ಕಿಟಕಿ ಹುಡುಗಿಯ ರಹಸ್ಯ ಪ್ರೀತಿ!
Team Udayavani, Jun 6, 2017, 3:45 AM IST
ಹೈಸ್ಕೂಲ್‌ನಲ್ಲಿ ಓದುವಾಗಲೇ ನನಗೆ ಸಿನಿಮಾ ನೋಡಬೇಕೆಂಬ ಅದಮ್ಯ ಹಂಬಲ. ಆದರೆ ಈಗಿನ ಹಾಗೆ ನಮ್ಮ ಹಳ್ಳಿಗಾಡಿನಲ್ಲಿ ಸುಸಜ್ಜಿತ ಥಿಯೇಟರ್‌ಗಳು ಎಲ್ಲಿಂದ ಬರಬೇಕು? ಸಿನಿಮಾಗಳೆಲ್ಲಾ ಕತ್ತಲಾದ ಮೇಲೆಯೇ! ಅದೂ ಗಾಳಿ, ಮಳೆ, ಇಲ್ಲದೆ ಟೆಂಟ್ ಹಾರಿ ಹೋಗದೆ ಕರೆಂಟ್ ಇದ್ದರೆ ಮಾತ್ರ ಸಿನಿಮಾ ಭಾಗ್ಯ ಸಿಗುತ್ತಿತ್ತು. ಈಗಿನ ಹುಡುಗರಂತೆ ಕಾಲೇಜು ಬಂಕ್ ಮಾಡಿ ಮಾರ್ನಿಂಗ್ ಶೋ, ಮ್ಯಾಟಿನಿಗೆ ಕದ್ದು ಹೋಗುವ ಸೌಕರ್ಯವೂ ನಮಗಿರಲಿಲ್ಲ. ನನಗೆ ಪೋಸ್ಟ್ ಮಾಸ್ಟರ್ ಮಗ ವಾಸು ಎಂಬ ಗೆಳೆಯನಿದ್ದ. ಅವನ ಸಂಬಂಧಿಕರ ಹುಡುಗನೊಬ್ಬ ಪೂನಾದಲ್ಲೋ, ಮುಂಬಯಿಯಲ್ಲೋ ಇದ್ದವ, ಒಮ್ಮೆ ಇವರಲ್ಲಿಗೆ ಬಂದಾಗ ತನ್ನ ಮಿನಿ ಪೊ›ಜೆಕ್ಟರ್ ತಂದು ಅದರಲ್ಲಿ 2 ರೀಲು ಯಾವುದೋ ಇಂಗ್ಲೀಷ್ ಸಿನಿಮಾವನ್ನು ಗೋಡೆಯ ಮೇಲೆ ಬಿಟ್ಟು ತೋರಿಸಿ ಇಲ್ಲದ ಚಟ ಅಂಟಿಸಿ ಹೋಗಿದ್ದ. ನಾನು, ಪ್ರಕಾಶಿ ಕನ್ನಡಿ, ಭೂತಕನ್ನಡಿ ತಂದರೆ ಸ್ಕೂಲ್ ರೂಂ ಗೋಡೆಯ ಮೇಲೆ ತಾನೇ ಸಿನಿಮಾ ಬಿಡುವುದಾಗಿ ವಾಸು ರೈಲು ಹತ್ತಿಸಿದ್ದ. ಸರಿ, ನಾವು ಪಡಲಾರದ ಪಾಡು ಪಟ್ಟು ಕನ್ನಡಿ, ಭೂತ ಗಾಜುಗಳನ್ನು ತಂದೆವು. ವಾಸು, ತನ್ನ ಕಸಿನ್‌ನಿಂದ ಕದ್ದಿದ್ದ ಫಿಲಂ ರೀಲ್‌ನ ತುಣುಕುಗಳನ್ನು ಈಚೆ ತೆಗೆದ. ಸರ್ಕಾರಿ ಸ್ಕೂಲಿನ ಒಂದು ಕೊಠಡಿಯ ಬಾಗಿಲು ಕಿತ್ತು ಬಂದಿದ್ದರಿಂದ ಯಾರು ಬೇಕಾದರೂ ಒಳಗೆ ಹೋಗಬಹುದಾಗಿತ್ತು. ಒಂದು ಭಾನುವಾರ ನಾವು ಆ ಕೊಠಡಿಯಲ್ಲಿ ಕನ್ನಡಿಯಿಂದ ಕಿಟಕಿಯ ಮೂಲಕ ಬೆಳಕು ಹಾಯಿಸಿ ಭೂತಕನ್ನಡಿ ಬಳಸಿ ಹಾಗೂ ಹೀಗೂ ಗೋಡೆಯ ಮೇಲೆ ಅಸ್ಪಷ್ಟ ಚಿತ್ರವೊಂದನ್ನು ಮೂಡಿಸಿದೆವು. ತಲೆಕೆಳಗಾಗಿ ಮೂಡಿದ್ದ ಚಿತ್ರವನ್ನು ಕಂಡು ನಮಗಾದ ಆಶ್ಚರ್ಯ, ಖುಷಿ ಅಷ್ಟಿಷ್ಟಲ್ಲ. ಇದು ಆವಾಗಾವಾಗ ನಡೆಯಲಾರಂಭಿಸಿತು.
ಒಂದು ಭಾನುವಾರ ಕನ್ನಡಿ, ಭೂತಕನ್ನಡಿ ಎಲ್ಲಾ ಸೆಟ್ ಮಾಡುವ ವೇಳೆಗೆ ಮೋಡ ಮುಸುಕಿತು. ಕನ್ನಡಿ ಕಾಯುತ್ತಿದ್ದ ಗೋಪಿಯಿಂದ ಹಿಡಿದು ಆಪರೇಟರ್ ಅನಂತನವರೆಗೆ ಎಲ್ಲಾ ಪಕ್ಕದ ತೋಪಿನಲ್ಲಿ ಮಾವಿನ ಕಾಯಿ ಉದುರಿಸಲು ಹೋದೆವು. ಒಂದೆರಡು ಕಲ್ಲು ಎಸೆಯುವಷ್ಟರಲ್ಲೇ ತಟ್ಟನೇ ಬಿಸಿಲು ಬಂತು. ಆತುರಾತುರವಾಗಿ ಸ್ಕೂಲಿನತ್ತ ಓಡಿಬಂದೆವು. ನಾನು ಕುತೂಹಲದಿಂದ ಕಿಟಕಿ ಹತ್ತಿ ನೋಡಿದೆ ಗೋಡೆಯ ಮೇಲೆ ಎದುರು ಬದುರು ಉಸುರು ತಾಗುವಷ್ಟು ಹತ್ತಿರದಲ್ಲಿ ನಿಂತಿರುವ ಸ್ಪಷ್ಟ ಚಿತ್ರ ಮೂಡಿದೆ. ನಾವಿಲ್ಲದಿರುವಾಗ ಇಷ್ಟು ಕ್ಲಾರಿಟಿ ಇರುವ ಸಿನಿಮಾ ಯಾರು ಬಿಟ್ರಾ ಅಂದೊRಂಡು ಏಯ್ ಬನ್ರೊà, ಸಕತ್ತಾಗಿದೆ ಪಿಕ್ಚರ್ ಎಂದು ಕೂಗಿಬಿಟ್ಟೆ. ಹುಡುಗರೆಲ್ಲಾ ಸಂಭ್ರಮದಿಂದ ರೂಮಿನೊಳಗೆ ಓಡಿಬರುವುದಕ್ಕೂ ಗೆಳೆಯ ಪಾಂಡು ಅಕ್ಕ ಪದ್ಮ, ನಂಜುಂಡನ ಜೊತೆ ಈಚೆ ಬರುವುದಕ್ಕೂ ಒಂದೇ ಆಯಿತು.ನಮಗೆ ಒಂದೂ ಅರ್ಥವಾಗಲಿಲ್ಲ. ನಾವು ಎಷ್ಟು ಗೋಗರೆದರೂ ನಂಜುಂಡ ಮಾತ್ರ ಗೋಡೆ ಮೇಲೆ ಮತ್ತೆ ಅಂಥ ಪಿಕ್ಚರ್ ಬಿಡಲು ಒಪ್ಪಲೇ ಇಲ್ಲ. ಪದ್ಮ ಮಾತ್ರ ನಂಜುಂಡಿ ಪಿಕ್ಚರ್ ಬಿಟ್ಟಿದ್ದು ಯಾರಿಗೂ ಹೇಳಬೇಡಿ ಎಂದು ಕಡ್ಲೆ- ಬೆಲ್ಲ ಕೊಟ್ಟು ನಮ್ಮ ಬಾಯಿ ಮುಚ್ಚಿಸಿದ್ದಳು.
