ನನ್ನ ಮೇಲೆ ಪ್ರೇಮದ ವಾಮಾಚಾರ ನಡೆದಿದೆ!
Team Udayavani, Apr 16, 2019, 6:00 AM IST
ನಿನ್ನನ್ನು ನೋಡಿದ ಆ ಕ್ಷಣದಿಂದ ಇಲ್ಲಿಯವರೆಗೆ, ನಂಗೆ ಏನೇನಾಗ್ತಿದೆಯೋ ನನಗೇ ಗೊತ್ತಾಗ್ತಿಲ್ಲ. ಒಮ್ಮೊಮ್ಮೆ ಹುಚ್ಚನಂತೆ ಒಬ್ಬೊಬ್ಬನೇ ನಕ್ಕರೆ, ಮಗದೊಮ್ಮೆ ಮಹಾಮೌನಿಯಾಗಿ ಬಿಡುತ್ತೇನೆ. ಇಷ್ಟೆಲ್ಲಾ ಆದ್ಮೇಲೂ ಸುಮ್ಮನಿರೋಕೆ ನನ್ನ ಕೈಯಲ್ಲಿ ಆಗಲ್ಲ.
ಹಾಯ್ ಹುಡ್ಗಿ….
ಹೇಗಿದ್ದೀಯ? ಎಲ್ಲಿದ್ದೀಯ? ನಿನ್ನ ನೋಡಿ ಎಷ್ಟು ದಿನ ಆಆಯಿತೇ ಡುಮ್ಮಿ…
ಶನಿವಾರ ಬಂತೆಂದರೆ ಸಾಕು ಅದೇನೇ ಕೆಲ್ಸ ಇದ್ದರೂ, ಎಲ್ಲವನ್ನೂ ಬೇಗನೆ ಮುಗ್ಸಿ, ಸಂಜೆ ಆರು ಗಂಟೆಯಷ್ಟೊತ್ತಿಗೆ ಮುಖ ತೊಳ್ಕೊಂಡು, ತಲೆ ಬಾಚ್ಕೊಂಡು, ಸೆಂಟು-ಗಿಂಟು ಎಲ್ಲಾ ಹಾಕ್ಕೊಂಡು, ಒಂದು ತೋಳು ಮಡಿಸಿಕೊಂಡು, ಇನ್ನೊಂದು ತೋಳು ಬಿಟ್ಕೊಂಡು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ನಮ್ ಗ್ಯಾಂಗ್ ಜೊತೆ ಕುತ್ಕೊಳ್ಳೋದು ನನ್ನ ಖಾಯಂ ಕ್ಯಾಮೆಯಾಗಿತ್ತು.
ಪ್ರತಿ ಶನಿವಾರದಂತೆ ಆ ಶನಿವಾರವೂ ಆರು ಗಂಟೆಗೆ ದೇವಸ್ಥಾನಕ್ಕೆ ಹೋಗಿ ರಂಗಪ್ಪಸ್ವಾಮಿಗೆ ಕೈ ಮುಗಿದು, “ಅಪ್ಪಾ, ತಂದೆ.. ನನ್ ಒಬ್ಬನಿಗೆ ಒಳ್ಳೇದು ಮಾಡಪ್ಪಾ’ ಅಂತ ಕೇಳ್ಕೊಂಡು, ಪ್ರಸಾದ ತಿನ್ನುತ್ತಾ, ಗ್ಯಾಂಗ್‌ನ ಹುಡುಗರನ್ನು ರೇಗಿಸುತ್ತಾ, ಜೋರಾಗಿ ಗಲಾಟೆ ಮಾಡ್ತಾ ಇದ್ವಿ. ನಮ್ಮ ಗಲಾಟೆ ತಾಳಲಾರದೆ, ಪೂಜಾರಪ್ಪ ಕೂಡ ಒಂದೆರಡು ಬಾರಿ ನಮ್ಮ ಕಡೆಗೆ ಉರಿ ಉರಿಗಣ್ಣು ಬಿಡ್ತಾ ಇದ್ದರು. ಅದೇ ಸಮಯಕ್ಕೆ ಸರಿಯಾಗಿ ನೀನು ತಂಗಾಳಿಯಂತೆ ಕೈ ಮುಕ್ಕೊಂಡು, ದೇವಸ್ಥಾನಕ್ಕೆ ಎಂಟ್ರಿಕೊಟ್ಟೆ ನೋಡು, ನಿನ್ನ ಆ ಚಂದಕ್ಕೆ ನಮ್ಮ ಗ್ಯಾಂಗ್ ಗಲಾಟೆ ಹಠಾತ್ ನಿಂತು ಹೋಯ್ತು.
