ಸ್ಕೇಲ್ ಮೇಲೆ ಗಣಿತ ಪ್ರಮೇಯ!
Team Udayavani, Jun 13, 2017, 9:51 AM IST
ಆವತ್ತು ಪದವಿಯ ಮೊದಲ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದವು. ರಾತ್ರಿಯೆಲ್ಲಾ ಓದಿದರೂ ಗಣಿತ ಪ್ರಮೇಯಗಳು ತಲೆಯಲ್ಲಿ ಕೂರುತ್ತಲೇ ಇರಲಿಲ್ಲ. “ಬಲ್ಲವರಿಗೆ ರಾಜಮಾರ್ಗ, ಮಿಕ್ಕವರಿಗೆ ಅಡ್ಡದಾರಿಯೇ ಸರಿ’ ಎಂದು ಸಿಕ್ಕಾಪಟ್ಟೆ ತಲೆ ಓಡಿಸಿ, ನಾನು ಅಳತೆಪಟ್ಟಿಯ ಮೇಲೆ ಪ್ರಮೇಯವನ್ನು ಬರೆದುಕೊಂಡೆ.
ಮಾರನೇ ದಿನ ಪರೀಕ್ಷೆ ಆರಂಭವಾಯಿತು. ಏನಾದರಾಗಲೀ, ಮೊದಲು ಪ್ರಮೇಯ ಬರೆದು ಮುಗಿಸೋಣ ಅಂತ ಶುರುಮಾಡಿಕೊಂಡೆ. ಅದು ಹೇಗೆ, ನಾನು ಕಾಪಿ ಮಾಡುತ್ತಿರುವುದು ಗೆಳೆಯರಿಗೆ ಗೊತ್ತಾಯಿತೋ, ನಾ ಕಾಣೆ… ಆತ “ಲೋ ಮಗಾ, ನಂಗೂ ಸ್ವಲ್ಪ ಅಳತೆ ಪಟ್ಟಿ ಕೊಡೋ’ ಅಂತ ಪೀಡಿಸಲಾರಂಭಿಸಿದ. ಕೊನೆಗೆ, ಸೂಪರ್‌ವೈಸರ್ “ಯಾಕ್ರೋ, ಮಾತಾಡುತ್ತಿದ್ದೀರಾ?’ ಎಂದು ಗದರಿದಾಗ, “ಸರ್ ಆತನಿಗೆ ಅಳತೆ ಪಟ್ಟಿ ಬೇಕಾಗಿದೆಯಂತೆ’ ಎಂದು ಪಕ್ಕದಲ್ಲಿದ್ದ ಮುಗ್ಧ ಸ್ನೇಹಿತ ಹೇಳಿದ.
ಮೇಷ್ಟ್ರು “ಅಷ್ಟೇನಾ?’ ಅಂತ ನನ್ನ ಬಳಿಯಿದ್ದ ಅಳತೆಪಟ್ಟಿಯನ್ನು ಆತನಿಗೆ ನೀಡಿದರು. ಅವರು ಅಳತೆಪಟ್ಟಿ ಕೈಗೆತ್ತಿಕೊಂಡಾಗಲೇ ನನ್ನ ಎದೆಯಲ್ಲಿ ಢವ ಢವ ಶುರುವಾಗಿತ್ತು. ಒಬ್ಬರಿಂದ ಒಬ್ಬರಂತೆ ಇಡೀ ಕ್ಲಾಸಿನ ತುಂಬಾ ಆವತ್ತು ನಾನು ತಂದಿದ್ದ ಅಳತೆಪಟ್ಟಿಗೆ ಎಲ್ಲಿಲ್ಲದ ಬೇಡಿಕೆ. ಎಲ್ಲರೂ ಅದೇ ಅಳತೆ ಪಟ್ಟಿ ಕೇಳುತ್ತಿರುವುದನ್ನು ನೋಡಿಯೂ ನಮ್ಮ ಮೇಷ್ಟ್ರಿಗೆ ಕೊಂಚವೂ ಅನುಮಾನ ಬರಲಿಲ್ಲ. ನಾನು ಬಚಾವಾದೆ. ಅಂದಿನಿಂದ ಗೆಳೆಯರೆಲ್ಲ, ನನ್ನ ಪ್ರಯೋಗವನ್ನೇ ಅನುಸರಿಸುತ್ತಿದ್ದಾರೆ. ಪರೀಕ್ಷೆಗೆ ಹಾಲ್‌ಗೆ ಎಂಟ್ರಿ ಕೊಡುವಾಗ ಹಾಲ್‌ಟಿಕೆಟ್ ಬಿಟ್ಟರೂ ಅಳತೆಪಟ್ಟಿಯನ್ನು ತರುವುದನ್ನು ಮಾತ್ರ ಯಾರೂ ಮರೆಯುತ್ತಿಲ್ಲ.
– ವಿನಾಯಕ ಬೆಣ್ಣಿ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.