ಕೊನೆಗೂ ಆಯ್ತು ಪ್ರಿನ್ಸಿಪಾಲ್‌ದರ್ಶನ !

Team Udayavani, Aug 6, 2019, 5:48 AM IST

pri

ಪ್ರಿನ್ಸಿಪಾಲ್‌ ಕಾಣದಿದ್ದರೂ ಕಾಲೇಜಿನಲ್ಲಿ ಪಾಠ-ಪ್ರವಚನ ಸರಿಯಾಗಿ ನಡೆಯುತ್ತಿತ್ತು. ಸ್ಟಡಿ ಪೀರಿಯಡ್‌ನ‌ಲ್ಲಿ ಬೇಸರವಾಗಿ ಆಗಾಗ್ಗೆ ಮಾತಾಡುತ್ತಿದ್ದೆವು. ಆಗೆಲ್ಲಾ’ ಹುಷ್‌!ಗಲಾಟೆ ಮಾಡಬೇಡಿ, ಓದಿಕೊಳ್ಳಿ’ ಎನ್ನುವಧ್ವನಿ ಕೇಳುತ್ತಿತ್ತು.

‘ಏ… ಹೇಗಿರಬಹುದೇ?ಅಮಿತಾಭ್‌ಥರಾ ಲಂಬೂನಾ ಅಥವಾ ಶಾರುಖ್‌ ಹಾಗೆ ಫ‌ುಲ್‌ ಸ್ಮಾರ್ಟಾ?’ ಗೆಳತಿ ಸಿರಿ, ನಮ್ಮನ್ನೆಲ್ಲಾ ಪ್ರಶ್ನಿಸುತ್ತಿದ್ದಳು. ನಮಗೆ ಒಂದೆಡೆ ನಗು. ಮತ್ತೂಂದೆಡೆ, ಮನಸ್ಸಿನಲ್ಲೇ ಕುತೂಹಲವೂ. ನನಗಂತೂ ಯಾಕೋ ಆರಡಿ ಎತ್ತರ
ದಷ್ಟಪುಷ್ಟವಾದ ಸೂಟು-ಬೂಟು ಧರಿಸಿದ್ದ ಶಿಸ್ತಿನ ವ್ಯಕ್ತಿಯ ಚಿತ್ರವೇ ಕಣ್ಮುಂದೆ ಬರುತ್ತಿತ್ತು.

ಅಷ್ಟರಲ್ಲಿ ಕ್ಲಾಸ್‌ ಶುರುವಾದ್ದರಿಂದ ಎಲ್ಲರೂ ಒಳಗೆ ನಡೆದೆವು. ಅಂದಹಾಗೆ ನಮ್ಮೆಲ್ಲರ ಮಾತುಕತೆ-ಕಲ್ಪನೆಯಾವುದೋ ಹುಡುಗನ ಬಗ್ಗೆ ಅಲ್ಲ. ಕಾಲೇಜಿನ ಪ್ರಿನ್ಸಿಪಲ್‌ ಬಗ್ಗೆ!
ಆಗಷ್ಟೇ ಹೈಸ್ಕೂಲ್‌ ಮುಗಿದು, ಕಾಲೇಜು ಶುರುವಾಗಿತ್ತು. ಈ ಹಿಂದೆ ಓದಿದ್ದು ನೂರಾರು ಮಕ್ಕಳಿದ್ದ ದೊಡ್ಡ ಸ್ಕೂಲು. ಅಲ್ಲಿ ನಮ್ಮ ಪ್ರಿನ್ಸಿಪಾಲರಿಗೆ ಅವರದ್ದೇ ಆದ ಪ್ರತ್ಯೇಕ ಕೊಠಡಿ ಮತ್ತು ಅಟೆಂಡರ್‌ ಇದ್ದರು.ಪ್ರಿನ್ಸಿಪಾಲ್‌ ಮೇಡಂ, ಸದಾ ಇಸಿŒ ಮಾಡಿದ ಗರಿಗರಿ ಕಾಟನ್‌ ಸೀರೆಯುಟ್ಟು ಶಿಸ್ತಾಗಿ ಸ್ಕೂಲಿಗೆ ಬರುತ್ತಿದ್ದರು.ಅವರನ್ನು ಯಾವಾಗ ಬೇಕೆಂದರೆ ಆವಾಗ ಒಳ ನುಗ್ಗಿ ಮೀಟ್‌ ಮಾಡುವಂತೆ ಇರಲಿಲ್ಲ. ಆದರೆ, ಮನೆಗೆ ಹತ್ತಿರದಲ್ಲಿದ್ದ ಈ ಕಾಲೇಜು, ನಮ್ಮ ಸ್ಕೂಲ್‌ಗೆ ಹೋಲಿಸಿದರೆ ಚಿಕ್ಕದಾಗಿತ್ತು.ಕಾಲೇಜು ಶುರುವಾಗಿ ವಾರವೇ ಕಳೆದಿದ್ದರೂ ನಾವು ಇನ್ನೂ . ಪ್ರಿನ್ಸಿಪಾಲ್‌ರನ್ನು ಕಂಡಿರಲಿಲ್ಲ. ಅವರಿಗೇ ಪುಟ್ಟ ಕೊಠಡಿ ಇದ್ದರೂ ಅಲ್ಲಿ ಹೆಚ್ಚಿನ ಸಮಯ ಯಾರೂ ಇರುತ್ತಿರಲಿಲ್ಲ. ಆದರೂ ನಾವು ಓಡಾಡುವಾಗಲೆಲ್ಲಾ ಅಲ್ಲಿ ಕುತೂಹಲದಿಂದ ಇಣುಕಿ ನೋಡುತ್ತಿದ್ದೆವು. ಸೀನಿಯರ್ ಕೇಳಿದರೆ “ಸ್ವಲ್ಪ ದಿನದಲ್ಲಿ ಸಿಗ್ತಾರೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು.

