ನೀ ಇಲ್ಲದೇ ಮನ ಹಗುರಾಗಿದೆ
Team Udayavani, Feb 4, 2020, 4:22 AM IST
ಕಾಲವೆಂಬುದು ಯಾರಿಗೂ, ಎಂದಿಗೂ ಕಾಯುವುದಿಲ್ಲ ಕಣೋ. ನನಗೆ ಗೊತ್ತು; ನಿನ್ನ ಜೀವನದಲ್ಲಿ ನಾನೂ ಏನೂ ಅಲ್ಲವೆಂದು, ಆದರೆ ಒಂದು ಕಾಲದಲ್ಲಿ ನಿನಗೆ ನಾನೇ ಎಲ್ಲಾ ಎಂಬಾಂತೆ ಇದ್ದೆ. ಕಾಲದೊಂದಿಗೆ ಎಲ್ಲಾರೂ ಬದಲಾಗುತ್ತಾರೆ ಎಂಬ ಪಾಠವನ್ನು ನಿನ್ನಿಂದ ಕಲಿತ್ತಿರುವೆ. ನಿನ್ನ ಮಾಯಾಜಾಲದ ಪ್ರೀತಿಯನ್ನು ನಂಬಿ ತುಂಬಾ ದೂರದವರೆಗೆ ನಿನ್ನೊಂದಿಗೆ ಬಂದರೂ ನಡುನೀರಿನಲ್ಲಿ ಕೈಬಿಟ್ಟವನು ನೀನು ಎಂಬುದನ್ನು ನೆನಪಿನಲ್ಲಿಟ್ಟುಕೋ. ನಿನ್ನ ನೆನಪುಗಳಿಗೆ ತಿಲಾಂಜಲಿ ಇಡಲು ಪ್ರಯತ್ನಿಸುತ್ತಿರುವೆ.
ನನ್ನ ಬದುಕಲ್ಲಿ ಬಿರುಗಾಳಿಯಂತೆ ಬಂದು, ಪ್ರೀತಿಪ್ರೇಮದ ಮಾತುಗಳನ್ನು ಆಡಿ, ಇಲ್ಲದ ಸಲ್ಲದ ಆಸೆಗಳನ್ನು ಮನದಲ್ಲಿ ಬಿತ್ತಿದೆ. ನಾನೋ ಕನಸಿನ ರಾಜಕುಮಾರ ಸಿಕ್ಕಿದನೆಂದು ಗರ್ವದಿಂದ ಬೀಗತೊಡಗಿದೆ. ದೇವರು ನನ್ನ ಪಾಲಿಗೆ ಎಲ್ಲವನ್ನೂ ಕರುಣಿಸಿದ ಎಂದು ಸಂತೋಷವೂ ಇತ್ತು. ಅದರೆ ನೀನು ನನ್ನಿಂದ ಮರೆಯಾಗಬಹುದು ಎಂಬಾ ಸಣ್ಣ ಕಲ್ಪನೆಯೂ ಇರಲಿಲ್ಲ. ಅದು ಯಾಕೆ ನಿನ್ನ ಮನಸ್ಸು ಈ ರೀತಿ ಬದಲಾಯಿತೆಂಬ ಪ್ರಶ್ನೆಗೆ ಇಂದಿಗೂ ಕೂಡ ಉತ್ತರ ಸಿಗುತ್ತಿಲ್ಲ.
ಅಂದು ನೀ ಆಡಿದ ಮಾತನ್ನು ಇಂದಿಗೂ ಕೂಡ ಮರೆಯಲಾಗುತ್ತಿಲ್ಲ. ನಿನ್ನ ಸಮಯ ಕಳೆಯಲು, ನನ್ನ ಪ್ರೀತಿಯೇ ಬೇಕಿತ್ತ ಎಂಬಾ ಪ್ರಶ್ನೆಯನ್ನು ನಿನ್ನಲ್ಲಿ ಕೇಳ್ಳೋಣವೆಂದರೂ ನಿನಗೆ ಉತ್ತರ ನೀಡಲು ಕೂಡ ಸಮಯವಿಲ್ಲದಷ್ಟಾಗಿದೆ. ನೀನು ಈಗ ಬಹುದೂರ ಸಾಗಿರುವೆ ಎಂಬ ಸತ್ಯ ಗೊತ್ತಿದ್ದರೂ, ಅದನ್ನು ನಂಬಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆ ಗೊತ್ತ? ನನ್ನ ಜಗತ್ತೇ ನೀನು ಎಂದು ನಂಬಿದ್ದವಳು ನಾನು. ಆದರೆ ನೀನು ಇಲ್ಲದ ಈ ಜೀವನವನ್ನು ಊಹಿಸಲು ಕೂಡ ಅಸಾಧ್ಯವೆಂದು ತಿಳಿದು ದೂರವಾಗದಂತೆ ನಿನ್ನಲ್ಲಿ ಬೇಡಿಕೊಂಡೆ. ಆದರೂ ನಿನ್ನ ಕಲ್ಲು ಮನಸ್ಸು, ಸ್ವಲ್ಪನೂ ಕರಗಲೇ ಇಲ್ಲ. ಮುಗ್ಧ ಹುಡುಗಿಯ ಮನಸ್ಸು ನೋಯಿಸುವೆ ಎಂಬ ಅರಿವೂ ಇಲ್ಲದಂತೆ ನನ್ನ ಕಣ್ಣೀರಿಗೆ ಬೆಲೆ ನೀಡದೇ ಹೋರಟುಹೋದೆ. ನೀನು ಮಾಡಿದ ಈ ಮೋಸಕ್ಕೆ ದಂಡ ಕಟ್ಟಿಸಬೇಕೆಂಬ ಹಠ ನನಲ್ಲಿದೆ. ಆದರೂ ನಿನ್ನನ್ನು ಎಂದು ದೂಷಿಸುವುದಿಲ್ಲ, ಯಾಕೆಂದರೆ ನಿನ್ನನ್ನು ದೂರುವಷ್ಟು ಸಮಯವೂ ಈಗ ನನಗಿಲ್ಲ. ಅದೇನೇ ಇದ್ದರೂ ಕೊನೆಯದಾಗಿ ಒಂದು ಮಾತು ಹೇಳುವೆ; ನೀನಿಲ್ಲದೇ ಮನ ಹಗುರವಾದಂತಿದೆ.
ವಂದನೆಗಳೊಂದಿಗೆ
ಚೈತ್ರಲಕ್ಷ್ಮೀ ಬಾಯಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.