ಆದರೆ, ಅಲ್ಲಿಯವರೆಗೆ ನಾರ್ಮಲ್ ಆಗಿದ್ದ ನನ್ನ ಎದೆಯೊಳಗೆ ಜೋರಾಗಿ ಘಂಟೆ ಬಾರಿಸಿದ ಅನುಭವ. ನಿನ್ನ ಕಾಲ್ಗೆಜ್ಜೆಯ ನಾದಕ್ಕೆ ನನ್ನ ಹೃದಯ, ಗಾಳಿಯಲ್ಲಿ ಹರಿಬಿಟ್ಟ ಗಾಳಿಪಟದಂತೆ ಅಗಿತ್ತು. ನಿನ್ನ ಆ ಮೋಹಕ ನೋಟದ ಬಾಣಕ್ಕೆ ನನ್ನ ಮನಸ್ಸು ದೀರ್ಘದಂಡ ನಮಸ್ಕಾರ ಹಾಕಿತ್ತು. ನಿನ್ನ ಅಂದ ಚಂದಕ್ಕೆ ಸಂಪೂರ್ಣವಾಗಿ ಸೆರೆಯಾಗಿ ಹೋದೆ.
ಇಷ್ಟೆಲ್ಲಾ ಅದ್ಮೇಲೆ, ಆ ರಂಗನಾಥ ಸ್ವಾಮಿಗೆ ಉರುಳು ಸೇವೆ ಮಾಡೋದಾದ್ರೂ ಸರಿ, ಉಪವಾಸ ವ್ರತ ಮಾಡೋದಾದ್ರೂ ಸೈ, ಲವ್ ಅಂತ ಮಾಡಿದ್ರೆ ಅದು ನಿನ್ನನ್ನೇ ಅಂತ ಅಲ್ಲೇ ಫಿಕ್ಸ್ ಆಗಿಬಿಟ್ಟೆ. ಅವತ್ತೇ ನಿಂಗೆ ಇದನೆಲ್ಲಾ ಹೇಳ್ಬಿಟ್ಟು, ಡೀಲ್ ಕುದುರಿಸೋಣ ಅಂದ್ಕೊಂಡೆ. ಆದ್ರೆ, ಧೈರ್ಯ ಸಾಲಲಿಲ್ಲ. ಈಗ ಹೇಳ್ತಿದ್ದೀನಿ ಕೇಳು: ನಿನ್ನನ್ನು ನೋಡಿದ ಆ ಕ್ಷಣದಿಂದ ಇಲ್ಲಿಯವರೆಗೆ, ನಂಗೆ ಏನೇನಾಗ್ತಿದೆಯೋ ನನಗೇ ಗೊತ್ತಾಗ್ತಿಲ್ಲ. ಒಮ್ಮೊಮ್ಮೆ ಹುಚ್ಚನಂತೆ ಒಬ್ಬೊಬ್ಬನೇ ನಕ್ಕರೆ, ಮಗದೊಮ್ಮೆ ಮಹಾಮೌನಿಯಾಗಿ ಬಿಡುತ್ತೇನೆ. ಬಹುಶಃ ನನ್ನ ಮೇಲೆ ನಿನ್ನ ಪ್ರೇಮದ ವಾಮಾಚಾರವೇ ನಡೆದಿರಬೇಕು! ಇಷ್ಟೆಲ್ಲಾ ಆದ್ಮೇಲೂ ಸುಮ್ಮನಿರೋಕೆ ನನ್ನ ಕೈಯಲ್ಲಿ ಆಗಲ್ಲ. ಮುಂದಿನ ಶನಿವಾರ ಅದೇನೇ ಕಷ್ಟವಾದರೂ ಸರಿ, ನಾನು ನಿನ್ನ ಬಳಿ ಪ್ರೇಮನಿವೇದನೆ ಮಾಡಿಯೇ ಮಾಡುತ್ತೇನೆ.
ಮುಂದಿನ ಶನಿವಾರ ಮಿಸ್ ಮಾಡದೇ ದೇವಸ್ಥಾನಕ್ಕೆ ಬರ್ತೀಯಾ ತಾನೇ?
ನಿನ್ನನ್ನೇ ಎದುರು ನೋಡುತ್ತಿರೋ
ನಿನ್ನಯ ಒಲವೊಪ್ಪುಗೆಯ ಆಕಾಂಕ್ಷಿ
ರವಿತೇಜ ಚಿಗಳಿಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.