ಪ್ರಿನ್ಸಿಪಾಲ್‌ ಕಾಣದಿದ್ದರೂ ಕಾಲೇಜಿನಲ್ಲಿ ಪಾಠ-ಪ್ರವಚನ ಸರಿಯಾಗಿ ನಡೆಯುತ್ತಿತ್ತು. ಸ್ಟಡಿ ಪೀರಿಯಡ್‌ನ‌ಲ್ಲಿ ಬೇಸರವಾಗಿ ಆಗಾಗ್ಗೆ ಮಾತಾಡುತ್ತಿದ್ದೆವು. ಆಗೆಲ್ಲಾ’ ಹುಷ್‌!ಗಲಾಟೆ ಮಾಡಬೇಡಿ, ಓದಿಕೊಳ್ಳಿ’ ಎನ್ನುವಧ್ವನಿ ಕೇಳುತ್ತಿತ್ತು. ಹಾಗೆ ಹೇಳುತ್ತಿದ್ದದ್ದು ನಾವು “ಸ್ವಾಮಿ’ ಎಂದು ಅಡ್ಡ ಹೆಸರಿಟ್ಟ ವ್ಯಕ್ತಿ. ಗಡ್ಡ ಮೀಸೆ ಬೆಳೆಸಿ, ಜುಬ್ಬ-ಪಂಚೆ ಉಟ್ಟು ಬರಿಕಾಲಿನಲ್ಲಿ ಓಡಾಡುತ್ತಾ ಇದ್ದ ಮನುಷ್ಯ. ಅವರುಯಾರು, ಏನು ಕೆಲಸ ಮಾಡುತ್ತಾರೆ ಎಂಬುದೇನೂ ನಮಗೆ ತಿಳಿದಿರಲಿಲ್ಲ. ಅವರ ಮುಂದೆಯೇ ನಮ್ಮ ಪ್ರಿನ್ಸಿಪಾಲ್‌ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿತ್ತು. ಸ್ವಾಮಿ ಮಾತ್ರ, ಓದಿಕೊಳ್ಳಿ ಎಂಬ ಮಂತ್ರವನ್ನು ಸದಾ ಜಪಿಸುತ್ತಿತ್ತು!

