿಲ್ಲ. ಕಾನೂನು ಅದನ್ನು ಮಾನ್ಯ ಮಾಡಿಲ್ಲ. ಅಂಥದ್ದು ಈ ದೇಶದ ಸಂಸ್ಕೃತಿಯಲ್ಲಿ ಇಲ್ಲ ಅನ್ನುತ್ತದೆ ಕಾನೂನು. ಅದು ಮುಂದೆ ಪಡೆದುಕೊಳ್ಳಬಹುದಾದ ಅಪಾಯದ ಬಗ್ಗೆ ಕಾನೂನಿಗೆ ಒಂದು ಕಾಳಜಿ ಇದೆ!
ಹೀಗೆಲ್ಲಾ ಯಾಕೆ?
ಕಾರಣಗಳೇನು ಕಮ್ಮಿ ಇಲ್ಲ. ಎಂದಿಗಿಂತ ಈಗ ಹರೆಯಕ್ಕೆ ಪಾಶ್ಚಾತ್ಯದ ಲೇಪನ ಹೆಚ್ಚಿದೆ. ಯೌವನ ಅನುಕರಣೆಗೆ ಬಿದ್ದಿದೆ. ಈಗ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿವೆ. ಯೌವನದ ಕಾಲವೇ ಒಂದು ಹುಚ್ಚುತನದ್ದು. ಅದು ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಕಾಯುತ್ತಿರುತ್ತದೆ.
ಸಾಲದು ಎಂಬಂತೆ ದೃಶ್ಯ ಮಾಧ್ಯಮಗಳು ಅದನ್ನು ಚುರುಕುಗೊಳಿಸಿ ನಾಗಾಲೋಟಕ್ಕೆ ಹಚ್ಚಿವೆ. ಟಿವಿಯಲ್ಲಿ, ಸಿನಿಮಾಗಳಲ್ಲಿ ಅದನ್ನು ವೈಭವೀಕರಿಸಿ ತೋರಿಸುವುದರಿಂದ ಜನತೆ ಆ ಕಡೆ ಹೆಚ್ಚು ಆಕರ್ಷಿತವಾಗುತ್ತಿದೆ. ಯುವ ಜನರನ್ನು ಉತ್ತೇಜಿಸಲು ತರುತ್ತಿರುವ ಸಿನೆಮಾ ಇತ್ಯಾದಿಗಳಲ್ಲಿ ಪಾಶ್ಚಾತ್ಯ ಆಚರಣೆಗಳು ಬಹುಪಾಲು ಸೇರಿಕೊಂಡಿವೆ. ಇಲ್ಲಿನವರಿಗೆ ರಂಗಾಗಿ ಕಾಣುವುದರಿಂದ ವಿಶೇಷವೆನಿಸುತ್ತದೆ.
ಇದು ತರವೇ!?
ಕಾಲ ಬದಲಾಗಿಲ್ಲವೆ? ಇದನ್ನು ಕೂಡ ಬದಲಾವಣೆ ಅಂತ ಒಪ್ಪಿಕೊಂಡರಾಯ್ತು. ಇದು ಮನುಷ್ಯ ಸಹಜ ಅನ್ನುವವರಿದ್ದಾರೆ. ಬೇಡವೇ ಬೇಡ ಅನ್ನುವವರೂ ಇದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದೆ, ಪ್ರೀತಿ ಪ್ರದರ್ಶನ’ ಸಾಗಿಯೇ ಇದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಸಭ್ಯ ಹಿನ್ನೆಲೆಯಲ್ಲಿ ಬಂದ ಸಮಾಜ ಇಂಥ ನಡವಳಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾವಣೆಯಾದರೂ ಇನ್ನೂ ಆ ಮಟ್ಟಿಗೆ ಸಮಾಜ ಪೂರಕವಾಗಿಲ್ಲ. ಆದರೆ ಮುಂದಿನ ಬದಲಾವಣೆಗಳನ್ನು ಬಲ್ಲವರ್ಯಾರು!?
ಕಾನೂನು ಏನು ಹೇಳುತ್ತದೆ?
ಕಈಅ ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಭಾರತೀಯ ದಂಡಕಾಯ್ದೆ ಸೆಕ್ಷನ್ 294 ಪ್ರಕಾರ ಇಂತಹ ಪ್ರಯತ್ನಗಳಿಗೆ ಮೂರು ತಿಂಗಳು ಜೈಲು ಮತ್ತು ದಂಡವಿದೆ. ನಿಮಗೆ ನೆನಪಿದೆಯಾ? 2007 ರಲ್ಲಿ ದೆಹಲಿಯಲ್ಲಾದ ಘಟನೆಯಿದು. ಏಡ್ಸ್ ಜಾಗೃತಿಯ ಕಾರ್ಯಕ್ರಮದಲ್ಲಿ ನಟ ರಿಚರ್ಡ್ ಗೇರ್, ನಟಿ ಶಿಲ್ಪಾ ಶೆಟ್ಟಿಗೆ ತೆರೆದ ವೇದಿಕೆಯ ಮೇಲೆಯೆ ಚುಂಬಿಸಿದ. ಈ ಸಂಬಂಧವಾಗಿ ವಿರೋಧಗಳಾದವು. ನ್ಯಾಯಾಲಯ ಅವನ ಮೇಲೆ ಬಂಧನದ ವಾರೆಂಟ್ ಜಾರಿಗೊಳಿಸಿತು.
ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.