ಎಷ್ಟೋ ವರುಷಗಳ ಮೇಲೆ ನಾನು ಕಾಲೇಜು ಓದುತ್ತಿದ್ದಾಗ, ಈ ಪಿಕ್ಚರ್ ಗೋಡೆಯ ಮೇಲೆ ಹೇಗೆ ಮೂಡಿತು ಎಂಬುದು ಅರ್ಥವಾಗಿತ್ತು. ಈ ವೇಳೆಗೆ ಪದ್ಮಳ ಮದುವೆಯೂ ಆಗಿತ್ತು. ಈ ಕಿಟಕಿಯೊಳಗಿನ ದೃಶ್ಯಗಳಿಗೆ ತವಕಿಸುವ ಕಾದು ನಿಲ್ಲುವ ಚಟ ಶುರುವಾಯಿತು. ದೂರದಿಂದಲೇ ಯಾವ ಚಾಂದ್ ಕಾ ತುಕಡಾ ಇಣುಕಿ ನೋಡುತ್ತೋ ಅಂತ ನಿರೀಕ್ಷಿಸಿದ್ದೇ ಆಯಿತು. ಲೋಕಲ್ ಅಗ್ರಹಾರದ ಹುಡುಗಿಯರೆಲ್ಲಾ ಕಿಟಕೀಲಿ ನಿಂತು ತಲೆಬಾಚೊRಂಡು ಕೂದಲನ್ನು ಉಂಡೆ ಮಾಡಿ ನನ್ನ ಮುಂದೆ ಎಸೆದು ಒಳಹೋಗುತ್ತಿದ್ರು. ಮರೋ ಚರಿತ್ರದಂಥ ಹಲವು ರೊಮ್ಯಾಂಟಿಕ್ ಸಿನಿಮಾಗಳಿಗೆ ಸಾಕ್ಷಿಯಾದ ಕಿಟಕಿ, ನನಗೊಬ್ಬಳು ಕಿಟಕಿ ಪ್ರೇಮಿಯನ್ನ ಕರುಣಿಸಲಿಲ್ಲವಲ್ಲ ಅಂತ ಅವಲತ್ತುಕೊಳ್ತಿದ್ದೆ. ನಮ್ಮ ಅದೃಷ್ಟ, ಕಾಲೇಜಿಗೆ ಒಬ್ಬಳು ಹೊಸ ಹುಡುಗಿ ಬಂದಳು. ಅತೀವ ರೂಪರಾಶಿಯಾದ ಅವಳು ಬೇಗನೇ ಕಾಲೇಜ್ ಕ್ವೀನ್ ಪಟ್ಟ ಕಟ್ಟಿಸಿಕೊಂಡೇ ಬಿಟ್ಟಳು. ದುರಾದೃಷ್ಟವೆಂದರೆ ಅವಳನ್ನು ಪ್ರಿನ್ಸಿ ಬೇರೆ ಸೆಕ್ಷನ್‌ಗೆ ಹಾಕಿ ಬಿಟ್ಟರು. ಅವಳ ದರ್ಶನ ಭಾಗ್ಯಕ್ಕಾಗಿ ನಾವೆಲ್ಲಾ ಕಾರಿಡಾರಲ್ಲಿ ಹುಚ್ಚರಂತೆ ಅಲೆದಾಡುತ್ತಿದ್ದೆವು. ಅವಳು ಕಿಟಕಿ ಪಕ್ಕ ಕೂತು ನಮಗೆ ಮುಗುಳುನಗೆ ದಯಪಾಲಿಸಲಾರಂಭಿಸಿದಳು. ಆದರೆ ಅವಳು ಯಾರನ್ನು ನೋಡಿ ನಗುತ್ತಿದ್ದಳು ಎನ್ನುವುದು