ಕಾಲೇಜು ಶುರುವಾಗಿ ತಿಂಗಳಾಗಿತ್ತು; ಆದರೂ ಪ್ರಿನ್ಸಿಪಾಲ್‌ ಪತ್ತೆ ಇಲ್ಲ. ನಮಗೆ ಅದಕ್ಕಿಂತ ‘ಫ್ರೆಶರ್ ಡೇ’ಯ ಸಂಭ್ರಮವೇ ಹೆಚ್ಚಾಗಿತ್ತು. ಹಾಡು, ಡಾನ್ಸ್‌, ಡ್ರಾಮಾ ಎಲ್ಲದರ ಜೋರು ತಯಾರಿಯಲ್ಲಿ ಬಿಜಿಯಾಗಿದ್ದೆವು.ಅಂತೂ ಆ ದಿನವೂ ಬಂತು. ಪ್ರಾರ್ಥನೆ, ಸ್ವಾಗತದ ನಂತರ, ಪ್ರಿನ್ಸಿಪಾಲ್‌ರಿಂದ ಮಾತು ಎಂದಾಗ ನಮಗೆ ಆಶ್ಚರ್ಯ.ಎಲ್ಲರ ಕಣ್ಣು ವೇದಿಕೆಯತ್ತಲೇ ಇತ್ತು. ನೀಟಾಗಿ ಶೇವ್‌ ಮಾಡಿಸೂಟು-ಬೂಟು ಧರಿಸಿಗಂಭೀರವಾಗಿ ನಡೆದು ಬಂದ ಒಬ್ಬರು ಮೈಕ್‌ ಮುಂದೆ ನಿಂತು ಮಾತು ಆರಂಭಿಸಿದರು.ಅವರ ಮಾತು ಕೇಳಿದಾಗ ಎಲ್ಲೋ ಕೇಳಿದ ದನಿ ಎನಿಸಿತು. ಹೀಗೇಕೆ ಅನಿಸುತ್ತಿದೆ ಎಂದು ಅವರನ್ನೇ ಗಮನವಿಟ್ಟು ನೋಡಿದಾಗ ಎಲ್ಲೋ ಕಂಡ ಮುಖ ಎಂಬ ಭಾವನೆಯೂ ಬಂತು. ಎರಡೇ, ನಿಮಿಷದಲ್ಲಿ- ಅರೆ, ಅವರು ನಮ್ಮ ಸ್ವಾಮಿ ಅಲ್ಲವಾ ಅನ್ನಿಸಿತು. ನಾವು ಗೆಳೆಯರೆಲ್ಲ “ಅಲ್ವ? ಅವರೇ ಅಲ್ವ? ಅವರೇ ಪ್ರಿನ್ಸಿನಾ? ಎಂದೆಲ್ಲಾ ಪಿಸುಗುಟ್ಟಿಕೊಂಡೆವು. ಅಷ್ಟರಲ್ಲಿಅವರು ‘ಅಪಿಯರೆನ್ಸ್‌ ಕ್ಯಾನ್‌ ಬಿ ಡಿಸೀಂಗ್‌( ಹೇಗೆ ಕಾಣುತ್ತೇವೋಅದೇ ನಿಜವಲ್ಲ)’ ಎಂಬ ಮಾತನ್ನು ನಮ್ಮಕಡೆ ನೋಡುತ್ತಾ ಹೇಳಿದರು. ನಮಗೆಲ್ಲಾ ಸ್ವಲ್ಪಗಾಬರಿ ಮತ್ತು ಒಂದಿಷ್ಟು ನಾಚಿಕೆಯೂಆಯಿತು. ಮುಂದುವರಿದು’ ನಾನು ಪ್ರಿನ್ಸಿಪಾಲ್‌ ಆದರೂ ನೀವು ಹೆದರುವ ಅಗತ್ಯವಿಲ್ಲ. ನೀವು ಎಷ್ಟು ಹೊತ್ತಿಗೂ ಬಂದು ನನ್ನನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಬರೀ ರೂಮ್‌ನಲ್ಲಿ ಮಾತ್ರವಲ್ಲ, ಎಲ್ಲಾಕಡೆಯೂಇರುತ್ತೇನೆ’ ಎಂದರು. ಮುಂದೆ ಕುಳಿತ ನಾವು ಸುಮ್ಮನೇ ತಲೆ ಅಲ್ಲಾಡಿಸಿದೆವು.

ಆಮೇಲೆ ತಿಳಿದ ವಿಷಯವೆಂದರೆ, ನಮ್ಮ ಪ್ರಿನ್ಸಿಪಾಲರು ಯಾವುದೋ ವ್ರತದ ಸಲುವಾಗಿ ಹಾಗಿದ್ದರಂತೆ; ನಮಗದು ಗೊತ್ತಿರಲಿಲ್ಲ ಅಷ್ಟೇ! ಆ ದಿನ ಹೇಳಿದಂತೆ ಕಾಲೇಜಿನ ಎರಡು ವರ್ಷ ಬರೀರೂಮ್‌ನಲ್ಲಿಕೂರದೇಎಲ್ಲಾ ಕಡೆ ಓಡಾಡುತ್ತಾ, ನಮ್ಮಎಲ್ಲಾ ಸಮಸ್ಯೆಗಳನ್ನು ಕೇಳಿ ಸಮಾಧಾನದಿಂದಉತ್ತರಕೊಟ್ಟು, ಧೈರ್ಯತುಂಬಿದರು.ನಾವು ಮಾತ್ರ ಅವರನ್ನು ಪ್ರೀತಿಯಿಂದ “ಸ್ವಾಮಿ ಸರ್‌’ ಎಂದೇ ಕರೆಯುತ್ತಿದ್ದೆವು!!!

  • ಮಹತಿ ಸಿದ್ಧೇಶ್ವರ್‌

ಟಾಪ್ ನ್ಯೂಸ್

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.