ಮಾತ್ರ ನಿಗೂಢವಾಗಿಯೇ ಇತ್ತು. ಇನ್ನೇನು ಪ್ರೇಮ ಕುದುರುವಷ್ಟರಲ್ಲಿ, ಲವ್ ಲೆಟರ್ ಕಿಟಕಿಯಲ್ಲಿ ಹಾರಾಡುವಷ್ಟರಲ್ಲಿ ಒಂದಿನ ಧೋ ಎಂದು ಮಳೆ ಚಚ್ಚಿತು. ಅದಾದಮೇಲೆ ಆ ಹುಡುಗಿಯ ಕ್ಲಾಸ್ ರೂಂ ಕಿಟಕಿ ತೆರೆದುಕೊಳ್ಳಲೇ ಇಲ್ಲ. ನನ್ನ ಗೆಳೆಯರಂತೂ ತೀರಾ ಹತಾಶರಾಗಿ ಹೋದರು. ಒಂದಿನ ಆ ಹುಡುಗಿ ಆಂಜನೇಯನ ಗುಡಿಗೆ ಎಳ್ಳು- ಬತ್ತಿ ಹಚ್ಚಲು ಬಂದಾಗ ನಾವು ಒಂದಿಬ್ಬರು ಸಮಯ ಕಾದು ಕೇಳಿಯೇ ಬಿಟ್ಟೆವು. “ನಾವು ಕಾರಿಡಾರಲ್ಲಿ ಓಡಾಡಿ ಡಿಸ್ಟರ್ಬ್ ಮಾಡ್ತಿವಿ ಅಂತ ನಮ್ಮ ಮೇಲೆ ಸಿಟ್ಟಾ?’ ಅಂತ. “ಊಹೂಂ’ ಎಂದು ತಲೆಯಾಡಿಸಿದಳು. “ಮತ್ತೆ, ಕ್ಲಾಸ್‌ರೂಂ ಕಿಟಕಿಯಲ್ಲಿ ಯಾಕೆ ನೀನು ಕಾಣಿಸುತ್ತಿಲ್ಲ?’ “ಅಯ್ಯೋ ಮಳೆ ಶೀತಕ್ಕೆ ಕಿಟಕಿ ಬಾಗಿಲು ಒಡ್ಡು ಬಂದು ಕಚೊRಂಡಿದೆ. ಕಿಟಕಿ ತೆಗೆಯಕ್ಕೆ ಆಗಲ್ಲ! ನಾನೇನು ಮಾಡ್ಲಿ?’ ಎಂದು ನಕ್ಕು ಓಡಿಹೋದಳು ಆ ಹುಡುಗಿ. ಕಿಟಕಿಯ ಶೀತ ಬಿಟ್ಟು, ಆ ಹುಡುಗಿ ಸಲೀಸಾಗಿ ಬಾಗಿಲು ತೆಗೆಯುವ ವೇಳೆಗೆ ಅವರಪ್ಪನಿಗೆ ಬೇರೆ ಯಾವುದೋ ಊರಿಗೆ ಟ್ರಾನ್ಸ್‌ಫರ್ ಆಗಿ ಅವಳು ಕಾಲೇಜ್‌ಗೆ ಗುಡ್ ಬೈ ಹೇಳಿದುÉ… ಆ ಕಿಟಕಿ ಹುಡುಗಿಯ ರಹಸ್ಯ ಪ್ರೀತಿ ಹಾಗೇ ಉಳಿದು ಹೋಯಿತು…
-ತುರುವೇಕೆರೆ ಪ್ರಸಾದ್, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.